ಮುಹೂರ್ತ ಎನ್ನುವುದು ಸಮಯದ ಮಾಪನ, ಇದೊಂದು ವೇದದ ಘಟಕವಾಗಿದೆ.24 ಗಂಟೆಗಳ ಒಂದು ದಿನ (ಹಗಲು+ ರಾತ್ರಿ)30 ಮುಹೂರ್ತಗಳನ್ನು ಒಳಗೊಂಡಿದೆ. ಪ್ರತಿ ಮುಹೂರ್ತ ಸುಮಾರು 48 ನಿಮಿಷಗಳ ಅವಧಿಯದ್ದಾಗಿದೆ.
ರಾಮನ ಜನನವಾಗಿದ್ದು ಅಭಿಜಿತ್ ಮುಹೂರ್ತದಲ್ಲಿ.
ಪ್ರತಿ ಮುಹೂರ್ತವನ್ನು 30 ಕಲಾ ≈ 48 ನಿಮಿಷಗಳಾಗಿ ವಿಂಗಡಿಸಲಾಗಿದೆ.
ಬ್ರಾಹ್ಮಣ ಹಾಗೂ ಋಗ್ವೇದದಲ್ಲಿ ಮುಹೂರ್ತವನ್ನು “ಮುಹು” (ಕ್ಷಣ / ತಕ್ಷಣ) +ರ್ತ(ಆದೇಶ) ಎಂದು ವ್ಯಾಖ್ಯಾನಿಸಲಾಗಿದೆ.
ಆದ್ದರಿಂದ, ಇದು ಪ್ರತಿದಿನ ಕ್ರಮದಲ್ಲಿ ಸಂಭವಿಸುವ ಕ್ಷಣವಾಗಿದೆ.
ರಾಮಾಯಣದಲ್ಲಿ, ಕೆಲವು ಮುಹೂರ್ತಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ.
ಯುದ್ಧ ಕಾಂಡದ ನಾಲ್ಕನೇ ಸರ್ಗದಲ್ಲಿ ವಾನರ ಸೈನ್ಯದೊಂದಿಗೆ ಲಂಕೆಯೆಡೆಗೆ ಹೊರಟ ರಾಮನು ಶುಭ ಮುಹೂರ್ತವನ್ನು ಆಯ್ದುಕೊಳ್ಳುವ ಪ್ರಸ್ತಾಪವಿದೆ. ಹನುಮನು ಲಂಕೆಯನ್ನು ಸುಟ್ಟು ಹಿಂದಿರುಗಿದ ನಂತರ, ಅವನು ತನ್ನ ಸೈನ್ಯಕ್ಕೆ ರಾವಣನ ಅರಮನೆಯ ವಿವರ ನೀಡುತ್ತಾನೆ.ಸೀತೆ ಜೀವಂತವಾಗಿದ್ದಾಳೆ ಮತ್ತು ಲಂಕೆಯಲ್ಲಿದ್ದಾಳೆ ಎಂದು ಆತ ಖಚಿತಪಡಿಸುತ್ತಾನೆ.
ರಾಮನು ಲಂಕೆಗೆ ತೆರಳಿ ಆದಷ್ಟು ಬೇಗ ಅದನ್ನು ನಾಶಮಾಡಲು ನಿರ್ಧರಿಸುತ್ತಾನೆ
“अस्मिन् मुहूर्ते सुग्रीव प्रयाणम् अभिरोचये |
युक्तो मुहूर्तो विजयः प्राप्तो मध्यम् दिवा करः || ६-४-३”
ಯಶಸ್ಸಿಗೆ ಸೂಕ್ತವಾದ ಕ್ಷಣವಾದ ಈ ಕ್ಷಣದಲ್ಲಿ ನಮ್ಮ ಪ್ರಯಾಣವನ್ನು ಅನುಮತಿಸಲು ಸಂತಸವಾಗಿದೆ.ಮಧ್ಯಾಹ್ನವಾಗಿದ್ದು ಸೂರ್ಯಬ ತಾಪ ಹೆಚ್ಚಿದೆ. ಅಭಿಜಿತ್ ಮುಹೂರ್ತವು ದಿನದ ಮಧ್ಯ ಸಂಭವಿಸುತ್ತದೆ, ಸೂರ್ಯನು ನಿಖರವಾಗಿ ನಮ್ಮ ತಲೆಯ ಮೇಲೆ ಇರುವಾಗ ಮತ್ತು ನೆರಳುಗಳು ಅತ್ಯಂತ ಕನಿಷ್ಟ ಅಥವಾ ಅಗೋಚರವಾಗುತ್ತದೆ. ಈ ಮುಹೂರ್ತವನ್ನು "ವಿಧಿ" ಎಂದೂ ಕರೆಯಲಾಗುತ್ತದೆ. ಇದು ಪ್ರತಿದಿನ ಮಧ್ಯಾಹ್ನ 12 ರ ಸುಮಾರಿಗೆ ಸಂಭವಿಸುತ್ತದೆ.
ರಾಮನು ತನ್ನ ಪ್ರಯಾಣಕ್ಕೆ ಸೂಕ್ತವಾದ ನಕ್ಷತ್ರವನ್ನೂ ಆರಿಸುತ್ತಾನೆ.
“उत्तरा फल्गुनी हि अद्य श्वस् तु हस्तेन योक्ष्यते || ६-४-५
अभिप्रयाम सुग्रीव सर्व अनीक समावृताः |”
"ಓ ಸುಗ್ರೀವಾ! ಫಲ್ಗುಣಿ ಈ ಉತ್ತರದ ಗ್ರಹವು ನಾಳೆ ಹಸ್ತ ನಕ್ಷತ್ರದೊಂದಿಗೆ ಸಂಯೋಗವಾಗಲಿದೆ. ಆದ್ದರಿಂದ, ನಮ್ಮೆಲ್ಲಾ ಸೇಬೆಯೊಂದಿಗೆ ಇಂದು ಹೊರಡೋಣ"
ಅವನು ಉತ್ತರ-ಫಲ್ಗುಣಿ ನಕ್ಷತ್ರದ ಆರಂಭಿಕ ಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಇದು ಪುನರ್ವಸುವಿನಿಂದ (ರಾಮನ ಜನ್ಮ ನಕ್ಷತ್ರ) ಎಣಿಸಿದಾಗ 6 ನೇ ನಕ್ಷತ್ರವಾಗಿದೆ.
6 ನೇ ನಕ್ಷತ್ರವನ್ನು ಸಾಧನಾ-ತಾರೆ ಎಂದು ಪರಿಗಣಿಸಲಾಗುತ್ತದೆ, ಅಲ್ಲಿ ಒಬ್ಬ ವ್ಯಕ್ತಿಯು ಸ್ವಲ್ಪ ಪ್ರಯತ್ನದಿಂದ ಉತ್ತಮ ಯಶಸ್ಸನ್ನು ಪಡೆಯುತ್ತಾನೆ.
ಮರುದಿನ ಹಸ್ತ ನಕ್ಷತ್ರವು ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದೆ, ಮತ್ತು ಹಸ್ತಾ ಅವನ ನೈಧಾನ -ತಾರಾ (ಏಳನೇ ನಕ್ಷತ್ರ) ಆಗಿದ್ದು ರಾಮನು ಅದೇ ದಿನ ಯುದ್ಧದ ಪ್ರಾರಂಭಕ್ಕೆ ಬಯಸಿದನು.
ಶತಪಥ ಬ್ರಾಹ್ಮಣದಲ್ಲಿ ಮುಹೂರ್ತವನ್ನು ದಿನದ 1/15 ನೇ ಭಾಗವೆಂದು ವಿವರಿಸಲಾಗಿದೆ.ನೆ (ಇಲ್ಲಿ ದಿನ ಎಂದರೆ ಸೂರ್ಯೋದಯದಿಂದ ಸೂರ್ಯಾಸ್ತದ ಸಮಯ). -ಬೆಳಿಗ್ಗೆ 6 ಗಂಟೆಗೆ ಸೂರ್ಯೋದಯ
(1) ಸ್ವಾತಿ, (2) ವಿಶಾಖಾ, (3) ಅನೂರಾಧಾ (4) ಜೇಷ್ಠಾ (5) ಮಘ , (6) ಪೂರ್ಣ ಫಲ್ಗುಣಿ, (7) ಉತ್ತರ ಫಲ್ಗುಣಿ - ಇವು ಅಭಿಜಿತ್‌ಗೆ ಮೊದಲ 7 ನಕ್ಷತ್ರಗಳು, ಕಳೆದು ಹೋದ 7 ಮುಹೂರ್ತಗಳು ಮತ್ತು ಇವುಗಳನ್ನು ಮೊದಲ ಪ್ರಹರ ಎಂದು ಕರೆಯಲಾಗುತ್ತದೆ.
ಅಭಿಜಿತ್ ನಂತರದ 20 ನಕ್ಷತ್ರಗಳು 20 ಮುಹೂರ್ತಗಳನ್ನು ಹೊಂದಿವೆ. ಈ ರೀತಿಯಾಗಿ 28 ನಕ್ಷತ್ರಗಳು 28 ಮುಹೂರ್ತಗಳು. ಉಳಿದೆರಡು ಮುಹೂರ್ತಗಳನ್ನು ಸೃಷ್ಟಿಕರ್ತನಿಗೆ ಮೀಸಲಿಡಲಾಗಿದೆ ಮತ್ತು ಈ ಎರಡು ಮುಹೂರ್ತಗಳನ್ನು ಬ್ರಹ್ಮ ಮುಹೂರ್ತಗಳು ಎನ್ನಲಾಗುವುದು.
ಹಾಗೆ ವಿವರಿಸಿದ ನಂತರ ರಾಮನು ವಾನರ ಸೇನೆಯೊಡನೆ ಲಂಕೆಯ ಕಡೆ ಹೊರಟನು.
ಈ ಹಿಂದೆ ಆರಣ್ಯ ಕಾಂಡದಲ್ಲಿ ರಾಮ ಮತ್ತು ಲಕ್ಷ್ಮಣರು ದೊಡ್ಡ ರಣಹದ್ದೊಂದನ್ನು ಸಂಧಿಸುತ್ತಾರೆ. ರಾವಣ ಸೀತೆಯನ್ನು ಅಪಹರಿಸಿದ ಬಗ್ಗೆ ವಿವರಿಸಿದ ಜಟಾಯು ಮತ್ತು ಆ ಘಟನೆ ಸಂಭವಿಸಿದ ಕೆಟ್ಟ ಸಮಯದ (ಕೆಟ್ಟ ಮುಹೂರ್ತ) ವಿವರಗಳನ್ನು ಸಹ ಹೇಳುತ್ತಾನೆ.
येन याति मुहूर्तेन सीताम् आदाय रावणः |
विप्रनष्टम् धनम् क्षिप्रम् तत् स्वामि प्रतिपद्यते || ३-६८-१२
विन्दो नाम मुहूर्तो असौ स च काकुत्स्थ न अबुधत् |
ವಿಂದಾ ಹೆಸರಿನ ಸಮಯದ (ಮುಹೂರ್ತ), ರಾವಣನು ಸೀತೆಯನ್ನು ಕರೆದುಕೊಂಡು ಹೋಗಿದ್ದಾನೆ. ಆ ಸಮಯದಲ್ಲಿ ಯಾವುದೇ ಸಂಪತ್ತು ಕಳೆದುಹೋದರೆ, ಆ ಸಂಪತ್ತಿನ ಮೂಲ ಮಾಲೀಕರು ಅವುಗಳನ್ನು ಶೀಘ್ರವಾಗಿ ಮರುಪಡೆದುಕೊಳ್ಳುತ್ತಾರೆ. ಓಹ್ ರಾಮ ರಾವಣನು ಆ ಸಂಗತಿಯನ್ನು ಗಮನಿಸಿಲ್ಲ ಮತ್ತು ಸೀತೆಯನ್ನು ಬೇಗನೆ ಅಪಹರಣ ಮಾಡಿದ್ದನು.
ಮೂವತ್ತು ಮುಹೂರ್ತಗಳ ಪಟ್ಟಿಯಲ್ಲಿದು 11 ನೇ ಮುಹೂರ್ತ ರಾವಣನು ಸ್ವತಃ ಜ್ಯೋತಿಷಿಯಾಗಿದ್ದರಿಂದ ಮತ್ತು ರಾವಣ ಸಂಹಿತೆಯಂತಹ ಗ್ರಂಥಗಳನ್ನು ರಚಿಸಿದ್ದರೂ ಸಮಯವನ್ನು (ಮುಹೂರ್ತ) ನಿರ್ಲಕ್ಷಿಸಿ ಬೆಲೆ ತೆತ್ತನು.
ಬುಧವಾರದ ದಿನದಂದು ಅಭಿಜಿತ್ ಮುಹೂರ್ತವನ್ನು ದೋಷಪೂರಿತ ಮುಹೂರ್ತವೆಂದು ಗಮನಿಸಬೇಕು. ಮದುವೆ ಅಥವಾ ಉಪನಯನ ಸಮಾರಂಭಗಳಂತಹ ಶುಭ ಸಮಾರಂಭಗಳಿಗೆ ಅಭಿಜಿತ್ ಮುಹೂರ್ತ ಸೂಕ್ತವಲ್ಲ. ಆದರೆ ಈ ದಿನಗಳಲ್ಲಿ ಜನರು ಅಭಿಜಿತ್ ಲಗ್ನಕ್ಕೆ ಆದ್ಯತೆ ನೀಡುತ್ತಿದ್ದಾರೆ, ವಿಶೇಷವಾಗಿ ಶನಿವಾರ ಮತ್ತು ಭಾನುವಾರದಂದು ಇದನ್ನು ನೋಡಲಾಗುತ್ತದೆ. ಏಕೆಂದರೆ ಅತಿಥಿಗಳು ಕಾರ್ಯಕ್ರಮಕ್ಕೆ ಹಾಜರಾಗುವುದು ಸುಲಭ, ನಂತರ ಮಧ್ಯಾಹ್ನ 12: 30 ರ ನಂತರ ಊಟದ ವ್ಯವಸ್ಥೆಗೆ ಅನುಕೂಲ!!
ಮೂವತ್ತು ಮುಹೂರ್ತಗಳ ವಿವರ ಹೀಗಿದೆ-
ಸಂಖ್ಯೆ |
ದಿನದ ಅವಧಿ |
ಹೆಸರು |
ಗುಣ |
1 |
06:00 - 06:48 (ಸೂರ್ಯೋದಯ) |
ರುದ್ರ |
ಅಶುಭ/ದುರುದ್ದೇಶದಿಂದ
ಕೂಡಿದ |
2 |
06:48 - 07:36 |
ಅಹಿ |
ಅಶುಭ/ದುರುದ್ದೇಶದಿಂದ
ಕೂಡಿದ |
3 |
07:36 - 08:24 |
ಮಿತ್ರ |
ಶುಭ |
4 |
08:24 - 09:12 |
ಪಿತೃ |
ಅಶುಭ/ದುರುದ್ದೇಶದಿಂದ
ಕೂಡಿದ |
5 |
09:12 - 10:00 |
ವಸು |
ಶುಭ |
6 |
10:00 - 10:48 |
ವರಾಹ |
ಶುಭ |
7 |
10:48 - 11:36 |
ವಿಶ್ವೇದೇವ |
ಶುಭ |
8 |
11:36 - 12:24 |
ವಿಧಿ ಅಥವಾ ಅಭಿಜಿತ್ ಮುಹೂರ್ತ |
ಶುಭ(ಸೋಮವಾರ, ಬುಧವಾರ
ಮತ್ತು ಶುಕ್ರವಾರ ಹೊರತುಪಡಿಸಿ) |
9 |
12:24 - 13:12 |
ಸೂತಮುಖ |
ಶುಭ |
10 |
13:12 - 14:00 |
ಪುರುಹೂತ |
ಅಶುಭ/ದುರುದ್ದೇಶದಿಂದ
ಕೂಡಿದ |
11 |
14:00 - 14:48 |
ವಿಂದ |
ಅಶುಭ/ದುರುದ್ದೇಶಪೂರಿತ |
12 |
14:48 - 15:36 |
ನಕ್ತನಕರ |
ಅಶುಭ/ದುರುದ್ದೇಶಪೂರಿತ |
13 |
15:36 - 16:24
|
ವರುಣ |
ಶುಭ |
14 |
16:24 - 17:12 |
ಆರ್ಯಮನ್ |
ಶುಭ (ಭಾನುವಾರ ಹೊರತುಪಡಿಸಿ) |
15 |
17:12 - 18:00 |
ಭಗ |
ಅಶುಭ/ದುರುದ್ದೇಶಪೂರಿತ |
16 |
18:00 - 18:48 (ಸೂರ್ಯಾಸ್ತ) |
ಗಿರೀಶ |
ಅಶುಭ/ದುರುದ್ದೇಶಪೂರಿತ |
17 |
18:48 - 19:36 |
ಅಜಪಾದ |
ಅಶುಭ/ದುರುದ್ದೇಶಪೂರಿತ |
18 |
19:36 - 20:24 |
ಅಹಿರ್ಬುಧ್ಯಾ |
ಶುಭ |
19 |
20:24 - 21:12 |
ಪುಷ್ಯ |
ಶುಭ |
20 |
21:12 - 22:00 |
ಅಶ್ವಿನಿ |
ಶುಭ |
21 |
22:00 - 22:48 |
ಯಮ |
ಅಶುಭ/ದುರುದ್ದೇಶಪೂರಿತ |
22 |
22:48 - 23:36 |
ಅಗ್ನಿ |
ಶುಭ |
23 |
23:36 - 24:24 |
ವಿಧಾತೃ |
ಶುಭ |
24 |
24:24 - 01:12 |
ಕಂಡ |
ಶುಭ |
25 |
01:12 - 02:00 |
ಅದಿತಿ |
ಶುಭ |
26 |
02:00 - 02:48 |
ಜೀವ/ಅಮೃತ |
ಅತ್ಯಂತ ಶುಭ |
27 |
02:48 - 03:36 |
ವಿಷ್ಣು |
ಶುಭ |
28 |
03:36 - 04:24 |
ದ್ಯುಮದ್ಗದ್ಯುತಿ |
ಶುಭ |
29 |
04:24 - 05:12 |
ಬ್ರಹ್ಮ |
ಜಪತಪ, ಪ್ರಾರ್ಥನೆಗಳೀಗೆ
ಅತ್ಯಂತ ಶುಭ |
30 |
05:12 - 06:00 |
ಸಮುದ್ರ |
ಶುಭ |
No comments:
Post a Comment