ಶ್ರೀ ಮಲೆ ಮಹದೇಶ್ವರ (Male
Mahadeshwara)
ಭಾಗ – 3
ಶ್ರೀ ಮಲೆ
ಮಹದೇಶ್ವರ ಬೆಟ್ಟ. ಕರ್ನಾಟಕದ ದಕ್ಷಿಣ ಭಾಗದ ಪೂರ್ವಘಟ್ಟಗಳ
ಮಧ್ಯ ಪ್ರದೇಶದಲ್ಲಿನ, ಈಗಿನ ಚಾಮರಾಜನಗರ ಜಿಲ್ಲಾ,
ಕೊಳ್ಳೇಗಾಲ ತಾಲ್ಲೋಕಿನಲ್ಲಿದ್ದು, ಅನೇಕ ಶತಮಾನಗಳಿಂದ ತನ್ನ
ಮಹತ್ವವನ್ನು ಪಡೆದುಕೊಂಡು ಬಂದಿದೆ. ಬೆಂಗಳೂರಿನಿಂದ 210 ಕಿ
ಮೀ ದೂರ ದಲ್ಲಿರುವ ಬೆಟ್ಟ
ಶ್ರೇಣಿಯೇ ಮಹದೇಶ್ವರ ಬೆಟ್ಟ. ಈ ಬೆಟ್ಟಗಳಿಗೆ
ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ,
ಮಹದೇಶ್ವರ ಗಿರಿ, ಎಂ ಎಂ
ಹಿಲ್ಸ್ ಎಂಬ ಇತರೆ ಹೆಸರುಗಳಿವೆ.
ಈ ಬೆಟ್ಟ ಕೊಳ್ಳೇಗಾಲದ
ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ.
ಇಲ್ಲಿನ ದೇವರನ್ನು "ಏಳು ಮಲೆ ಮಾದಪ್ಪ"ಎನ್ನುವುದು ಪ್ರಸಿದ್ದಿ. ಆ ಏಳು ಮಲೆಗಳು
ಇವು- ಆನೆಮಲೆ, ಕಾನಮಲೆ, ಗುತ್ತಿಮಲೆ,
ಜೇನುಮಲೆ, ಪಚ್ಚೆನೀಲಿಮಲೆ, ಮಂಜುಮಲೆ, ನಡುಮಲೆ ನಡುಮಲೆಯಲ್ಲಿಯೇ ಸ್ವಾಮಿಯ
ದೇವಾಲಯವಿದೆ.
ಇಂದಿಗೂ
ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ
ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ
150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ.
ಮಹದೇಶ್ವರರ ಬಗ್ಗೆ ನೂರಾರು ಜಾನಪದ
ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ
ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ,
ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ
ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ
ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ
ಇದೆ. ಇವರಲ್ಲಿ ಅಸಾಮಾನ್ಯವಾದ ಅಲೌಕಿಕ
ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು
ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ
ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ
ಕಾಲದ 1761ರ ಒಂದು ಶಾಸನದಲ್ಲಿ
ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ.
ಈ ದೇವಸ್ಥಾನಕ್ಕೆ ಫೆಬ್ರವರಿ
ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ.
ಆ ದಿನದಂದು ಲಕ್ಷಾಂತರ
ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು
ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.
***
ಅಂದು
ಸಂಜೆ ಮಾದಪ್ಪನನ್ನು ಕರೆದ ಗುರುಗಳು ಶಿವಪೂಜೆಗಾಗಿ
ಮಲ್ಲಿಗೆ ಹೂವನ್ನು ತರಲು ಹೇಳುತ್ತಾರೆ.
ಆಗ ಮಾದಪ್ಪ ತಾನು ಬೆಟ್ಟದಿಂದಿಳಿದು
ಎಂದಿನಂತೆಯೇ ಗೊದ್ದ ಗೋಸುಂಬೆಗಳನ್ನೂ, ಹೆಂಡ
ಗೊಜ್ಜಿಗಳನ್ನೂ ಕರೆದು ತನ್ನ ನಾಗಬೆತ್ತದಿಂದ
ಹೊಡೆದು ಚೀಲದಲ್ಲಿ ತುಂಬಿಕೊಂಡು ಕೊಳದತ್ತ ಬಂದು ಅವನ್ನು
ಕೊಳದಲ್ಲಿ ಅದ್ದಲು ಅವೆಲ್ಲವೂ ದುಂಡುಮಲ್ಲಿಗೆ
ಹೂವುಗಳಾಗಿ ಪರಿವರ್ತನೆಗೊಂಡವು. ಅದನ್ನು ಕಂಡ ಗುರುಗಳು
ಮಾದಪ್ಪನನ್ನು ಬಾಚಿ ತಬ್ಬಿಕೊಂಡು "ನೀನು
ಸಾಮಾನ್ಯನಲ್ಲ, ನಿಜವಾಗಿಯೂ ಪರಮೇಶ್ವರನ ಅಂಶವಾಗಿದ್ದಿ. ನಿನ್ನನ್ನು ಇಂದಿನಿಂದ ನನ್ನ ಶಿಷ್ಯ ಕೋಟಿಗಳೆಲ್ಲರೂ
ಪೂಜಿಸಲಿ, ಆಪೂಜೆ ನನ್ನಿಂದಲೇ ಪ್ರಾರಂಭವಾಗಲಿ."
ಎಂದಾಗ ಸ್ವಾಮಿಯು "ನಿಮ್ಮನ್ನು ನಾನು ಗುರುವಾಗಿ
ಸ್ವೀಕರಿಸುವುದರಿಂದ ನಾನು ಇಲ್ಲಿ ನಿಮ್ಮೊಡನೆ ಪೂಜೆಗೊಳ್ಳುವುದು ಸರಿಯಲ್ಲ. ನಾನೆಲ್ಲಿ ನೆಲೆಸುತ್ತೇನೋ
ಅಲ್ಲಿಗೆ ನಿಮ್ಮ ಶಿಷ್ಯರಿಂದ ಪಾದೋದಕವನ್ನು ಕಳಿಸಿಕೊಡಿ ಎನ್ನುವುದಾಗಿ ಹೇಳಿ ಅಲ್ಲಿಂದ ಮುಂದೆ ಸಾಗುತ್ತಾನೆ.ಶಾಂತವೀರ
ಮಹಾಸ್ವಾಮಿಗಳ ಗುಹೆಗೆ ಆಗಮಿಸುತ್ತಾರೆ.
ಅದೇ
ಸಮಯದಲ್ಲಿ ನಂಜನಗೂಡಿನ ಹತ್ತಿರದ ಹದಿನಾರೆನ್ನುವ ಹಳ್ಳಿಯಲ್ಲಿ ಸಿದ್ದನಂಜರಾಜ ಒಡೆಯನೆನ್ನುವನಿದ್ದನು.
ಅವನು ಪಾಳೇಗಾರನಾಗಿದ್ದು ತಾನು ಮೂರು ಸಾವಿರ ಜನರ ದಂಡನ್ನು ತೆಗೆದುಕೊಂಡು ತಲಕಾಡು ಹಾಗೂ ಕೊಳ್ಳೆಗಾಲದ
ಬಳಿಯ ಹರದಹಳ್ಳಿಯ ಪಾಳೇಗಾರರನ್ನು ಭೇಟಿಯಾಗಲು ಹೊರಟಿದ್ದನು. ಅದಾಗ ಮಾರ್ಗಮದ್ಯೆ ಅವನ ಪಡೆಯವರಿಗೆ
ನೀರಡಿಕೆಯಾಗಲು ಅಲ್ಲಿನ ಕೆಲವು ಮಂದಿ ಶಾಂತವೀರರ ಗವಿಯತ್ತ ಬಂದು ನೀರಿಗಾಗಿ ಕೇಳಿದರು. ಆಗ ಅಲ್ಲಿದ್ದ
ಮಾದೇವನು ತಾನು ಒಟ್ಟೂ ಮೂರು ಸಾವಿರ ಮಂದಿಗೂ ತೃಪ್ತಿಯಾಗುವಂತೆ ನೀರನ್ನು ಹಂಚಿದನು. ಅದನ್ನು ಕಂಡ
ಪಾಳೇಗಾರನು "ಸ್ವಾಮಿ, ಶರಣ ಜಂಗಮರ ಶಕ್ತಿಯನ್ನು ನಾನಿಂದು ಅರಿತೆನು, ನನಗೂ ನಿಮ್ಮ ಸೇವೆ ಮಾಡಲು
ಅವಕಾಶ ನೀಡಿ." ಎಂದು ಅಂಗಲಾಚಿದನು. ಆಗ ಮಾದಪ್ಪ "ನೀನು ಸೇವೆ ನೀಡುವುದಾದರೆ ಇಲ್ಲಿ ಕಾಣುತ್ತಿದೆಯಲ್ಲ ಕುಂತೂರು, ಆ ಸ್ಥಳದಲ್ಲಿ
ನಮ್ಮ ಗುರುಗಳ ಹೆಸರಲ್ಲಿ ಒಂದು ಕಲ್ಮಠವನ್ನು ಕಟ್ಟಿಸಿ ಕೊಡು." ಎನ್ನಲು ಪಾಳೇಗಾರನು ಸಂತೋಷದಿಂದ
"ನಾನು ಹರದಹಳ್ಳಿಯಿಂದ ವಾಪಾಸಾದ ಬಳಿಕ ಕಟ್ಟಿಸಿಕೊಡುತ್ತೇನೆ." ಎಂದು ಭಾಷೆ ನೀಡಿದನು.
ಅದಾಗ
ಗುರುಗಳು "ಮಾಯಕಾರ ಮಾದಪ್ಪ, ನೀನು
ಕೇವಲ ಒಂದು ಸೋರೆ ಬುರುಡೆಯಷ್ಟು
ನೀರಿನಿಂದ ಇಷ್ಟು ಜನರನ್ನೂ ಸಲಹಿದೆ.
ನಿಜಕ್ಕೂ ನೀನು ದೊಡ್ದವನು, ನಾನು
ನಿನ್ನ ಸೇವೆ ಮಾಡಬೇಕು. ನಿನ್ನ
ಸೇವೆ ನಾವಝೊಂದುವುದಲ್ಲ." ಎನ್ನಲು ಮಾದಪ್ಪನು "ಗುರುಗಳೇ
ಹಾಗಾದಲ್ಲಿ ನಾನೆಲ್ಲಿ ನೆಲೆಗೊಳ್ಳುವೆನೋ ಅಲ್ಲಿಗೆ ನೀವು ದಯಮಾಡಿಸಿ
ಲಿಂಗಧಾರಣೇಯನ್ನು ಮಾಡಿಕೊಳ್ಳಬೇಕು" ಎಂದು ಆದೇಶಿಸಿ ತಾನು
ಮೂಡಲ ದಿಕ್ಕಿನೆಡೆಗೆ ಹೊರಟನು.
ಹಾಗೆ
ಮುಂದೆ ಸಾಗುತ್ತಾ ಕನಕಗಿರಿಗೆ ಮಾದಪ್ಪನು ಬರಲು ಅಲ್ಲಿ ಅವನಿಗೆ
ಶಿವ ಪಾರ್ವತಿಯರು ದರ್ಶನ ನೀಡಿ ಶೂಲಾಯುಧವನ್ನು
ಕರುಣಿಸುತ್ತಾರೆ. ಹಾಗೆ ಕರುಣಿಸಿದ ಶೂಲಾಯುಧವನ್ನು
ಅಲ್ಲಿಗೆ ಸನಿಹದಲ್ಲಿದ್ದ ಬಂಕಾಪುರಿ ಪಟ್ಟಣಕ್ಕೆ ಹಾಗೆ ಮುಂದೆ ಸಾಗುತ್ತಾ ಕನಕಗಿರಿಗೆ
ಮಾದಪ್ಪನು ಬರಲು ಅಲ್ಲಿ ಅವನಿಗೆ ಶಿವ ಪಾರ್ವತಿಯರು ದರ್ಶನ ನೀಡಿ ಶೂಲಾಯುಧವನ್ನು ಕರುಣಿಸುತ್ತಾರೆ.
ಹಾಗೆ ಕರುಣಿಸಿದ ಶೂಲಾಯುಧವನ್ನು ಅಲ್ಲಿಗೆ ಸನಿಹದಲ್ಲಿದ್ದ ಬಂಕಾಪುರಿ ಪಟ್ಟಣಕ್ಕೆ ಹೋಗಿ ಅಲ್ಲಿರುವ ದುಷ್ಟ ಶ್ರಮಣಾಸುರನನ್ನು ಸಂಹರಿಸಿ ಬಳಿಕ
ಏಳು ಮಲೆಯನ್ನು ನಿನ್ನ ತಪೋಭೂಇಯಾಗಿಸಿಕೊಂಡು ಮಲೆ ಮಾದೇಶ್ವರ ಎನ್ನುವ ಹೆಸರಿನಿಂದ ಪ್ರಖ್ಯಾತನಾಗಿ
ಸಾವಿರಾರು ಭಕ್ತರಿಂದ ಪೂಜೆಗೊಳ್ಳು. ಎಂದು
ಹರಸಿ ನೀಡುತ್ತಾರೆ.
ಸ್ವಾಮಿಯು
ಪರಮೇಶ್ವರನ ಆಶೀರ್ವಾದ ಪಡೆದು ಸಿಂಗಾನಲ್ಲೂರಿಗೆ ಆಗಮಿಸುತ್ತಾರೆ. ಅಲ್ಲಿ ಊರ ಹೊರಗಿನ ತೋಪಿನಲ್ಲಿ
ಧ್ಯಾನದಲ್ಲಿ ಕುಳಿತಿರಲು ಶಾಂತವೀರ ಸ್ವಾಮಿಗಳ ಗವಿಯಲ್ಲಿದ್ದ ಬಸವನು ತನ್ನ ಸ್ವಾಮಿಯನ್ನು ಹುಡುಕುತ್ತಾ
ಗುರುಗಳ ಆದೇಶದಂತೆ ಸಿಂಗನಲ್ಲೂರಿಗೆ ಸ್ವಾಮಿಯಿದ್ದೆಡೆಗೆ ಬಂದು ಸ್ವಾಮಿಯನ್ನು ಹಿಂತಿರುಗಿ ಬರುವಂತೆ
ಬೇಡಿಕೊಳ್ಳುತ್ತದೆ. ಆಗ ಸ್ವಾಮಿ ಮಾದಪ್ಪನು "ನಾನಿಟ್ಟ ಹೆಜ್ಜೆಯನ್ನು ಹಿಂದಿದಲಾರೆ. ನೀನು ನನ್ನನ್ನು
ಇಲ್ಲಿ ಬಂದು ನನ್ನನ್ನು ಅಡ್ದಗಟ್ಟಿದ ಕುರುಹಾಗಿ ನೀನು ಇಲ್ಲಿಯೇ "ಕಟ್ಟೆ ಬಸವ" ಎನ್ನುವ
ಹೆಸರಿನಿಂದ ನೆಲೆಸು. ನನ್ನ ಭಕ್ತರು ನನ್ನ ದರ್ಶನಕ್ಕೆ ಬರುವ ಮುನ್ನ ನಿನ್ನ ದರ್ಶನ ಮಾಡಿ, ಧೂಪ ಸೇವೆಯನ್ನಿತ್ತು
ಬರಲಿ." ಎಂದು ಆಶೀರ್ವದಿಸುತ್ತಾನೆ. ಅಲ್ಲಿಂದ ಆ ಬಸವಣ್ಣನು ಸಿಂಗಾನಲ್ಲೂರಿನ ಕಲ್ಲು ಬಸವ ಎಂದು
ಖ್ಯಾತಿ ಹೊಂದುತ್ತದೆ.
ಅಲ್ಲಿಂದ
ಮಾದಪ್ಪನು ತಲ್ಗುಣಿ ಹೊಸೂರಿಗೆ ಆಗಮಿಸುತ್ತಾನೆ.
ಅಲ್ಲಿ ಗಂಗಾಧರನೆನ್ನುವ ಮಂತ್ರವಾದಿಯು ಇದ್ದನು. ಅಲ್ಲಿ ಅವನು
ಜನಗಳಿಗೆಲ್ಲಾ ಬಹಳ ಹಿಂಸ್ ನೀಡುತ್ತಿದ್ದ.
ತಾನು ದಾರಿಯಲ್ಲಿ ಬರುವಾಗ ಯಾರು ಸಿಕ್ಕಿದರೂ
ತನ್ನ ಕಾಲಿಗೆ ಅಡ್ದಬಿದ್ದು ಮುಂದುವರಿಯಬೇಕೆನ್ನುವುದು
ಅವನ ಅಪ್ಪಣೆಯಾಗಿತ್ತು. ಹೀಗಿರಲು ಸ್ವಾಮಿಯು ಹುಲಿವಾಹನನಾಗಿ
ಬರುತ್ತಿರಲು ಗಂಗಾಧರನು ಎದುರಿಗೆ ಸಿಕ್ಕಿದ. "ಎಲಾ
ಕಾವಿ ಬಟ್ಟೆಯ ಸನ್ಯಾಸಿ, ನನ್ನ
ಕಾಲಿಗೆ ಅಡ್ದಾಗು." ಎನಲು ಮಾದಪ್ಪನು, "ಗಂಗಾಧರ,
ನಿನ್ನ ವಿದ್ಯೆಯನ್ನು ಜನರ ಉದ್ದಾರಕ್ಕೆ ಬಳಸಿದರೆ
ನಿನಗೆ ಸದ್ಗತಿ ಸಿಗುವುದು." ಎಂದು
ಉಪದೇಶಿಸಲು ಅದರಿಂದ ಕೆರಳಿದ ಗಂಗಾಧರ
ಸ್ವಾಮಿಯು ಹಾವಾಗುವಂತೆ ಶಾಪ ನೀಡಲು ಮುಂದಾದ.
ಆಗ ಸ್ವಾಮಿಯು ನೀನೇ ಹಾವಿನ ಜನ್ಮ
ಹೊಂದೆಂದಾಗ ಗಂಗಾಧರನು ಹಾವಾಗಿ ಕಾಡಿನೊಳಗೆ ಹೊರಟು
ಹೋದನು. ನಂತರ ಸ್ವಾಮಿಯು ಅಲ್ಲಿನ
ಜನಗಳಿಗೆ ಅಭಯವನ್ನು ಕರುಣಿಸಿ ಮುಂದೆ ಸಾಗುತ್ತಾರೆ.
ಮುಂದೆ
ಸ್ವಾಮಿಯು ಕಾಮಗೆರೆ (ಕಾಮತಟಾಕಪುರಿ) ಮಾರ್ಗವಾಗಿ ಹನೂರಿಗೆ ಆಗಮಿಸಿದನು. ಅಲ್ಲಿಂದ
ಈಶಾನ್ಯ ದಿಕ್ಕಿನಲ್ಲಿ ಪಯಣಿಸಿ ಹನುಮಕಣಿವೆ ಎನ್ನುವುದಾಗಿ
ಹನುಮಂತ ತಪಸ್ಸನ್ನಾಚರಿಸಿದ, ಸ್ವಾಮಿಯನ್ನು ಸಂಧಿಸಿದ ಸ್ಥಳವನ್ನು ಹಾಯ್ದು ಮೂಡಲಗಿರಿಯತ್ತ
ನಡೆಯುತ್ತಾರೆ. ಅಲ್ಲಿಂದ ಒಡೆಕೆ ಹಳ್ಳ
ಎಂದು ಕರೆಯುವ ಪ್ರದೇಶದಿಂದ ಮಾದಪ್ಪನು
ಮುಂದೆ ಸಾಗಿದ್ದಾನೆ.
ಅಲ್ಲಿನ
ಬೇವಿನ ಹಟ್ಟಿ ಎನ್ನುವ ಜಾಗದಲ್ಲಿ ಹದಿನಾಲ್ಕು ಮನೆಗಳನ್ನು ಕೇವಲ ಬೇವಿಝಟ್ಟಿಯಿಂದ ಕಟ್ಟಲಾಗಿತ್ತು.
ಅಲ್ಲಿ ವಾಸವಿದ್ದ ಕೆಂದ ಗೌಡ ಹಾಗೂ ಕಾಳಮ್ಮ ದಂಪತಿಗಳಿಗೆ ಏಳು ಮಂದಿ ಮಕ್ಕಳು. ಅವರಿಗೆ ಆಲಂಬಾಡಿಯಿಂದ
ತಂದ ಏಳುಮಂದಿ ಹೆಣ್ಣುಮಕ್ಕಳೊಡನೆ ಲಗ್ನವಾಗಿರುತ್ತದೆ. ಅವರಿಗೆ ಮೂವತ್ತಮೂರು ಮಂದಿ ಮಕ್ಕಳು.
ಅವರು ತನ್ನ ಮನೆಯ ಸುತ್ತ ಬೇಲಿ ಹಾಕಿಕೊಂಡು
ಯಾವ ಜಂಗಮರಿಗೂ ಒಂದು ಕಾಳನ್ನೂ ದಾನ ಮಾಡದಂತೆ ಕಾಳಮ್ಮನು ದವಸ ಧಾನ್ಯಗಳನ್ನು ಬೆಳೆದು ಕಾಯುತ್ತಿದ್ದಳು.
ಅ<ತಹಾ ಕಾಳಮ್ಮನ ಮನೆಗೆ ಮಾಯಕಾರ ಮಾದಪ್ಪ ಆಗಮಿಸಿದನು. ಹಾಗೆ ಬಂದು ಕಾಳಮ್ಮನ ಬಳಿ ಒಂದು ಹಿಡಿ
ಎಳ್ಲಿಗಾಗಿ ಬೇಡಲು ಕಾಳಮ್ಮ ಎಳ್ಳು ದಾನ ನೀದಲು ನಿರಾಕರಿಸುತ್ತಾಳೆ. ಅದಾಗ ಮಾದಪ್ಪ ಒಂದು ವಿಭೂತಿ
ಉಂಡೆಯನ್ನು ಮಂತ್ರಿಸಿ ಆ ಎಳ್ಳಿನ ರಾಶಿಯ ಮೇಲಿಟ್ತಾಗ ಎಳ್ಳೆಲ್ಲವೂ ಮರಳಾಗಿರುತ್ತದೆ!. ಆಗ ಪುನಃ ಒಂದು
ಹಿಡು ಮರಳನ್ನಾದರೂ ದಾನ ನೀಡು ಎಂದಾಗಲೂ ಕಾಳಮ್ಮ ದಾನ ನೀಡುವುದಿಲ್ಲ. ಆಗ ಸ್ವಾಮಿಗೆ ಕೋಪ ಬಂದು
"ಎಲೆ ಬೇವಿನ ಕಾಳಿ, ನಿನ್ನ ಈ ಶ್ರೀಮಂತಿಕೆ ತುಂಬಿದ ಮನೆ ಸುಟ್ಟು ಬೂದಿಯಾಗಲಿ! ನೀನು ಕಲ್ಲಾಗಿ
ಹೋಗು!!" ಎಂದು ಶಪಿಸುತ್ತಾರೆ. ಅದರಂತೆ ಬೇವಿನ ಕಾಳಿ ಇಂದಿಗೂ ಕಲ್ಲಾಗಿ ಅಲ್ಲಿ ಕುಳಿತಿದ್ದಾಳೆ.
No comments:
Post a Comment