Monday, October 20, 2014

ನಮ್ಮಲ್ಲಿನ ಸ್ಥಳ ಪುರಾಣಗಳು(Myths) – 35

ಸಿಂಹಾಸನಪುರಿ (Hassan)

ಕರ್ನಾತಕದ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲಾಕೇಂದ್ರವಾಗಿರುವ ಹಾಸನ ಐತಿಹಾಸಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಸಾಕಷ್ಟು ಮಹತ್ವವನ್ನು ಹೊಂದಿದ ಜಿಲ್ಲೆ. ಬೇಲೂರು ಹಳೇಬೀಡುಗಳ ಶಿಲ್ಪ ಸೌಂದರ್ಯ, ಶ್ರವಣ್ಬೆಳಗೊಳದ ಗೊಮ್ಮಟೇಶನ ನೆಲೆಯಾದ ಹಾಸನ ನಗರವು ಹಿಂದೆಲ್ಲಾ “ಸಿಂಹಾಸನಪುರಿ” ಎಂದೆನಿಸಿಕೊಂಡಿತ್ತು. ಇಲ್ಲಿನ ನಗರ ದೇವತೆಯಾದ ಹಾಸನಾಂಬೆಯು ‘ಭಕ್ತರಿಗೆ ಪ್ರತಿ ವರ್ಷವೊಂದರಲ್ಲಿ 10 ರಿಂದ 12 ದಿನಗಳ ಕಾಲ ಮಾತ್ರವೇ ದರ್ಶನ ನೀಡುವವಳಾಗಿದಾಳೆ. . ಪ್ರತಿ ವರ್ಷ ಆಶ್ವಯುಜ ಮಾಸದ ಹುಣ್ಣಿಮೆ ನಂತರ ಬರುವ ಗುರುವಾರದಂದು ದೇವಾಲಯದ ಬಾಗಿಲು ತೆರೆದರೆ, ಆನಂತರ ದೀಪಾವಳಿಯ ಬಲಿ ಪಾಡ್ಯಮಿ ಮಾರನೇ ದಿನ ಬಾಗಿಲು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಮಾತ್ರ ಭಕ್ತರಿಗೆ ದೇವಿಯ ದರ್ಶನದ ಭಾಗ್ಯ. ದೇವಾಲಯದ ಬಾಗಿಲು ಮುಚ್ಚುವ ದಿವಸ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಒಂದು ವರ್ಷ ದೇವಿಯ ಗರ್ಭಗುಡಿಯಲ್ಲಿ ಉರಿಯುತ್ತಿರುತ್ತದೆ ಹಾಗೂ ಕೊನೆಯ ದಿನ ಪೂಜಿಸಿದ ಹೂವು ಬಾಡದೇ ಇರುತ್ತದೆ. ಇವೆಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ ದೇವಿಗೆ ನೈವೇದ್ಯ ಮಾಡಿದ ಅನ್ನ ಹಾಳಾಗದೇ ಇರುವುದು ಈ ದೇವಾಲಯದಲ್ಲಿನ ವಿಶೇಷ ಹಾಗೂ ದೇವಿಯ ಮಹಿಮೆ. ಹಾಸನಾಂಬಾ ದೇವಿಯ ದೇವಾಲಯವು ಬಾಗಿಲು ತೆಗೆಯುವ ದಿನಗಳಾಂದು ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಾರೆ. ಹಾಸದಲ್ಲಿ ನೆಲೆಸಿರುವ ತಳವಾರ ಸಮುದಾಯದವರೆಲ್ಲರೂ ತಾಯಿಗಾಗಿ ಅವಳ ದರ್ಶನಕ್ಕಾಗಿ ಬಾಳೆ ಕಂಬ, ತಳಿರು ತೋರಣಗಳಿಂದಲಂಕರಿಸಿ ಸಂಭ್ರಮಿಸುತ್ತಾರೆ. ಗರ್ಭಗುಡಿಯ ಎದುರಿಗೆ ಬಾಳೇ ಕಂದನ್ನು ನೆಟ್ಟು ಹಾಸನಾಂಬೆಯನ್ನು ಭಕ್ತಿಯಿಂದ ಆರಾಧಿಸುತ್ತಾ ಅದನ್ನು ಕತ್ತರಿಸಿದ ನಂತರವೇ ಬಾಗಿಲು ತೆಗೆಯು ಪ್ರತೀತಿ ಹಿಂದಿನಿಂದಲೂ ಬಂದಿದೆ.


***
ಒಮ್ಮೆ ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ಕೌಮರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ವಾರಣಾಸಿಯಿಂದ ದಕ್ಷಿಣ ಭಾಗಕ್ಕೆ ವಾಯು ವಿಹಾರಕ್ಕಾಗಿ ಬಂದರು.. ಆ ಸಪ್ತ ಮಾತೃಕೆಯರಲ್ಲಿ ವೈಷ್ಣವಿ, ಮಾಹೇಶ್ವರಿ ಹಾಗೂ ಕೌಮಾರಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರು. ಉಳಿದ ಬಾಹ್ಮೀ, ಕೆಂಚಮ್ಮನಕೋಟೆಯಲ್ಲಿ, ಚಾಮುಂಡಿ, ವಾರಾಹಿ ಹಾಗೂ ಇಂದ್ರಾಣಿಯರು ನಗರದ ಮಧ್ಯಭಾಗದಲ್ಲಿರುವ ದೇವಿಕೆರೆಯಲ್ಲಿ ನೆಲೆಸಿದರು.
***

ಕೃಷ್ಣಪ್ಪನಾಯಕ ಎಂಬ ನಾಯಕ ಒಮ್ಮೆ ಪ್ರಯಾಣಕ್ಕಾಗಿ ಹೊರ ಹೊರಟಾಗ ಒಂದು ಮೊಲ ಅಡ್ಡಬಂದು ಪಟ್ಟಣದ ಒಳಗೆ ಪ್ರವೇಶಿಸಿತು. ಈ ಅಪಶಕುನದಿಂದ ನಾಯಕ ನೊಂದುಕೊಂಡನು. ಆಗ ಅವನಿಗೆ ಹಾಸನಾಂಬ ದೇವಿ ಪ್ರತ್ಯಕ್ಷಳಾಗಿ “ಮಗು, ಭಿನ್ನ ಮನಸ್ಸು ತೊರೆದು ಈ ಸ್ಥಳದಲ್ಲಿ ಒಂದು ಕೋಟೆಯನ್ನು ಕಟ್ಟು” ಎಂದು ಹೇಳಿದಳು. . ಅದೇ ಪ್ರಕಾರ ನಾಯಕನು ಕೋಟೆ ಕಟ್ಟಿ ಅದಕ್ಕೆ ಹಸನಾಂಬಾ ಎಂದು ಹೆಸರು ಇಟ್ಟ

No comments:

Post a Comment