ಶ್ರೀಶೈಲ
(Srisailam)
ಬಾಗ -2
ಸೀಮಾಂಧ್ರದ
ಕರ್ನೂಲ್ ಜಿಲ್ಲೆಯಲ್ಲಿರುವ ನಂದಿಕೊಟ್ಟೂರು ತಾಲೂಕಿನ ನಲ್ಲ ಮಲ್ಲ
ಬೆಟ್ಟಗಳ ದಟ್ಟ ಅರಣ್ಯದಲ್ಲಿ ನೆಲೆಸಿರುವ
ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರವಾದ ಶ್ರೀಶೈಲ
ಭಾರತದಲ್ಲಿನ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ
ಒಂದಾಗಿದೆ. ಶ್ರೀಶೈಲ ವು, ಭಾರತದ
ಪ್ರಾಚೀನ ಧಾರ್ಮಿಕ ಕ್ಷೇತ್ರಗಳ ಇತಿಹಾಸದಲ್ಲಿ
ತುಂಬಾ ಪ್ರಾಚೀನವಾದುದು . ವೇದಗಳಲ್ಲಿ, ಪುರಾಣ, ಆಗಮಗಳಲ್ಲಿ ಇದನ್ನು
ತುಂಬಾ ಪವಿತ್ರ ಕ್ಷೇತ್ರವೆಂದು ಪರಿಗಣಿಸಲಾಗಿದೆ
..ಇಲ್ಲಿ ಹರಿಯುವ ಕೃಷ್ಣಾ ನದಿಯು
ಆಳವಾದ ಕಮರಿಯಲ್ಲಿ ಹರಿದು ಬರುವುದರಿಂದ ತುಂಬಾ
ರುದ್ರ ಭಯಾನಕವಾಗಿದೆ . ಇದನ್ನೇ ಪಾತಾಳ ಗಂಗೆ
ಎಂದು ಕರೆಯುತ್ತಿದ್ದರು .ಈ ಕ್ಷೇತ್ರದ ಅಧಿದೇವತೆಗಳು
ಶ್ರೀ ಮಲ್ಲಿಕಾರ್ಜುನ ,ಭ್ರಮರಾಂಬೆಯರು. ಸಮುದ್ರ ಮಟ್ಟದಿಂದ ೫೫೦೦
ಅಡಿಗಳ ಎತ್ತರದಲ್ಲಿ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಗಳಿವೆ .ಪ್ರಾಚೀನ ಕಾಲದಿಂದಲೂ ಶ್ರೀಶೈಲ
ಯಾತ್ರೆಯು ಮೋಕ್ಷದಾಯಕವೆಂದು ಭಕ್ತರ ನಂಬಿಕೆ .ಉತ್ತರದಲ್ಲಿ
ಕಾಶಿಯಂತೆಯೇ ದಕ್ಷಿಣದಲ್ಲಿ ಶ್ರೀಶೈಲವು ಪವಿತ್ರವೆಂದು ಭಾರತೀಯರ ನಂಬಿಕೆ .ಶ್ರೀಶೈಲ
ಪರ್ವತದ ಬಗ್ಗೆ ಪೌರಾಣಿಕವಾಗಿ ಅನೇಕ
ಕಥೆಗಳು ಪ್ರಚಲಿತದಲ್ಲಿವೆ . ಸ್ಥಳೀಯವಾದ ಜಾನಪದ ಇತಿಹಾಸವೂ ಹೇರಳವಾಗಿದೆ
.
***
ಚಂದ್ರವತಿ
ಎನ್ನುವ ಬೇಡರ ರಾಣಿಯೊಬ್ಬಳು ಶ್ರೀಶೈಲದಲ್ಲಿನ
ಕದಳೀವನದಲ್ಲಿ ತಪವನ್ನಾಚರಿಸುತ್ತಿದ್ದಳು. ಆ ಸಮಯದಲ್ಲಿ ಅರಣ್ಯದ
ಮದ್ಯದಲ್ಲಿನ ಒಂದು ಹುತ್ತದಿಂದ ಬೆಳಕೊಂದು
ಹೊರಬಂದಿತು.ಅವಳು ಅದರ ಬಳಿ
ಹೋಗಿ ನೋಡಲಾಗಿ ಅಲ್ಲೊಂದು ಲಿಂಗವಿತ್ತು.
ಅಂದಿನಿಂದಲೂ ಅವಳು ಪ್ರತಿನಿತ್ಯವೂ ಮಲ್ಲಿಗೆ
ಹೂವಿನ ಮಾಲೆಗಳನ್ನು ಆ ಶಿವಲಿಂಗಕ್ಕೆ ಸಮರ್ಪಿಸುತ್ತಿದ್ದಳಲ್ಲದೆ
ಭಕ್ತಿಂದ ಪೂಜಿಸುತ್ತಿದ್ದಳು. ಅವಳೇ ಆ ಲಿಂಗಕ್ಕೆ
`ಮಲ್ಲಿಕಾರ್ಜುನ'ಎಂದು ಹೆಸರನ್ನೂ ಇಟ್ಟಳು.
ಚಂದ್ರವತಿಯ
ಭಕ್ತಿಗೆ ಮೆಚ್ಚಿದ ಪರಮೇಶ್ವರನು ಅವಳನ್ನು
ಹರಸಿದನಲ್ಲದೆ ಮೋಕ್ಷವನ್ನು ಕರುಣಿಸಿ ತನ್ನೊಂದಿಗೆ ಕೈಲಾಸದಲ್ಲೇ
ಇರಿಸಿಕೊಂಡನು. ಇಂದಿಗೂ ಬೇಡರ ಕುಲದ
ಮಹಿಳೆಯರು ಇಲ್ಲಿ ಬಾಂದು ಶಿವಪೂಜೆಯನ್ನು
ನೆರವೇರಿಸುತ್ತಾರೆ
.
***
ಶ್ರೀಶೈಲದ
ಬಳಿಯಲ್ಲಿರುವ ಪಟ್ತಣದ ಅರಸನಾದ ಚಂದ್ರಗುಪ್ತನ
ಮಗಳು ಚಂದ್ರಾವತಿ. ಅದೊಮ್ಮೆ ತಂದೆಯೇ ಪ್ರಣಯಾಸಕ್ತಳಾಗಿ
ತನ್ನ ಮಗಳ ಬಳಿ ಬರಲು
ಅವಳು ಅವನಿಂದ ತಪ್ಪಿಸಿಕೊಂಡು ಬೆಟ್ತದ
ಮೇಲೆ ಓಡಿ ಬಂದು ಕೆಲವು
ಸಖಿಯರ ಜತೆಯಲ್ಲಿ ಅಲ್ಲಿಯೇ ವಾಸಿಸತೊಡಗಿದ್ದಳು. ಹಸುಗಳನ್ನು
ಸಾಕಿದ್ದ ಆಕೆ ಅದೊಂದು ದಿನ
ತನ್ನ ಹಸುವೊಂದು ಶಿವಲಿಂಗವನ್ನು ಹೋಲುತ್ತಿದ್ದ ಸಹಜ ಬಂಡೆಯೊಂದರ ಮೇಲೆ
ನಿಂತು ಅದರ ಮೇಲೆ ಹಾಲು
ಸುರಿಸುತ್ತಿದ್ದುದನ್ನು ನೋಡಿದಳು.
ಅದೇ
ರಾತ್ರಿ, ರಾಜಕುಮಾರಿಯ ಕನಸಿನಲ್ಲಿ ಆ ಬಂಡೆಯು ಶ್ರೀ
ಮಲ್ಲಿಕಾರ್ಜುನ ಸ್ವಾಮಿಯ ಸ್ವಯಂಭೂ ಲಿಂಗವೆಂದು
ಹೇಳಿದಂತೆ ಕೇಳಿಸಿತು. ಅಂದಿನಿಂದಲೂ ಆಕೆ ಅದನ್ನು ಪೂಜಿಸಲು
ತೊಡಗಿದಳು.
***
ಸಿಲಾಥ
ಮಹರ್ಷಿಯ ಮಗನಾದ ಪರ್ವತನು ಪರಮೇಶ್ವರನನ್ನು
ನೆನೆದು ಅನೇಕ ವರುಷಗಳ ಕಾಲ
ತಪಸ್ಸನ್ನು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿ
ಶಿವನು ಪ್ರತ್ಯಕ್ಷನಾಗಲು 'ಸರ್ವಕಾಲದಲ್ಲಿಯೂ ಶಿವನು ತನ್ನೊಳಗಿರಬೇಕು.'ಎಂದು
ವರವನ್ನು ಬೇಡಿದ ಪರ್ವತನನ್ನು ಆಶೀರ್ವದಿಸಿದ
ಈಶ್ವರನು ಅದರಂತೆಯೇ ಒಂದು ದೊಡ್ಡ ಪರ್ವತವಾಗಿ
ರೂಪುಗೊಂಡು ಅಲ್ಲಿಯೇ ಮಲ್ಲಿಕಾರ್ಜುನನಾಗಿ ನೆಲೆಸಿದನು.
ಮಹಿಷಾಸುರನನ್ನು
ವಧಿಸಿದ ದುರ್ಗೆಯೂ ಇಲ್ಲಿ ಬಂದು ಮಲ್ಲಿಕಾರ್ಜುನ
ಸ್ವಾಮಿಯಲ್ಲಿ ಸೇರಿಕೊಂಡು ಭ್ರಮರಾಂಬಾ ದೇವಿ ಎನಿಸಿದಳು. ಶಿವನ
ವಾಹನನಾಗಿರುವ ನಂದಿ, ವನವಾಸದಲ್ಲಿದ್ದ ಪಾಂದವರು
ಸಹ ಇಲ್ಲಿ ಶಿವನ ಆರಾಧನೆ
ಮಾಡಿದ್ದರು. ಇಲ್ಲಿತಯೇ ಪರಮೇಶ್ವರನು ಅರ್ಜುನನನ್ನು ವ್ಯಾಧರೂಪದಲ್ಲಿ ಸಂಧಿಸಿ, ಅವನನ್ನು ಸೋಲಿಸಿದ್ದೂ,
ಅವನ ಭಕ್ತಿಗೆ ಮೆಚ್ಚಿ ಪಾಶುಪತಾಸ್ತ್ರವನ್ನು
ದಯಪಾಲಿಸಿದನು.
***
ಓರ್ವ
ಋಷಿ ಪುತ್ರಿಯಾದ 'ಶ್ರೀ'ಎನ್ನುವವಳು ಶಿವನನ್ನು
ಕುರಿತು ತಪಸ್ಸು ಮಾಡಿದಳು. ಆಕೆಯ
ತಪಸ್ಸಿಗೆ ಮೆಚ್ಚಿದ ಈಶ್ವರನು ಅವಳ
ಅಪೇಕ್ಷೆಯಂತೆ ಅವಳ ಹೆಸರನ್ನು (ಶ್ರೀ)
ತನ್ನ ಬೆಟ್ಟಕ್ಕೆ (ಶೈಲ) ಸೇರಿಸಿಕೊಂದನು. ಅಂದಿನಿಂದಲೂ
ಬೆಟ್ಟವು 'ಶ್ರೀಶೈಲ'ಎಂದು ಪ್ರಸಿದ್ದವಾಯಿತು.
No comments:
Post a Comment