ಗುಡ್ಡಾಪುರ(Guddapur)
ವಿಶ್ವದಲ್ಲಿ
ಅಶಾ೦ತಿ ಉ೦ಟಾದಾಗ, ಅಧಮ೯ ಮೆರೆಯುತ್ತಿರುವಾಗ, ಸುಳ್ಳು
ಸತ್ಯವನ್ನು ಮುಚ್ಚಿಹಾಕುವಾಗ ಶಿವ-ಪಾವ೯ತಿಯರು ಅವತರಿಸಿ
ನಾಡಿನ ಜನರ ಅಧಮ೯, ಅಜ್ಞಾನವನ್ನು
ಅಳಿಸಿ ಸುಜ್ಞಾನದ ಬೆಳಕು ಬೀರಿದ್ದಾರೆ. ಇ೦ಥವರ
ಸಾಲಿನಲ್ಲಿ ಸೇರುವವರು ಮಹಾರಾಷ್ಟ್ರದ ಸಾ೦ಗ್ಲಿ ಜಿಲ್ಲೆ ಜತ್ತ
ತಾಲೂಕಿನ ಗುಡ್ಡಾಪುರದಲ್ಲಿ ನೆಲೆಸಿರುವ ವರದಾನಿ ದಾನೇಶ್ವರಿ ತಾಯಿ.
ತ೦ದೆ-ತಾಯಿಯ ಲಿ೦ಗಪೂಜೆ , ಶಿವಶರಣರ
ಮಹಿಮೆ ಅರಿತ ಲಿ೦ಗಮ್ಮ ಶ್ರೀ
ಸಿದ್ದರಾಮರ ಪ್ರಭಾವಕ್ಕೆ ಒಳಗಾದಳು. ದಾ೦ಪತ್ಯಜೀವನ ಇಷ್ಟಪಡದ ಲಿ೦ಗಮ್ಮ ಬಸವಾದಿ
ಶರಣರನ್ನು ಕಾಣಬೇಕೆ೦ದು ಹಠ ಹಿಡಿದು ಕಲ್ಯಾಣದೆಡೆಗೆ
ಪ್ರಯಾಣ ಬೆಳೆಸಿದಳು. ಕಲ್ಯಾಣದ ಸಮೀಪದಲ್ಲಿರುವ ಬಿಲ್ವವನದಲ್ಲಿ
ಅನ್ನ ನೀರಿಲ್ಲದೆ 21 ದಿನ ಶಿವಯೋಗಾರೂಢಳಾದಳು. ಲಿ೦ಗಮ್ಮಳ
ದಿವ್ಯತೇಜಸ್ಸು ಹೆಚ್ಚಾಗಿ ಕಲ್ಯಾಣದಲ್ಲಿ ಮನೆಮಾತಾದಳು. ಅಣ್ಣ ಬಸವಣ್ಣ ಕಳಿಸಿದ
ಪಲ್ಲಕ್ಕಿಯಲ್ಲಿ ಕುಳಿತು ಬಸವಣ್ಣವರ ಮಹಾಮನೆ
ಪ್ರವೇಶಿಸಿದಳು. ಅನುಭವಮ೦ಟಪದ ಮಹಾಶರಣರಿಗೆ ಸಹಾಯಕಳಾಗಿ ಅಲ್ಲದೆ ಅಖ೦ಡ ಜನಸ್ತೋಮ,
ಜ೦ಗಮರಿಗೆ ಪ್ರಸಾದಕ್ಕೆ ಕೊರತೆಯಾಗದ೦ತೆ ನೋಡಿಕೊಳ್ಳತೊಡಗಿದಳು. ಜ೦ಗಮರು ಲಿ೦ಗಮ್ಮಳ ಅಪಾರ
ತ್ಯಾಗ ಮತ್ತು ದಾನವನ್ನು ಸುಪ್ರೀತರಾದರು.
ಇದನ್ನು ಕ೦ಡ ಬಸವಣ್ಣ, "ಅಮ್ಮ,
ನಿನ್ನ ದಾನಬುದ್ಧಿಯನ್ನು ಗಮನಿಸಿದಾಗ ನೀನು ಕೇವಲ ಲಿ೦ಗಮ್ಮ
ಅಲ್ಲ ದಾನಮ್ಮಳೇ ಸರಿ. ನಿನ್ನ ಈ
ಕಾಯ೯ ನಿರ೦ತರವಾಗಿ ಸಾಗಲಿ. ನೀನು ಇನ್ನು
ಮು೦ದೆ ನಮ್ಮೆಲ್ಲರಿಗೆ ದಾನೇಶ್ವರಿ' ಎ೦ದರು. ಅಲ್ಲಿ೦ದ ಮು೦ದೆ
ಲಿ೦ಗಮ್ಮ ದಾನಮ್ಮ, ವರದಾನಿ ದಾನೇಶ್ವರಿ
ಎ೦ದು ಕರೆಸಿಕೊ೦ಡಳು.
ಕಲ್ಯಾಣದಿ೦ದ
ಪ್ರಯಾಣ ಬೆಳೆಸಿದ ದಾನಮ್ಮ ಸೊಲ್ಲಾಪುರದ
ಸಿದ್ದರಾಮೇಶ್ವರರನ್ನು ಭೇಟಿಯಾಗಿ 68 ಶಿವಲಿ೦ಗಗಳನ್ನು ಪ್ರತಿಷ್ಠಾಪಿಸಿದಳು. ಸೊಲ್ಲಾಪುರದಿ೦ದ ಹುಟ್ಟೂರಿಗೆ ಆಗಮಿಸುತ್ತಿದ್ದ೦ತೆ ಊರ ತು೦ಬೆಲ್ಲ ಹಬ್ಬದ
ವಾತಾವರಣ ಮೂಡಿತು. ಇದೇ ಆನ೦ದದಲ್ಲಿ
ವಿವಾಹ ಸೂಕ್ತವೆ೦ದುಕೊ೦ಡ ತ೦ದೆ-ತಾಯಿ ದಾನಮ್ಮಳಿ೦ದ
ಮದುವೆಗೆ ಒಪ್ಪಿಗೆ ಪಡೆದರು. ದಾನಮ್ಮ
ಸ೦ಸಾರದ ಬಗ್ಗೆ ತನಗಿರುವ ಸ೦ಶಯಗಳನ್ನು
ಅಕ್ಕಮಹಾದೇವಿಯವರ ಜತೆ ಚಚಿ೯ಸಿ, ಪರಿಹಾರ
ಕ೦ಡುಕೊ೦ಡಳು. ನ೦ತರ ತನ್ನಷ್ಟೇ ಶಿವಭಕ್ತನಾದ
ಸೋಮಲಿ೦ಗನನ್ನು ಮದುವೆಯಾದಳು. ಇಬ್ಬರೂ ಆದಶ೯ ದ೦ಪತಿಯಾಗಿ,
ಸಮಸ್ತ ಮಾನವ ಕುಲದ ಉದಾಟ್ಧರಕ್ಕಾಗಿ
ಕಾಲ್ನಡಿಗೆಯಲ್ಲೇ ಉತ್ತರ-ದಕ್ಷಿಣ ಭಾರತ
ಯಾತ್ರೆಯನ್ನು ಪೂರೈಸಿದರು. ಕ೦ಚಿಯಲ್ಲಿ ಲಿ೦ಗ ಪ್ರತಿಷ್ಠಾಪನೆ ಮಾಡಿದ
ದಾನಮ್ಮ ನಾನಾ ಪವಾಡಗಳನ್ನು ಮಾಡಿದಳು.
ಸ೦ಚಾರದ ಉದ್ದಗಲಕ್ಕೂ ತನ್ನ ಮಹಿಮೆ ತೋರಿದ
ದಾನಮ್ಮ ತಾನು ಸ೦ಚರಿಸಿದಲ್ಲೆಲ್ಲ ಶಿವಧಮ೯
ಜಾಗೃತಿಯಾಗುವುದನ್ನು ಕ೦ಡು ಅವತಾರ ಸಮಾಪ್ತಿಗೊಳಿಸಲು
ನಿಧ೯ರಿಸಿ ಗುಡ್ಡಾಪುರದಲ್ಲಿಯೇ ಕೊನೆಯ ದಿನಗಳನ್ನು ಕಳೆಯತೊಡಗಿದಳು.
ದಾನಮ್ಮಳ
ಪುತ್ರ ಅಡಿಗಲ್ಲೇಶನು ತಾಯಿಯ ಸೇವೆ ಮಾಡುತ್ತ
ಕಾಲ ಕಳೆಯುತ್ತಿದ್ದನು. ದಾನಮ್ಮ ಒ೦ದು ದಿನ
ಮಗನನ್ನು ಕರೆದು ತನ್ನ ಅವತಾರ
ಸಮಾಪ್ತಿಗೊಳಿಸುವುದಾಗಿಯೂ, ತಾನು ಲಿ೦ಗೈಕ್ಯವಾದ ಸ್ಥಳದಲ್ಲಿಯೇ
ಸಮಾಧಿಯಾಗಬೇಕೆ೦ದು ತಿಳಿಸಿದ್ದಲ್ಲದೆ, ಪತಿ ಸೋಮನಾಥರೂ ತನ್ನೊಡನೆ
ಬರುವುದಾಗಿ ತಿಳಿಸಿದಳು. ಲಿ೦ಗಪೂಜೆಯಲ್ಲಿ ನಿರತಳಾದಾಗ ಲಿ೦ಗೈಕ್ಯಳಾದಳು. ಅಡಿಗಲ್ಲೇಶ್ವರನು ನಿತ್ಯ ಸೋಮನಾಥ-ದಾನಮ್ಮಳಿಗೆ
ತ್ರಿಕಾಲಪೂಜೆಗೈಯುತ್ತ ತಾಯಿಯ ಸಮ್ಮುಖದಲ್ಲಿಯೇ ಸಮಾ˜ಸ್ತನಾಗಿ ಅಡಿಗಲ್ಲೇಶ್ವರನಾದ.
ಅಡಿಗಲ್ಲೇಶ್ವರನಿ೦ದ
ಪ್ರಾರ೦ಭವಾದ ತ್ರಿಕಾಲ ಪೂಜೆ, ದಾಸೋಹ
ಕಾಯ೯ಕ್ರಮವನ್ನು ಭಕ್ತರು ನಿರ೦ತರವಾಗಿ ನಡೆಸಿಕೊ೦ಡು
ಬರುತ್ತಿದ್ದಾರೆ. ಅ೦ದಿನಿ೦ದ ಇ೦ದಿನವರೆಗೆ ದಿನದ ಮೂರು ಹೊತ್ತು,
ಮೂರು ಬೇರೆ ಬೇರೆ ಅವತಾರಗಳಲ್ಲಿ
ದಾನಮ್ಮಳನ್ನು ಪೂಜಿಸಲಾಗುತ್ತದೆ. ಇವಳನ್ನು ಇ೦ದಿಗೂ ಶತಮಾನಗಳಿ೦ದ
ಎಲ್ಲ ಮತ-ಧಮ೯ದವರು ಭಕ್ತಿಯಿ೦ದ
ಆರಾ˜ಸುತ್ತಿದ್ದಾರೆ. ಪ್ರತಿವಷ೯ ಛಟ್ಟಿ ಅಮಾವಾಸ್ಯೆಯ ದಿನ
ಜರುಗುವ ಜಾತ್ರೆಗೆ ದೇಶದ ಮೂಲೆಮೂಲೆಗಳಿ೦ದ ಭಕ್ತರು
ಪಾದಯಾತ್ರೆಯ ಮೂಲಕ ಗುಡ್ಡಾಪುರಕ್ಕೆ ತೆರಳಿ
ತಾಯಿಯ ದಶ೯ನ ಪಡೆಯುತ್ತಾರೆ. ಪ್ರಯಾಣ
ಮಾಡುವ ಪಾದಯಾತ್ರಿಗಳಿಗೆ ಸ೦ಘಸ೦ಸ್ಥೆಗಳು, ಗಣ್ಯ ವ್ಯಾಪಾರಸ್ಥರು ದಾರಿಯುದ್ದಕ್ಕೂ
ಅನ್ನಸ೦ತಪ೯ಣೆಯ ವ್ಯವಸ್ಥೆ ಮಾಡುತ್ತಾರೆ. ಮಹಾರಾಷ್ಟ್ರದ ಗುಡ್ಡಾಪುರ ಕ್ಷೇತ್ರವು ಈ ದಾನಮ್ಮಳಿ೦ದ ಅತ್ಯ೦ತ
ಪ್ರಭಾವಿ ಪುಣ್ಯಕ್ಷೇತ್ರವಾಗಿ ಖ್ಯಾತಿ ಪಡೆದಿದೆ.
ದಿನಾಂಕ 10/12/2015ರ "ವಿಜಯವಾಣಿ ದಿನಪತ್ರಿಕೆಯ ಸಂಸ್ಕೃತಿ ಪುರವಣಿಯಿಂದಾಯ್ದುಕೊಂಡದ್ದು.
No comments:
Post a Comment