Tuesday, September 30, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 33

ಕಾಣಿಪಾಕಮ್ (Kanipakam)

ಆಂದ್ರಪ್ರದೇಶದ ಚಿತ್ತೂರು ಜಿಲ್ಲಾ ಕೇಂದ್ರದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಶ್ರೀ ವರಸಿದ್ದಿ ವಿನಾಯಕ ನೆಲೆನಿಂತ ಕ್ಷೇತ್ರವೇ ಕಾಣಿಪಾಕಮ್. ಬಹುಧಾ ನದಿಯ ತೀರದಲ್ಲಿ ಇರುವ ಈ ಸಣ್ಣ ಗ್ರಾಮದಲಿ ಶ್ರೀ ವಿನಾಯಕನ ಸ್ವಯಂಭೂ ಮೂರ್ತಿಯಿದ್ದು ವಿನಾಯಕ ದೇಶದ ನಾನಾ ಮೂಲೆಗಳಿಂದ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದಾನೆ. ಈ ಸ್ವಯಂಭೂ ವಿನಾಯಕ ಸ್ವಾಮಿಯು ಶತಮಾನಗಳಿಂದಲೂ ತನ್ನ ಭಕ್ತರನ್ನು ಆರೋಗ್ಯಾದಿ ಐಶ್ವರ್ಯವನ್ನು ನ್ಡಿ ಕಾಪಾಡುತ್ತಾ ಬರುತ್ತಿದ್ದಾನೆ.
Svayambhoo Sri Varasiddi Vinayaka Swami


***
Sri Vinayaka Swami temple, Kanipakam
ನೂರಾರು ವರ್ಷಗಳ ಹಿಂದೆ ಮೂಗ, ಕಿವುಡ ಹಾಗೂ ಕುರುಡರಾಗಿದ್ದ ಅಂಗವಿಕಲ ಸೋದರರು ಈ ವಿಹಾರಪುರ ಪ್ರದೇಶದಲ್ಲಿ ನೆಲೆಸಿದ್ದರು. ಇವರಿಗೆ ಸೇರಿದ್ದ ಚಿಕ್ಕ ಜಮೀನಿನಲ್ಲಿ ವ್ಯವಸಾಯವನ್ನು ಮಾಡುತ್ತಿದ್ದ ಇವರಿಗೆ ಅದೊಂದು ದಿನ ತೋಟಕ್ಕೆ ನೀರುಣಿಸುವ ಬಾವಿಯು ಬರಿದಾಯಿತು. ಅದಾಗ ಅವರಲ್ಲಿನ ಓರ್ವ ಸೋದರನು ತಾನು ಬಾವಿಗಿಳಿದು ಹರಿತವಾದ ಹಾರೆಯೊಂದರಿಂದ ಬಾವಿಯನ್ನು ಅಗೆಯಲು ತೊಡಗಿದನು.ಅದಾಗ ಸ್ವಲ್ಪ ಸಮಯದಲ್ಲಿ ಹಾರೆಯು ಬಂಡೆಯೊಂದಕ್ಕೆ ತಗುಲಿತು. ತಕ್ಷಣಾವೇ ಆ ಬಂಡೆಯಿಂದ ರಕ್ತವು ಚಿಮ್ಮಿತು, ಬಾವಿಯ ನೀರೆಲ್ಲಾ ರಕ್ತಮಯವಾಗಿ ಹೋಯಿತು. ಇಷ್ಟಾದ ಕೆಲ ಸಮಯದಲ್ಲೇ ಆ ಮೂವರು ಅಂಗವೈಕಲ್ಯ ಹೊಂದಿದ ಸಹೋದರರ ವೈಕಲ್ಯವು ನೀಗಿಹೋಯಿತು. ಆ ಸುದ್ದಿ ಊರಿಗೆಲ್ಲಾ ಹರಡಿ ಊರ ಜನರೆಲ್ಲರೂ ಬಾವಿಯ ಬಳಿ ಸಾರಿದರು. ಬಾವಿಯನ್ನು ಅಗೆಯಲು ತೊಡಗಿದರು. ಹಾಗೆ ಅಗೆಯುವಾಗ ಶ್ರೀ ವಿನಾಯಕ ಸ್ವಾಮಿಯ ಶಿರೋಭಾಗವು ಹೊರಬಂದಿತು. ಬಳಿಕ ಅಗೆತದ ಕಾರ್ಯ ಪೂರ್ಣವಾದರೂ ಸ್ವಾಮಿಯು ಪೂರ್ಣ್ ಗೋಚರವಾಗಲಿಲ್ಲ.
ಅದು ಶ್ರೀ ವಿನಾಯಕನ ಸ್ವಯಂಭೂ ಮೂರ್ತಿ ಎನ್ನುವುದು ತಿಳಿಯಿತು. ಊರ ಜನರೆಲ್ಲರೂ ಹರ್ಷ ಚಿತ್ತರಾದರು.  ಎಲ್ಲರೂ ಸ್ವಾಮಿಗಾಗಿ ಎಳನೀರನ್ನು ಅರ್ಪಿಸಿದರು. ಬಳಿಕ ಸಣ್ಣ ದೇವಾಲಯವು ನಿರಾಣ ಮಾಡಲಾಯಿತು. ಕಾಲ ಕ್ರಮೇಣ ಆ ದೇವಾಲಯವು ದೊಡ್ದ ದಾಗಿ ಇಂದಿನ ಸ್ವರೂಪ ತಾಳಿದೆ. ಅಂದು ಆ ಊರ ಜನರಿಗೆ ಗಣಪತಿಯ ಮೂರ್ತಿ ದೊರೆತ ಬಾವಿಯು ಇಂದಿಗೂ ಸಹ ನೋಡಬಹುದಾಗಿರುತ್ತದೆ.

2 comments:

  1. ಉತ್ತಮ ಮಾಹಿತಿ... ಹೇಳಿದ ಪರಿ ಚಂದ.

    ReplyDelete