Saturday, October 04, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 34

ಪುಷ್ಕರ (Pushkar)
ರಾಜಾಸ್ಥಾನದಲ್ಲಿರುವ ಪುಷ್ಕರ ಕ್ಷೇತ್ರವು ಭಾರತೀಯ ಹಿಂದೂಗಳ್ ಹಾಗೂ ಜೈನ ಧರ್ಮೀಯರ ಪವಿತ್ರ ಕ್ಷೇತ್ರವೆನಿಸಿದೆ. ಹಿಂದೂಗಳ ಪಾಲಿನ ಸೃಷ್ಟಿಕರ್ತ ದೇವರಾದ ಬ್ರಹ್ಮ ದೇವರ ದೇವಾಲಯವಿರುವ ಅತ್ಯಪರೂಪದ ಕ್ಷೇತ್ರ ಪುಷ್ಕರ. ಇಲ್ಲಿರುವ ಬ್ರಹ್ಮ ದೇವಾಲಯ ಹಾಗೂ ಕಲ್ಯಾಣಿ (ಕೆರೆ) ಅದರದೇ ಆದ ಪೌರಾಣಿಕ ಮಹತ್ವವನು ಹೊಂದಿವೆ.  
***

Main God Sri Brahmadeva, Pushkar, Rajasthan

ಅತ್ಯಂತ ಪೂರ್ವ ಕಾಲದಲ್ಲಿ ಬ್ರಹ್ಮ ದೇವನು ತಾನೊಮ್ಮೆ ವಜ್ರನಾಭನೆನ್ನುವ ದೈತ್ಯನೋರ್ವನನ್ನು ಸಂಧಿಸಬೇಕಾಯಿತು. ಹಾಗೆಯೇ ಬ್ರಹ್ಮನು ವಜ್ರನಾಭನನ್ನು ತನ್ನ ಆಯುಧವಾದ ಕಮಲದಿಂದಲೇ ಸಂಹಾರ ಮಾಡಿದನು. ಆ ಸಮಯದಲ್ಲಿ ಬ್ರಹ್ಮನ ಕೈನಲ್ಲಿದ್ದ ಕಮಲ ಪುಷ್ಫದ ದಳಗಳು ಮೂರು ಭಾಗವಾಗಿ ಭೂಲೋಕದಲ್ಲಿ ಬಿದ್ದವು. ಆ ರೀತಿಯಾಗಿ ಬಿದ್ದಂತಹಾ ಪ್ರದೇಶಗಳಲ್ಲಿ ಒಂದೊಂದು ಕೆರೆಗಳು ನಿರ್ಮಾಣವಾಗಿತ್ತು. ಬ್ರಹ್ಮನ ಕರ(ಕೈ) ದಲ್ಲಿದ್ದ ಕಮಲ (ಪುಷ್ಪ) ಬಿದ್ದ ಸ್ಥಳಗಳು “ಪುಷ್ಕರ” ಎನಿಸಿಕೊಂಡಿತು. ಅವುಗಳಲ್ಲಿ ಒಂದು “ಆದಿ ಪುಷ್ಕರ” (ರಾಜಾಸ್ಥಾನ)ವಾದರೆ ಮತ್ತೆರಡು ಕ್ರಮವಾಗಿ “ಮಧ್ಯ ಪುಷ್ಕರ” ಹಾಗೂ “ಕನಿಷ್ಟ ಪುಷ್ಕರ” ಎನಿಸಿತು.
Sri Brahma Temple, Pushkara
ಇದಾಗಿ ಯುಗಗಳು ಸಂದ ಬಳಿಕ ಒಮ್ಮೆ ಬ್ರಹ್ಮದೇವರು ಆದಿ ಪುಷ್ಕರದಲ್ಲಿ ತಾನು ಯಜ್ಞವೊಂದನ್ನು ಮಾಡಲು ಉದ್ಯುಕ್ತನಾದನು. ಅದಾಗ ಆತನ ಧರ್ಮಪತ್ನಿಯಾದ ಶ್ರೀ ಸರಸ್ವತಿಯು ತಾನು ಇನ್ನಿಬ್ಬರು ದೇವತೆಗಳಾದ ಲಕ್ಷ್ಮಿ ದೇವಿ ಹಾಗೂ ಪಾರ್ವತಿಗೆ ಕಾಯುತ್ತಾ ಕುಳಿತಿರಲು ಬ್ರಹ್ಮನು ತನ್ನ ಯಜ್ಞವನ್ನು ಪೂರ್ಣಗೊಳಿಸುವ ಸಲುವಾಗಿ ಸರಸ್ವತಿ ದೇವಿಯ ಆಗಮನಕ್ಕಾಗಿ ಕಾದನು, ಸರಸ್ವತಿ ದೇವಿಯ ಆಗಮನವಾಗದೇ ಹೋಗಲು ಅಲ್ಲೇ ಇದ್ದ ಗುರ್ಜರ ಸಮುದಾಯದ ಗಾಯತ್ರಿ ಎನ್ನುವ ಕನ್ಯೆಯನ್ನು ವಿವಾಹವಾಗಿ ಯಜ್ಞದ ಪೂರ್ಣಾಹುತಿಯನ್ನು ನೀಡಿ ಅಮೃತ ಕುಂಭವನ್ನು ಕರದಲ್ಲಿ ಧರಿಸಿದನು.
Pushkar Lke
ಅದೇ ಸಮಯದಲ್ಲಿ ಶ್ರೀ ಲಕ್ಷ್ಮಿ, ಪಾರ್ವತಿ ಸಹಿತವಾಗಿ ಅಲ್ಲಿಗೆ ಆಗಮಿಸಿದ ಸರಸ್ವತಿ ದೇವಿಗೆ ಬ್ರಹ್ಮನ ಪಕ್ಕದಲ್ಲಿ ಕುಳಿತ ಗಾಯಿತ್ರಿ ದೇವಿಯನ್ನು ಕಂಡು ಕೋಪ ಉಕ್ಕಿತು. ಬ್ರಹ್ಮ ದೇವನು ತನ್ನನ್ನು ಹೊರಗಿಟ್ಟು ತಾನು ಯಜ್ಞ ಕಾರ್ಯವನ್ನು ಪೂರ್ಣಗೊಳಿಸಿದರೆನ್ನುವ ಕಾರಣದಿಂದ ಬ್ರಹ್ಮನಿಗೆ ಭೂಲೋಕದಲ್ಲೆಲ್ಲೂ ಪೂಜೆ ದೊರಯದೇ ಹೋಗಲಿ ಎಂದೂ ಇಂದ್ರಾದಿ ದೇವತೆಗಳಿಗೆ ಅಸುರ ಕುಲದವರಿಂದ ಸುಲಭವಾಗಿ ಸೋಲಾಗಲಿ ಎಂದೂ, ಶ್ರೀ ವಿಷ್ಣು ಭಗವಾನನು ತಾನು ಮಾನವನಾಗಿ ಜನ್ಮಿಸಿ ಹೆಂಡತಿ/ಧರ್ಮಪತ್ನಿಯನ್ನು ತ್ಯಜಿಸಿ ಭೂಲೋಕದಲ್ಲಿ ಬಾಳುವಂತಾಗಲೆಂದೂ ಶಾಪವನ್ನು ನೀಡುತ್ತಾಳೆ. ಆದರೆ ಅಂತ್ಯದಲ್ಲಿ ಬ್ರಹ್ಮನ ಕೋರಿಕೆಗೆ ಒಪ್ಪಿದ ಮಾತೆ ಸರಸ್ವತಿಯು ಇಡಿ ಲೋಕದಲ್ಲಿ ಪುಷ್ಕರ ಕ್ಷೇತ್ರದಲಿ ಮಾತ್ರವೇ ಬ್ರಹ್ಮ ದೇವರಿಗೆ ಪೂಜೆ ಸಲ್ಲಬೇಕೆಂಬ ಶರತ್ತಿಗೆ ಬದ್ದಳಾಗುತ್ತಾಳೆ. 
ಇದೇ ಕಾರಣದಿಂದ ಇಂದಿಗೂ ಶ್ರೀ ಕ್ಷೇತ್ರ ಪುಷ್ಕರವನ್ನು ಬಿಟ್ಟು ಬೇರೆಲ್ಲಿಯೂ ಬ್ರಹ್ಮ ದೇವರ ದೇವಾಲಯವನ್ನು ನಾವು ಕಾಣಾಲಾರೆವು. ಮಾತಾ ಸರಸ್ವತಿಯ ಶಾಪದ ಪರಿಣಾಮವಾಗಿ ಶ್ರೀ ಮಹಾವಿಷ್ಣುವು ತಾನು ಶ್ರೀ ರಾಮನ ಅವತಾರವನ್ನೆತ್ತಿ ಮನುಷ್ಯ ರೂಪದಲ್ಲಿ ಭೂಮಂಡಲಕ್ಕೆ ಆಗಮಿಸಿ ತನ್ನ ಪತ್ನಿಯಾದ ಸೀತೆಯೌ ಅರಣ್ಯದಲ್ಲಿ ಕಳೆದು ಹೋಗಳಾಗಿ ಅತ್ಯಂತ ವಿಅಹ ವೇದನೆಯನ್ನು ತಾಳುವಂತಾಗುತ್ತದೆ. ಹಾಗೆಯೇ ಇಂದ್ರಾದಿ ದೇವತೆಗಳು ತಾವು ಆಗಾಗ ಅಸುರರೊಡನೆ ನಡೆಯುವ ಯುದ್ದಗಳಲ್ಲಿ ಸುಲಭದಲ್ಲಿ ಸೋಲಲ್ಪಟ್ಟು ಸಿಂಹಾಸನ ವಂಚಿತರಾಗುತ್ತಾರೆ.

No comments:

Post a Comment