ಅಗಸ್ತ್ಯ ಕಥೆಯಲ್ಲಿ ನಮಗೆಲ್ಲಾ ಅನೇಕ ಪವಾಡಗಳು ಸಿಕ್ಕುತ್ತದೆ. ಅದರಲ್ಲಿ ಮುಖ್ಯವಾದದ್ದು ಆತ ಸಮುದ್ರದ ನೀರನ್ನು ಸಂಪೂರ್ಣ ಹೀರಿ ಅಸುರರ ನಾಶಕ್ಕೆ ಕಾರಣವಾದದ್ದು ಮತ್ತು ವಿಂದ್ಯ ಪರ್ವತವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಯದಂತೆ ತಡೆದು ನಿಲ್ಲಿಸಿದ್ದು!!
9 ನೇ ಶತಮಾನದ ಜಾವಾನೀಸ್ ಸಾಂಬಿಸಾರಿ ದೇವಾಲಯದ ದಕ್ಷಿಣ ಭಾಗದಲ್ಲಿ ಅಗಸ್ತ್ಯ ಜ್ವಾಲಾಮುಖಿ ಮಣ್ಣಿನ ಮೂರ್ತಿ |
ಆದರೆ
ವಾಸ್ತವದಲ್ಲಿ ಅಗಸ್ತ್ಯ ನಿಜಕ್ಕೂ ಸಮುದ್ರದ ನೀರನ್ನು ಹೀರಿದ್ದನೆ?? ಖಂಡಿತಾ ಇಲ್ಲ.ಬದಲಾಗಿ ಆಗ್ನೇಯ ಏಷ್ಯಾದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸುವದಕ್ಕಾಗಿ ಮೊಟ್ಟ ಮೊದಲ ಬಾರಿಗೆ ಹಿಂದೂ
ಮಹಾಸಾಗರವನ್ನು ದಾಟಿದ ಮೊದಲ ವ್ಯಕ್ತಿ ಅಗಸ್ತ್ಯ!!!
ಲಾವೋಸ್,
ವಿಯೆಟ್ನಾಂ, ಕಾಂಬೋಡಿಯಾ (ಆಂಗರ್ ವಾಟ್ ದೇವಸ್ಥಾನ) ಮಲೇಷ್ಯಾ, ಸಿಂಗಾಪುರ ಮತ್ತು ಇಂಡೋನೇಷ್ಯಾ (ಬೊರೊಬುದೂರ್ ಸ್ತೂಪ)ಗಳಲ್ಲಿ 1300 ವರ್ಷಗಳಿಗೂ ಹಿಂದಿನ ಹಿಂದೂ ವಸಾಹತುಇತ್ತೆನ್ನಲು ನಮಗೆ ಪುರಾವೆಗಳು ಸಿಕ್ಕಿದೆ. ಆದರೆ ಈಗ ಆ ದೇಶದ
ಬಹುಪಾಲು ಮಂದಿ ಮುಸ್ಲಿಮರಾಗಿದ್ದಾರೆ. ಅಂದರೆ ಆಧುನಿಕ ಇತಿಹಾಸದಲ್ಲಿ ಬರುವ ಕೊಲಂಬಸ್ ಮತ್ತು ಮೆಗೆಲ್ಲನ್ ಅವರಿಗೆ ಸಾವಿರಾರು ವರ್ಷಗಳಷ್ಟು ಹಿಂದೆಯೇ ಅಗಸ್ತ್ಯ ಸಾಗರವನ್ನು ದಾಟಿ ಹೊಸ ಸಾಮ್ರಾಜ್ಯಗಳನ್ನು ಕಟ್ಟಲು ಕಾರಣವಾಗಿದ್ದನು! ಇದಕ್ಕಾಗಿಯೇ ಅಗಸ್ತ್ಯನ ಮೂರ್ತಿಗಳು, ಪ್ರತಿಮೆಗಳನ್ನು ಆಗ್ನೇಯ ಏಷ್ಯಾದ ದೇಶಗಳಲ್ಲಿ ಇಂದಿಗೂ ಕಾಣುತ್ತೇವೆ!
ಅಗಸ್ತ್ಯನ
ಪ್ರಭಾವ ಸಾರುವ ಜಾವಾನೀಸ್ ಭಾಷೆಯ “ಅಗಸ್ತ್ಯಪರ್ವ”!
ಇಂಡೋನೇಷ್ಯಾದ
ದ್ವೀಪಗಳಲ್ಲಿ ಇಸ್ಲಾಂ ಧರ್ಮ ಹರಡಲು ಪ್ರಾರಂಭಿಸುವವರೆಗೂ ಅಗಸ್ತ್ಯ ಜಾವಾ ಇಂಡೋನೇಷ್ಯಾದಲ್ಲಿ ವಿಶೇಷವಾಗಿ ಗೌರವಿಸಲ್ಪಡುತ್ತಿದ್ದ
ವ್ಯಕ್ತಿ! ಕಾಂಬೋಡಿಯಾ,
ವಿಯೆಟ್ನಾಂ ಮತ್ತು ಇತರ ಪ್ರದೇಶಗಳಲ್ಲಿಯೂ ಅಗಸ್ತ್ಯನ
ಬಗ್ಗೆ ದಾಖಲೆಗಳು ಸಿಕ್ಕಿದೆ. ಕ್ರಿ.ಶ 1 ನೇ ಸಹಸ್ರಮಾನದ ಮಧ್ಯಭಾಗದಲ್ಲಿ
ಅಗಸ್ತ್ಯನ ಬಗ್ಗೆ ಪ್ರಾರಂಭಿಕ ಉಲ್ಲೇಖಗಳಿದ್ದದ್ದು ಮಾತ್ರವಲ್ಲ 11 ನೇ
ಶತಮಾನದ ಜಾವಾನೀಸ್ ಭಾಷೆಯ ಪಠ್ಯ "ಅಗಸ್ತ್ಯ-ಪರ್ವ" ನಮ್ಮ ಅಗಸ್ತ್ಯ ಋಷಿಗೆ ಸಂಬಂಧಿಸಿ ಈ ಭಾಗದಲ್ಲಿ ದೊರೆತ ತತ್ವಶಾಸ್ತ್ರ,
ಪುರಾಣ ಮತ್ತು ವಂಶಾವಳಿಯ ಗಮನಾರ್ಹದಾಖಲೆಯಾಗಿದೆ.
ಅಗಸ್ತ್ಯ-ಪರ್ವವು ಜಾವಾನೀಸ್ ಭಾಷೆಯಲ್ಲಿ ಹುದುಗಿರುವ ಸಂಸ್ಕೃತ ಪದ್ಯವನ್ನು (ಶ್ಲೋಕಗಳನ್ನು) ಒಳಗೊಂಡಿದೆ. ಪಠ್ಯವನ್ನು ಗುರು (ಶಿಕ್ಷಕ, ಅಗಸ್ತ್ಯ) ಮತ್ತು ಶಿಷ್ಯ(ವಿದ್ಯಾರ್ಥಿ, ಅಗಸ್ತ್ಯನ ಮಗ ದ್ರಾದಸ್ಯು) ನಡುವಿನ
ಸಂಭಾಷಣೆಯಂತೆ ರಚಿಸಲಾಗಿದೆ. ಈ ಶೈಲಿಯು ಹಿಂದೂ
ಪುರಾಣಗಳಂತಹ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ ನೀತಿಬೋಧಕ, ತಾತ್ವಿಕ ಮತ್ತು ದೇವತಾಶಾಸ್ತ್ರದ ಗ್ರಂಥದ ಮಿಶ್ರಣ!
ಜಾವಾನೀಸ್
ಪಠ್ಯದ ಅಧ್ಯಾಯಗಳಲ್ಲಿ ಭಾರತೀಯ ಚಕ್ರದ ಅಸ್ತಿತ್ವದ ಸಿದ್ಧಾಂತ, ಪುನರ್ಜನ್ಮ ಮತ್ತು ಸಂಸಾರ, ಸಾಗರವನ್ನು ಮಥಿಸುವ ಮೂಲಕ ಪ್ರಪಂಚದ ಸೃಷ್ಟಿ (ಸಮುದ್ರ ಮಂತ್ರ), ಸಾಂಖ್ಯ ಸಿದ್ದಾಂತ ಮತ್ತು ಹಿಂದೂ ತತ್ತ್ವಶಾಸ್ತ್ರದ ವೇದಾಂತ ಶಾಲೆ, ಶಿವನ ಕುರಿತಾದ ಪ್ರಮುಖ ವಿಭಾಗಗಳು ಸೇರಿವೆ ಮತ್ತು ಶೈವ ಧರ್ಮ, ತಂತ್ರದ ಕೆಲವು ಚರ್ಚೆ, ಅಂಗೀಕಾರದ ವಿಧಿಗಳ ವರ್ಣನೆಯೂ ಇದೆ.
10 ರಿಂದ 12 ನೇ ಶತಮಾನದವರೆಗಿನ ಇತರ
ಅಗಸ್ತ್ಯ-ಸಂಬಂಧಿತ ಇಂಡೋನೇಷಿಯನ್ ಗ್ರಂಥಗಳು, ಶೈವ ಧರ್ಮದ ಅನೇಕ ಉಪ-ಶಾಖೆಗಳಾದ
ಆಸ್ತಿಕ ಶೈವಸಿದ್ಧಾಂತ ಮತ್ತು ಏಕಸ್ವ ಅಗಮಿಕ ಪಾಶುಪತದ ವಿಚಾರಗಳನ್ನು ಚರ್ಚಿಸುತ್ತವೆ, ಮತ್ತು ಈ ಗ್ರಂಥಗಳು ಈ
ಧರ್ಮಶಾಸ್ತ್ರಗಳನ್ನು ಸಮಾನ ಅರ್ಹತೆ ಮತ್ತು ಮೌಲ್ಯ ಹೊಂದಿದೆ ಎಂದು ಘೋಷಿಸುತ್ತವೆ.
ಆಗ್ನೇಯ
ಏಷ್ಯಾದ ದೇವಾಲಯಗಳಲ್ಲಿ ಅಗಸ್ತ್ಯನಿಗೆ ಮೊದಲ ಆದ್ಯತೆ!
ಆಗ್ನೇಯ
ಏಷ್ಯಾದ ಮಧ್ಯಕಾಲೀನ ಯುಗದ ಶಿವ ದೇವಾಲಯಗಳಲ್ಲಿ, ಜಾವಾ (ಕ್ಯಾಂಡಿ) ದಲ್ಲಿನ ಕಲ್ಲಿನ ದೇವಾಲಯಗಳಲ್ಲಿ ಅಗಸ್ತ್ಯನ ಮೂರ್ತಿ ಸಾಮಾನ್ಯವಾಗಿ ಕಾಣುತ್ತದೆ. ನಿರ್ದಿಷ್ಟ ದಿಕ್ಕುಗಳನ್ನು ನೋಡುತ್ತಿರುವ ಶಿವ,
ಉಮಾ, ನಂದಿ ಮತ್ತು ಗಣೇಶನ ಪ್ರತಿಮೆಯ ಜತೆಗೇ ಈ ದೇವಾಲಯಗಳಲ್ಲಿ ದಕ್ಷಿಣದ
ಮುಖದಲ್ಲಿ ಕೆತ್ತಿದ
ಅಗಸ್ತ್ಯದ ಶಿಲ್ಪಕಲೆ, ಚಿತ್ರ ಅಥವಾ ಮೂರ್ತಿ ಇದೆ.
ಆಗ್ನೇಯ
ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣ ಪ್ರಂಬನನ್ನಲ್ಲಿರುವ ಶಿವ ದೇವಾಲಯವು ಅದರ ಒಳಭಾಗದಲ್ಲಿ ನಾಲ್ಕು ನೆಲಮಾಳಿಗೆಗಳನ್ನು ಹೊಂದಿದೆ. ಪ್ರಂಬನ್ ದೇವಾಲಯಗಳೊಳಗಿನ ಈ ಕೇಂದ್ರ ದೇವಾಲಯವು
ತನ್ನ ದಕ್ಷಿಣ ನೆಲಮಾಳಿಗೆಯನ್ನು ಅಗಸ್ತ್ಯನಿಗೆ ಮೀಸಲಾಗಿರಿಸಿದೆ!!
ಪ್ರಂಬನನ್-ಕ್ಯಾಂಡಿ ಶಿವ ಮಹಾದೇವ-ದೇವಾಲಯದ ಅಗಸ್ತ್ಯ ಮೂರ್ತಿ |
ಕಾಂಬೋಡಿಯಾದಲ್ಲಿ,
9 ನೇ ಶತಮಾನದ ರಾಜ ಇಂದ್ರವರ್ಮನ್(ಹೆಚ್ಚಿನ ಸಂಖ್ಯೆಯ ಐತಿಹಾಸಿಕ ದೇವಾಲಯಗಳು ಮತ್ತು ಸಂಬಂಧಿತ ಕಲಾಕೃತಿಗಳನ್ನು ನಿರ್ಮಿಸಿ ಪ್ರಸಿದ್ಧನಾದ) ತನ್ನ ಕಾಲಾವಧಿಯ ಪಠ್ಯಗಳನ್ನು ರಚಿಸಿದ್ದವರನ್ನು ಅಗಸ್ತ್ಯನ ವಶಸ್ಥರು ಎಂದು ಘೋಷಿಸಿದ್ದನು.
ಹೀಗೆ
ಆಗ್ನೇಯ ಏಷ್ಯಾದಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ, ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾ, ನ್ಯೂಜಿಲೆಂಡ್, ಫಿಲಿಪೈನ್ಸ್, ಫಿಜಿ ಮತ್ತು ಆಸ್ಟ್ರೇಲಿಯಾದಲ್ಲಿ ಸಹ ಅಗಸ್ತ್ಯನ ಕುರುಹುಗಳಿದೆ.
ಇನ್ನಷ್ಟು
ಆಳವಾಗಿ ನೋಡಿದರೆ , ಭಾರತದ ಪಶ್ಚಿಮ ದಿಕ್ಕಿನ ಬದಲು ಈ ಪ್ರದೇಶದಲ್ಲಿ ಭಗವಾನ್
ಸುಬ್ರಮಣ್ಯ ಮತ್ತು ಶಿವನ ದೇವಾಲಯಗಳು ಹೆಚ್ಚಾಗಿದೆ. ದಕ್ಷಿಣದಲ್ಲಿ
ಕಂಡುಬಂದ ಸುನಾಮಿಯಿಂದಾಗಿ ಪ್ರಾಚೀನ ಕಾಲದಲ್ಲಿ ದ್ರಾವಿಡದೇಶದ , ಸನಾತನ ಧರ್ಮವನ್ನು ಹರಡಲು ಸುಬ್ರಹ್ಮಣ್ಯ ದೂರದ ಪೂರ್ವಕ್ಕೆ ತೆರಳುವುದಕ್ಕೂ ಇದಕ್ಕೂ
ಸಂಬಂಧವಿರಬಹುದು.ಅದೇ ಸಮಯದಲ್ಲಿ ಶಿವನು ಆರ್ಸಿಟಿಕ್ ತಲುಪುವ ಮೊದಲು ಗಣೇಶನೊಡನೆ ಭಾರತದ ಪಶ್ಚಿಮ ದಿಕ್ಕಿಗೆ ಸರಿಯುತ್ತಾನೆ. ಅಲ್ಲಿ ವಸಿಷ್ಠನ ಜೊತೆ ಋಗ್ವೇದದ ಸಂಕಲನವಾಗುತ್ತದೆ. ಇದು
ಭಾರತದ ವಾಯುವ್ಯ ಪ್ರದೇಶದಸೈಬೀರಿಯಾದಿಂದ ರಷ್ಯಾದ ಮೂಲಕ ಶಿವ ಮತ್ತು ಗಣೇಶನಿಗೆ ಸಂಬಂಧಿಸಿದ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಿಗೆ ಕಾರಣವಾಗಿದೆ.
ಕಾಂಚೀಪುರಂ
ಬ್ರಾಹ್ಮಣ ವಿಯೆಟ್ನಾಂ ರಾಜವಂಶವನ್ನು ಸ್ಥಾಪಿಸಿದನು! ಒಂದು ಉಲ್ಲೇಖದಂತೆ ಇಕ್ಷ್ವಾಕು ರಾಜವಂಶದವನು ಕೊರಿಯಾದ ರಾಜಕುಮಾರನನ್ನು ಮದುವೆಯಾದನು! ಆಸ್ಟ್ರೇಲಿಯಾದ ಬುಡಕಟ್ಟು ಜನರು ಶಿವನ ತ್ರಿನೇತ್ರ ನೃತ್ಯವನ್ನು ಪ್ರದರ್ಶಿಸುತ್ತಾರೆ॒!ಇದು ಈ ಪ್ರದೇಶದಲ್ಲಿ ಸನಾತನ
ಧರ್ಮದ ಮೂಲವಿತ್ತೆನ್ನಲು ಸಾಕ್ಷಿ ಹೇಳುತ್ತದೆ. ಮಾತ್ರವಲ್ಲ ಈ ಪ್ರದೇಶಗಳಲ್ಲಿ ಶೈವ
ಧರ್ಮವನ್ನು ಹರಡಿದ ಕೀರ್ತಿ ಅಗಸ್ತ್ಯನಿಗೆ ಸಲ್ಲುತ್ತದೆ.
ಇಂಡೋನೇಷ್ಯಾದ ಜಾವಾದ ಅಗಸ್ತ್ಯನ ಪ್ರತಿಮೆಯನ್ನು ಲಂಡನ್ ವಿ & ಎ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. |
ಜಾವಾನಿಸ್
ಭಾಷೆಯ ರಾಮಾಯಣದಲ್ಲಿ ಅಗಸ್ತ್ಯನನ್ನು ಗುರು ಎಂದು ಕರೆಯಲಾಗಿದೆ. ಅಗಸ್ತ್ಯನನ್ನು
ಉದ್ದನೆಯ ಗಡ್ಡ ಹೊಂದಿರುವಯಸ್ಸಾದ ಮನುಷ್ಯ ಎಂದು ನಿರೂಪಿಸಲಾಗಿದೆ. ಅವನು ತನ್ನ ಕಾಲುಗಳ ಮೇಲೆ ದೃ ಢವಾಗಿ ನಿಂತಂತೆ
ಅಲ್ಲಿನ ದೇವಾಲಯಗಳಲ್ಲಿ ಪ್ರತಿಮೆಗಳನ್ನು ಕೆತ್ತಲಾಗಿದೆ. ಅವನ ಬಲಗೈ ಅವನ ಎದೆಯ ಉದ್ದಕ್ಕೂ ಮಡಚಲ್ಪಟ್ಟಿದೆ ಮತ್ತು ಅವನ ಮುಷ್ಟಿಯಲ್ಲಿ ಅವನು ಜಪಮಾಲೆಯನ್ನು ಹಿಡಿದಿದ್ದಾನೆ. ಅವನ ಎಡಗೈ ಅವನ ದೇಹದ ಪಕ್ಕದಲ್ಲಿ ಇಳೀದಿದೆ. ಅದು ಮುರುದು ಹೋಗಿದ್ದರೂ ಹಿಂಭಾಗದ ಚಪ್ಪಡಿಯ ಕುರುಹುಗಳು ಅವನು ನೀರಿನ ಮಡಕೆ ಹಿಡಿದಿದ್ದನೆಂದು ಸೂಚಿಸುತ್ತದೆ,
ಈ
ಮೇಲಿನ ವಿವರಗಳ ಅನುಸಾರ ಅಗಸ್ತ್ಯ ಸಮುದ್ರ ಹೀರಿ ಅಸುರರನ್ನು ನಾಶ ಮಾಡಲು ದೇವತೆಗಳಿಗೆ ಸಹಾಯ ಮಾಡಿದ್ದ ಎಂದರೆ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಅನ್ಯ ಬುಡಕಟ್ಟು ಜನಾಂಗದವರನ್ನು ಓಡಿಸಿ ಶೈವ ಸಂಸ್ಕೃತಿ ಆಧಾರದ ಮೇಲೆ ಹಿಂದೂ ಧರ್ಮದ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತನಾಗಿದ್ದ(ವಿಜಯನಗರದ ಸ್ಥಾಪನೆಗೆ ವಿದ್ಯಾರಣ್ಯ ಕಾರಣರಾದಂತೆ!!)ನೆಂದು ಅರ್ಥವಾಗಿದೆ!!!
No comments:
Post a Comment