ವಾಲ್ಮೀಕಿ ರಾಮಾಯಣವು ಅಯೋಧ್ಯಾ ಕಾಂಡದಲ್ಲಿನ ಒಂದು ದೃಶ್ಯವನ್ನು ಉಲ್ಲೇಖಿಸಿ ಹೇಳುವುದಾದರೆ ಕೈಕೇಯಿ ದಶರಥ ಈ ಹಿಂದೆ ನೀಡಿದ ವರಗಳ ಬಗ್ಗೆ ತಿಳಿಸುತ್ತಾಳೆ.ರಾಮನ ಬದಲು ಭರತನಿಗೆ ಪಟ್ಟಾಭಿಷೇಕ ಮಾಡಿ ರಾಮನನ್ನು ಕಾಡಿಗೆ ಕಳುಹಿಸಬೇಕೆಂಬ ಅವಳ ಇಚ್ಚೆ ಎಂದೂ ಹೇಳುತ್ತಾಳೆ.ಅವಳ ಕಠಿಣ ಮಾತುಗಳನ್ನು ಆಲಿಸುತ್ತಾ ತಂದೆಯ ಆದೇಶ ಪಾಲನೆಗೆ ರಾಮ ನಿರ್ಧರಿಸುತ್ತಾಳೆ. ದಶರಥನು ನೋವನುಭವಿಸುತ್ತಾನೆ. ಆದರೆ ರಾಮನು ಕೈಕೇಯಿಯನ್ನು ಕೇಳುತ್ತಾನೆ, "ಏಕೆ ಅವನ ತಂದೆ ನೇರವಾಗಿ ಈ ವಿಷಯದ ಬಗ್ಗೆ ಮಾತನಾಡಲಿಲ್ಲ?"
ಆ ಬಳಿಕ ರಾಮನು ಈ ವಿಷಯವನ್ನು ತನ್ನ ತಾಯಿ ಕೌಸಲ್ಯ ಮತ್ತು ಪತ್ನಿ ಸೀತೆಗೆ ಹೇಳಲು ಹೊರಡುತ್ತಾನೆ. ಕೌಸಲ್ಯ ದುಃಖದಲ್ಲಿ ಉಳಿದರೆಲಕ್ಷ್ಮಣನಿಗೆ ಕೈಕೇಯಿ ಮತ್ತು ಅವನ ತಂದೆಯ ಮೇಲೆ ಕೋಪ ಬರುತ್ತದೆ. ರಾಮನು ಅರಣ್ಯಕ್ಕೆ ತೆರಳುವ ನಿರ್ಧಾರವನ್ನು ಬಹಿರಂಗಪಡಿಸುವ ಮೂಲಕ ಸೀತೆಯನ್ನು ಆಘಾತಗೊಳಿಸುತ್ತಾನೆ.ಸೀತೆ ಅವನನ್ನು ಹಿಂಬಾಲಿಸುವ ಇಚ್ಚೆ ವ್ಯಕ್ತಪಡಿಸಿದರೆ ರಾಮನು ಕಾಡಿನಲ್ಲಿನ ಅಪಾಯಗಳ ಬಗ್ಗೆ ಎಚ್ಚರಿಸುತ್ತಾನೆ. ಸೀತೆ ತನ್ನ ಮದುವೆಗೆ ಮುಂಚಿತವಾಗಿ, ಭವಿಷ್ಯದಲ್ಲಿ ಸ್ವಲ್ಪ ಸಮಯದವರೆಗೆ ಕಾಡುಗಳಲ್ಲಿ ವಾಸಿಸಬೇಕಾಗುತ್ತದೆ ಎಂದು ಕೆಲವು ಜ್ಯೋತಿಷಿಗಳ ಮೂಲಕ ಕೇಳಿದ್ದನ್ನು ಬಹಿರಂಗಪಡಿಸುತ್ತಾಳೆ.ಆದರೆ ಮನೆಯಲ್ಲೇ ಉಳಿದು ಹಿರಿಯರ ಸೇವೆ ಮಾಡುವುದು ಸೂಕ್ತವೆಂದು ಮನವರಿಕೆ ಮಾಡಲು ರಾಮ ಪ್ರಯತ್ನಿಸಿದರೂ ಸೀತೆ ಅದಕ್ಕೆ ಒಪ್ಪುವುದಿಲ್ಲ. ಅಂತಿಮವಾಗಿ ರಾಮ ಕಾಡಿಗೆ ಹೋಗುವುದು ಖಚಿತವಾಗುತ್ತದೆ. ಅಯೋಧ್ಯೆಯನ್ನು ತೊರೆಯುವ ಮೊದಲು ವೈಯಕ್ತಿಕ ವಸ್ತುಗಳನ್ನು ದಾನ ಮಾಡುವಂತೆ ಕೇಳುತ್ತಾನೆ.
ಕೊನೆಗೆ ರಾಮನ ಜೊತೆಗೆ ಸೀಯೆ ಹಾಗೂ ಲಕ್ಷ್ಮಣರು ಅಯೋಧ್ಯೆಯನ್ನು ಬಿಡಲು ಸಿದ್ಧರಾಗುತ್ತಾರೆ. ಅಂತಿಮ ಪ್ರಯತ್ನ ಎಂಬಂತೆ , ಮಂತ್ರಿ ಸುಮಂತ್ರ ರಾಣಿ ಕೈಕೇಯಿತನ್ನ ಹೇರಿಕೆಗಳನ್ನು ಹಿಂಪಡೆಯಲು ವಿನಂತಿಸುತ್ತಾನೆ. ಅಲ್ಲದೆ ಹಿರಿಯ ಮಂತ್ರಿ, ವಿದ್ವಾಂಸರೂ ಆದ ಸಿದ್ದಾರ್ಥ ಕೂಡ ಸಗರ ರಾಜನ ಪುತ್ರ ಅಸಮಂಜನ ಕಥೆ ಹೇಳಿ ಕೈಕೇಯಿಯ ಸಮಾಧಾನಕ್ಕೆ ಮುಂದಾಗುತ್ತಾನೆ. ಆದರೆ ಅವಳು ಎಲ್ಲಾ ಸಲಹೆಗಳಿಗೆಳ ನಂತರವೂ ಅವಳ ಅಚಲ ನಿರ್ಧಾರವನ್ನು ಬಿಡುವುದಿಲ್ಲ. ಮ ಕಾಡುಗಳಿಗೆ ಹೋಗಬೇಕೆಂದು ಹಠ ಹಿಡಿಯುತ್ತಾಳೆ.
ಹಿಂದೆ ಸಗರ ಚಕ್ರವರ್ತಿ ಪುತ್ರ ಅಸಮಂಜನೆಂಭಾತ ತನ್ನ ಮೋಜಿಗಾಗಿ ಅಯೋಧ್ಯೆಯ ಬೀದಿಗಳಲ್ಲಿ ಮಕ್ಕಳನ್ನು ಅಪಹರಿಸಿ ವಿನೋದಕ್ಕಾಗಿ ಸರಯೂ ನದಿಗೆ ಎಸೆದು ಅಲ್ಲಿ ಮಕ್ಕಳು ಮುಳುಗಿಸಾಯುವುದನ್ನು ನೋಡಿ ಸಂತೋಷ ಪಡುತ್ತಿದ್ದ. ಈ ಕೃತ್ಯ ನಡೆಸಿದ್ದಕ್ಕಾಗಿ ಅಸಮಂಜನನ್ನು ಸಗರ ತ್ಯಜಿಸಿದ್ದ. ಅಯೋಧ್ಯೆಯ ಜನರು ಆತನ ಬಗ್ಗೆ ದೂರು ನೀಡಿದಾಗ, ತನ್ನ ಮಗ ಊರನ್ನು ತೊರೆಯಬೇಕೆಂದು ಮನವಿ ಮಾಡಿದಾಗ ಸಗರ ಪುತ್ರನನ್ನು ರಾಜ್ಯದಿಂದ ಹೊರಗೆ ಹಾಕಲು ನಿರ್ಧರಿಸಿದನು
खनित्र पिटके च उभे मम आनयत गच्चतः |
चतुर् दश वने वासम् वर्षाणि वसतः मम || २-३७-५
ಅನುವಾದ: ರಾಮನು 14 ವರ್ಷಗಳ ಕಾಲ ಅರಣ್ಯಕ್ಕೆ ಹೋಗುತ್ತೇನೆ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತಾನೆ ಮತ್ತು ಒಂದು ಶಾಲು ಹಾಗೂ ಬುಟ್ಟಿಯನ್ನು ಕೇಳುತ್ತಾನೆ (ಬೇರುಗಳೊಂದಿಗೆ ಬೆಳೆಯುವ ತರಕಾರಿಗಳನ್ನು ಅಗೆಯಲು ಮತ್ತು ಸಂಗ್ರಹಿಸಲು).
अथ चीराणि कैकेयी स्वयम् आहृत्य राघवम् |
उवाच परिधत्स्व इति जन ओघे निरपत्रपा || २-३७-६
ಅನುವಾದ: ಅದರ ನಂತರ, ಕೈಕೇಯಿ ನಾಚಿಕೆಯಿಲ್ಲದೆ ಪುರುಷರ ಕೂಟದಲ್ಲಿ ವೈಯಕ್ತಿಕವಾಗಿ ಕರೆತರುತ್ತಾಳೆ. ಮತ್ತು ರಾಮನಿಗೆ ಹಾಕುವಂತೆ ಹೇಳುತ್ತಾಳೆ.
स चीरे पुरुष व्याघ्रः कैकेय्याः प्रतिगृह्य ते |
सूक्ष्म वस्त्रम् अवक्षिप्य मुनि वस्त्राणि अवस्त ह || २-३७-७
ಅನುವಾದ: ಕೈಕೇಯಿಯಿಂದ ಆ ಎರಡು ತುಂಡು ಬಟ್ಟೆಯನ್ನು (ಸೊಂಟದ ಬಟ್ಟೆ ಮತ್ತು ಹೊದಿಕೆಯಂತೆ) ತೆಗೆದುಕೊಂಡು ಅವನ ಉತ್ತಮವಾದ ನೂಲಿನ ಬಟ್ಟೆಗಳನ್ನು ತ್ಯಜಿಸಿ, ರಾಮನು ತಪಸ್ವಿಗಳ ಉಡುಪನ್ನು ಧರಿಸಿದನು.
ಲಕ್ಷ್ಮಣ ಕೂಡ ತನ್ನ ರೇಷ್ಮೆ ವಸ್ತ್ರವನ್ನು ತ್ಯಜಿಸಿ ನಾರುಮುಡಿಯನ್ನು ತೊಟ್ಟನು. ಅವರನ್ನು ನೋಡಿದ ಸೀತೆ ಒಂದು ಬಗೆಯ ಆತಂಕದಿಂದ "ಕಾಡಿನಲ್ಲಿ ವಾಸಿಸುವ ತಪಸ್ವಿಗಳು ಈ ನಾರುಮುಡಿಯನ್ನು ಹೇಗೆ ಧರಿಸುತ್ತಾರೆ?" ಹೀಗೆ ಹೇಳುತ್ತಾ, ಮರಗಳ ನಾರನ್ನು ಬಟ್ಟೆಯಾಗಿ ಧರಿಸುವುದರಲ್ಲಿ ಪ್ರವೀಣಳಲ್ಲದ ಸೀತೆ ಅದನ್ನು ಧರಿಸುವ ಪ್ರಯತ್ನದಲ್ಲಿ ಮತ್ತೆ ಮತ್ತೆ ವಿಫಲವಾಗುತ್ತಾಳೆ. ನಾರುಮುಡಿಯ ಒಂದು ತುಂಡನ್ನು ಅವಳ ಕುತ್ತಿಗೆಗೆ ಇಟ್ಟುಕೊಂಡು ಅದನ್ನು ಕೈಯಿಂದ ಹಿಡಿದುಕೊಂಡು, ಸೀತೆ ಅಸಹಾಯಕಳಾಗಿ ನಿಲ್ಲುತ್ತಾಳೆ.ರಾಮ ತ್ವರಿತವಾಗಿ ಬಂದು ಸೀತೆಯ ಉಡುಪಿನ ಮೇಲೆ ಆ ನಾರುಮುಡಿಯನ್ನು ಗಿ ಜೋಡಿಸಿದನು. ಆಗಲೂ ಸೀತೆಯನ್ನು ಕೋಟೆಯಲ್ಲಿ ಬಿಟ್ಟು ಲಕ್ಷ್ಮಣರೊಂದಿಗೆ ಹೋಗಲು ರಾಮನನ್ನು ಮನವೊಲಿಸಲು ಪ್ರಯತ್ನಿಸಲಾಗುತ್ತದೆ. ಇದೆಲ್ಲವನ್ನೂ ನೋಡಿ, ರಾಜನ ಗುರುವಾದ ಬ್ರಹ್ಮರ್ಷಿ ವಸಿಷ್ಠ ಕೈಕೇಯಿಯೊಂದಿಗೆ ಮಾತನಾಡಿದರು.
अतिप्रवृत्ते दुर्मेधे कैकेयि कुलपांसनि |
वञ्यित्वा च राजानम् न प्रमाणेऽवतिष्ठसे || २-३७-२२
ಅನುವಾದ: ಓಹ್ ನಿಮ್ಮ ಮಿತಿಗಳನ್ನು ಮೀರಿದ, ನಿಮ್ಮ ಕುಟುಂಬಕ್ಕೆ ಅವಮಾನವನ್ನು ತಂದ ದುಷ್ಟ ಮನಸ್ಸಿನ ಕೈಕೇಯಿ ! ನೀವು ಸಮರ್ಥನೀಯ ಮಾನದಂಡವನ್ನು ಸ್ಥಾಪಿಸುತ್ತಿಲ್ಲ ಮತ್ತು ನೀವು ರಾಜನನ್ನು ದಾರಿ ತಪ್ಪಿಸಿದ್ದೀರಿ
न गन्तव्यम् वनम् देव्या सीतया शीलवर्जिते |
अनुष्ठास्यति रामस्य सीता प्रकृतमासनम् || २-३७-२३
ಅನುವಾದ: ಓಹ್, ಅಲಂಕಾರವಿಲ್ಲದ ಮಹಿಳೆ! ಸೀತೆ ರಾಜಕುಮಾರಿ ಅರಣ್ಯಕ್ಕೆ ಹೋಗುವಂತಿಲ್ಲ. ರಾಮನಿಗೆ ನೀಡಲ್ಪಟ್ಟ ಸಿಂಹಾಸನವನ್ನು ಅವಳು ವಶಕ್ಕೆ ಪಡೆಯಬಹುದು.
आत्मा हि दाराः सर्वेषाम् दारसम्ग्रहवर्तिनाम् |
आत्मेयमिति रामस्य पालयिष्यति मेदिनीम् || २-३७-२४
ಅನುವಾದ: ಹೆಂಡತಿ ಎಲ್ಲರಿಗೂ ಸ್ವಂತ. ಆಕೆ ರಾಮನಿಗೆ ಸ್ವಂತ.ಹಾಗಾಗಿ ರಾಮನಿಗೆ ದಕ್ಕದ ಭೂಮಿಯನ್ನು ಆಕೆ ಆಳಬಹುದು.
ಅವರು ಹೇಳುತ್ತಾರೆ, “ಅಯೋಧ್ಯೆಯ ರಾಣಿಯಾಗಿ ಆಳಲು ಅರ್ಹನಾಗಿರುವ ಸೀತೆ ಕೂಡ ಅರಣ್ಯಕ್ಕೆ ಹೊರಟು ಹೋದರೆ, ನಾವು ಮತ್ತು ಇಡೀ ನಗರದ ಜನ ಅವರನ್ನು ಹಿಂಬಾಲಿಸುತ್ತೇವೆ. ನಾರು ಮುಡಿಯುಟ್ಟು ಭರತ ಜೊತೆಗೆ ಶತ್ರುಘ್ನ ಸಹ ಕಾಡಿಗೆ ಹೋಗುತ್ತಾನೆ. ರಾಮ ಇಲ್ಲದಿದ್ದಲ್ಲಿ ಅಯೋಧ್ಯೆ ಅಥವಾ ರಾಜ್ಯ ಇರುವುದಿಲ್ಲ. ಅರಣ್ಯವೇ ಅವನ ರಾಜ್ಯವಾಗಲಿದೆ. ನಿಮ್ಮ ಕೆಟ್ಟ ನಡವಳಿಕೆಯಿಂದ ನೀವು ಮಾತ್ರ, ನಿರ್ಜನವಾಗಿರುವ ಈ ಭೂಮಿಯನ್ನು ಆಳಿರಿ, ಇಲ್ಲಿ ಮರಗಳು ಮಾತ್ರವೇ ಇರುತ್ತವೆ. ಭರತನು ದಶರಥ ರಾಜನಿಗೆ ಜನಿಸಿದರೆ, ಅವನು ತನ್ನ ತಂದೆಯಿಂದ ಸಮರ್ಪಿತವಾಗದ ಭೂಮಿಯನ್ನು ಆಳಲು ಅಥವಾ ನಿಮ್ಮ ವಿಷಯದಲ್ಲಿ ಮಗನಾಗಿ ಬದುಕಲು ಯೋಗ್ಯನಲ್ಲ. ಇದಲ್ಲದೆ, ನಾರುಮುಡಿಯನ್ನು ಬದಿಗಿಟ್ಟು, ನಿಮ್ಮ ಸೊಸೆಗೆ ಅತ್ಯುತ್ತಮವಾದ ಆಭರಣಗಳನ್ನು ನೀಡಿ, ಓಹ್, ಕೈಕೇಯಿ ನಾರುಮುಡಿ ಅವಳಿಗೆ ವಿಧಿಸಲ್ಪಟ್ಟಿಲ್ಲ ”ಹೀಗೆ ಹೇಳುತ್ತಾ, ವಸಿಷ್ಠನು ಸೀತೆ ನಾರುಮುಡಿ ಧರಿಸುವುದನ್ನು ತಡೆಯುತ್ತಾನೆ.
“ಇದನ್ನು ರಾಮ ಕಾಡಿನಲ್ಲಿ ವಾಸಿಸುವ ನಿಮಗಷ್ಟೇ ವಿಧಿಸಲಾಗಿದೆ. ಸೀತೆಯನ್ನು ಪ್ರತಿದಿನ ಅಲಂಕರಿಸಲು, ಆಭರಣಗಳು ಬೇಕು. ಮತ್ತು ರಾಮನೊಂದಿಗೆ ಕಾಡಿನಲ್ಲಿ ವಾಸಿಸಿಯೂ ಅವಳು ಅಲಂಕೃತಳಾಗಿರಬೇಕು.”ಎಂದು ವಸಿಷ್ಠ ಹೇಳಿದರು.
ಆದರೆ ಸೀತೆ ತನ್ನ ಗಂಡನನ್ನು ಹಿಂಬಾಲಿಸುತ್ತಾಳೆ ಮತ್ತು ನಾರುಮುಡಿಯನ್ನೇ ತೊಟ್ಟು ಹೊರಡುತ್ತಾಳೆ.
ಇಂದಿಗೂ ಆಫ್ರಿಕಾದ ಬಟ್ವಾದಂತಹ ಕೆಲವು ಬುಡಕಟ್ಟು ಜನಾಂಗದವರು ನಾರುಮುಡಿಯನ್ನು ಬಟ್ಟೆಗಳಂತೆ ಧರಿಸುತ್ತಾರೆ. ಋಷಿಗಳು ಅವರ ಕುಟುಂಬಗಳು ಕಾಡುಗಳಲ್ಲಿ ವಾಸಿಸುವಾಗ ಮರದ ನಾರಿನಿಂದ ಮಾಡಿದ ಬಟ್ಟೆಗಳನ್ನು ಧರಿಸುವುದು ಸಾಮಾನ್ಯವಾಗಿತ್ತು.
ರಾಜಕುಮಾರ ಅಥವಾ ರಾಜನ ಹೆಂಡತಿಯಾಗಿರುವ ಮಹಿಳೆ ಸಿಂಹಾಸನದ ಮೇಲೆ ಕುಳಿತು ಗಂಡನ ಅನುಪಸ್ಥಿತಿಯಲ್ಲಿ ಆಳಲು ಯೋಗ್ಯಳು ಎಂದು ವಸಿಷ್ಠ ಇಲ್ಲಿ ಹೇಳುತ್ತಾನೆ. ಅಂದರೆ ಸೀತೆಗೆ ಮೊದಲು ರಾಜ್ಯಗಳನ್ನು ಆಳಿದ ಮಹಿಳೆಯರು ಇದ್ದರು.
ಭಾರತದಲ್ಲಿ ಋಗ್ವೇದ ಕಾಲಮಾನದಲ್ಲಿ ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆದಿದ್ದರು. ವೇದಗಳು ಮತ್ತು ಪುರಾಣಗಳು ಮಹಿಳೆಯರನ್ನು ಆಸ್ತಿ ಎಂದ್ಬಂತೆ ಕಾಣುತ್ತಿದ್ದವು. ಪ್ರಾಚೀನ ಭಾರತದಲ್ಲಿ ಅನೇಕ ಸುಶಿಕ್ಷಿತ ಮಹಿಳೆಯರು ದ್ದರು. ಎರಡು ವಿಧದ ವಿದ್ವತ್ಪೂರ್ಣ ಮಹಿಳೆಯರು ಇದ್ದರು - ಬ್ರಹ್ಮವಾದಿನಿಯರು , ಅಥವಾ ತಮ್ಮ ಜೀವನದುದ್ದಕ್ಕೂ ವೇದ ಅಧ್ಯಯನ ಮಾಡಿ ಸದ್ಯೋದ್ವಾ ಎನಿಸಿದವರು. ಪಾಣಿನಿ ವೇದಗಳನ್ನು ಕಲಿಯುವ ಮಹಿಳಾ ವಿದ್ಯಾರ್ಥಿಗಳ ಬಗ್ಗೆ ಉಲ್ಲೇಖಿಸಿದ್ದಾರೆ.ಕಾತ್ಯಾನ ಮಹಿಳಾ ಶಿಕ್ಷಕರನ್ನು ಉಪಾಧ್ಯಾಯಿನಿಎಂದು ಕರೆದರು. ರಾಮಾಯಣದಲ್ಲಿ ಸುಂದರಕಾಂಡದಲ್ಲಿ ಸೀತೆ ಸಂದ್ಯಾವಂದನೆ ಮಾಡಿದ ಉಲ್ಲೇಖವಿದೆ.
ರಾಜಕೀಯದಲ್ಲಿದ್ದ ಪ್ರಾಚೀನ ಭಾರತೀಯ ಮಹಿಳೆಯರು
ಮೆಗಾಸ್ಟೆನೀಸ್ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ವ ಪಾಂಡ್ಯ ಮಹಿಳೆಯರ ಉಲ್ಲೇಖ ನೀಡುತ್ತಾನೆ.ಶಾತವಾಹನ ರಾಣಿ ನಯಮಿಕಾ ತನ್ನ ಅಪ್ರಾಪ್ತ ಮಗನಪರವಾಗಿ ರಾಜ್ಯ ಆಳಿದ್ದಳು. ಮಹಾಭಾರತ ಯುಗದಲ್ಲಿ ಕಾಶ್ಮೀರದಲ್ಲಿ ಯಶೋಮತಿ ತಿ ರಾಣಿ ಇದ್ದಳು. ಆಂಧ್ರ ಮತ್ತು ಒಡಿಶಾದಲ್ಲೂ ಈ ರೀತಿ ಮಹಿಳೆಯರು ಆಳುತ್ತಿದ್ದ ಉದಾಹರಣೆ ಇದೆ. ವಿಜಯಭಟ್ಟಾರಿಕ ಚಾಲುಕ್ಯ ರಾಜನಾದ ಒಂದನೇ ವಿಕ್ರಮಾದಿತ್ಯನ ಪರವಾಗಿ ಪ್ರಾಂತೀಯ ಆಡಳಿತಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಳು. ಕರ್ನಾಟಕ ಪ್ರಾಂತದಲ್ಲಿ ಮಹಿಳೆಯರು ಪ್ರಾಂತೀಯ ಮತ್ತು ಗ್ರಾಮ ಆಡಳಿತಗಾರರಾಗಿದ್ದರು. ಕಳೆದ 1000 ವರ್ಷಗಳಲ್ಲಿ ಝಾನ್ಸಿ ರಾಣಿ ಲಕ್ಶ್ಮಿಬಾಯಿ, ರುದ್ರಮದೇವಿಯಂತಹಾ ಅನೇಕರು ಆಗಿ ಹೋಗಿದ್ದಾರೆ.
ಪತಿ ಪರವಾಗಿ ತನ್ನ ಊನವಾದ ಕಾಲಿನಿಂದಲೇ ಯುದ್ಧ ಮಾಡಿದ ರಾಣಿ ವಿಶ್ವಲಾಳ ಸಾಹಸದ ಬಗ್ಗೆ ಋಗ್ವೇದ ಉಲ್ಲೇಖಿಸಿದೆ. ಖೇಲಾ ಒಬ್ಬ ರಾಜ; ಅಗಸ್ತ್ಯನು ಅವನ ಪುರೋಹಿತ. ಅವರ ಪ್ರಾರ್ಥನೆಯ ಮೂಲಕ ಅಶ್ವಿನಿ ದೇವತೆಗಳು ವಿಶ್ವಲಾಗೆ ಲೋಹದ ಕಾಲು (ಕೃತಕ ಕಾಲು) ಗಳನ್ನು ನೀಡಿದ್ದರು.(ಋಗ್ವೇದ)
No comments:
Post a Comment