Saturday, October 11, 2014

ಕೈಲಾಶ್ ಸತ್ಯಾರ್ಥಿ : ಮಾನವತೆಯ ಕೈಲಾಸ ಪರ್ವತ


 ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ ಆಗುವವರೆಗೂ ನಮಗೆ ಯಾರೊಬ್ಬರಿಗೂ ಅವರ ಬಗೆಗೆ ತಿಳಿದಿರಲಿಲ್ಲ ಎನ್ನುವುದು ನಮ್ಮ ದೇಶದ ಸಾಧಕನೋರ್ವನ ಬಗೆಗೆ ನಮಗಿರುವ ಉದಾಸೀನತೆಗೆ ಸಾಕ್ಷಿಯಲ್ಲವೆ? ಭಾರತದ ಸಾಮಾನ್ಯ ಜನರಿಗಾಗಲೀ, ಭಾರತದ ಘನ ಸರ್ಕಾರಗಳಿಗಾಗಲೀ, ಸಾವಿರಾರು ಸಂಖ್ಯೆಯಲ್ಲಿರುವ ಸಂಘ ಸಂಸ್ಥೆಗಳಲ್ಲಿ ಯಾರೊಬ್ಬರಿಗೂ ಇವರ ಬಗೆಗೆ, ಇವರ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗೆಗೆ ಯಾವೊಂದು ವಿಚಾರವೂ ತಿಳಿದಿರಲಿಲ್ಲ! “ಡರ್ಟಿ ಪಿಕ್ಚರ್” ನಂತಹಾ ಚಲನಚಿತ್ರಗಳಲ್ಲಿ ನಟಿಸಿದ ನಟಿಮಣಿಯರಿಗೆಲ್ಲ ಭಾರತದ ಉನ್ನತ ನಾಗರಿಕ ಗೌರವ “ಪದ್ಮಶ್ರೀ” ಪ್ಯ್ರಸ್ಕಾರವು ಸಂದಿರುವಾಗ ನಮ್ಮ ನಡುವೆಯೇ ಇದ್ದು ಸಾವಿರಾರು ಬಡ ಮಕ್ಕಳ ಉದ್ದಾರಕ್ಕಾಗಿ ಟೊಂಕಕಟ್ಟಿದ ಕೈಲಾಶ್ ರಂತಹವರನ್ನು ನಮ್ಮ ಸರ್ಕಾರಗಳು ಗುರುತಿಸದೇ ಹೋದುದು ತೀರಾ ಖೇದಕರ ಸಂಗತಿಯಲ್ಲವೆ? ಇನ್ನಾದರೂ ನಮ್ಮ ದೇಶದ ಸರ್ಕಾರಗಳು, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಿದೆ. ಹಾಗಾದಾಗ ಮಾತ್ರವೇ ನಮ್ಮ ಸಮಾಜಕ್ಕೂ, ಜನತೆಗೂ ಮಾನವತೆಯ ಮೌಲ್ಯಗಳ ಅರಿವಿದೆ ಎಂದು ಇತರರಿಗೆ ತಿಳಿಸಿದಂತಾಗುತ್ತದೆ.


ಆ ಹುಡುಗನು ತಾನು ನಿತ್ಯವೂ ಶಾಲೆಗೆ ನಡೆದು ಹೋಗುತ್ತಿದ್ದಾಗ ತನ್ನದೇ ಓರಗೆಯ ಹುಡುಗನೋರ್ವನು ತನ್ನ ತಂದೆಯೊಡನೆ ಕುಳಿತು ಬೂಟು ರಿಪೇರಿ ಮಡುತ್ತಿದ್ದುದನ್ನು ಕಾಣುತ್ತಿದ್ದನು. ಅದಾಗೆಲ್ಲಾ ಈ ಹುಡುಗನ ಮನಸ್ಸಿನಲ್ಲಿ ‘ನಾನು ಉತ್ಸಾಹದಿಂದಲೂ ಸಂತೋಷದಿಂದಲೂ ಶಾಲೆಗೆ ಹೋಗುತ್ತಿದ್ದರೆ ಆ ಹುಡುಗ ಮಾತ್ರ ತನ್ನ ತಂದೆಯೊಂದಿಗೆ ಕುಳಿತು ಬೂಟು ಹೊಲಿಯುತ್ತಿದ್ದಾನೆ, ಅದೇಕೆ ಹೀಗೆ?’ಎನ್ನುವ ಆಲೋಚನೆ ಹುಟ್ಟುತ್ತಿತ್ತು.
ಅದೊಮ್ಮೆ ಅದೇ ಪ್ರಶ್ನೆಯನ್ನು ತನ್ನ ಶಾಲಾ ಉಪಾದ್ಯಾಯರ ಬಳಿ ಕೇಳಲಾಗಿ “ ಅವರ ಬಳಿ ಹಣವಿಲ್ಲ, ಅವರು ಬಡವರು. ವಿದ್ಯಾಭ್ಯಾಸ ಪಡೆದುಕೊಳ್ಳಲಿಕ್ಕೆ ಸಾಕಷ್ಟು ಧನಬಲವಿಲ್ಲದವರು.” ಎನ್ನುವ ಉತ್ತರ ದೊರಕಿತು.
ಆ ಉತ್ತರದಿಂದ ತೃಪ್ತನಾಗದ ಆ ಬಾಲಕ ಮತ್ತೊಮ್ಮೆ ಬೂಟು ಹೊಲಿಯುತ್ತಿದ್ದ ಹುಡುಗನ ತಂದೆಯನ್ನೇ ನೇರವಾಗಿ ಪ್ರಶ್ನಿಸಿದ “ನೀವೇಕೆ ನಿಮ್ಮ ಮಗನನ್ನು ಶಾಲೆಗೆ ಸೇರಿಸಿಲ್ಲ, ಬೂಟು ಹೊಲಿಯಲು ಇರಿಸಿಕೊಂಡಿದ್ದೀರಿ?” ಅದಾಗ ಒಂದು ಕ್ಷಣ ಬಾಲಕನ ಮುಖವನ್ನೇ ದೃಷ್ಟಿಸಿ ನೋಡಿದ ಹುಡುಗನ ತಂದೆ “ನಾವು ಹುಟ್ಟಿದ್ದೇ ದುಡಿಯಲಿಕ್ಕಾಗಿ, ಶಾಲೆ ಕಲಿಯಲಿಕ್ಕಲ್ಲ.” ಎಂದು ಬಿಟ್ಟರು.
ಆ ಬಡ ತಂದೆ ಅಂದು ಆಡಿದ ಆ ಮಾತು ಬಾಲಕನ ಎದೆಯಲ್ಲಿ ನಾಟಿ ಕುಳಿತಿತು. ಮುಂದೆ ತಾನು ಪಡೆದ ಉನ್ನತ ತಾಂತ್ರಿಕ ಶಿಕ್ಷಣವನ್ನೂ, ಅದರಿಂದ ಲಭಿಸಬಹುದಾಗಿದ್ದ ದೊಡ್ಡ ಸಂಬಳದ ವೃತ್ತಿಯನ್ನೂ ತೊರೆದು ದೇಶದಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಹಾಗೂ ಬಡ ಮಕ್ಕಳ ಶಿಕ್ಷಣ ಹಕ್ಕಿಗಾಗಿ ಹೋರಾಟ ನಡೆಸುವುದಕ್ಕೆ ಅವನನ್ನು ಪ್ರೇರೇಪಣೆಗೊಳಿಸಿತು. ತನ್ನ ಉದ್ದೇಶ ಸಾಧನೆಗಾಗಿ “ಬಚ್ ಪನ್ ಬಚಾವೋ” ಎನ್ನುವ ಆಂದೋಲನವನ್ನೇ ಹುಟ್ಟುಹಾಕಿ ದೇಶ ವಿದೆಶಗಳಾಲ್ಲಿ ಪ್ರಚುರಪಡಿಸಿದುದಲ್ಲದೆ ಬಾಲಕಾರ್ಮಿಕರು, ಹಾಗೂ ಶಿಕ್ಷಣ ಹಕ್ಕುಗಳ ಹೋರಾಟಗಾರನಾಗಿ ಬೆಳೆದು ಬಂದ ಆ ಬಾಲಕನೇ ಇಂದು ಭಾರತಕ್ಕೆ ಎರಡನೆ ನೋಬೆಲ್ ಶಾಂತಿ ಪ್ರಶಸ್ತಿ ತಂದುಕೊಟ್ತ ಕೈಲಾಶ್ ಸತ್ಯಾರ್ಥಿ!
ಕೈಲಾಷ್ ಸತ್ಯಾರ್ಥಿ
Kailash Sathyarthi (Nobel Peace Prize Winner - 2014)

ಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ ಆಗುವವರೆಗೂ ನಮಗೆ ಯಾರೊಬ್ಬರಿಗೂ ಅವರ ಬಗೆಗೆ ತಿಳಿದಿರಲಿಲ್ಲ ಎನ್ನುವುದು ನಮ್ಮ ದೇಶದ ಸಾಧಕನೋರ್ವನ ಬಗೆಗೆ ನಮಗಿರುವ ಉದಾಸೀನತೆಗೆ ಸಾಕ್ಷಿಯಲ್ಲವೆ? ಇದಕ್ಕೆಂದೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಓರ್ವರು “ವಿಪರ್ಯಾಸವೆಂದರೆ, ಇತರೆ ಭಾರತೀಯರು ತಮ್ಮ ಸಾಧನೆಯನ್ನು ಗುರುತಿಸಲು ಕೈಲಾಶ್ ನೋಬೆಲ್ ಗೆಲ್ಲಬೇಕಾಯಿತು.” ಎಂದು ಹೇಳಿರುವುದು. ಭಾರತದ ಸಾಮಾನ್ಯ ಜನರಿಗಾಗಲೀ, ಭಾರತದ ಘನ ಸರ್ಕಾರಗಳಿಗಾಗಲೀ, ಸಾವಿರಾರು ಸಂಖ್ಯೆಯಲ್ಲಿರುವ ಸಂಘ ಸಂಸ್ಥೆಗಳಲ್ಲಿ ಯಾರೊಬ್ಬರಿಗೂ ಇವರ ಬಗೆಗೆ, ಇವರ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗೆಗೆ ಯಾವೊಂದು ವಿಚಾರವೂ ತಿಳಿದಿರಲಿಲ್ಲ! “ಡರ್ಟಿ ಪಿಕ್ಚರ್” ನಂತಹಾ ಚಲನಚಿತ್ರಗಳಲ್ಲಿ ನಟಿಸಿದ ನಟಿಮಣಿಯರಿಗೆಲ್ಲ ಭಾರತದ ಉನ್ನತ ನಾಗರಿಕ ಗೌರವ “ಪದ್ಮಶ್ರೀ” ಪ್ಯ್ರಸ್ಕಾರವು ಸಂದಿರುವಾಗ ನಮ್ಮ ನಡುವೆಯೇ ಇದ್ದು ಸಾವಿರಾರು ಬಡ ಮಕ್ಕಳ ಉದ್ದಾರಕ್ಕಾಗಿ ಟೊಂಕಕಟ್ಟಿದ ಕೈಲಾಶ್ ರಂತಹವರನ್ನು ನಮ್ಮ ಸರ್ಕಾರಗಳು ಗುರುತಿಸದೇ ಹೋದುದು ತೀರಾ ಖೇದಕರ ಸಂಗತಿಯಲ್ಲವೆ? ಅಮೇರಿಕಾ, ಜರ್ಮನಿ, ಸ್ಪೇನ್ ನಂತಹಾ ಪಾಶ್ಚಾತ್ಯ ದೇಶಗಳು ಸತ್ಯಾರ್ಥಿಯವರ ಸಾಮಾಜಿಕ ಕಾರ್ಯಗಳಿಗೆ ಮನ್ನಣೆ ಗೌರವಗಳನ್ನು ಸಾಲು ಸಾಲಾಗಿ ನೀಡಿರುವಾಗ ನಮ್ಮ ದೇಶದ ಯಾರೊಬ್ಬರಿಗೂ ಇವರ ಬಗೆಗೆ ಕನಿಷ್ಟ ತಿಳುವಳಿಕೆಯೂ ಇಲವಾದದ್ದು ನಿಜಕ್ಕೂ ತಲೆತಗ್ಗಿಸಬೇಕಾದ ಸಂಗತಿ.
ಇರಲಿ ಬಿಡಿ ಭಾರತಕ್ಕೆ 2 ನೇ ನೋಬೆಲ್ ಶಾಂತಿ ಪ್ರಶಸ್ತಿ (ಮೊದಲನೇ ನೋಬೆಲ್ ಶಾಂತಿ ಪುರಕಾರ ಭಾರತಕ್ಕೆ ಸಂದದ್ದು 1979 ರಲ್ಲಿ ಅಂದು ಭಾರತ ಪ್ರಜೆಯಾಗಿದ್ದ ಮದರ್ ತೆರೇಸಾರವರು ಆ ಗೌರವಕ್ಕೆ ಭಾಜನರಾಗಿದ್ದರು. ಅವರು ಭಾರತೀಯ ಪೌರತ್ವವನ್ನು ಹೊಂದಿದ್ದರೂ ಅವರ ಜನ್ಮಸ್ಥಳ ಅಲ್ಬೇನಿಯಾ ದೆಶವಾಗಿತ್ತು. ಹೀಗಾಗಿ ಭಾರತದಲ್ಲೇ ಜನಿಸಿ ನೋಬೆಲ್ ಶಾಂತಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪ್ರಥಮ ವ್ಯಕ್ತಿ ಶ್ರೀ ಕೈಲಾಶ್ ಸತ್ಯಾರ್ಥಿಯವರಾಗಿದ್ದಾರೆ.) ತಂದುಕೊಟ್ಟ ಶ್ರೀ ಸತ್ಯಾರ್ಥಿಗಳ ಬಗೆಗೆ ಈಗಲಾದರೂ ಕೆಲ ವಿಚಾರಗಳನ್ನು ತಿಳಿದುಕೊಳ್ಳೋಣ. ಕೈಲಾಶ್ ಹುಟ್ಟಿದ್ದು ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ. ಜನವರಿ 11, 1954 ರಲ್ಲಿ ಜನಿಸಿದ ಕೈಲಾಶ್ ವಿದಿಶಾದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ, ಹಾಗೂ ಹೈ ವೋಲ್ಟೇಜ್ ಇಂಜಿನಿಯರಿಂಗ್ ನಲ್ಲಿ ಪಿಜಿ ಡಿಪ್ಲೋಮಾ. ಪೂರೈಸಿದ  ಸತ್ಯಾರ್ಥಿಯವರು ಕೆಲ ಸಮಯಗಳ ಕಾಲ ಭೋಪಾಲ್ ನಲ್ಲಿ ಶಿಕ್ಷಕರಾಗಿ ವೃತ್ತಿ ಮಾಡಿಕೊಂಡಿದ್ದು ನಂತರ ಮಕ್ಕಳ ಮೇಲಿನ ಮಮಕಾರದಿಂದಾಗಿ ತಮ್ಮ 26 ನೇ ವರ್ಷ ವಯಸ್ಸಿನಲ್ಲಿ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಧುಮುಕಿದರು.
1983 ರಲ್ಲಿ ತಮ್ಮ ಮಹತ್ವಪೂರ್ಣ ಯೋಜನೆಯಾದ “ಬಚ್ ಪನ್ ಬಚಾವೋ” ಆಂದೋಲನವನ್ನು ಹುಟ್ಟು ಹಾಕಿದ ಸತ್ಯಾರ್ಥಿಯವರು ಇದುವರೆವಿಗೂ ಸರಿ ಸುಮಾರು 80 ಸಾವಿರದಷ್ಟು ಬಾಲಕರನ್ನು ಜೀತ ವಿಮುಕ್ತಗೊಳಿಸಿದ್ದಾರೆ. ತಾವು ತಮ್ಮ ಸಹಚರರ ನೆರವಿನೊಂದಿಗೆ ದೇಶದಲ್ಲಿನ ನೂರಾರು ಕಾರ್ಖಾನೆಗಳು, ಗೋದಾಮುಗಳ ಮೇಲೆ ಧಾಳಿ ನಡೆಸಿ ಅಲ್ಲಿದ್ದ ಸಾವಿರಾರು ಬಾಲಕ/ಬಾಲಕಿಯರನ್ನು ರಕ್ಶಿಸಿದ್ದಾರೆ.  ಅವರೆಲ್ಲರೂ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತೆ ಮಾಡಿದ್ದಾರೆ.  
ಹೀಗೆ ತಾವು ಬಾಲಕಾರ್ಮಿಕ ಪದ್ದತಿ, ಮಕ್ಕಳ ಹಕ್ಕುಗಳ ಪರವಾಗಿ ಹೋರಾಟ ನಡೆಸುವ ಸಮಯದಲ್ಲಿ ಪ್ರಾರಂಭದ ವರ್ಷಗಳಾಲ್ಲಿ ಕೈಲಾಶ್ ಸತ್ಯಾರ್ಥಿಯವರು ಸ್ವತಃ ಕಾರ್ಖಾನೆಗಳಿಗೆ ಧಾಳಿ ನಡೆಸಿ ಅಲ್ಲಿದ್ದ ಮಕ್ಕಳನ್ನು ರಕ್ಷಿಸಿದ್ದು ಇದೆ. ಅಂತಹಾ ಸಮಯದಲಿ ಅನೇಕ ವೇಳೆ ಬೃಹತ್ ಕೈಗಾರಿಕಾ ಮಾಲೀಕರಿಂದ ಜೀವಬೆದರಿಕೆಗಳನ್ನು ಎದುರಿಸಬೇಕಾಗುತ್ತಿತ್ತು. ಅಲ್ಲದೆ ಸಾಕಷ್ಟು ಬಾರಿ ಗೂಂಡಾಗಳ್ನ್ನು ಬಿಟ್ಟು ಹೊಡೆಸಲಾಗುತ್ತಿತ್ತು. ಕಾರ್ಖಾನೆ ಮಾಲೀಕರು, ಪೋಲೀಸರುಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತಿತ್ತು. ಅದೊಮ್ಮೆ ಸರ್ಕಸ್ ಸಂಸ್ಥೆಯೊಂದರ ವಿರುದ್ದ ಕಾರ್ಯಾಚರಣೆಗಿಳಿದ ಸಮಯದಲ್ಲಿ ಸತ್ಯಾರ್ಥಿ ಹಾಗೂ ಅವರ ಇನ್ನೋರ್ವ ಸಹಚರರಿಗೆ ಸರ್ಕಸ್ ಸಂಸ್ಥೆಯ ಮಾಲೀಕರು ತೀವ್ರವಾಗಿ ಥಳಿಸಿ ಗಾಯಗೊಳಿಸಿದ್ದರು! ಇದುವರೆವಿಗೂ “ಬಚ್ ಪನ್ ಬಚಾವೋ” ಆಂದೋಲನದ ಇಬ್ಬರು ಕಾರ್ಯಕರ್ತರು ಹತ್ಯೆ ಮಾಡಲ್ಪಟ್ಟಿದ್ದಾರೆ. ಓರವ ಕಾರ್ಯಕರ್ತರು ಗುಂಡೇಟಿನಿಂದ ಸತ್ತಿದ್ದರೆ ಇನ್ನೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾಯಿಸಲಾಗಿದೆ! ಇಷ್ಟೆಲ್ಲಾ ಆದರೂ ಕೈಲಾಶ್ ಮಾತ್ರ ತಾವು ಇಟ್ಟ ಹೆಜ್ಜೆಯನ್ನು ಹಿಂದೆಗೆಯದೆ ನಿರಂತರ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ.
ಇಷ್ಟೇ ಅಲ್ಲದೆ ತಾವು ಕಾರ್ಯಾಚರಣೆ ಮಾಡಿ ರಕ್ಷಿಸಿದ ಮಕ್ಕಳಲ್ಲಿ ಧೈರ್ಯ, ವಿಶ್ವಾಸವನ್ನು ತುಂಬಿ ಅವರನ್ನು ಸ್ವಾವಲಂಬನೆಯ ಬದುಕಿಗೆ ಸನ್ನದ್ದಗೊಳಿಸುವ ಕಲೆಯು ಸತ್ಯಾರ್ಥಿಯವರಿಗೆ ಕರಗತವಾಗಿತ್ತು. ಕೆಲವೊಮ್ಮೆ ಜೀತವಿಮುಕ್ತರಾದ ಮಕ್ಕಳಿಗೆ ತಾವೇ ಸ್ವತಃ ಅಡುಗೆ ಮಾಡಿ ಉಣಬಡಿಸುತ್ತಿದ್ದರು. ಇಂತಹಾ ಕೆಲಸವೆಂದರೆ ಅವರಿಗೆ ಎಲ್ಲಿಲ್ಲದ ಸಂತೋಷವನ್ನು ನೀಡುತ್ತಿತ್ತು. ಜೀತವಿಮುಕ್ತಿ ಹೊಂದಿದ ಮಕ್ಕಳ ಹಾಗೂ ಪಾಲಕರು ಸಾಕಶ್ಟು ಸಂದರ್ಭಗಳಾಲ್ಲಿ ಭೀತಿಗೊಳ್ಳುತ್ತಿದ್ದರು. ತಮ್ಮ ಮಾಲೀಕರ ಕಡೆಯಿಂದ ತಮಗೆ ತೊಂದರೆಯಾಗಬಹುದೆನ್ನುವುದು ಅವರ ಭೀತಿಗಿದ್ದ ಪ್ರಮುಖ ಕಾರಣಾವಾಗಿತ್ತು. ಆದರೆ ಅಂತಹಾ ಸಂದರ್ಭಗಳಲ್ಲಿ ಸತ್ಯಾರ್ಥಿ ಅವರಿಗೆ ನೀಡುತ್ತಿದ್ದ ಸಾಂತ್ವನದ ನುಡಿಗಳು, ಭರವಸೆಗಳು ಅಂತಹಾ ಸಮಯದಲ್ಲಿಯೂ ಅವರ ಮೊಗದಲ್ಲಿ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದವು.  
1988ರಲ್ಲಿ ಬಾಲಕಾರ್ಮಿಕರ  ಮುಕ್ತಿಗಾಗಿ  ಕೈಲಾಶ್ ಸತ್ಯಾರ್ಥಿಯವರ ನೇತೃತ್ವದಲ್ಲಿ ಜಾಗತಿಕ ಮೆರವಣಿಗೆ 103 ದೇಶಗಳ 7.2 ಮಿಲಿಯನ್ ಜನ 20,000 ನಾಗರಿಕ ಸಂಘಟನೆಗಳು ಭಾಗವಹಿಸಿದ್ದವು.  
1994 ರಲ್ಲಿ ಕೈಲಾಶ್ ಸತ್ಯಾರ್ಥಿಯವರು ಪರಿಚಯಿಸಿದ “ರಗ್ ಮಾರ್ಕ್” ಯೋಜನೆ ಸಾಕಷ್ಟು ಜನಪ್ರಿಯವಾಗಿದ್ದು ಆ ಯೋಜನೆಯಂತೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳದೆ ರತ್ನಗಂಬಳಿ ಹಾಗೂ ರಗ್ಗುಗಳನ್ನು ದೇಶ ವಿದೇಶಗಳಲ್ಲಿ ಮಾರಾಟ ಮಾಡುವುದಾಗಿದೆ. ಹಾಗೆ ಮಾರಾಟವಾಗುವ ಉತ್ಪನ್ನಗಳಿಗೆ “ರಗ್ ಮಾರ್ಕ್” ಚಿಹ್ನೆಯನ್ನು ನೀಡಲಾಗುತ್ತದೆ. ಇದೊಂದು ಸಾಮಾಜಿಕ ಪ್ರಮಾಣಪತ್ರವಾಗಿದ್ದು ಇದನ್ನು ಬಳಸಿಕೊಳ್ಳಲು ಒಪ್ಪಿದ ಕಾರ್ಖಾನೆಗಳು ಪರಿಶೀಲನೆಗೆ ಒಳಪಡಲೂ ಸಹ ಸಹಮತವನ್ನು ಸೂಚಿಸಬೇಕಾಗುವುದು.
ದಕ್ಷಿಣ ಏಷ್ಯಾ ಹಾಗೂ ಭಾರತ ಗಳಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಂಡು ಈ ರೀತಿಯ ರಗ್ಗು ಹಾಗೂ ರತ್ನಗಂಬಳಿಗಳನ್ನು ಉತ್ಪಾದಿಸುವ ಸಾಕಷ್ಟು ಘಟಕಗಳಿರುವುದನ್ನು ಗುರುತಿಸಿದ್ದ ಸತ್ಯಾರ್ಥಿಯವರು ತಾವು “ಬಾಲ್ಯ ಉಳಿಸಿ (ಬಚ್ ಪನ್ ಬಚಾವೋ)” ಆಂದೋಲನದ ಮುಂದುವರಿದ ಭಾಗವಾಗಿ ಈ ಆಂದೋಲನವನ್ನು ರಚಿಸಿದರು ಇದೀಗ ಈ ಆಂದೋಲನಕ್ಕೆ “ಗುಡ್ ವೀವ್” ಎಂದು ಕರೆಯಲಾಗುತ್ತಿದೆ.  
2001 ರಲ್ಲಿ “ಬಾಲಮಿತ್ರ ಗ್ರಾಮ”” ಯೋಜನೆಯನ್ನು ಪ್ರಾರಂಭಿಸಿದ ಸತ್ಯಾರ್ಥಿಯವರು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನ, ಮಕ್ಕಳ ಹಕ್ಕುಗಳ ರಕ್ಷಣೆ ಸರ್ವರಿಗೂ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಈ ಯೋಜನೆಯು ಸಹ ಯಶಸ್ವಿಯಾಗಿ ಮುಂದುವರಿದುಕೊಂಡು ಬಂದಿದೆ. ಈ ಯೋಜನೆಯಡಿಯಲ್ಲಿ ಪ್ರಾರಂಭಗೊಂಡ “ಬಾಲ ಪಂಚಾಯತ್” ಕಾರ್ಯಕ್ರಾಮದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳೂ ನೇರವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಆ ಮೂಲಕ ಮಕ್ಕಳ ಹಕ್ಕು ಬಾದ್ಯತೆಗಳನ್ನು ಅವರ ಮೂಲಕವೇ ಸಮಾಜಕ್ಕೆ ಮನವರಿಕೆ ಮಾಡಿಸುವ ಕೆಲಸ ನಡೆಯುತ್ತದೆ.
ಹೀಗೆ ದೇಶದಲ್ಲಿ ಪ್ರಾರಂಭವಾದ ಮೊದಲ ಮಕ್ಕಳ ಹಕ್ಕುಗಳ ಸಂಘಟನೆ “ಬಚ್ ಪನ್ ಬಚಾವೋ” ಆಂದೋಲನ ಸ್ಥಾಪಕರಾದ ಕೈಲಾಶ್ ಸತ್ಯಾರ್ಥಿಯವರು ಹಲವು ಕಾರ್ಖಾನೆಗಳಲ್ಲಿ ಕೆಟ್ತ ಸನ್ನಿವೇಶಗಳಾಲ್ಲಿ ಜೀತದಾಳಿನಂತೆ ದುಡಿಯುತ್ತಿದ್ದ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದ ಅನೇಕ ಮಹಿಳೆಯರನ್ನು ಸಹ ತಮ್ಮ ಸಂಘಟನೆಯ ಮುಖಾಂತರ ರಕ್ಷಿಸಿದ್ದಾರೆ ಹಾಗೂ ಅವರಲ್ಲಿ ಪ್ರತಿಯೊಬ್ಬರಿಗೂ ಸ್ವಾವಲಂಬನೆಯಿಂದ ಬದುಕುವ ದಾರಿ ತೋರಿಸಿದ್ದಾರೆ. “ಮಕ್ಕಳ ಮಾರಾಟ ನಿಲ್ಲಬೇಕು, ನಿರುದ್ಯೋಗ ಸಮಸ್ಯೆ, ಅನಕ್ಷರತೆ ನಿವಾರಣೆಯಾಗಬೇಕು, ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂಬ ನಿಲುವನ್ನು ಹೊಂದಿರುವ ಸತ್ಯಾರ್ಥಿಯವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಪ್ರಬಲ ಪ್ರತಿಪಾದಕರೆನಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು
ಇದೀಗ ದೆಹಲಿ ನಗರದಲ್ಲಿ ತನ್ನ ಧರ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ನೆಮ್ಮದಿ ಜೀವನ ನದೆಸುತ್ತಿರುವ, ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಕಾರ್ಮಿಕರ ಉದ್ದಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟ ಕೈಲಾಶ್ ಸತ್ಯಾರ್ಥಿಯವರ ಕಾರ್ಯಗಳನ್ನು ಮೆಚ್ಚಿ ದೇಶ ವಿದೇಶಗಳ ಅನೇಕ ಸರ್ಕಾರ, ಸಂಘಟನೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.  1993 ರಲ್ಲಿ ಅಮೇರಿಕ ಸರ್ಕಾರದ “ಅಶೋಕ ಫೆಲೋಶಿಪ್” ಗೌರವಕ್ಕೆ ಆಯ್ಕೆಯಾದರೆ, 1994 ರಲ್ಲಿ ಜರ್ಮನಿ ಸರ್ಕಾರವು ಕೊಡಮಾಡುವ “ದಿ ಅಷೇನರ್ ಇಂಟರ್ನಾಷನಲ್ ಪೀಸ್ ಅವಾರ್ಡ್” ಗೆ ಪಾತ್ರರಾಗಿದ್ದರು.1995 ರಲ್ಲಿ ಅಮೇರಿಕಾ ದೇಶದ “ರಾಬರ್ಟ್ ಎಫ್. ಕೆನಡಿ ಮಾನವ ಹಕ್ಕುಗಳ ಪ್ರಶಸ್ತಿ ಸ್ವೀಕರಿಸಿದ್ದ ಸತ್ಯಾರ್ಥಿಯವರಿಗೆ 1998 ರಲ್ಲಿ ನೆದರ್ಲ್ಯಾಂಡ್ ದೇಶದಿಂದ “ಗೋಲ್ದನ್ ಫ್ಲ್ಯಾಗ್” ಪುರಸ್ಕಾರ ಲಭಿಸಿತ್ತು 1999 ರಲ್ಲಿ ಜರ್ಮನಿಯಿಂದ Friedrich  Ebert Stiftung ಪುರಸ್ಕಾರಕ್ಕೆ ಭಾಜನರಾಗುವ ಮೂಲಕ ಜರ್ಮನಿ ದೇಶದವರಿಂದ ಎರಡನೇ ಬಾರಿಗೆ ಗೌರವಿಸಲ್ಪಟ್ಟರು. 2002 ರಲ್ಲಿ ಮಿಚಿಗನ್ ವಿಶ್ವವಿದ್ಯಾನಿಲಯದಿಂದ “ವೆಲ್ಲಿಂಗ್ಬರ್ಗ್ ಮೆಡಲ್” ಸ್ವೀಕರಿಸ್ದ್ದ ಕೈಲಾಶ್ ಸತ್ಯಾರ್ಥಿಯವರಿಗೆ 2006 ರಲ್ಲಿ ಅಮೇರಿಕಾ ದೇಶವು “ಫ್ರೀಡಮ್ ಅವಾರ್ಡ್” ನ್ನು ನೀಡಿ ಸತ್ಕರಿಸಿತು. ಮತ್ತೆ 2007 ರಲ್ಲಿ ಇಟಾಲಿಯನ್ ಸೆನೆಟ್ ನೀಡುವ ಗೋಲ್ಡ್ ಮೆದಲ್ ಪುರಸ್ಕಾರವನ್ನು ತನ್ನದಾಗಿಸಿಕೊಂಡ ಸತ್ಯಾರ್ಥಿಯವರು 2008 ರಲ್ಲಿ ಸ್ಪೇನ್ ನಿಂದ “ಅಲ್ಫಾನ್ಸೋ ಕೋಮನ್ ಅಂತರಾಷ್ಟ್ರೀಯ ಪುರಸ್ಕಾರವನ್ನು ಪಡೆದರು. . 2009 ರಲ್ಲಿ ಅಮೇರಿಕಾ ಸರ್ಕಾರದಿಂದ “ಡಿಫೆನ್ಸ್ ಆಫ್ ಡೆಮಾಕ್ರಸಿ ಅವಾರ್ಡ್” ಪ್ರಶಸ್ತಿ ಪಡೆದಿದ್ದ ಸತ್ಯಾರ್ಥಿಯವರಿಗೆ ಇದೀಗ 2014 ನೇ ಸಾಲಿನ ಪ್ರತಿಷ್ಠಿತ ನೋಬೆಲ್ ಶಾಂತಿ ಪ್ರಶಸ್ತಿ ಒಲಿದು ಬಂದಿದೆ.
ಇಷ್ಟೆಲ್ಲ ಹೇಳಿದ ಮೇಲೆ ಇಲ್ಲಿ ಇನ್ನೊಂದು ಸ0ಗತಿಯನ್ನು ಪಸ್ತುತ ಪಡಿಸಲೇ ಬೇಕು. ಅದೆಂದರೆ ಭಾರತೀಯರಿಗೆಲ್ಲಾ ಹೆಮ್ಮೆಯಿಂದ ಬೀಗುವಂತೆ ಮಾಡಿರುವ ಭಾರತದ ವಿಶ್ವಶಾಂತಿಯ ಧೋರಣೆಯನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಬಿತ್ತರಿಸಿರುವ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾದ ಸತ್ಯಾರ್ಥಿಯಂತಹವರನ್ನು ಇನ್ನಾದರೂ ನಮ್ಮ ದೇಶದ ಸರ್ಕಾರಗಳು, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಿದೆ. ಹಾಗಾದಾಗ ಮಾತ್ರವೇ ನಮ್ಮ ಸಮಾಜಕ್ಕೂ, ಜನತೆಗೂ ಮಾನವತೆಯ ಮೌಲ್ಯಗಳ ಅರಿವಿದೆ ಎಂದು ಇತರರಿಗೆ ತಿಳಿಸಿದಂತಾಗುತ್ತದೆ.

ಸತ್ಯಾರ್ಥಿ ಉಕ್ತಿಗಳು
“ಈಗ ಆಗಲ್ಲ ಎಂದರೆ ಯಾವಾಗ ಆಗುತ್ತೆ? ನಿಮ್ಮ ಕಡೆ ಮಾದಲು ಆಗುವುದಿಲ್ಲವೆಂದರೆ ಬೇರೆ ಯಾರ ಬಳಿ ಆಗುತ್ತೆ? ನಾವು ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗುಲಾಮಿತನ ಹೊಡೆದೋಡಿಸಲು ಸಾಧ್ಯ.”
***
“ಯಾವುದೇ ದೇಶವು ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ. ಬಾಲ ಕಾರ್ಮಿಕ ಪದ್ದತಿಗೂ ನಿರುದ್ಯೋಗಕ್ಕೂ ನೇರ ಸಂಬಂಧವಿದೆ ಎಂಬುದು ನಮ್ಮ ವಾದ ದೇಶದಲ್ಲಿ 65 ದಶಲಕ್ಷ ಮಂದಿ ನಿರುದ್ಯೋಗಿಗಳಿದ್ದಾರೆ. ಕಾರ್ಖಾನೆಗಳ ಮಾಲೀಕರು ತಂದೆ ತಾಯಿಗಳಿಗಿಂತ ಅವರ ಮಕ್ಕಳನ್ನೇ ಕೆಲಸಕ್ಕೆ ತೆಗೆದುಕೊಳ್ಳಲುಹೆಚ್ಚಾಗಿ ಆಸಕ್ತಿ ತೋರುತ್ತಾರೆ. ಯಾಕೆಂದರೆ ಮಕ್ಕಳಿಗೆ ಕಡಿಮೆ ವೇತನ ನೀಡಿ ಹೆಚ್ಚಿನ ಕೆಲಸ ಮಾಡಿಸಬಹುದು. ಇದರ ಜತೆಗೆ ಮಕ್ಕಳು ಯೂನಿಯನ್ ಗಳನ್ನು ನಿರ್ಮಿಸಿಕೊಳ್ಳುವುದಿಲ್ಲ. ಬಾಲ ಕಾರ್ಮಿಕ ಸಮಸ್ಯೆಯ ಮೂಲವಿರುವುದೇ ಇಲ್ಲಿ.”
***
“ಜಗತ್ತಿನಲ್ಲಿ ಮಕ್ಕಳ ಜೀತ ಪದ್ದತಿ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದೊಂದು ಪಿಶಾಚಿಯಷ್ಟೇ ಅಲ್ಲ, ಮಾನವತೆಯ ವಿರುದ್ದ ಅಪರಾಧವೂ ಹೌದು.”
***
“ನನ್ನ ಪಾಲಿಗೆ ಇದನ್ನು (ಮಕ್ಕಳ ಶೋಷಣೆ) ಒಂದು ಪರೀಕ್ಷೆಯಾಗಿ ನೋಡುತ್ತೇನೆ. ಇದೊಂದು ರೀತಿಯ ನೈತಿಕ ಪರೀಕ್ಷೆ. ಈ ರೀತಿಯ ಪೈಶಾಚಿಕತೆಯ ವಿರುದ್ದ ಎದ್ದು ನಿಲ್ಲಬೇಕಾದರೆ ಈ ಪರೀಕ್ಷೆಯಲ್ಲಿ ಪ್ರತಿಯೊಬ್ಬರೂ ಉತ್ತೀರ್ಣರಾಗಲೇಬೇಕು.”
***
“ಹಿಂದೆ ಚಹಾ ಮಾರುತ್ತಿದ್ದ ಹುಡುಗ ಈಗ ಈ ದೇಶದ ಪ್ರಧಾನಿಯಾಗುವ ಮೂಲಕ ತಮ್ಮ ಟೀಕಾಕಾರರಿಗೆ ಸಡ್ಡು ಹೊಡೆದು ನಿಂತಿದ್ದಾನೆ. ಯಾವ ಮಗುವೂ ಬಾಲಕಾರ್ಮಿಕತೆಯ ಕೂಪಕ್ಕೆ ಬೀಳದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಈಗ ಅವರ ಮುಂದೆ ಇದೆ.”
- ಲೋಕಸಭಾ ಚುನಾವಣೆ ೨೦೧೪ ರ ಫಲಿತಾಂಶ ಹೊರಬಂದ ಸಮಯದಲ್ಲಿ ಕೈಲಾಶ್ ಸತ್ಯಾರ್ಥಿಯವರು ನರೇಂದ್ರ ಮೋದಿಯವರ ಕುರಿತು ಮಾಡಿದ ಟ್ವೀಟ್.  

No comments:

Post a Comment