Tuesday, June 30, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) – 55

ಶ್ರೀಶೈಲ (Srisailam)

ಬಾಗ -1

ಸೀಮಾಂಧ್ರದ ಕರ್ನೂಲ್ ಜಿಲ್ಲೆಯಲ್ಲಿರುವ ನಂದಿಕೊಟ್ಟೂರು ತಾಲೂಕಿನ ನಲ್ಲ ಮಲ್ಲ ಬೆಟ್ಟಗಳ ದಟ್ಟ ಅರಣ್ಯದಲ್ಲಿ ನೆಲೆಸಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರವಾದ ಶ್ರೀಶೈಲ ಭಾರತದಲ್ಲಿನ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀಶೈಲ ವು, ಭಾರತದ ಪ್ರಾಚೀನ ಧಾರ್ಮಿಕ ಕ್ಷೇತ್ರಗಳ ಇತಿಹಾಸದಲ್ಲಿ ತುಂಬಾ ಪ್ರಾಚೀನವಾದುದು . ವೇದಗಳಲ್ಲಿ, ಪುರಾಣ, ಆಗಮಗಳಲ್ಲಿ ಇದನ್ನು ತುಂಬಾ ಪವಿತ್ರ ಕ್ಷೇತ್ರವೆಂದು ಪರಿಗಣಿಸಲಾಗಿದೆ ..ಇಲ್ಲಿ ಹರಿಯುವ ಕೃಷ್ಣಾ ನದಿಯು ಆಳವಾದ ಕಮರಿಯಲ್ಲಿ ಹರಿದು ಬರುವುದರಿಂದ ತುಂಬಾ ರುದ್ರ ಭಯಾನಕವಾಗಿದೆ . ಇದನ್ನೇ ಪಾತಾಳ ಗಂಗೆ ಎಂದು ಕರೆಯುತ್ತಿದ್ದರು . ಕ್ಷೇತ್ರದ ಅಧಿದೇವತೆಗಳು ಶ್ರೀ ಮಲ್ಲಿಕಾರ್ಜುನ ,ಭ್ರಮರಾಂಬೆಯರು. ಸಮುದ್ರ ಮಟ್ಟದಿಂದ ೫೫೦೦ ಅಡಿಗಳ ಎತ್ತರದಲ್ಲಿ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಗಳಿವೆ .ಪ್ರಾಚೀನ ಕಾಲದಿಂದಲೂ ಶ್ರೀಶೈಲ ಯಾತ್ರೆಯು ಮೋಕ್ಷದಾಯಕವೆಂದು ಭಕ್ತರ ನಂಬಿಕೆ .ಉತ್ತರದಲ್ಲಿ ಕಾಶಿಯಂತೆಯೇ ದಕ್ಷಿಣದಲ್ಲಿ ಶ್ರೀಶೈಲವು ಪವಿತ್ರವೆಂದು ಭಾರತೀಯರ ನಂಬಿಕೆ .ಶ್ರೀಶೈಲ ಪರ್ವತದ ಬಗ್ಗೆ ಪೌರಾಣಿಕವಾಗಿ ಅನೇಕ ಕಥೆಗಳು ಪ್ರಚಲಿತದಲ್ಲಿವೆ . ಸ್ಥಳೀಯವಾದ ಜಾನಪದ ಇತಿಹಾಸವೂ ಹೇರಳವಾಗಿದೆ
.
Sri Mallikarjuna Swamy, Srisailam

***

ಅದೊಮ್ಮೆ ಶಿವ ಪಾರ್ವತಿಯರು ತಮ್ಮ ಮಕ್ಕಳಿಗೆ ವಿವಾಹವನ್ನು ನೆರವೇರಿಸಿಸಲು ನಿಶ್ಚಯಿಸಿದರು. ಆದರೆ ಮೊದಲು ಯಾರಿಗೆ ಮದುವೆ ಮಾಡುವುದೆನ್ನುವುದೆನ್ನುವ ವಿಚಾರದಲ್ಲಿ ಗೊಂದಲವೇರ್ಪಟ್ಟಿತು. ಅದಾಗ ಪೃಥ್ವಿಯನ್ನು ಯಾರು ಮೂರು ಬಾರಿ ಪ್ರದಕ್ಷಿಣೆ ಹಾಕಿ ಶೀಘ್ರವಾಗಿ ಹಿಂತಿರುಗುವರೋ ಅವರಿಗೆ ಮೊದಲು ವಿವಾಹ ಮಾಡುವುದಾಗಿ ನಿರ್ಧಾರವಾಯಿತು. ಇದರಂತೆಯೇ ತಮ್ಮಿಬ್ಬರು ಮಕ್ಕಳಿಗೂ ವಿಚಾರವನ್ನು ತಿಳಿಸಲಾಗಿ ಕಾರ್ತಿಕೇಯನು ತಾನು ತನ್ನ ವಾಹನವಾದ ನವಿಲನ್ನೇರಿ ವಿಶ್ವ ಪರ್ಯಟನೆಗಾಗಿ ಹೊರಟನು. ಆದರೆ ಗಣಪತಿಯು ತಾನು ಮಾತಾ ಪಿತೃಗಳಾದ ಶಿವ ಪಾರ್ವತಿಯರಿಗೆ ಮೂರು ಸುತ್ತು ಬಂದು ನಿಂತುಬಿಟ್ಟನು.
ಇದರಿಂದ ಕುಪಿತರಾದ ದಂಪವಪಾರ್ವತಿಯರುತಿಗಳು `ನೀನು ಪ್ರದಕ್ಷಿಣೆಗೆ ಇನ್ನೂ ಹೊರಟಿಲ್ಲವೇಕೆ?' ಎನ್ನಲು ಗಣೇಶನು `ನಾನೀಗಾಗಲೇ ಮೂರು ಪ್ರದಕ್ಷಿಣೆ ಮಾಡಿದ್ದೇನೆ. ಜಗದೊಡೆಯರಾದ ನಿಮಗೆ ಮೂರು ಪ್ರದಕ್ಷಿಣೆ ಹಾಕಿದ ಮೇಲೆ ಪೃಥ್ವಿಗೆ ಮೂರು ಪ್ರದಕ್ಷಿಣೆ ಹಾಕಿದಂತೆಯೇ ಅಲ್ಲವೆ?'ಎನ್ನಲು ಅವನ ಚಾಣಾಕ್ಷತೆಗೆ ಮೆಚ್ಚಿ ಪರಮೇಶ್ವರನು ಪ್ರಜಾಪತಿಯ ಮಕ್ಕಳಾದ ಸಿದ್ದಿ ಬುದ್ದಿಯರನ್ನು ಗಣೇಶನಿಗೆ ವಿವಾಹ ಮಾಡಿಸಿದನು.
ಇದಾದ ತರುವಾಯ ಭೂಪ್ರದಕ್ಷಿಣೆ ಮಾಡಿ ಹಿಂತಿರುಗಿದ ಕಾರ್ತಿಕೇಯನು ನಡೆದ ಕಾರ್ಯದಿಂದ ಕ್ರೋಧಗೊಂಡು ಶಿವ ಪಾರ್ವತಿಯರು ತನಗೆ ಮೋಸ ಮಾಡಿದರು. ಗಣೇಶನ ಪಕ್ಷಪಾತಿಗಳಾದರೆಂದು ಕೈಲಾಸದಿಂದ ಹೊರಟು ಕ್ರೌಂಚ ಪರ್ವತಕ್ಕೆ ಬಂದು ನೆಲಸಿದನು. ಘಟನೆಯಿಂದ ನೊಂದ ಪಾರ್ವತಿಯು ತಾನು ಪರಿ ಪರಿಯಾಗಿ ಮಗನನ್ನು ಒಲಿಸಲು ನೋಡಿದಳು. ನಾರದರೇ ಮೊದಲಾದವರನ್ನು ಕರೆ ಕಳಿಸಿ ಮಗನನ್ನು ಹಿಂತಿರುಗಲು ಹೇಳಿದರೂ ಕಾರ್ತಿಕೇಯನು ತಾನು ಕೋಪವನ್ನು ಬಿಡಲಿಲ್ಲ. ಹಿಂತಿರುಗಿ ಬರಲೂ ಇಲ್ಲ.
ಹೀಗಾಗಲು ಶಿವ ಪಾರ್ವತಿಯರೇ ತಾವು ಮಗನನ್ನು ಕಾಣಲು ಹೊರಟರು. ತನ್ನನ್ನು ಪುನಃ ಕೈಲಾಸಕ್ಕೆ ಕರೆಯಲು ಶಿವ ಪಾರ್ವತಿಯರೇ ಬರುತ್ತಿದ್ದಾರೆಂದು ತಿಳಿದ ಷಣ್ಮುಗನು ತಾನು ಇನ್ನಷ್ಟು ದೂರ ಹೋದನು. ಆದರೆ ಶಿವ ಪಾರ್ವತಿಯರು ತಾವು ಕ್ರೌಂಚ ಪರ್ವತದಲ್ಲಿಯೇ ನೆಲೆಸಿದರು. ಅಲ್ಲಿಂದ ಪಾರ್ವತಿಯು ತನ್ನ ಮಗನನ್ನು ಕಾಣಲಿಕ್ಕಾಗಿ ಪ್ರತೀ ಅಮಾವಾಸ್ಯೆಯಂದು ತೆರಳಿದರೆ ಪರಮೇಶ್ವರನು ಕಾರ್ತಿಕೇಯನನ್ನು ಕಾಣಲು ಪ್ರತೀ ಹುಣ್ಣೆಮೆಗೆ ಹೋಗುವನು.
ಸ್ಥಳದಲ್ಲಿ ನೆಲೆ ನಿಂತ ಶಿವನಿಗೆ `ಅರ್ಜುನ' ಎಂತಲೂ ಪಾರ್ವತೀ ದೇವಿಗೆ `ಮಲ್ಲಿಕಾ'ಎಂತಲೂ ಹೆಸರಾಯಿತು.

***
Srisailam temple

ಬಹಳ ಹಿಂದೆ ಅರುಣಾಸುರನೆಂಬ ದೈತ್ಯನು ಇಡೀ ವಿಶ್ವವನ್ನೇ ಆಳುತ್ತಿದ್ದನು. ಅವನು ಬ್ರಹ್ಮನನ್ನು ಕುರಿತು ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಅನೇಕ ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ಬ್ರಹ್ಮನು ಪ್ರತ್ಯಕ್ಷನಾದಾಗ ಅಸುರನು ತನಗೆ ಎರ್ಡು ಹಾಗೂ ನಾಲ್ಕು ಕಾಲುಗಳ ಪ್ರಾಣಿಗಳಿಂದ ಸಾವು ಬರಬಾರದೆಂದು ವರವನ್ನು ಕೇಳಿ ಪಡೆದನು. ವರದಿಂದ ಮದೋನ್ಮತ್ತನಾದ ಅಸುರನು ದೇವತೆ ಹಾಗೂ ಇಗಳಿಗೆ ಹಿಂಸೆ ನೀಡಲು ಪ್ರಾರಂಭಿಸಿದನು. ಆಗ ದೇವತೆಗಳು ಆದಿಶಕ್ತಿಯನ್ನು ಪ್ರಾರ್ಥಿಸಿ ಆಕೆಯು ಪ್ರತ್ಯಕ್ಷಳಾಗಲು ` ಅಸುರನು ತನ್ನ ಭಕ್ತನಾಗಿದ್ದು ಅವನು ತನ್ನನ್ನು ಪೂಜಿಸುವುದನ್ನು ನಿಲ್ಲಿಸಿದಾಗಲಷ್ಟೇ ನಾನವನನ್ನು ಕೊಲ್ಲಲು ಶಕ್ತಳಾಗುತ್ತೇನೆ.' ಎಂದಳು.
ಅದರಂತೆಯೇ ದೇವತೆಗಳೆಲ್ಲರೂ ಉಪಾಯದಿಂದ ದೇವಗುರು ಬೃಹಸ್ಪತಿಯು ಅಸುರನನ್ನು ಭೇಟಿಯಾಗುವಂತೆ ಮಾಡಿದರು. ಹಾಗೆ ಭೇಟಿಯಾಗಿ `ತಾವೂ ಸಹ ಗಾಯ್ತ್ರಿಯನ್ನು ಪೂಜಿಸುತ್ತಿರುದರಿಂದ ನೀನೂ ನಾನೂ ಸಮಾನರಾಗಿದ್ದೇವೆ.' ಎನ್ನಲು ಅಸುರನು ದೇವತೆಗಳು ಪೂಜಿಸುವ ಗಾಯತ್ರಿಯನ್ನು ನಾನು ಪೂಜಿಸುವುದು ಸರಿಯಲ್ಲವೆಂದು ಗಾಯತ್ರಿ ಪೂಜೆಯನ್ನು ನಿಲ್ಲಿಸಿದನು. ಇದರ ನಂತರವು ಆದಿಶಕ್ತಿ ತಾನು ಭ್ರಮರದ ರೂಪದಾಳಿ ಆರು ಕಾಲುಗಳಳುಳ್ಳ ಅನೇಕ ದುಂಬಿಗಳನ್ನು ಸೃಷ್ಟಿಸಿದಳು. ದುಂಬಿಗಳೆಲ್ಲವೂ ಸೇರಿ ಅಸುರನನ್ನೂ, ಮತ್ತವನ ಸೈನ್ಯವನ್ನೂ ಸಂಹರಿಸಿದವು. ಇಂದಿಗೂ ಭ್ರಮರಾಂಬೆ ದೇವಾಲಯದ ಹಿಂಭಾಗದಲ್ಲಿ ಭಕ್ತ ಜನರು ದುಂಬಿಗಳ ಝೇಂಕಾರವನ್ನು ಆಲಿಸಬಹುದು

No comments:

Post a Comment