Wednesday, September 24, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 32

ಕುಕ್ಕೆ ಸುಬ್ರಹ್ಮಣ್ಯ (Kukke Subrahmanya)
ಭಾಗ – 3

ಪರಶುರಾಮ ಕ್ಷೇತ್ರವೆಂದು ಪ್ರಸಿದ್ದವಾದ ಕರ್ನಾಟಕ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ನಂಬಿದ ಭಕ್ತರಿಗೆ ಸುಖ ಶಾಂತಿಯನ್ನು ಕರುಣಿಸುತ್ತಿರುವ ಪರಮ ಪಾವನ ಕ್ಷೇತ್ರವಾಗಿದೆ. ಪ್ರಾಚೀನ ಐತಿಹ್ಯಗಳನ್ನು, ಪೌರಾಣಿಕ ಹಿನ್ನೆಲೆಗಳನ್ನೂ ಹೊಂದಿರುವ ಶ್ರೀ ಕ್ಷೇತ್ರದ ಇನ್ನಷ್ಟು ಪುರಾಣ ಹಿನ್ನೆಲೆಯನ್ನು ನಾವೀಗ ತಿಳಿದುಕೊಳ್ಳೋಣ....

***
ಕೃತ ಯುಗದಾರಂಭದಲ್ಲಿ ಕಷ್ಯಪ ಮಹರ್ಷಿಗಳ ಧರ್ಮ ಪತ್ನಿಯಾದ ಅದಿತಿಯು ತಮ್ಮ ಮಕ್ಕಳಾದ ಇಂದ್ರಾದಿ ದೇವತೆಗಳ ಬಾಲಕ್ರೀಡೆಗಳನ್ನು ನೋಡಿ ಸಂತೋಷಿಸುತ್ತಿರಲು ಅಸಿತರೆನ್ನುವ ಮಹಾಮುನಿಗಳು ಇಂದಾದಿಗಳನ್ನು ನೋಡುವುದಕ್ಕಾಗಿ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಮನೆಯಲ್ಲಿದ್ದು ತನ್ನ ಮಕ್ಕಾಳ ಆಟ, ವಿನೋದಗಳಿಂದ ಮೈಮರೆತಿದ್ದ ಅದಿತಿಯು ತಾನು ಬಂದ ಅತಿಥಿಗಳಾನ್ನು ಉಪಚರಿಸದೇ ಹೋದಳು. ಇದರಿಂದಾಗಿ ಮಹಾನ್ ಕೋಪವನ್ನು ತಾಳಿದ ಅಸಿತರು “ಮನೆಗೆ ಬಂದ ಅತಿಥಿಯನ್ನು ಲಕ್ಷಿಸದೆ ಸೊಕ್ಕಿದ ನೀನು ರಾಕ್ಷಸಿಯಾಗಿ ಹುಟ್ಟು” ಎಂದು ಶಾಪವನ್ನು ಕೊಟ್ಟು ಮುಂದುವರಿಯಲು ಅದಿತಿಯು ಮಹಾಭೀತಿಯಿಂದ ಮುನಿಗಳ ಕಾಲಿಗೆರಗಿ “ನನ್ನದು ಮಹಾಪರಾಧವಾಯಿತು. ತಮ್ಮ ಬರುವಿಕೆಯನ್ನು ತಿಳಿಯಲಿಲ್ಲ. ನಾನು ಅಜ್ಞಾನಿ, ಈ ನನ್ನ ಅಪರಾಧವನ್ನು ಮನ್ನಿಸಿ ನನ್ನನ್ನು ಕಾಪಾಡಬೇಕು, ನನ್ನನ್ನು ಉದ್ದರಿಸಬೇಕು.// ಎಂದು ಸೆರಗೊಡ್ಡಿ ಬೇಡಿದಳು. ಆಗ “ನಿನ್ನ ಕರ್ಮಫ್ಲದಿಂದ ನನ್ನ ಬಾಯಲ್ಲಿ ಶಾಪವಾಕ್ಯವು ಬಂದಿದೆ. ಅದು ಸುಳ್ಳಾಗಲಾರದು. ನೀನು ಪಿಶಿತಾಶಿನಿ ಎನ್ನುವ ರಕ್ಕಸಿಯಾಗಿ ಹುಟ್ಟಿ ತಮನೆಂಬ ದೈತ್ಯನ ಪತ್ನಿಯಾಗಿ ಮತ್ಸ್ಯಾವತಾರಿಯಾದ ಹರಿಯಿಂದ ನಿನ್ನ ಪತಿಯು ಹತನಾದ ತರುವಾಯ ಕುಮಾರಧಾರಾ ತೀರ್ಥಕ್ಕೆ ಹೋಗಿ ಅಲ್ಲಿ ಸ್ನಾನ ಮಾಡಿ ಕ್ಷೇತ್ರಾಧಿಪತಿಯಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಸೇವಿಸು, ಆಕ್ಷಣದಲ್ಲಿಯೇ ನಿನಗೆ ಜನ್ಮಾಂತರದ ನೆನಪುಗಳು ಮರುಕಳಿಸಿ ರಾಕ್ಷಸ ದೇಹವನ್ನು ತೊರೆದು ದಿವ್ಯ ದೇಹಧಾರಿಯಾಗುತ್ತೀಯೆ. ನಿನಗೆ ಮಂಗಳವಾಗಲಿ.” ಎಂದು ಹರಸಿ ಹೊರಟು ಹೋದರು. ಅದಿತಿಯು ತನಗೊದಗಿದ ಈ ದುಃಖವನ್ನು ತನ್ನ ಪತಿಯಾದ ಕಷ್ಯಪರಿಗೆ ತಿಳಿಸಲು “ದೈವವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಚಿಂತಿಸಬೇಡ, ಸ್ವಲ್ಪ ಕಾಲದಲ್ಲಿಯೇ ಶಾಪವಿಮುಕ್ತಳಾಗಿ ಬಂದು ಸೇರುವೆ.” ಎಂದರು.
ಮುಂದೆ ಅಸಿತ ಮುನಿಗಳ ಮಾತಿನಂತೆಯೇ ಎಲ್ಲವೂ ನಡೆಯಿತು. ಅದಿತಿಯು ತಾನು ಪಿಶಿತಾಶಿನಿ ರಕ್ಕಸಿಯಾಗಿ ಹುಟ್ಟಿ ಭಯಂಕರನಾದ ತಮನೆಂಬ ರಕ್ಕಸನ ಪತ್ನಿಯಾದಳು. ಆತನು ಮೂಲೋಕಗಳನ್ನು ವಿಚಿತ್ರವಾಗಿ ಹಿಂಸಿಸಿ ನಾರಯಣನೇ ನಮ್ಮ ಕುಲವೈರಿಯೆಂದು ತಿಳಿದು ಅವನನ್ನು ಬ್ರಾಹ್ಮಣರು ವೇದಗಳಿಂದ ಸ್ತುತಿಸುವರು, ಆ ಬ್ರಾಹ್ಮಣಿಗೆ ಆಧಾರವಾದ ವೇದಗಳಾನ್ನೇ ಸಮುದ್ರದಲ್ಲಿ ಅಡಗಿಸುತ್ತೇನೆಂದು ನಿರ್ಧರಿಸಿ ನಾಲ್ಕು ವೇದಗಳೊಡನೆ ಸಮುದ್ರ ಪ್ರವೇಶಿಸಲು. ಮುರಾರಿಯಾದ ಶ್ರೀ ವಿಷ್ಣುವು ತಾನು ಮತ್ಸ್ಯಾವತಾರಿಯಾಗಿ ತಮನನ್ನು ವಧಿಸಿ ನಾಲ್ಕು ವೇದಗಳನ್ನು ಹಿಂದಕ್ಕೆ ತಂದನು. ಇಷ್ಟರ್ ಬಳಿಕ ಪಿಶಿತಾಶಿನಿಯು ತಾನು ಅದೇಷ್ಟೋ ಪ್ರದೇಶಗಳಾನ್ನು ಸುತ್ತಿ ಸುತ್ತಿ ಕುಮಾರಧಾರಾ ಪ್ರದೇಶಕ್ಕೆಬಂದು ಅಲ್ಲಿ ಸ್ನಾನಾದಿಗಳನ್ನು ಮಾಡುತ್ತಲೇ ತಮ್ಮ ಪೂರ್ವ ಜನ್ಮದ ಸ್ಮರಣೆ ಬಂದು ರಾಕ್ಷಸ ದೇಹವನ್ನು ತೊರೆದು ದಿವ್ಯ ದೇಹವನ್ನು ಹೊಂದಿದಳು. ಅಲ್ಲಿಂದ ಕ್ಷೇತ್ರದ ಸ್ವಾಮಿ ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಸೇವಿಸಿದ ಬಳಿಕ ಪುನಃ ತನ್ನ ಪತಿಯಾದ ಕಷ್ಯಪರಲ್ಲಿಗೆ ತೆರಳಿದಳು.

***
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನ ಪುತ್ರನಾದ ಸಾಂಬನು ತಾನು ಮುನಿಗಳ್ ಆಶ್ರಮಗಳಾಲ್ಲಿ ಸಂಚರಿಸುತ್ತಿದ್ದನು. ಅವನ ಅನುಪಮ ಸೌಂದರ್ಯವನ್ನು ನೋಡಿದ ಮುನಿಪತ್ನಿಯರು ತಾವು ಮನೋವಿಕಾರವನ್ನು ಹೊಂದಲು ಮುನಿಗಳು ಕುಪಿತರಾಗಿ “ಎಲೈ ದುರಾತ್ಮನೇ ಯಾವ ರೂಪಮದದಿಂದ ಆಶ್ರಮ ವಾಸಿಗಳ ಮೇಲೆ ಮನೋವಿಕಾರವನ್ನುಂಟು ಮಾಡಿದೆಯೋ ಆ ನಿನ್ನ ರೂಪವು ಕುಷ್ಟರೋಗದಿಂದ ಜಿಗುಪ್ಸಿತವಾಗಲಿ.” ಎಂದು ಶಾಪವನ್ನು ಕೋಟ್ತರು. ಆಗ ದುಃಖಿತನಾಇದ್ದ ಸಾಂಬನನ್ನು ಕಂಡ ನಾರದ ಮಹರ್ಷಿಗಳು “ಈ ಜಿಗುಪ್ಸಿತವಾದ ವ್ಯಾಧಿಯ ನಿವಾರಣೆಗಾಗಿ ನೀನು ಕೌಮಾರ ಕ್ಷೇತ್ರದಲ್ಲಿನ ಧಾರಾ ನದಿಯಲ್ಲಿ ಮಿಂದು ಮೂಲಮೃತ್ತಿಕೆ
Sri Kukke Subrahmanya Swami Temple 
ಯನ್ನು ಮೈಗೆ ಲೇಪಿಸಿಕೊಂಡು ಸುಬ್ರಹ್ಮಣ್ಯ ಸ್ವಾಮಿಯ ಸನ್ನ್ನಿಧಿಯ ಪರ್ಯಂತವಾಗಿ ಹೊರಳುತ್ತಾ ಹೋಗಿ ವಾಸುಕಿಯನ್ನು ದರ್ಶಿಸಿದರೆ ವ್ಯಾಧಿಯು ಗುಣಹೊಂದುವುದು” ಎಂದರು. ಸಾಂಬನು ಮಹರ್ಷಿಗಳ ಆಣಾತಿಯಂತ್ರೆಯೇ ನಡೆದು ದಿವ್ಯ ದೇಹಧಾರಿಯಾದನು.

***
ಪೂರ್ವ ಕಾಲದಲ್ಲಿ ದೇವತೆಗಳೂ, ಅಸುರರೂ ತಮ್ಮೊಳಗೆ ಯುದ್ಧ ಮಾಡಿಕೊಂಡಾಗ ದೇವತೆಗಳು ಸೋತುಹೋಗಿ ತಾವು ಸೂರ್ಯ ನಾರಾಯಣಾನನ ಶರಣುಹೋದರು. ಆಗ ಸೂರ್ಯನಾರಾಯಣ ಸ್ವಾಮಿಯು “ದೇವತೆಗಳಿರಾ, ನೀವು ಬೂಮಿಯನ್ನು ಬಿಟ್ಟು ಪರ್ವತದ ತುದಿಯಿಂದ ಯುದ್ಧವನ್ನು ಮಾಡಿರಿ. ಆಗ ನಿಮಗೆ ಖಚಿತವಾಗಿಯೂ ಜಯ ಲಭಿಸುತ್ತದೆ.” ಎನ್ನಲು ದೇವತೆಗಳೆಲ್ಲರೂ ತಾವು ಕುಮಾರ ಪರವತವನ್ನೇರಿ ಯುದ್ಧದಲ್ಲಿ ತೊಡಗಿದ್ದಲ್ಲದೆ ಅಸುರರ ಮೇಲೆ ಸತತ ಬಾಣ ಪ್ರಯೋಗಗಳನ್ನು ಮಾಡಿ ಅವರನ್ನು ದಶದಿಕ್ಕುಗಳಿಗೆ ಓಡುವಂತೆ ಮಾಡಿದರು. ದೇವತೆಗಳು ಜಯಶೀಲರಾದರು. ಅದಾಗಲು ದೇವತೆಗಳು ಪುನಃ ಸೂರ್ಯನಾರಾಯಣನನ್ನು ಸ್ತುತಿಸಿ “ಸೂರ್ಯನೇ, ನಿನ್ನ ಕಟಾಕ್ಷದಿಂದ ನಾವೆಲ್ಲ ಸರ್ವ ಭಯದಿಂದ ಮುಕ್ತರಾದೆವು. ” ಎನ್ನ್ಸ್ಲು ದೂರ್ಯ್ಸ್ದೇವರು ಹೀಗೆಂದನು -“ದೇವತೆಗಳಿಆ ರಹಸ್ಯವನ್ನು ಹೇಳುವೆನು ಕೇಳಿರಿ, ಈ ಗಿರಿಯು ಅಜೇಯವಾದುದು. ಇಲ್ಲಿ ನೀವೆಲ್ಲರೂ ಸುಖವಾಗಿ ವಾಸಮಾಡಿರಿ.” ಎನ್ನಲು ಸೂರ್ಯ ಭಗವಾನನ ಮಾತಿನಂತೆ ಅಂದಿನಿಂದಲೂ ಸರ್ವ ದೇವತೆಗಳೂ ಈ ಕುಮಾರ ಪರ್ವತದಲಿ ನೆಲೆಸಿರುವರು.

***
ಅತ್ಯಂತ ಪೂರವದಲ್ಲಿ ದ್ರಾವಿದ ದೇಶದಲ್ಲೊಬ್ಬನು ತನ್ನ ಗ್ರಾಮದ ಮನೆಯಲ್ಲಿ ವಾಸವಿದ್ದನು. ಆತನ ಮನೆಯಲ್ಲಿ ಒಂದು ಸರ್ಪವೂ ಸಹ ವಾಸಮಾಡುತ್ತಿದ್ದುದು ನೋಡಿ ಕೋಪದಿಂದದನ್ನು ಕೋಲಿನಿಂದ ಹೊಡೆದು ಕೊಂದನು. ಪಾಪದಿಂದ ವ್ಯಕ್ತಿಯು ಕುಷ್ಟರೋಗಪೀಡಿತನಾಗಲು, ಆರೋಗವನ್ನು ಯಾವೊಬ್ಬ ಪಂಡಿತನೂ, ವೈದ್ಯರೂ ಗುಣಪಡಿಸಲಾಗದೆ ಹೋದರು. ಅದಾಗ ವ್ಯಕ್ತಿಯು ತಾನು ಮಾಡಿದುದು ತಪ್ಪಾಯ್ತ್ಂದು ದೈನ್ಯದಿಂದ ಶ್ರೀ ಸುಬ್ರಹ್ಮಣ್ಯನನ್ನು ಮಲಗಿದ್ದಲ್ಲಿಂದಲೇ ಪ್ರಾರ್ಥಿಸುತ್ತಿರಲು ಒಂದು ದಿನ ಸ್ವಮಿಯು ಕನಸಿನಲ್ಲಿ ಕುಮಾರ ರೂಪವನ್ನು ಧರಿಸಿ ಬಂದುಸುಬ್ರಹ್ಮಣ್ಯಕ್ಕೆ ಬಂದು ದೇವರಿಗೆ ಒಂದಿಸು, ಆದೇವರೆದುರಿನ ತೀರ್ಥದಲ್ಲಿ ಸ್ನಾನ ಮಾಡಲಾಗಿ ನಿನ್ನ ವ್ಯಾಧಿಯು ಉಪಶಮನಗೊಳ್ಳುವುದು.” ಎಂದು ಆದೇಶಿಸಲು ವ್ಯಕ್ತಿಯು ತಾನು ಶ್ರೀ ಕ್ಷೇತ್ರದತ್ತ ಪಯಣ ಮಾಡಿದನು. ಕ್ಷೇತ್ರದ ದರ್ಶನ, ಸ್ವಾಮಿಯ ಸೇವೆ ಹಾಗೂ ಅಲ್ಲಿನ ತೀರ್ಥ್ದಲ್ಲಿ ಮಿಂದುದರ ಫಲವಾಗಿ ಅವನು ತನ್ನ ರೋಗದಿಂದ ಮುಕ್ತಿ ಪಡೆದುದಲ್ಲದೆ ದಿವ್ಯ ದೇಹಧಾರಿಯಾಗಿ ಬದಲಾದನು. ಮುಂದೆ ಸ್ವಾಮಿಗೆ ಉಚಿತ ಸೇವೆಗಳನ್ನು ಮಾಡಿಸಿ ಸಂತೃಪ್ತಿಯಿಂದ ತನ್ನ ಊರಿಗೆ ಮರಳಿ ಸುಖದಿಂದಿದ್ದನು.

***
ತೌಳವ ದೇಶದಲ್ಲಿನ ರಾಜಕುಮಾರಿಯೋರ್ವಳು ಪುತ್ರ ಸಂತಾನದ ಬಯಕೆಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸೇವೆಯನ್ನು ನಿತ್ಯವೂ ಭಕ್ತಿ ಶ್ರದ್ದೆಯಿಂದ ಮಾಡುತ್ತಿರಲು ಸ್ವಾಮಿಯು ಪ್ರಸನ್ನನಾಗಿ “ಒಂದು ವರ್ಷಗಳ ಕಾಲ ನನ್ನ ಸೇವೆಯನ್ನು ಮಾಡುತ್ತಿರು, ನಿನಗೆ ನೀತಿವಂತನಾದ ಮಗನನ್ನ ಕರುಣಿಸುವೆ.” ಎನ್ನಲು ರಾಜಕುಮಾರಿಯು ಅದರಂತೆಯೇ ವರ್ಷಾವಧಿಯ ವ್ರತವನ್ನು ಮಾಡಿ ಬಳಿಕ ಸುಂದರನೂ, ನೀತಿವಂತನೂ ಆದ ಪುತ್ರನನ್ನು ಪಡೆದು ಸುಖದ ಬಾಳ್ವೆ ನಡೆಸಿದಳು. ಅಲ್ಲದೆ ತನ್ನ ಕೋರಿಕೆಯನ್ನು ಸಲ್ಲಿಸಿಅ ಸ್ವಾಮಿಗೆ ತಾನು ಸಹ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿದಳು. ದೇವಾಲಯದ ಸುತ್ತಲೂ ಪ್ರಾಕಾರವನ್ನು ಮಾಡಿಸಿದಳು. ರಾಜಭಂಡಾರದಿಂದ ಹಣವನ್ನು ವ್ಯಯಿಸಿ ಅರ್ಚಕರಿಗೆ ವಾಸ ಮಾಡಲು ಮನೆಗಳಾನ್ನು ಕಟ್ಟಿಕೊಟ್ಟದ್ದಲ್ಲದೆ ದೇವಾಲಯ ಪ್ರಾಕಾರದಲ್ಲಿ ಪೂಜೆಗೆ ಅಗತ್ಯವಾದ ಅಡಿಕೆ, ಕೇದಿಗೆ, ಹಣ್ಣುಗಳೇ ಮೊದಲಾದ ಬೇಳೆಗಳನ್ನು ಬೆಳೆಸುವುವ ತೋಟಗಳಾನ್ನು ನಿರ್ಮಾಣ ಮಾಡಿದಳು. ಹಾಗೆಯೇ ಆಕೆಯ ಪುತ್ರನೂ ಸಹ ತಾನು ಸ್ವಾಮಿಯ ಸೇವೆಗೈದು ಅಂತ್ಯಕಾಲದಲ್ಲಿ ಈರ್ವರೂ ಸುಖ ಸಂಪದಗಳೊಂದಿಗೆ ಸ್ವರ್ಗವಾಸಿಗಳಾದರು. 

No comments:

Post a Comment