ಶ್ರೀ ಮಲೆ ಮಹದೇಶ್ವರ (Male
Mahadeshwara)
ಭಾಗ -2
ಶ್ರೀ ಮಲೆ
ಮಹದೇಶ್ವರ ಬೆಟ್ಟ. ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ
ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ,
ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ
ಮಹತ್ವವನ್ನು ಪಡೆದುಕೊಂಡು ಬಂದಿದೆ. ಬೆಂಗಳೂರಿನಿಂದ 210 ಕಿ
ಮೀ ದೂರ ದಲ್ಲಿರುವ ಬೆಟ್ಟ
ಶ್ರೇಣಿಯೇ ಮಹದೇಶ್ವರ ಬೆಟ್ಟ. ಈ ಬೆಟ್ಟಗಳಿಗೆ
ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ,
ಮಹದೇಶ್ವರ ಗಿರಿ, ಎಂ ಎಂ
ಹಿಲ್ಸ್ ಎಂಬ ಇತರೆ ಹೆಸರುಗಳಿವೆ.
ಈ ಬೆಟ್ಟ ಕೊಳ್ಳೇಗಾಲದ
ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ.
ಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಆ ಏಳು ಮಲೆಗಳು
ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ,
ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮ್ಯ
ದೇವಾಲಯವಿದೆ.
ಇಂದಿಗೂ
ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ
ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ
150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ.
ಮಹದೇಶ್ವರರ ಬಗ್ಗೆ ನೂರಾರು ಜಾನಪದ
ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ
ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ,
ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ
ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ
ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ
ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ
ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು
ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ
ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ
ಕಾಲದ 1761ರ ಒಂದು ಶಾಸನದಲ್ಲಿ
ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ.
ಈ ದೇವಸ್ಥಾನಕ್ಕೆ ಫೆಬ್ರವರಿ
ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ.
ಆ ದಿನದಂದು ಲಕ್ಷಾಂತರ
ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು
ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.
***
ಅದೊಂದು
ದಿನ ಹಲಗೆ ಗೌಡರು ಸ್ವಾಮಿಗೆ
ಪೂಜೆ ಸಲ್ಲಿಸಿ ಜಗುಲಿಯ ಮೇಲೆ
ಮೈಮರೆತು ಮಲಗಿರಲು ಅದಾಗ ಮಾದಪ್ಪ
ಅವರ ಕನಸಿನಲಿ ಬಂದು ಹೀಗೆ
ಆದೇಶಿಸುತ್ತಾನೆ- "ಅಯ್ಯಝಲಗೆ ಗೌಡ ನಾನಿನ್ನು ನಿಮ್ಮ
ಮನೆಯಲ್ಲಿರಲಾರೆ. ನಿಮ್ಮ ಮನೆಯಿಂದ ಸ್ವಲ್ಪ
ದೂರದಲ್ಲಿ ಲಕ್ಕಿ ಮರಗಳಿಂದ ಆವರಿಸಿರುವ
ತೋಪಿನಲ್ಲಿ ಒಂದು ಗವಿ ಇದೆ.
ಅಲ್ಲಿ ನಾನು ಲಿಂಗ ರೂಪದಲ್ಲಿರುತ್ತೇನೆ.
ನಿಮ್ಮ ಮನೆಯ ಹಸುವೊಂದು ಅಲ್ಲಿಗೆ
ಬಂದು ಹಾಲನ್ನು ಕರೆಯುತ್ತಿರುತ್ತದೆ, ಅದೇ
ಗುರುತಾಗಿ ಭಾವಿಸಿ ನೀನು ಅಲ್ಲಿಗೆ
ಬಂದು ಪ್ರತಿದಿನವೂ ನನ್ನನ್ನು ಪೂಜಿಸುತ್ತಾ ಬಂದೆ ಎಂದರೆ ನಾನು
ಒಪ್ಪಿಕೊಳ್ಳುವೆನು." ಇಷ್ಟು ಹೇಳಿ ಸ್ವಾಮಿ
ಮರೆಯಾಗುತ್ತಾನೆ. ಮರುದಿನ ಇವರ ಮನೆಯಲ್ಲಿ
ಲಿಂಗವಿರುವುದಿಲ್ಲ. ಅದಾದ ಕೆಲ ದಿನಗಳ
ಬಳಿಕ ಇವರ ಹಸುವು ಹಾಲು
ಕರೆಯುವ ಸ್ಥಳಾವನ್ನು ಪತ್ತೆ ಹಚ್ಚಿ ಅಲ್ಲಿನ
ಲಕ್ಕಿ ಮರಗಳ ಪೊದೆಗಳನ್ನು ಸವರಿ
ಗುಹೆಯನ್ನೇ ದೇವರ ಗುಡಿಯಾಗಿ ಪರಿವರ್ತಿಸುತ್ತಾರೆ.
ಇಂದು ಅದೇ ದೇವಾಲಯವನ್ನು ಬ್ಯಾಲಗುಪ್ಪೆ
ಮಾದೇಶ್ವರ ಗುಡಿಯೆಂದು ಹೆಸರಿನಲ್ಲಿ ಕರೆದು ಸಾವಿರಾರು ಭಕ್ತಾದಿಗಳು
ಮಾದಪ್ಪನಿಗೆ ಸೇವೆ ಸಲ್ಲಿಸುತ್ತಾರೆ.
***
ಅಲ್ಲಿಂದ
ಮುಂದೆ ಮಾದಪ್ಪ ನಂಜನಗೂಡಿಗೆ ಬಂದು
ನಂಜುಂಡನ ದರ್ಶನ ಮಾಡಿದ್ದಾರೆ. ಬಳಿಕ
ಹತ್ತಿರದ ಮಠ ಮಾನ್ಯಗಳಾನ್ನು ಬವಿಚಾರಿಸಿ
ಸುತ್ತೂರಿಗೆ ಪಯಣಿಸುತ್ತಾರೆ. ಅಲ್ಲಿ ಸಿದ್ದನಂದ ದೇಶಿಕೇಂದ್ರರ ಬಳಿಗೆ ಬರುತ್ತಾರೆ. ಶ್ರೀಗಳು
ಸ್ನಾನಾದಿಗಳನ್ನು ಮುಗಿಸಿ ನದಿ ದಂಡೆಯ
ಮೇಲೆ ಬರುತ್ತಿರಲು ಮಾದಪ್ಪನು ನೇರಳೆ ಮರದ ಮೇಲೆ
ಕುಳಿತು ಹಣ್ಣನ್ನು ತಿನ್ನುತ್ತಲಿದ್ದನು. ಅದಾಗ ಶ್ರೀಗಳು "ನಾವು
ಮದುಕರು, ನಮಗೆ ಮರ ಹತ್ತಲಾಗದು.
ಹಣ್ಣನ್ನು ಉದುರಿಸಿಕೊಡುವೆಯಾ?" ಕೇಳಲು ಮಾದಪ್ಪ ಹಣ್ಣುಗಳನ್ನು
ಉದುರಿಸಿದನು. ಅದರ ಮೇಲಿನ ಧೂಳನ್ನು
ಕೊಡವಿಕೊಂಡು ಶ್ರೀಗಳು ತಿನ್ನುತ್ತಿರಲು "ಶ್ರೀಗಳೇ,
ಹಣ್ಣು ಬಿಸಿಯಾಗಿಲ್ಲ. ತಣ್ಣಗಿವೆ, ನಿಧಾನವಾಗಿ ತಿನ್ನಿರಿ." ಎನ್ನುತ್ತಾನೆ. ಆಗ ಶ್ರೀಗಳಿಗೆ ಈತ
ನಮ್ಮವನಲ್ಲ ಎನ್ನುವುದ ತಿಳಿದು ಮರದಿಂದ ಕೆಳಗಿಳಿದು
ಬರಲು ಹೇಳುತ್ತಾರೆ. ಹಾಗೆ ಮರದಿಂದ ಇಳಿದ
ಸ್ವಾಮಿ ಮಾದೇವನು "ತಾನು ಉತ್ತರ ದೇಶದವನು
ಶಿವ ಶರಣರ ಸಂದೇಶವನ್ನು ಕೇಳಲಾಗಿ
ಬಂದಿದ್ದೇನೆ, ನಾನು ವ್ಯಾಘ್ರಾನಂದ ಮಹಾಸ್ವಾಮಿಗಳ
ಶಿಷ್ಯನೆಂದು ಪರಿಚಯಿಸಿಕೊಳ್ಳುತ್ತಾನೆ.ಅವನನ್ನು ಸ್ವಾಮಿಗಳು ತಮ್ಮೊಂದಿಗೆ
ಮಠಕ್ಕೆ ಕರೆದೊಯ್ಯುತ್ತಾರೆ.
ಅಲ್ಲಿ
ಮಾದಪ್ಪನು ತಾನು ಪವಾಡ ಶಕ್ತಿಯಿಂದ
ಹಲವಾರು ಜನಗಳಕಷ್ಟವನ್ನು ಪರಿಹರಿಸುತ್ತಾ ದಿನಗಳನ್ನು ಕಳೆಯುತ್ತಿರಲು ಅದೊಂದು ದಿನ ಸ್ವಾಮಿಗಳು,
"ಮಾದಪ್ಪಾ, ನಿನ್ನ ಪವಾದ ಶಕ್ತಿಯಿಂದ
ಜನಗಳ ಕಷ್ಟ್ ಪರಿಹಾರವಾಗುತ್ತದೆ. ಆದರೆ
ನಮ್ಮ ಶರಣ ಧರ್ಮ ಅದನ್ನು
ಒಪ್ಪಆರದು ಜನರು ಆತ್ಮಾವಲಂಬಿಗಳಾಗಬೇಕು. ಶ್ರಮಪಟ್ಟು
ದುಡಿಯಬೇಕು, ಆಗಲೇ ಶಿವತತ್ವವು ಬೇಳಗುವುದು."
ಎನ್ನಲು ಮಾದಪ್ಪ ತನಗೊಂದು ಕೆಲಸ
ನೀಡುವಂತೆ ಕೇಳುತ್ತಾನೆ. ಗುರುಗಳು ಅವನನ್ನು ರಾಗಿ
ಬೀಸುವ ಕಲ್ಲಿನ ಬಳಿ ಕರೆದೊಯ್ಯುತ್ತಾರೆ.
"ರಾಗಿ ಬೀಸಿ ಅದ್ರಿಂದ ಹಿಟ್ಟನ್ನು
ಮಾಡು. ಜನರು ಹೊಟ್ಟೆ ತುಂಬಿಸಿದ
ಪುಣ್ಯ ನಿನ್ನದಾಗುತ್ತದೆ." ಎಂದು ಗುರುಗಳು ಅಪ್ಪಣೆ
ಕೊಡಿಸಲು ಮಾದಪ್ಪನು ನಸುನಕ್ಕು ತಾನು ಯೋಗ ಮುದ್ರೆಯಲ್ಲಿ
ಕುಳಿತನು. ತಕ್ಷಣದಿಂದ ರಾಗಿ ಬೀಸುವ ಕಲ್ಲು
ತಾನಾಗಿ ಬೀಸಿತು. ರಾಗಿಯು ಹಿಟ್ಟಾಯಿತು.
ಇದು ಹಗಲು, ರಾತ್ರಿಗಳವರೆಗೂ ನಡೆಯಿತು.
ಅದಾಗ
ಬೆಳಗಿನ ಜಾವದಲ್ಲಿಯೂ ರಾಗಿ ಕಲ್ಲಿನ ಶಬ್ದ
ಕೇಳಿದ ಗುರುಗಳು ನೋಡಲು ಬಂದು
ಮಾದಪ್ಪನ ಚಮತ್ಕಾರಕ್ಕೆ ಅಚ್ಚರಿಗೊಂದರು. ಅಬ್ಬಾ! ಇಂತಹಾ ಪುಣ್ಯಾತ್ಮ
ನಮ್ಮ ಮಠದಲ್ಲಿರುವುದೇ ನನಗೆ ಸೌಭಾಗ್ಯವೆಂದುಕೊಂಡರು. ಅಂದು
ಬೆಳೆಗ್ಗೆ ಮಾದಪ್ಪನು ಗುರುಗಳ ಬಳಿಗೆ ಬಂದು
ಗುರುಗಳೇ, ಲೌಕಿಕ ದೃಷ್ಟಿಯಿಂದ ನಾನಿನ್ನೂ ಜಂಗಮ ಸ್ಥಳ ದೀಕ್ಷೆಯನ್ನು ಪಡೆದಿಲ್ಲ. ತಾವದನ್ನು ನನಗೆ
ಅನುಗ್ರಹಿಸಿ." ಎಂದು ಕೇಳಲು ಗುರುಗಳು, "ಅಪ್ಪಾ ಮಹಾನುಭಾವ, ಲೋಕಪಾವನಾದ ಜಂಗಮ ನೀನು.
ಇಲ್ಲಿಗೆ ಸಮೀಪದಲ್ಲಿ ಕೊಳ್ಳೆಗಾಲವೆಂಬ ಪರಮ ದಿವ್ಯ ಕ್ಷೇತ್ರವಿದೆ, ಅಲ್ಲಿಗೆ ಸಮೀಪದ ಕಾವೇರಿ ನದಿಯ
ದಡದಲ್ಲಿ ಪ್ರಭುದೇವರ ಬೆಟ್ಟವಿದೆ. ಅಲ್ಲಿ ಪ್ರಭುದೇವ ಸ್ವಾಮಿಗಳೆಂಬ ದಿವ್ಯ ಗುರುಗಳಿದ್ದಾರೆ. ಅವರ
ಬಳಿ ಹೋಗಿ ನಾನು ಕಳಿಸಿದ್ದಾಗಿ ತಿಳಿಸು." ಎಂದಾಗ ಮಾದಪ್ಪ ಸುತ್ತೂರು ಸ್ವಾಮಿಗಳಿಗೆ ವಂದಿಸಿ
ಪ್ರಭುದೇವರ ಬೆಟ್ಟದತ್ತ ಪ್ರಯಾಣ ಮುಂದುವರಿಸಿದ್ದಾರೆ.
ಪ್ರಭುದೇವರ
ಬೆಟ್ಟಕ್ಕೆ ಬಂದು ಅಲ್ಲಿ ಗುರುಗಳಿಗೆ
ನಮಿಸಿ ತನ್ನ ಇತಿ ವೃತ್ತಗಳನ್ನು
ತಿಳಿಸಿದಾಗ ಸ್ವಾಮಿಗಳು, "ನಿನ್ನಂತಹಾ ಮಾಹಾಪುರುಷನಿಗೆ ಜಂಗಮ ಸ್ಥಳ ದೀಕ್ಷೆಯ
ಅವಷ್ಯಕತೆ ಇಲ್ಲವಾದರೂ ಲೌಕಿಕ ದೃಷ್ಟಿಯಿಂದ ನಾನು
ನಿಮಿತ್ತ ಮಾತ್ರವಾಗಿ ನಿನಗದನ್ನು ಅನುಗ್ರಹಿಸುತ್ತೇನೆ." ಎಂದು ಶಂತ ಮಲ್ಲಿಕಾರ್ಜುನ
ಸ್ವಾಮಿಗಳನ್ನು ಕರೆಸಿ ಶಾಸ್ತ್ರೋಕ್ತವಾಗಿ ವಿರಕ್ತ
ಜಂಗಮ ಪಟ್ಟ ದೀಕ್ಷೆಯನ್ನು ಅನುಗಶಿಸುತ್ತಾರೆ.
ಹಾಗೆ
ದೀಕ್ಷೆ ತೆಗೆದುಕೊಂದ ಮಾದಪ್ಪ ಅಲ್ಲಿ ಗುರುಗಳ
ಆಶೀರ್ವಾದ ಪಡೆದು ನಾಗಬೆತ್ತ ಹಿಡಿದು
ಕಲ್ಲೂರು ತೋಪಿನತ್ತ ಬರುತ್ತಾರೆ. ಅಲ್ಲಿಂದ ಮುಂದೆ ತಲಕಾಡಿಗೆ
ಹೋಗಿ ಅಲ್ಲಿ ದಿವ್ಯವಾದ ವೈದ್ಯೇಶ್ವರ
ಸ್ವಾಮಿಯ ದರ್ಶನ ಮಾಡಿದ ಮಾದಪ್ಪ
ಅಲ್ಲಿಂದ ಮುಡುಕುತೊರೆಯ ಮಲ್ಲಿಕಾರ್ಜುನ, ಪಾರ್ವತಿ ಅಮ್ಮನವರ ದರ್ಶನ ಪಡೆದು, ಇನ್ನು ನಾನೆಲ್ಲಿ ನೆಲೆಗೊಳ್ಲಬೇಕೆಂದು
ಜಾಗವನ್ನರಸುತ್ತಿರಲು ಉಪ್ಪಾರ ಜನಾಂಗದ, ಮೇರು ಶಂಕರ ಶೆಟ್ಟಿಯ ಜನಾಂಗದ, ಮೂಗಪ್ಪ, ಸರಗೂರಯ್ಯನ ಮಗನಿಗೆ
ತಿ. ನರಸೀಪುರದ ಕೊತ್ತೆಗಾಲದ ರಾಮವ್ವೆಯೊಂದಿಗೆ ಲಗ್ನವಾಗಿರುತ್ತದೆ. ಆ ದಂಪತಿಗಳ ಶಿವ ನಿಷ್ಠೆಗೆ ಮೆಚ್ಚಿದ
ಮಾಯಜ್ಕಾರ ಮಾದಪ್ಪ ಅವರ ಬಳಿ ಸಾರಿ, ಅವರಿಗೆ ಶಿವತತ್ವವನ್ನು ಉಪದೇಶಿಸಿ ತಾನು ವರ ಸೇವೆಯಲ್ಲಿ ಆನಂದವಾಗಿತುತ್ತಾನೆ.
ಹಾಗೆ ಮಾಡಿದ ಬಳಿಕ ಮತ್ತೆ ಗುರುಗಳಿದ್ದ ಸ್ಥಳಕ್ಕೆ ಬರಲು ತಾನು ಗುರುಗಳ ಪೂಜೆಗಾಗಿ ಹೂವನ್ನು ತರುತ್ತಾನೆ.
ಮತ್ತೆ
ಮರುದಿನವೂ ಯಥಾ ಪ್ರಕಾರ ಸ್ವಾಮಿಯು
ತಲಕಾಡು, ಮುಡುಕುತೊರೆಗೆ ಹೋಗಿ ಸ್ವಾಮಿಯ ದರ್ಶನ
ಪಡೆದು ಮೂಗಪ್ಪ-ರಾಮವ್ವೆಯರಿಂದ ಸೇವೆ
ಹೊಂದುತ್ತಾನೆ. ಅಲ್ಲದೆ ರಾಮವ್ವೆಗೆ "ಅಮ್ಮಾ,
ಮುಂದೆ ನಾನು ಯಾವ ಊರಲ್ಲಿ
ನೆಲೆಗೊಳ್ಳುವೆನೋ ಅಲ್ಲಿಗೆ ಪ್ರತಿ ತಿಂಗಳ
ಎಣ್ಣೆ ಮಜ್ಜನಕ್ಖಾಗಿ ನಿನ್ನ ಗಂದನನ್ನು ಕಳುಹಿಸು."
ಎನ್ನುವುದಾಗಿ ಹೇಳಲು, ತಾಯಿ ರಾಮವ್ವೆ
ನೀವು ಜಂಗಮರಾಗಿದ್ದೀರಿ. ನೀವು ದಟ್ಟ ಅಡವಿಯ
ಗುಹೆಯಲ್ಲಿರಲು ನಾನು ನಮ್ಮ ಪತಿ
ಮೂಗಪ್ಪನನ್ನೊಬ್ಬರನ್ನು ನಿಮ್ಮ ಬಳಿ ಕಳುಹಿಸಿ
ಇಲ್ಲಿ ಹೇಗಿರಲಿ? ನಾನೂ ಪತಿಯೊಂದಿಗೆ ಬರುತ್ತೇನೆ"ನಂದಳು. ಆದರೆ ಸ್ವಾಮಿಯು
"ಅಮ್ಮಾ, ನಾನು ವಿರಕ್ತ. ನಾನು
ಇದ್ದ ಕಡೆ ಹೆಂಗಸರು ಬರುವಂತಿಲ್ಲ."
ಎಂದಪ್ಪಣೆ ಗೊಡಿಸುತ್ತಾರೆ. ಆಗ ರಾಮವ್ವೆ, "ಅಯ್ಯಾ,
ಇಲ್ಲಿರುವ ಪಾರ್ವತಿಯು ಹೆಣ್ಣು, ಈ ಭೂಮಿ
ತಾಯಿಯೂ ಹೆಣ್ಣು, ನಿಮ್ಮನ್ನು ಹೆತ್ತ
ಆ ಮಹಾತಾಯಿಯೂ ಹೆಣ್ನಾಗಿರುವಾಗ
ನಿಮ್ಮ ಸ್ಥಳಕ್ಕೆ ಹೆಂಗಸರು ಬರಬಾರದೇಕೆ?" ಎನ್ನಲು
ಮಾದಪ್ಪ "ತಾಯಿ ನಾನಿದ್ದ ಕಡೆ
ಹೆಂಗಸರು ಬರಲಿ, ಯಾವ ಹೆಂಗಸರು
ಶುದ್ದವಾಗಿ ಮಡಿಯುಟ್ಟು ಹಳದಿ ಪಿತಾಂಬರ ತೊಟ್ಟು
ಅರಿಶಿಣ ಕುಂಕುಮವಿರಿಸ್ಕೊಂಡು ನನ್ನ ಸೇವೆಗಾಗಿ ಬಂರುವಳೋ
ಅವಳ ಕಷ್ಟ್ಗಳನ್ನು ನಾನು ಕಳೆಯುತ್ತೇನೆ. ಎನ್ನಲು
ರಾಮವ್ವೆ ನಾನೂ ಅದೇ ರೀತಿಯಾಗಿ
ಬರಲುೊಪ್ಪುತ್ತಾಳೆ. ಮಾದಪ್ಪನು ಮೂಗಪ್ಪನನ್ನು ಕರೆದು "" ನೀನು ನನ್ನ ಭಕ್ತರ
ಮನೆಗೆ ಹೋಗಿ ಎಳ್ಳನ್ನು ಸಂಗ್ರಹಿಸಿ
ಪ್ರತಿ ತಿಂಗಳೂ ನನ್ನ ಎಣ್ಣೆ
ಮಜ್ಜನ ಮಾಡಿಸಬೇಕೆಂದು ಅಪ್ಪಣೆ ಮಾಡಿ ಅಲ್ಲಿಂದ
ಗುಮಠಕ್ಕೆ ಹಿಂತಿರುಗುತ್ತಾನೆ.
ಇಷ್ಟರ
ನಡುವೆ ಮಠದಲ್ಲಿದ್ದ ಉಳಿದ ಶಿಷ್ಯರಿಗೆ ಇವನ
ಮೇಲೆ ಅನುಮಾನ ಬಂದು ಇವನ
ಬೆನ್ನತ್ತಿ ನಡೆದಿರುತ್ತಾರೆ. ಮಾದಪ್ಪ ಗುರುಪೂಜೆಗಾಗಿ ಹೂವನ್ನು
ಎಲ್ಲಿಂದ ತರುವನೆಂದು ತಿಳಿಯಲು ಅವನ ಬೆನ್ನು
ಹತ್ತಿದ್ದಾರೆ ಮಾದಪ್ಪನಾದರೋ ತಾನು ಬೆಟ್ತದಲ್ಲಿದ್ದ ಹೆಂದಗೊದ್ದೆ,
ಗೋಸುಂಬೆಗಳನ್ನು ಕರೆದು ಅವುಗಳನ್ನು ಕೊಳದಲ್ಲಿ
ಅದ್ದಲು ಅವು ಸುಂದರ ಪುಷ್ಪಗಳಾಗುತ್ತಿದ್ದವು!
ಅದನ್ನು ಆತ ಗುರುಗಳ ಪೂಜೆಗಾಗಿ
ನೀಡುತ್ತಿದ್ದನು. ಇದನ್ನ ಕಂಡ ಉಳಿದ
ಶಿಷ್ಯರು ತಾವೂ ಆ ಪ್ರಯೋಗಕ್ಕೆ
ಮುಂದಾಗಲು ಅವರಿಗೆ ಯಾವ ಫಲವೂ
ದೊರೆಯಲಿಲ್ಲ. ಕಡೆಗೆ ಮಾಯಕಾರ ಮಾದಪ್ಪನ
ವಿಚಾರವನ್ನು ಉಳಿದ ಶಿಷ್ಯರೆಲ್ಲರೂ ಗುರುಗಳಿಗೆ
ತಿಳಿಸಲು ಗುರುಗಳಿಗೂ ಮಾದಪ್ಪನ ಬಗೆಗೆ ಸಣ್ಣ
ಅನುಮಾನ ಬಂದಿತು. ಅವರೂ ಸ್ವಾಮಿ
ಮಾದಪ್ಪನ ಪರೀಕ್ಷೆಗೆ ತೊಡಗಿದರು.
No comments:
Post a Comment