ಸ್ನೇಹಿತರೇ,
ಇಂದು ನಾನು ಹೇಳ ಹೊರಟಿರುವ ವಿಚಾರ ಕೇವಲ ಕ್ಷಣಕಾಲ ಓದಿ ಬಿಡಬೌದಾದುದಲ್ಲ. ಇನ್ನೂ ಸಾಕಷ್ಟು ಅಧ್ಯಯನಕ್ಕೆ
ಅವಕಾಶ ಇರುವಂತಹಾ ವಿಚಾರ. ಇನ್ನೂ ಕೆಲವರಲ್ಲಿ ಇದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿರಲೂಬಹುದು, ಆದರೆ
ಆ ವಿಚಾರಗಳು ಸತ್ಯವಲ್ಲ ಎನ್ನಲು ಸಾಧ್ಯವಿಲ್ಲ ಎನ್ನುವುದು ನೆನಪಿರಲಿ....
ನಮ್ಮ ಭರತ ಖಂಡ
ಅನೇಕ ಶತಮಾನಗಳ ಕಾಲ ವಿದೇಶೀಯರ ಧಾಳಿಗೆ ಒಳಗಾಗಿತ್ತು. ಮೊದಲಿಗೆ ಮಂಗೋಲಿಯನ್ನರು, ಅಲೆಕ್ಸಾಂಡರ್,
ನಂತರದಲ್ಲಿ ಮುಸ್ಲಿಮ್ ಸುಲ್ತಾನರು, ದಂಗೆಕೋರರು, ಕೊನೆಯದಾಗಿ ಬ್ರಿಟೀಷರು, ಐರೋಪ್ಯ ದೇಶದವರು. ಆದ್ರೂ
ಸಹ ನಮ್ಮ ಪ್ರಾಚೀನ ಸಂಸ್ಕೃತಿ ಸಂಪ್ರದಾಯಗಳು ಇಂದಿಗೂ ಉಳಿದು ಬಂಸಿವೆ ಎಂದರೆ ಹಿಂದೂ ಧರ್ಮದ, ವೇದಗಳ
ಗಟ್ಟಿ ಅಡಿಪಾಯವೇ ಕಾರಣ. ಆದ್ರೆ ಮುಸ್ಲಿಮ್ ಸುಲ್ತಾನರು, ಮೊಘಲರ ಆಳ್ವಿಕೆಗಳಲ್ಲಿ ಉತ್ತರ ಭಾರ್ತದ
ಅನೇಕ ಹಿಂದೂ ಧರ್ಮೀಯರ ಮೇಲೆ ನಿರಂತರ ಧಾಳಿ ನಡೆಯಿತಲ್ಲದೆ ಅಪಾರ ಪ್ರಮಾಣದಲ್ಲಿ ಮತಾಂತರಗಳೂ ನಡೆದಿದ್ದವು.
ಕೆಲವು ನೂರು ಹಿಂದೂ ದೇವಾಲಯಗಳಾನ್ನು ನಾಶ ಮಾಡಿ ಅಲ್ಲಿ ಗೋರಿಗಳನ್ನೂ ನಸೀದಿಗಳನ್ನೂ, ಮಿನಾರ್ ಗಳನ್ನೂ
ಕಟ್ಟಲಾಯಿತು.
ಅಂತಹಾ ನಾನಾ
ಸ್ಮಾರಕಗಳು ಇಂದಿಗೂ ನಮ್ಮ ಕಣ್ಣೆದುರಿಗಿವೆ. ಅವುಗಳಲ್ಲಿ ಅತ್ಯಂತ ವೈಭವೋಪೇತವಾಗಿರುವುವು, ವಿಶ್ವ
ಪರಂಪರೆ ತಾಣವಾಗಿರುವುವೂ ಸಹ ಇದೆ. ಅಂತಹಾ 2 ತಾಣಾಗಳ ಕುರಿತ ಪರಿಚಯವನ್ನು ನಾನಿಲ್ಲಿ ಮಾಡಿಕೊಡಲಿದ್ದೇನೆ..
ಕುತುಬ್ ಮಿನಾರ್
ನಾವೆಲ್ಲರೂ
ಶಾಲಾ ಕಾಲೇಜುಗಳಲ್ಲಿ ಓದಿರುವಂತೆ ಕುತುಬ್ ಮಿನಾರ್ ನ್ನು ನಿರ್ಮಿಸಿದವನು ಕುತುಬ್ ಉದ್ ದೀನ್ ಐಬಕ್.
ಅದಕ್ಕೇ ಆ ಮಿನಾರ್ ಗೆ ಕುತುಬ್ ಮಿನಾರ್ ಎಂದು ಹೆಸರಾಯಿತು. ಆದರೆ ಕಳೆದ ಕೆಲ ವರುಷಗಳ ಹಿಂದೆ ಖ್ಯಾತ
ಸಂಶೋಧಕರಾದ ಡಾ. ಡಿ.ಎಸ್. ತ್ರಿವೇದಿಯವರು ನಡೆಸಿದ್ ಸಂಶೋಧನೆಯಲ್ಲಿ ಹೊಸತೇ ವಿಚಾರಗಳು ಗೋಚರಕ್ಕೆ
ಬಂದವು.( ನೋಡಿ ತ್ರಿವೇದಿಯವರ “ವಿಷ್ಣು ಧ್ವಜವೋ.... ಕುತುಬ್ ಮಿನಾರೋ....?” ಪುಸ್ತಕ)
ಕುತುಬ್ ಮಿನಾರ್
ನಿಜಕ್ಕೂ ಐಬಕ್ ನ ನಿರ್ಮಾಣವಾಗಿರುವುದು ಇಲ್ಲ. ಅವನಿಗೂ ಸಾಕಷ್ಟು ವರುಷಗಳ ಹಿಂದೆಯೇ ಈ ಗೋಪುರವಿತ್ತು..!
ಅದು ಭಾರತೀಯ ಖಗೋಳ ಶಾಸ್ತ್ರ ಅಧ್ಯಯನದ ವೀಕ್ಷಣಾ ಗೋಪುರವಾಗಿತ್ತು...! ಖಗೋಳ ಶಾಸ್ತ್ರ ಹಾಗೂ ಶಾಸನಗಳ
ಆಧಾರದಲ್ಲಿ ಹೇಳುವುದಾದಲ್ಲಿ ಇದರ ಕಾಲ ಕ್ರಿ.ಶ. ೨೮೦. ಇದನ್ನು ನಿರ್ಮಾಣ ಮಾಡಿದಾತ ಗುಪ್ತ ವಂಶದ ಖ್ಯಾತ
ದೊರೆ ಶ್ರೀ ಸಮುದ್ರ ಗುಪ್ತ! ಇವನ ಕಾಲದಲ್ಲಿಯೇ ಈ ಗೋಪುರ ಹಾಗೂ ಅದರ ಸುತ್ತಲಿನ ೨೭ ದೇವಾಲಯಗಳ ನಿರ್ಮಾಣಾವಾಗಿತ್ತು.
ವಿಷ್ಣು ಭಕ್ತನಾಗಿದ್ದ ಈತನು ಇದನ್ನು ‘ವಿಷ್ಣು ಧ್ವಜ’ ಎಂದು ಕರೆದಿದ್ದನು. ಅಲ್ಲದೆ ಇದನ್ನು ಅವನು
ಒಂದು ಖಗೋಳ ವೀಕ್ಷಣಾ ಗೋಪುರವನ್ನಾಗಿ ನಿರ್ಮಾಣಾ ಮಾಡಿದ್ದನು.
ಇಂದಿಗೂ ಈ ಗೋಪುರದ
ಆಸುಪಾಸಿನಲ್ಲಿ ಒಟ್ಟೂ ೨೭ ವಿವಿಧ ದೇವಾಲಯಗಳ ಅಡಿಪಾಯಗಳಿರುವ ಕುರುಹುಗಳಿವೆ...!! ಮಿನಾರ್/ಗೋಪುರವು
ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ೫ ಡಿಗ್ರಿ ಉತ್ತರಕ್ಕಿದೆ. ಆ ಗೋಪುರದ ನೆರಳು ಹಿಂದೂ ಪಂಚಾಂಗದ ಅನುಸಾರವಾಗಿ
ಒಂದು ನಿರ್ದಿಷ್ಟ ನಕ್ಷತ್ರ/ತಿಥಿಗಳ0ದು ಅದರ ಸುತ್ತಲಿನ ೨೭ ದೇವಾಲಯಗಳ ಅಡಿಪಾಯದ ಮೇಲೆ ಬೀಳುತ್ತದೆ..!
ಎಂದರೆ ಒಟ್ತೂ ೨೭ ನಕ್ಷತ್ರಗಳ ಸಂಖ್ಯೆಯಷ್ಟು ದೇವಾಲಯಗಳು ಈ ಒಂದು ಗೋಪುರದ ಸುತ್ತಲೂ ನಿರ್ಮಿಸಿಅಲ್ಪಟ್ಟಿದ್ದವು!
ಅದನ್ನು ನಮ್ಮನ್ನಾಳಿದ ಮುಸ್ಲಿಮ್ ಸುಲ್ತಾನರುಗಳು ಒಡೆದು ನಾಶ ಮಾಡಿದ್ದರು!! ಇದೀಗ ತಳಾಪಾಯವು ಮಾತ್ರವೇ
ಉಳಿದಿರುವ ಆ ದೇವಾಲಯಗಳಿದ್ದ ಜಾಗದ ಮೇಲೆ ಆಯಾ ನಕ್ಷತ್ರಗಳಾಂದು ಆ ಗೋಪುರದ ನೆರಳು ಬೀಳುತ್ತದೆ. ಭಾರತದಲ್ಲಿ
ಅತೀ ದೀರ್ಘ ಹಗಲಿರುವ ದಿನವಾದ ಜೂನ್ ೨೧ ರಂದು ಆ ಗೋಪುರದ ನೆರಳು ಬೀಳುವುದೇ ಇಲ್ಲ! ಹಿಂದೂ ವಾಸ್ತು
ಶಾಸ್ತ್ರದ ಅನುಸಾರ ಪವಿತ್ರ ದಿಕ್ಕೆಂದು ಗುರ್ತಿಸಲ್ಪಡುವ ಉತ್ತರ ದಿಕ್ಕೆಗೆ ಗೋಪುರದ ದ್ವಾರವಿರುವುದೂ
(ಮಿನಾರ್ ಮುಸ್ಲಿಮ್ ನಿರ್ಮಾಣವೇ ಆಗಿದ್ದಲ್ಲಿ ಗೋಪುರ ದ್ವಾರದ ದಿಕ್ಕು ಮಕ್ಕಾದ ಕಡೆಗಿರಬೇಕಿತ್ತು!)...
ಇದರ ನಿರ್ಮಾಣಾಕ್ಕೆ ಬಳಸಲಾದ ಇಟ್ಟಿಗೆಗಳು ೨೦೦೦ ವರುಷಗಳಷ್ಟು ಹಳೆಯದಾಗಿರುವುದೂ ಗೋಪುರದ ಪ್ರಾಚೀನತೆಯನ್ನು
ಸಾರುತ್ತದೆ..!
ತಾಜ್ ಮಹಲ್
ಜಗತ್ತಿನಾದ್ಯಂತ
ಪ್ರೇಮ ಸೌಧ, ಷಹಜಹಾನ್ ನ ಪ್ರೀತಿಯ ಸಂಕೇತ, ಮಹಾನ್ ಕಲಾಕೃತಿ ಎಂದೆಲ್ಲಾ ಗುರುತಿಸಿಕೊಳ್ಳುವ ತಾಜ್
ಮಹಲ್ ನಿಜಕ್ಕೂ ಮೊಘಲ್ ದೊರೆಯ ನಿರ್ಮಾಣವಲ್ಲ..ಹಿರಿಯ ಚಿಂತಕ ಪ್ರೊ. ಪುರುಷೋತ್ತಮ ನಾಗರಾಜ ಓಕ್ ರವರ
ಸಂಶೋಧನೆಯಿಂದ ಬೆಳಕಿಗೆ ಬಂದ ವಿಚಾರಗಳು ನಿಜಕ್ಕೂ ಎಲ್ಲರಲ್ಲಿಯೂ ಅಚ್ಚರಿಯನ್ನುಂಟುಮಾಡುತ್ತವೆ. (ಓದಿ
ಪುರುಷೋತ್ತಮ ಓಕ್ ರವರ ತಾಜ್ ಕುರಿತಾದ ಸತ್ಯಾನ್ವೇಷಣೆ ಪುಸ್ತಕ)
ನಿಜವಾಗಿಯೂ
ಆಗ್ರಾ ಎನ್ನುವುದು ‘ಅಗ್ರೇಶ್ವರ’ ಎನ್ನುವ ಹೆಸರಿನ ಸಂಕ್ಷೇಪ.. ತಾಜ್ ಮಹಲ್ ನಮೂಲ ತೇಜೋ ಮಹಾಲಯ...!
ಇದೊಂದು ಅಗ್ರ ಶಿವ ದೇವಾಲಯವಾಗಿದೆ! ಈ ದೇವಾಲಯದ ನಿರ್ಮಾಣ ಮಾಡಿದಾತನು ಜೈಪುರದ ರಜಪೂತ ದೊರೆ ಜೈಸಿಂಗ್..
ಎಂದರೆ ಮೊಘಲ್ ಬಾದಷ ಷಹಜಹಾನನ ಕಾಲಕ್ಕೂ ಸಾಕಷ್ಟು ಹಿಂದೆಯೇ ತಾಜ್ ಇದ್ದಿತ್ತು...!
ತಾಜ್ ಮಹಲ್
ಇರುವುದು ಯಮುನೆಯ ತಟದಲ್ಲಿ... ಯಾವುದೇ ಗೋರಿ ಇಲ್ಲವೇ ಸಮಾಧಿಗಳು ನದಿಯ ತಟದಲ್ಲಿ ಇರುತ್ತವೆಯೆ? ಇದು
ಅಗ್ರೇಶ್ವರ/ತೇಜೋ ಮಹಾದೇವನ ದೇವಾಲಯವಾಗಿರುವುದರಿಂದಲೇ ಯಮುನೆಯ ತಟಾಕದಲ್ಲಿದೆ. ತಾಜ್ ನ ಅತ್ಯಂತ ಮೇಲ್ತುದಿಯಲ್ಲಿ
ತ್ರಿಶೂಲಾಕೃತಿಯ ಕೆತ್ತನೆ ಇದೆ... ಅಲ್ಲದೆ ಅಮೃತ ಶಿಲೆಯ ಮೇಲೆ ‘ಓಂ’ ಎನ್ನುವ ಅಕ್ಷರದ ಕೆತ್ತನೆಯೂ
ಇದೆ...! ತಾಜ್ ಮೊದಲ ಮಹಡಿಯಲ್ಲಿ ಇಂದಿಗೂ ಒಂದು ಮುಚ್ಚಿದ ಕೋಣೆ ಇದ್ದು ಅದರಲ್ಲಿ ಏನಿದೆ ಎನ್ನುವುದನ್ನು
ಇವತ್ತಿಗೂ ಬಹೊರಂಗಪಡೊಸಲಾಗಲಿಲ್ಲ... ಅದರಲ್ಲಿ ಪರಮೇಶ್ವರಮ ಲಿಂಗವೂ, ಇತರೆ ವಿಗ್ರಹಗಳೂ ಇರುವುದು
ಸಾಧ್ಯ! ಸುಮಾರು ನಾಲ್ಕು ವರ್ಷಗಳ ಹಿಂದೆ ತಾಜ್ ನ
ಬಾಗಿಲೊಂದು ಮುರಿದಿದ್ದಾಗ ಅದನ್ನು ಕಾರ್ಬನ್ ೪ ಪರೀಕ್ಷೆಗೆ ಗುರಿಪಡಿಸಲಾಗಿತ್ತು... ಅಲ್ಲಿ ಅದರ ಕಾಲಮಾನವು
ಮೊಘಲ್ ಬಾದಷ ಷಹಜಹಾನ್ ನ ಕಾಲಕ್ಕಿಂತಲೂ ೩೦೦ ವರ್ಷ ಹಿಂದೆ ಎನ್ನುವುದು ಗೊತ್ತಾಗಿತ್ತು...! ಆದರೆ
ಅದರ ವಿಚಾರವನ್ನು ಹೆಚ್ಚಿನ ಸಂಶೋಧನೆ ನಡೆಸದ ಸರ್ಕಾರ ಬಾಗಿಲಿದ್ದ ಜಾಗದಲ್ಲಿ ಹೊಸ ಕಲ್ಲಿನಿಂದ ಗೋಡೆಯನ್ನು
ಕಟ್ಟಿ ಸುಮ್ಮನಾಯಿತು. ಇಂದಿಗೂ ಸಹ ಅಮೃತ ಶಿಲೆಯ ಮೇಲೆ ಗಣೇಶ, ಹಿಂದೂಗಳಿಗೆ ಪವಿತ್ರವಾದ ಕಳಶದ ಚಿತ್ರಗಳ
ಕೆತ್ತನೆಯನ್ನು ಕಾಣುತ್ತೇವೆ. ಇಂದೂ ಸಹ ಯಾರೇ ತಾಜ್ ಒಳಗೆ ಪ್ರವೇಶ ಮಾಡಬೇಕಾದಲ್ಲಿ ಚಪ್ಪಲಿಗಳನ್ನು
ಕಳಚಿ ಹೋಗಬೇಕು.
ಇನ್ನು ಅಫ್ಘಾನಿಸ್ತಾನದಿಂದ
ಅಜೀರಿಯಾದ ವರೆವಿಗಿನ ಮುಸ್ಲಿಮರ ಯಾವೊಂದು ಕಟ್ತಡಕ್ಕೆಯೂ ‘ಮಹಲ್’ ಎನ್ನುವ ಹೆಸರಿಲ್ಲ... ತಾಜ್ ಗೆ
ಮಾತ್ರವೇ ‘ತಾಜ್ ಮಹಲ್’ ಎನ್ನಲಾಗುತ್ತದೆ ಏಕೆ? ಮಹಲ್ ಎನ್ನುವುದು ಮಹಾಲಯ ಎನ್ನುವುದರ ಅಪಬ್ರಂಶ!!
ಹೀಗಾಗಿ ಅದು ತಾಜ್ ಮಹಲ್ ಅಲ್ಲ... ತೇಜೋ ಮಹಾಲಯ... ಅಗ್ರೇಶ್ವರನ ಆಲಯ.... ಅಗ್ರಾವು ಶೈವಾರಾಧಕರ
ಕೇಂದ್ರವಾಗಿತ್ತು. ಅದಕ್ಕಾಗಿಯೇ ತಾಜ್ ಹಿಂದೂ ವಾಸ್ತು ಶೈಕಿಯಲ್ಲಿದೆ. ಸುತ್ತಲೂ ವಿಶಾಲ ಪಡಸಾಲೆಯಿದ್ದು
೩ ಗುಂಬಜ಼್ ಗಳಿವೆ. ಅಲ್ಲದೆ ತಾಜ್ ಪಕ್ಕದಲ್ಲಿಯೇ ದೊಡ್ಡದಾದ ಬಾವಿಯೂ ಇದೆ! ಸಾಮಾನ್ಯವಾಗಿ ದೇವಾಲಯಗಳಾಲ್ಲಿ
ಬಾವಿ ಇರುತ್ತದೆ... ಆದರೆ ಇಲ್ಲಿ ಗೋರಿಯ ಪಕ್ಕದಲ್ಲಿ ಬಾವಿ ಇದೆ! ತಾಜ್ ದಕ್ಷಿಣ ದಿಕ್ಕಿಗೆ ಮುಖದ್ವಾರವನ್ನು
ಹೊಂದಿದೆ... ಆದರೆ ಎಲ್ಲಾ ಗೋರಿಗಳೂ ಮಸೀದಿಗಳೂ ಪಶ್ಚಿಮಕ್ಕೆ ಮುಖ ಮಾಡಿ ಕಟ್ಟುವುದು ಮುಸ್ಲಿಂ ಸಂಪ್ರದಾಯ...
ತಾಜ್ ಮಾತ್ರವೇ ದಕ್ಷಿಣಕ್ಕೆ ಮುಖ ಮಾಡಿ ಕಟ್ಟಿದ ಗೋರಿಯ ಕಟ್ತಡ! ಮಮ್ತಾಜ್ ಸಾವಿನ ಬಳಿಕದಲ್ಲಿ - ೧೬೩೧ರಲ್ಲಿ
ತೇಜೋ ಮಹಾಲಯವೆನ್ನುವ ವೈಭವಯುತವಾದ ದೇವಾಲಯವನ್ನು ತನ್ನ ವಶ ಮಾಡಿಕೊಂಡ ಬಾದಷ ಷಹಜಹಾನ್ ಅಲ್ಲಿ ತನ್ನ
ಪತ್ನಿಯ ಗೋರಿ ಕಟ್ಟಿಸಿ ಕುರಾನ್ ಸಾಲುಗಳನ್ನು ಕೆತ್ತಿಸಿದ.... ಅದಕ್ಕಾಗಿ ದೇವಾಲಯದ ಸುತ್ತಲಿನ ಉದ್ಯಾನದಲ್ಲಿದ್ದ
ಸುಂದರ ಕೆತ್ತನೆಯ ವಾಸ್ತುಶಿಲ್ಪವನ್ನು ಬೇರೆಡೆಗೆ ಸ್ಥಳಾಂತರಿಸಿದ...! ಹೀಗೆ ತೇಜೋ ಮಹಾಲಯ ಹೋಗಿ ತಾಜ್
ಮಹಲ್ ಉದಯಿಸಿತು.... ಅಗ್ರೇಶ್ವರ ತೇಜೋ ಮಹಾದೇವನು ಮಮ್ತಾಜ್ ಳ ಗೋರಿಯ ಹಿಂದೆ ಮರೆಯಾಗಿ ಹೋದ...!!
ಸ್ನೇಹಿತರೇ
ಇದು ಕೇವಲ ಈ ಎರ್ಡು ಸ್ಮಾರಕಗಳ ಕಥೆಯಷ್ಟೇ... ಭಾರ್ತದಲ್ಲಿ ಇಂತಹಾ ಅದೆಷ್ಟು ಸ್ಮಾರಕಗಳಿವೆಯೋ ಬಲ್ಲವರಾರು?
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಇತಿಹಾಸವನ್ನು ಪುನರ್ ಅವಲೋಕಿಸುವ ಕೆಲಸಕ್ಕೆ ಕೈ ಹಾಕಬೇಕಿದೆ...
ಅಂದಹಾಗೆಯೇ
ಇನ್ನೂ ಒಂದು ಸಂಗತಿ ಎಂದರೆ ಇತ್ತೀಚೆಗೆ ಉತ್ತರ ಪ್ರದೇಶದ ಮಂತ್ರಿಗಳೊಬ್ಬರು ತಾಜ್ ಮಹಲ್ ನ್ನು ಸುನ್ನಿ
ವಕ್ತ್ ಸಂಸ್ಥೆಗೆ ಹಸ್ತಾಂತರಿಸಬೇಕೆನ್ನುವುದಾಗಿ ಅಲವತ್ತುಕೊಂಡಿದ್ದರು... ಇದನ್ನು ಕಟ್ಟಿಸಿದ ಷಹಜಹಾನ್
ಸುನ್ನಿಯಾಗಿದ್ದ ಎನ್ನುವುದು ಅವರ ವಾದವಾಗಿತ್ತು! ಇದೇ ವಿಚಾರವಾಗಿ ಚಿಂತಿಸುತ್ತಿರುವಾಗ ನಿಮ್ಮೊದನೆ
ನಿಜ ವಿಚಾರಗಳಷ್ಟನ್ನು ಹಂಚಿಕೊಳ್ಳುವ ಮನಸ್ಸಾಯಿತು... ಹಂಚಿಕೊಂಡಿದ್ದೇನೆ... ಇದನ್ನು ಒಪ್ಪುವುದೂ
ಬಿಡುವುದೂ ನಿಮಗೆ ಬಿಟ್ತದ್ದು
ಆದರೆ ಸತ್ಯ
ಎಂದಿಗೂ ಸತ್ಯವೇ....!!
ಆಧಾರ: ಅಂತರ್ಜಾಲದ ವಿವಿಧ ಮೂಲಗಳಿಂದ.....
No comments:
Post a Comment