Sunday, March 19, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 82

ನಂಜನಗೂಡು (Nanjanagud)
ಭಾಗ - 2

ಕುಂಡಿನಿ (ಕೌಂಡಿನ್ಯಹಾಗೂ ಕಪಿಲಾ ನದಿಗಳ ಸಂಗಮ ತೀರದಲ್ಲಿರುವ ನಂಜನಗೂಡುಪುರಾಣ ಪ್ರಸಿದ್ಧವಾದ ಶಿವ ಕ್ಷೇತ್ರ ಹಾಗೂ ಪುಣ್ಯ ಭೂಮಿನಂಜನಗೂಡಿನ ಹಿಂದಿನ ಹೆಸರುಗರಳಪುರಿಗರಳ ಎಂದರೆ ವಿಷ ಅರ್ಥಾತ್ ಹಾಲಾಹಲ.  ಹಾಲಾಹಲವನ್ನೇ ಕುಡಿದ ನಂಜುಂಡನೆಲೆಸಿಹ ಪುಣ್ಯ ಭೂಮಿಯೇ ನಂಜನಗೂಡು ಕ್ಷೇತ್ರ.

ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ  ಕೇವಲ 28 ಕಿಲೋ ಮೀಟರ್ದೂರದಲ್ಲಿರುವ  ಪವಿತ್ರ ಪುಣ್ಯ ಕ್ಷೇತ್ರದ ಮಹಿಮೆಯ ಬಗ್ಗೆ ಹಲವು ಪುರಾಣಗಳಲ್ಲಿಬಣ್ಣಿಸಲಾಗಿದೆಸ್ಕಂದ ಪುರಾಣದಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ.  ಸಮುದ್ರ ಮಟ್ಟದಿಂದ2155 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಪವಿತ್ರ ಕ್ಷೇತ್ರ ನಂಜನಗೂಡುತನ್ನ ಶ್ರೀಮಂತಪರಂಪರೆಯಿಂದಾಗಿ ಸಹಾ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ ಪಟ್ಟಣ ಮೊದಲಿಗೆಗಂಗರ ಆಳ್ವಿಕೆಗೆ ಒಳಪಟ್ಟಿತ್ತುನಂತರ ಹೊಯ್ಸಳರು ಇದನ್ನು ಆಳಿದರು , ಆನಂತರ ಮೈಸೂರು  ಒಡೆಯರು ಇದನ್ನು ಆಳಿದರುಇತಿಹಾಸದಲ್ಲಿ ದಾಖಲಾದಂತೆಶ್ರೀರಂಗಪಟ್ಟಣವನ್ನು ಆಳಿದ ಹೈದರಾಲಿ ಮತ್ತು ಆತನ ಮಗ ಟಿಪ್ಪುಸುಲ್ತಾನ್ನಂಜನಗೂಡಿನೊಂದಿಗೆ ತುಂಬಾ ಹತ್ತಿರದ ಬಾಂಧವ್ಯವನ್ನು ಹೊಂದಿದ್ದರು.




ನಂಜನಗೂಡಿಗೆ  ಭೇಟಿ ಕೊಡುವವರು ಶ್ರೀ ರಾಘವೇಂದ್ರ ಸ್ವಾಮಿ ಮಠ (ರಾಘವೇಂದ್ರಸ್ವಾಮಿಗಳ ಪ್ರತೀಕ ಸನ್ನಿಧಾನಮತ್ತು ಪರಶುರಾಮ ಕ್ಷೇತ್ರಗಳಿಗೆ ಭೇಟಿ ಕೊಡಬಹುದು.

ನಂಜನಗೂಡು ರಾಜ್ಯದ ಅತಿ ದೊಡ್ಡ ದೇವಾಲಯವೂ ಹೌದು.  ದ್ರಾವಿಡ ಶೈಲಿಯಲ್ಲಿರುವದೇಗುಲ 117 ಮೀಟರ್ ಉದ್ದ ಹಾಗೂ 48 ಮೀಟರ್ ಅಗಲ ಇದೆ. 147 ಕಂಬಗಳಿಂದ ಕೂಡಿದದೇವಾಲಯದ ಒಟ್ಟು ವಿಸ್ತೀರ್ಣ 4,831 .ಮೀ ಎಂದರೆ ಇದರ ವಿಸ್ತಾರದ ಅರಿವಾಗುತ್ತದೆ.ದೇವಾಲಯದ ಹೊರ ಗೋಡೆ ಸುಮಾರು 3.7 ಮೀಟರ್ ಎತ್ತರ ಇದ್ದುಉತ್ತರ ಮತ್ತು ಪಶ್ಚಿಮಭಾಗದಲ್ಲಿ ಅಧಿಷ್ಠಾನಕಂಬಸಾಲಿನ ಕೈಸಾಲೆಮೇಲೆ ಸುತ್ತಲೂ ದೇವತೆಗಳ ಶಿಲ್ಪಗಳ ಕೂಟಮತ್ತು ಶಿಖರ ಗೆಜ್ಜೆಹಾರವಿದೆದೇವಾಲಯದ ಮಹಾದ್ವಾರ ಬೃಹತ್ ರಚನೆಯಿಂದ ಕೂಡಿದ್ದು,ಬಾಗಿಲವಾಡದಲ್ಲಿ ಮೋಹಿನಿದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆಇನ್ನು ಇದರಮೇಲಿರುವ ಗೋಪುರ ಏಳು ಅಂತಸ್ತುಗಳಿಂದ ಕೂಡಿದ್ದುಸುಮಾರು 37 ಮೀಟರ್ ಎತ್ತರ ಇದೆ.ಅದರ ಮೇಲೆ 7 ಸುವರ್ಣ ಲೇಪಿತ ಕಳಶಗಳಿವೆಅಕ್ಕ ಪಕ್ಕದಲ್ಲಿ ಕೊಂಬುಗಳಿವೆ.
ಪ್ರತಿವರ್ಷ ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಇಲ್ಲಿ ಪಂಚರಥೋತ್ಸವ ಜರುಗುತ್ತದೆ.ನಂಜನಗೂಡಿನಲ್ಲಿ ಶ್ರೀಕಂಠಮುಡಿಜಾತ್ರೆ ನಡೆಯುತ್ತದೆಸಾವಿರಾರು ಭಕ್ತರು ಇಲ್ಲಿಗೆಆಗಮಿಸಿತಮ್ಮ ಮುಡಿಯನ್ನು ನೀಡಿಕಪಿಲೆಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ.ಪ್ರತಿವರ್ಷ ಕಾರ್ತೀಕದಲ್ಲಿ ಚಿಕ್ಕ ರಥೋತ್ಸವ ಜರುಗುತ್ತದೆಪ್ರತಿ ಹುಣ್ಣಿಮೆಯ ದಿನ ಇಲ್ಲಿರಥೋತ್ಸವ ಜರುಗುತ್ತದೆ.

ಪ್ರತಿ ಸೋಮವಾರಮಹಾಶಿವರಾತ್ರಿಮಾಸ ಶಿವರಾತ್ರಿಹಬ್ಬ ಹರಿದಿನಗಳು ಹಾಗೂಆಷಾಢದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

***

ಶ್ರೀರಾಮನು ಸೀತೆಯನ್ನು ಹುಡುಕುವಾಗ್ಗೆ ಕಪಿಲಾ ನದಿಯಲ್ಲಿ ಸ್ನಾನಮಾಡಿ ನಿತ್ಯಕರ್ಮಗಳನ್ನು ನೆರವೇರಿಸಿ ಶುಚಿಭೂರ್ತನಾಗಿ ಹೊರಟಿದ್ದರಿಂದ ಪರಮಾಶ್ಚರ್ಯವಾದ ಸೇತುವೆಯನ್ನು ಕಟ್ಟಿಸಿ ಲಂಕೆಯನ್ನು ಪ್ರವೇಶಿಸಿ ರಾವಣಾದಿರಾಕ್ಷಸರನ್ನು ಸಂಹರಿಸಿ, ಸಖನಾದ ವಿಭೀಷಣನಿಗೆ ರಾಜ್ಯಾಭೀಷೇಕಮಾಡಿ ರೀತಿಯಾಗಿ ಎಲ್ಲಾ ಕಾರ್ಯಗಳಲ್ಲಿಯೂ ಜಯಶೀಲನಾಗಿ ಸೀತೆಯನ್ನು ಕರೆದುಕೊಂಡು ಬಂದನು. ವಾಪಸ್ಸು ಕಪಿಲಾಶ್ರಮದಲ್ಲಿದ್ದು ನದಿ ಸ್ನಾನಮಾಡಿ ಪಶ್ಚಿಮವಾಹಿನಿ ತೀರದಲ್ಲಿ ಸೈಕತಲಿಂಗಪ್ರತಿಷ್ಠೆ ಮಾಡಿ ಅನಂತರ ಆಂಜನೇಯನು ತಂದ ಲಿಂಗವನ್ನು ಪ್ರತಿಷ್ಠಿಸಿ ದಕ್ಷಿಣವಾಹಿನೀ ಮಾರ್ಗವಾಗಿ ಭೃಗುಸಂಗಮತೀರದಲ್ಲಿ ಸ್ನಾನವನ್ನೂ ಶಿವಪೂಜೆಯನ್ನು ಮಾಡಿದನು. ಉತ್ತರವಾಹಿನಿಗೆ ಬರಲು ಬ್ರಹ್ಮನು ಶ್ರೀರಾಮನ ಭೇಟಿ ಮಾಡಿದನು. ಸ್ಥಳಕ್ಕೆರುದ್ರ ಪುಷ್ಕರಣಿಎಂದು ಹೆಸರು. ಆನಂತರ ಸಂಗಮಸ್ನಾನಮಾಡಿ ಶ್ರೀ ಆದಿಕೇಶವ ಶ್ರೀ ಶ್ರೀಕಂಠೇಶ್ವರರ ದರ್ಶನಮಾಡಿ, ಶಿವಪೂಜೆ ನೆರವೇರಿಸಿ ಭಾರ್ಯಾಭ್ರಾತೃಗಳ ಸಮೇತ ಅಯೋಧ್ಯೆಗೆ ಸೇರಿ ಚಕ್ರವರ್ತಿಯಾಗಿ ಪ್ರಕಾಶಿಸಿದನು.

ವಶಿಷ್ಠ ಪತ್ನಿಯಾದ ಅರುಂಧತಿಯೂ ಇಂಧ್ರ ಪತ್ನಿಯಾದ ಶಚಿದೇವಿಯೂ ನದಿಯಲ್ಲಿ ಸ್ನಾನಮಾಡಿ ರೂಪವತಿಯರಾಗಿ ಬೆಳಗಿದರು. ಕಶ್ಯಪಪತ್ನಿಯಾದ ಅದಿಥಿಯೂ ಪುತ್ರಾರ್ಥಿನಿಯಾಗಿ ನದಿ ಸಂಗಮದಲ್ಲಿ ಮುಳುಗಿ ದೇವರಾಜಾದಿ ಸುತರನ್ನು ಪಡೆದಳು .




***

ಕೌಂಡಿನ್ಯ ಋಷಿಗಳು ಪತ್ನಿ ಸುಶೀಲಾದೇವಿಯೂ ಅನಂತನ ವ್ರತವನ್ನು ಮಾಡಿ ಸಕಲ ಇಷ್ಟಾರ್ಥವನ್ನೂ ಪಡೆದಳು. ಅದು ತಮ್ಮ ತಪಶ್ಯಕ್ತಿಯಿಂದ ಲಭಿಸಿತ್ತೆಂದು ಯೋಚಿಸಿ ಹೆಂಡತಿಯ ಕೈಯಲ್ಲಿದ ದಾರವನ್ನು ಕಿತ್ತು ಬೆಂಕಿಯಲ್ಲಿ ಹಾಕಿದರು. ಸುಶೀಲೆಯೂ ತಕ್ಷಣವೇ ದಾರವನ್ನು ತೆಗೆದುಕೊಂಡು ಹಾಲಿನಲ್ಲಿ ಹಾಕಿ ಪುನಃ ಕಟ್ಟಿಕೊಂಡಳು. ದಿವಸ ರಾತ್ರಿಯೇ ಮನೆಗೆ ಕಳ್ಳರು ಬಿದ್ದು ಇದ್ದುದನ್ನೆಲ್ಲಾ ಅಪಹರಿಸಿಕೊಂಡು ಹೋದರು. ಮನೆಗೂ ಬೆಂಕಿಹತ್ತಿ ಸುಟ್ಟು ಬೂದಿಯಾಯಿತ್ತು. ಆಗ ಋಷಿಯೂ ಬಹು ಸಂಕಟಪಟ್ಟು ಸುಶೀಲೆಯ ಕೋರಿಕೆಯಂತೆ ತೀರ್ಥಸ್ನಾನಗಳನ್ನು ಮಾಡುತ್ತಾ ಶಿವ ಕ್ಷೇತ್ರಗಳಲ್ಲಿ ತಿರುಗಿ ಪೂಜೆಗಳನ್ನು ಮಾಡುತ್ತಾ ಇರುವಲ್ಲಿ ಶ್ರೀ ಮದ್ದನಂತಪದ್ಮನಾಭಸ್ವಾಮಿಯೂ ಋಷಿಗೆ ಪ್ರತ್ಯಕ್ಷನ್ನಾಗಿ ಅನಂತನ ವ್ರತಾಚರಣೆಯನ್ನು ನಿರೂಪಿಸಿ ಗೋವರ್ಧನ ಪರ್ವತದಲ್ಲಿ ವ್ರತವನ್ನು ಸಾಂಗವಾಗಿ ಆಚರಿಸಿ ಪುನಃ ಸಕಲ ಸಂಪತ್ತನ್ನು ಹೊಂದಿ ಸುಖಿಯಾಗಿ ಕಪಿಲಾ ಕೌಂಡಿನಿ ಸಂಗಮಕ್ಕೆ ಬಂದು ಸ್ನಾನ, ಜಪ ಪೂಜಾದಿಗಳನ್ನು ಮಾಡಿ ಶ್ರೀ ಶ್ರೀಕಂಠೇಶ್ವರಸ್ವಾಮಿ ಆದಿಕೇಶವಮೂರ್ತಿ ಯನ್ನು ಸೇರಿಸಿ ಮುಕ್ತಿಹೊಂದಿದನು.

ಸಮಸ್ತ ದೇವರ್ಷಿಗಳೂ ಶಿವನ ದರ್ಶನಕ್ಕಾಗಿ ಕೈಲಾಸಕ್ಕೂ ವಿಷ್ಣು ದರ್ಶನಕ್ಕಾಗಿ ವೈಕುಂಠಕ್ಕೂ ಹೋಗಿ ಅಲ್ಲಿ ಅವರನ್ನು ವಿಚಾರಿಸಲು ಕಪಿಲಾ ಕೌಂಡಿನಿ ಸಂಗಮ ಸ್ಥಾನವಾದ ಗರಳಪುರಿಯಲ್ಲಿ ಶಂಕರನಾರಾಯಣರೀರ್ವರು ವಿಹರಿಸುತ್ತಿದ್ದದನ್ನು

ಕಂಡರು. ಭೂ ದೇವಿಯೂ ತನ್ನ ಮೇಲೆ ಬಿದ್ದ ವಿಷವನ್ನು ಸೇವೆಸಿ ಮಹದುಪಕಾರ ಮಾಡಿದುದ್ದಕ್ಕಾಗಿ ಶ್ರೀ ಶಂಕರನನ್ನು ಬಹಳವಾಗಿ ಸುತ್ತಿಸಿ, ತನ್ನಲ್ಲಿಯೇ ವಾಸಿಸಬೇಕೆಂದು ಕೇಳಿಕೊಂಡಳಾದ್ದರಿಂದ ಸಾಂಭಮೂರ್ತಿಯೂ ಗರಳಪುರಿಯಲ್ಲಿಯೇ ನಿಂತುಬಿಟ್ಟನು. ಕ್ಷೇತ್ರವೂ ಕೇಶೀಸಂಹಾರ ಸ್ಥಳವಾದ್ದರಿಂದ ಭೂಮಿಯೂ ಮೃತ್ತಿಕೆಯಾಗಿ ಇದರಿಂದ ಸಮಸ್ತಭೀಷಣವಾದ ರೋಗಗಳೂ ನಿವಾರಣೆಯಾಗುವಂತೆ ಪರಶಿವನು ವರವಿತ್ತಿ ಶ್ರೀ ಸಂಗಮೇಶ್ವರನೆಂಬ ಹೆಸರಿನಲ್ಲಿ ಅಲ್ಲಿ ನೆಲೆಸಿದ್ದಾನೆ.

***

ಪಾರ್ವತೀಪರಮೇಶ್ವರರು ಕಪಿಲಾನದಿಯಲ್ಲಿ ಜಲಕ್ರೀಡೆಯಾಡುವಾಗ್ಗೆ ಸ್ವಾಮಿಯ ಕಿರೀಟದಲ್ಲಿ ಒಂದು ಮಣಿಯು ಬಿದ್ದು ಹೋಯಿತು. ಜ್ಞಾಪಕಾರ್ಥವಾಗಿ ಮಣಿಕರ್ಣಿಕಾಘಟ್ಟ ಎಂದು ಹೆಸರು ಬಂದಿತು. ಪರಮೇಶ್ವರನ ಅಪ್ಪಣೆಯಂತೆ ಗಂಗೆಯೂ ಇಲ್ಲಿ ಗುಪ್ತಗಾಮಿನಿಯಾಗಿ ಇಲ್ಲಿ ನಿಂತಳು. ಕಾಶಿ ಕ್ಷೇತ್ರದಲ್ಲಿ 3 ದಿವಸ ಸ್ನಾನ ಮಾಡಿದರೆ ಮುಕ್ತಿಯಾಗುವಲ್ಲಿ ಇಲ್ಲಿ ಒಂದು ಸ್ನಾನಮಾಡಿ ಇಂದು ರಾತ್ರಿ ವಾಸಮಾಡಿದರೆ ಮುಕ್ತಿಯಾಗುವಂತೆ ಶಿವನವರವಾಯಿತಲ್ಲದೆ. ನದಿಯಲ್ಲಿ ವೃಶ್ಚಿಕ ಸಂಕ್ರಮಣದಲ್ಲಿ ಒಂದು ತಿಂಗಳು ಸ್ನಾನ ಮಾಡಿ ನನ್ನ ದರ್ಶನ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಕಾರ್ತೀಕ ಸೋಮವಾರ ಪೌರ್ಣಮಿ ನನಗೆ ಪ್ರೀತಿಯಾದ ದಿವಸ ದಿವಸದಲ್ಲಿ ಅರುಣೋದಯದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಸೋಮವಾರ ನಕ್ತ ಮಾಡಿದರೆ ಕ್ರತುಮಾಡಿದ ಫಲವಾಗುತ್ತದೆ. ಎಂದು ವರವನಿತ್ತನು. ಆದ್ದರಿಂದ ವೃಶ್ಚಿಕಮಾಸದಲ್ಲಿ ಸಂಕ್ರಮಣದ ದಿವಸ ಅಷ್ಟತೀರ್ಥ ನಡೆಯುತ್ತದೆ. ಇದಕ್ಕೆ ಚತುಷ್ಟತೀರ್ಥಾಲಂಕೃತ ಮಣಿಕರ್ಣಿಕಾತೀರ್ಥ ಎಂದು ಹೆಸರು ಬಂದಿತು.

ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿಯೂ ತಪಸ್ಸು ಮಾಡಿ ಗಂಡನನ್ನು ಪಡೆಯಲು ಕ್ಷೀರಸಮುದ್ರ ರಾಜನ ಅಪ್ಪಣೆಯಂತೆ ಸಂಗಮ ಭೂ ಕೈಲಾಸ ಕ್ಷೇತ್ರದಲ್ಲಿ ತಪಸ್ಸು ಮಾಡಲು ಪರಮೇಶ್ವರನು ಲಕ್ಷ್ಮಿಗೆ ಪ್ರತ್ಯಕ್ಷನ್ನಾಗಿ ಆಕೆಯ ಇಷ್ಟಪ್ರಕಾರ ಶ್ರೀಮನ್ನಾರಾಯಣನಿಗೆ ಲಕ್ಷ್ಮಿ ಕಲ್ಯಾಣ ಮಾಡಿಸಿದನು.

***

ಟಿಪ್ಪೂಸುಲ್ತಾನ್ ಕೂಡ ನಂಜುಂಡನ ಪರಮಭಕ್ತರಲ್ಲೊಬ್ಬರಾಗಿದ್ದರಂತೆ. ಒಮ್ಮೆ ಟಿಪ್ಪೂವಿನ ಪಟ್ಟದಾನೆಗೆ ಭಯಂಕರ ಕಾಯಿಲೆ ಬಂದೆರಗಿತು. (ಪಟ್ಟದಾನೆಗೆ ದೃಷ್ಟಿ ನಾಶವಾಗಿತ್ತು. ನಂಜುಂಡೇಶ್ವರನ ಕೃಪೆಯಿಂದ ಪುನಃ ದೃಷ್ಟಿ ಬಂದಿತೆಂದು ಹೇಳಲಾಗುತ್ತದೆ.)  ಔಷದೋಪಚಾರದಿಂದ ಕಾಯಿಲೆ ಗುಣವಾಗಲಿಲ್ಲ. ಆಗ ಟಿಪ್ಪೂ ನಂಜುಂಡೇಶ್ವರನಿಗೆ ಹರಕೆ ಹೊತ್ತರಂತೆ. ಪಟ್ಟದಾನೆ ಆರೋಗ್ಯ ಸುಧಾರಿಸಿತು. ಪವಾಡದಿಂದ ಅಚ್ಚರಿಗೊಂಡ ಟಿಪ್ಪೂ ದೇವಾಲಯದಲ್ಲಿ ಸ್ಪಟಿಕ ಲಿಂಗವೊಂದನ್ನು ಪ್ರತಿಷ್ಠಾಪಿಸಿಹರು. ಆನೆಯ ರೋಗ ಗುಣಪಡಿಸಿದ ಶಿವನಿಗೆ ಹಕೀಮ ನಂಜುಂಡ ಎಂಬ ಹೆಸರು ಬಂದಿದೆ

No comments:

Post a Comment