ಲೇಪಾಕ್ಷಿ (Lepakshi)
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದೆ. ಈಗಾಗಲೇ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನವನ್ನು ಪ್ಡೆದಿರುವ ಈ ಪ್ರವಾಸಿ ತಾಣದ ವೀಕ್ಷಣೆಗೆ ದಿನನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಲೇಪಾಕ್ಷಿಯಲ್ಲಿನ ವೀರಭದ್ರೇಶ್ವರ ಸ್ವಾಮಿ ದೇವಾಲಯ, ನಾಗಲಿಂಗೇಶ್ವರ ದೇವಾಲಯಗಳು ತಮ್ಮಲ್ಲಿನ ಅದ್ಭುತ ಶಿಲ್ಪಕಲೆಗಳಿಂದಾಗಿ ಗಮನ ಸೆಳೆಯುತ್ತವೆ. ಇದರೊಂದಿಗೆ ಇಲ್ಲಿರುವ ಬೃಹತ್ ನಂದಿ ವಿಗ್ರಹವೂ ಸಹ ಭಾರತದಲ್ಲಿಯೇ ಅತಿ ದೊಡ್ಡದಾದುದಾಗಿರುವುದು ಹಾಗೂ ಅತ್ಯಂತ ಸುಂದರವಾಗಿರುವುದೂ ಆಗಿದೆ.
***
Nagalingeshwara, Lepakshi |
ರಾಮಾಯಣ ಕಾಲದಲ್ಲಿ ಶ್ರೀ ರಾಮನು ವನವಾಸದಲ್ಲಿರಬೇಕಾದರೆ ಲಂಕಾಧಿಪತಿ ರಾವಣನು ಶ್ರೀ ರಾಮನ ಪತ್ನಿ ಸೀತಾದೇವಿಯನ್ನು ಅಪಹರಿಸಿಕೊಂಡು ತನ್ನ ಪುಷ್ಪಕ ವಿಮಾನದಲ್ಲಿ ಕರೆದೊಯ್ಯುತ್ತಿರಬೇಕಾದರೆ ಮಾರ್ಗ ಮದ್ಯದಲ್ಲಿ ಜಟಾಯು ಎನ್ನುವ ಹೆಸರಿನ ಪಕ್ಷಿಯೊಂದು ಎದುರಾಗುತ್ತದೆ. ಆ ಪಕ್ಷಿಯು ಸೀತೆಯ ಆರ್ತನಾದವನ್ನು ಕೇಳಿ ರಾವಣನನ್ನು ಆ ಸೀತೆಯನ್ನು ಎಲ್ಲಿದ್ದಳೋ ಅಲ್ಲೇ ಬಿಟ್ಟು ಬರುವಂತೆ ಪರಿ ಪರಿಯಾಗಿ ಬೇಡಿಕೊಂಡರೂ ರಾವಣನದಕ್ಕೆ ಒಪ್ಪದೇ ಹೋದಾಗ ತಾನು ಆ ಅಸುರನೊಡನೆ ಯುದ್ದಕ್ಕಿಳಿಯುತ್ತದೆ. ಆದರೆ ಬಲಿಷ್ಟ್ನಾಗಿದ್ದ ರಾವಣನೆದುರು ಈ ಬಡ ಪಕ್ಷಿಯ ಆಟ ಅದೆಷ್ಟು ಕಾಲ ನಡೆದೀತು? ರಾವಣನು ತಾನು ಆ ಪಕ್ಷಿಯ ಎರ್ಡೂ ರೆಕ್ಕೆಗಳನ್ನು ಕಡಿದು ಅದು ನೆಲಕ್ಕುರುಳುವಂತೆ ಮಾಡುತ್ತಾನೆ. ತಾನು ಸೀತೆಯೊಂದಿಗೆ ಲಂಕೆಯ ಮಾರ್ಗ ಹಿಡಿಯುತ್ತಾನೆ.
Mahanandi statue, Lepakshi |
ಇತ್ತ ಶ್ರೀ ರಾಮನು ತನ್ನ ಪತ್ನಿಯನ್ನರಸುತ್ತಾ ಬರುತ್ತಿರಲಾಗಿ ಮಾರ್ಗ ಮದ್ಯದಲ್ಲಿ ಜೀವಚ್ಚವವಾಗಿ ಬಿದ್ದಿರುವ ಜಟಾಯುವು ಕಣ್ಣಿಗೆ ಬೀಳುತ್ತದೆ. “ಹಾ...ಸೀತಾ... ” ಎಂದು ಮೊರೆಯಿಡುತ್ತಾ ಬರುತ್ತಿದ್ದ ರಾಮನನ್ನು ನೋಡಿದ ಆ ಪಕ್ಷಿಯು ಶ್ರೀ ರಾಮನಿಗೆ ``ಸೀತಾದೇವಿಯನ್ನೂ ಮತ್ತು ನನ್ನ ಪ್ರಾಣಗಳನ್ನೂ ರಾವಣನು ಅಪಹರಣ ಮಾಡಿದನು. ರಾವಣನು ಎತ್ತಿಕೊಂಡಿದ್ದ ಸೀತೆಯನ್ನು ಬಿಡಿಸಲು ಹೋಗಿ ಅವನ ರಥ ಸಾರಥಿ ಬಿಲ್ಲುಗಳನ್ನು ಮುರಿದೆ. ಇದನ್ನು ನೋಡಿ ಕ್ರೋಧದಿಂದ ಸಂತೃಪ್ತನಾದ ರಾವಣನು ಮುಪ್ಪಿನಿಂದ ಮುದಿಯಾದ ನನ್ನ ರೆಕ್ಕೆಗಳನ್ನು ಕತ್ತರಿಸಿ ಸೀತೆಯನ್ನು ಅಪಹರಿಸಿಕೊಂಡು ಹೋದನು..” ಎನ್ನುತ್ತದೆ. ಅದನ್ನು ಕೇಳಿದ ರಾಮನು ಇನ್ನಷ್ಟು ಭೀತಿಯಿಂದ “ಈಗ ಸೀತೆಯು ಎಲ್ಲಿರುವಳು?” ಎಂದು ಕೇಳಲು ಜಟಾಯುವು ``ರಾವಣನು ತನ್ನ ಸಾಮರ್ಥ್ಯದಿಂದ ಮೇಘಗಳನ್ನು ಸೃಷ್ಟಿಮಾಡಿ ಕತ್ತಲನ್ನುಂಟು ಮಾಡಿದನು. ಆ ಬಳಿಕ ಬಳಲಿದ ನನ್ನ ರೆಕ್ಕೆಗಳನ್ನು ಕತ್ತರಿಸಿ ಸೀತೆಯನ್ನು ಕೊಂಡೊಯ್ದನು. ಅವನು ದಕ್ಷಿಣಕ್ಕೆ ಹೋದನೆಂದು ತೋರುತ್ತದೆ. ……ನನ್ನ ಪ್ರಾಣಗಳು ಊರ್ಧ್ವಮುಖವಾಗುತ್ತಿವೆ. ನೋಟ ಮಂದವಾಗುತ್ತಿದೆ. ರಾವಣನು ವಿಶ್ರವಸ್ಸಿನ ಮಗ; ಕುಬೇರನ ತಮ್ಮ” ಎನ್ನುತ್ತೆನ್ನುತ್ತಲೇ ಪ್ರಾಣ ಬಿಡುತ್ತದೆ. ಹಾಗೆ ಪ್ರಾಣವನ್ನು ಬಿಟ್ಟ ಪಕ್ಷ್ರಾಜ ಜಟಾಯುವಿಗೆ ಶ್ರೀ ರಾಮನು ತಾನೇ ಸ್ವತಃ ಮಂತ್ರಪೂರ್ವಕ ಸಂಸ್ಕಾರ ನಡೆಸುತ್ತಾನೆ. ಅಲ್ಲದೆ “ಲೇ.. ಪಕ್ಷಿ....” ಎಂದೆನ್ನುವ ಮೂಲಕ ಮೋಕ್ಷ ಪ್ರಾಪ್ತಿಯಗುವಂತೆಯೂ ಮಾಡುತ್ತಾನೆ.
ಹಾಗೆ ಜಟಾಯುವಿಗೆ ಮೋಕ್ಷ ಕರುಣಿಸಿದ ಜಾಗವೇ ಇಂದಿನ ಲೇಪಾಕ್ಷಿಯಾಗಿದೆ. ಅಂದು ಶ್ರೀ ರಾಮನು ನುಡಿದ “ಲೇ... ಪಕ್ಷಿ...” ಯು ಕಾಲಾನಂತರದಲ್ಲಿ “ಲೇಪಾಕ್ಷಿ” ಆಗಿ ಬದಲಾಗಿದೆ.
No comments:
Post a Comment