ಬಾಸರಾ (Basara)
ತೆಲಂಗಾಣ ರಾಜ್ಯದ ಅಡಿಲಾಬಾದ್ ಜಿಲ್ಲೆಯಲ್ಲಿರುವ ಬಾಸರಾ ಸರಸ್ವತಿ ದೇವಾಲಯವು ದೇಶದಲ್ಲಿನ ಪ್ರಾಚೀನ ಸರಸ್ವತಿ ದೇವಾಲಯವಾಗಿದ್ದು ಸರಸ್ವತಿದೇವಿಗಾಗಿ ಇರುವ ಏಕೈಕ ಮಂದಿರವೂ ಹೌದು. ಇಲ್ಲಿ ಮಹಾಲಕ್ಷ್ಮಿ ಹಾಗೂ ಸರಸ್ವತಿ ದೇವಿಯರು ಒಟ್ಈಗೆ ಒಂದೇ ಗರ್ಭಗೃಹದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ. ಸದಾ ಕಾಲವೂ ದೇಶದ ನಾನಾ ಭಾಗಗಳ ಭಕ್ತರು ಇಲ್ಲಿ ಬಂದು ತಾಯಿಯ ದರ್ಶನ ಪಡೆಯುವುದನ್ನು ನಾವು ನೋಡುತ್ತೇವೆ. ಜತೆಗೆ ಮಕ್ಕಳಿಗೆ ಅಕ್ಷರಾಭ್ಯಾಸ ಸೇವೆಯೂ ಇಲ್ಲಿ ಸದಾಕಾಲ ನಡೆಯುತ್ತಿರುತ್ತದೆ. ನವರಾತ್ರಿ, ಮಹಾ ಶಿವರಾತ್ರಿ, ವ್ಯಾಸ ಪೂರ್ಣಿಮಾ ಹಾಗೂ ವಸಂತ ಪಂಚಮಿಗಳಂದು ವಿಶೇಷ ಪೂಜೆ, ಮಹಾ ನೈವೇದ್ಯಗಳಾನ್ನಿಲ್ಲಿ ಆಚರಿಸುತ್ತಾರೆ.
***
Sri Gnana Saraswathi Devi, Basara |
Sri Gnana Saraswathi Devi Temple, Basara |
ಮಹಾಭಾರತ ಕುರುಕ್ಷೇತ್ರ ಯುದ್ಧದ ತರುವಾಯ ಮಹರ್ಷಿ ವೇದವ್ಯಾಸರು ಮಹಃಶಾಂತಿಗಾಗಿ ಪ್ರಶಾಂತವಾದ ಸ್ಥಳವನ್ನರಸುತ್ತಾ ಬರಲುದಂಡಕಾರಣ್ಯದ ನಡುವೆ ಈ ಸ್ಥಳವು ಅವರಿಗೆ ಗೋಚರಿಸುತ್ತದೆ ತಮ್ಮ ಧ್ಯಾನಕ್ಕೆ ಇದೇ ತಕ್ಕುದಾದ ಸ್ಥಳ ಎಂದರಿತ ವ್ಯಾಸರು ಗೋದಾವರಿ ನದಿದಂಡೆಯ ಗುಹಾಲಯದಲ್ಲಿ ತಪಸ್ಸನ್ನಾಚರಿಸಲು ತೊಡಗಿದರು. ಹಾಗೆ ನಿತ್ಯವೂ ಗೋದಾವರಿ ತಟದಲ್ಲಿ ತಪವನಾಚರಿಸುತ್ತಿದ್ದ ವ್ಯಾಸರಿಗೆ ಸರಸ್ವತಿದೇವಿಯು ಪ್ರತ್ಯಕ್ಷಳಾಗಿ ಆಶೀರ್ವದಿಸಿದಳು. "ಪ್ರತಿನಿತ್ಯವೂ ತಪಸ್ಸಿಗೆ ಕುಳಿತುಕೊಳ್ಳುವ ಮುನ್ನ ನದಿಯಿಂದ ಒಂದು ಬೊಗಸೆಯಷ್ಟು ಮರಳನ್ನು ತಂದು ಈ ಗುಹೆಯಲ್ಲಿ ಮೂರು ಭಾಗದಲ್ಲಿ ರಾಶಿ ಹಾಕಬೇಕು." ಎಂದು ಆದೇಶಿಸಿದಳು. ಅದರಂತೆಯೇ ವ್ಯಾಸರು ನಿತ್ಯವೂ ತಾವು ತಪಸ್ಸಿಗೆ ಕುಳಿತುಕೊಳಳ್ಳುವ ಮುನ್ನ ನದಿಯಿಂದ ಮರಳನ್ನು ತಂದು ಗುಹೆಯ ಮೂರು ಭಾಗಗಳಲ್ಲಿ ಸಂಗ್ರಹಿಸುತ್ತಿದ್ದರು. ಹೀಗೆ ಸಂಗ್ರಹಿಸಿದ ಮರಳಿನ ರಾಶಿಯಲ್ಲಿಯೇ ಮಂದೆ ಮಹಾಲಕ್ಷ್ಮಿ, ಮಹಾ ಸರಸ್ವತಿ ಹಾಗೂ ಮಹಾಕಾಳಿ ವಿಗ್ರಹಳು ಸೃಷ್ಟಿಸಲ್ಪಟ್ಟವು. ಇವುಗಳಿಳಿಗೆ ಅದೇ ನದಿ ದಂಡೆಯ ಮೇಲೆ ದೇವಾಲಯವೂ ನಿರ್ಮಾಣವಾಯಿತು.
ಈ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾಪನೆಯನ್ನು ಸಹ ವೇದವ್ಯಾಸರೇ ನೆರವೇರಿಸಿದರು. ವೇದವ್ಯಾಸರು ಇಲ್ಲಿ ಸಾಕಷ್ಟು ಕಾಲ ತಂಗಿದ್ದ ಕಾರಣಕ್ಕಾಗಿ ಈ ಸ್ಥಳವನ್ನು ವ್ಯಾಸರ ಹೆಸರಿನಲ್ಲಿಯೇ ಕರೆಯಲಾಗುತ್ತಿತ್ತು. ಅದೇ ಮುಂದೆ ಜನಗಳ ಬಾಯಿಯಲ್ಲಿ ಬಾಸರಾ ಎಂದಾಗಿರುತ್ತದೆ. ಇಂದೂ ಸಹ ಶ್ರೀದೇವಿಗೆ ನಡೆಯುವ ಬೆಳಗಿನ ರುದ್ರಾಭಿಷೇಕದ ಸಮಯದಲ್ಲಿ ವ್ಯಾಸ ಪ್ರತಿಷ್ಠಾಪಿತವಾದ ಮರಳಿನ ಸರಸ್ವತಿ ವಿಗ್ರಹವನ್ನು ನಾವು ಕಾಣಬಹುದು.
No comments:
Post a Comment