ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ಹೊಸ ವರ್ಷದ ಹಾರ್ದಿಕ
ಶುಭಾಶಯಗಳು.
ಇದೇನಪ್ಪಾ ಇವ್ನು ಹೊಸ ವರ್ಷ ಬಂದು ಒಂದೆರಡು ದಿನ್ ಕಳೆದ್ಮೇಲೆ
ಹೊಸ ವರ್ಷದ ಶುಭಾಶಯ್ ಹೇಳ್ತಿದಾನೆ ಅಂದ್ಕೊಂಡ್ರಾ? ಹೌದು, ಹೊಸ ವರ್ಷ ಬಂದು ಆಗ್ಲೇ ಎರಡು ದಿನಗಳು
ಕಳೆದು ಹೋಗಿಯಾಯ್ತು. ಕಾಲವೇ ಹಾಗೆ ಎಂದಿಗೂ ನಿಲ್ಲೋದಿಲ್ಲ. ಒಂದೇ ಸಮನೆ ಓಡ್ತಾನೇ ಇರೋದೇ ಅದ್ರ ಕೆಲ್ಸನೇನೋ?
ಆದ್ರೆ ನಾವು-ನೀವು ಮನುಷ್ಯರು ನೋಡಿ, ಕಾಲ ಮುಂದೋಡ್ತಿದ್ರೂ ನಮಗೆ ಮಾತ್ರ ಸರಿದ ಕಾಲದದಲ್ಲಿ ನಮ್ಮಗಳ
ಸುತ್ತ ನಡೆದ ಘಟನೆಗಳ ನೆನಪುಗಳು ಮಾತ್ರ ಮಾಸದಂತೆ ನಮ್ಮೊಂದಿಗಿರುತ್ತವೆ.
ಎಲ್ಲಾ ವರ್ಷಗಳಂತೆ 2013 ನೇ ವರ್ಷವೂ ಇಂತಹಾ ಸಾಕಷ್ಟು
ಘಟನೆಗಳ ನೆನಪುಗಳನ್ನು ನಮ್ಮಲ್ಲಿ ಉಳಿಸಿ ಹೋಗಿದೆ, ಹೌದಲ್ಲ?
ಇಂತಹಾ ಹಲವಾರು ಘಟನೆಗಳಾಲ್ಲಿ
ಕೆಲವೊಂದಷ್ಟನ್ನು ನಮ್ಮ ಪ್ರೀತಿಯ ಕನ್ನಡ ದಿನಪತ್ರಿಕೆಗಳಾದ ‘ವಿಜಯವಾಣಿ’ ಹಾಗೂ ‘ಉದಯವಾಣಿ’ ಯಲ್ಲಿನ
ಸ್ನೇಹಿತರು ನಮಗಾಗಿ ಹಂಚಿಕೊಂಡಿದ್ದಾರೆ. ಅಂತಹಾ ಕೆಲವು ಪುಟಗಳಾನ್ನು ನಾನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು
ಇಚ್ಚಿಸಿದ್ದೇನೆ,
ನಿಮಗೂ ಇದು ಇಷ್ಟವಾಗಬಹುದೆನ್ನುವುದು
ನನ್ನ ಅನಿಸಿಕೆ.
ಸರಿ ಹಾಗಾದರೆ ಇನ್ನು ತಡವೇಕೆ ಇಲ್ಲಿನ ಪುಟಗಳಾನ್ನು ಒಂದೋಂದನ್ನೇ
ತಿರುವಿ ಹಾಕುತ್ತಾ ನಾವುಗಳು ಕಳೆದ ವರ್ಷಾವಧಿಯಲ್ಲಿ ಕಂಡಂತಹಾ ವ್ಯಕ್ತಿಗಳು, ಘಟನೆಗಳನ್ನು ಇನ್ನೊಮ್ಮೆ
ಮೆಲುಕು ಹಾಕೋಣ....
‘ವಿಜಯವಾಣಿ’-
‘ಉದಯವಾಣಿ’
ಕಳೆದ ಕಾಲದಲ್ಲಿ ನಾವು ಅನುಭವಿಸಿದ ಸಿಹಿ-ಕಹಿ ಘಟನೆಗಳನ್ನೆಲ್ಲಾ
ನೆನೆದು ಮನಸ್ಸು ಒದ್ದೆಯಾಗಿರುವ ಈ ಸಮಯದಲ್ಲಿ ಮತ್ತೆ ನಾವೀಗ ಇನ್ನೊಂದು ಹೊಸ ವರ್ಷದ ಪ್ರಾರಂಭದಲ್ಲಿದ್ದೇವೆ.
ಈ 2014 ನಮ್ಮೆಲ್ಲರ ಬಾಳಿನಲ್ಲಿ ಸಾಕಷ್ಟು ಸಿಹಿಯನ್ನೇ
ನೀಡಲಿ, ಕಹಿಯ ಪ್ರಮಾಣ ಆದಷ್ಟು ಕಡಿಮೆ ಇರಲಿ ಎಂದು ಹಾರೈಸುತ್ತಾ...
ನಿಮಗೆಲ್ಲಾ ಇನ್ನೊಮ್ಮೆ ಹೊಸವರ್ಷದ
ಶುಭಾಶಯಗಳು.
ನಮಸ್ಕಾರ.
No comments:
Post a Comment