Friday, December 12, 2014

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) - 37

ಮಥುರಾ ಮತ್ತು ಬೃಂದಾವನ (Mathura and Brundavan)

Lord Sri Krishn


ಯಮುನಾ ನದಿಯ ತೀರದಲ್ಲಿರುವ ಸುಂದರ ಪಟ್ತಣ, ಉತ್ತರ ಪ್ರದೇಶದ ಪ್ರಸಿದ್ದ ಯಾತ್ರಾಸ್ಥಳಗಳಲ್ಲಿ ಒಂದು ಮಥುರಾ. ದ್ವಾಪರ ಯುಗದಲಿ ಶ್ರೀ ಮಹಾವಿಷ್ಣುವಿನ ಕೃಷ್ಣಾವತಾರ ಪ್ರಕಟಗೊಂಡ ಸ್ಥಳ ಮಥುರಾ. ವಸುದೇವ ಹಾಗೂ ದೇವಕಿಯರ ಮಗನಾಗಿ ಜನಿಸಿದ ಶ್ರೀ ಕೃಷ್ಣನು ತನ್ನ ಸೋದರಮಾವನಾಗಿದ್ದ ಕಂಸಾಸುರನನ್ನು ವಧಿಸಿದ್ದು ಸಹ ಇಲ್ಲಿಯೇ. ಹಿಂದೂ ಪುರಾಣಗಳ ಪ್ರಕಾರ ಸಪ್ತ ಮೋಕ್ಷದಾಯಕ ನಗರಗಳಲ್ಲಿ ಒಂದೆನಿಸಿದ್ ಮಥುರಾ ನಗರದಲ್ಲಿ ಇರುವ ಕೇಶವ ದೇವಾಲಯವು ಜಗತ್ತಿನೆಲ್ಲೆಡೇ ಹೆಸರುವಾಸಿಯಾಗಿದೆ. ಹಾಗೆಯೇ ಬೃಂದಾವನವು ಸಹ ಯಮುನಾ ನದಿಯ ಇನ್ನೊಂದು ತಟದಲ್ಲಿದ್ದು ಅಲ್ಲಿ ಸಹ ಹಲವಾರು ದೇವಾಲಯಗಳು ಇವೆ.
ಇದಕ್ಕೂ ಪೂರ್ವದಲ್ಲಿ ತ್ರೇತಾಯುಗದ ಸುಮಾರಿಗೆ ಶ್ರೀ ರಾಮ ಅಯೋಧ್ಯೆಯನ್ನಾಳುತ್ತಲಿದ್ದಾಗ ಮಥುರಾ ಪಟ್ತಣವು ‘ಮಧುವನ’ ಎನ್ನುವ ಹೆಸರಿನ್ನು ಹೊಂದಿ ಮಧು ಹಾಗೂ ಲವಣಾಸುರರೆನ್ನುವ ರಕ್ಕಸರಿಂದ್ ಆಳಲ್ಪಡುತ್ತಿತ್ತು. ಅದಾಗ ರಾಮನ ಸಹೋದರನಾದ ಶತ್ರುಘ್ನನು ಲವಣಾಸುರನನ್ನು ಸಂಹರಿಸಿ ಆ ನಗರ ಮತ್ತು ಸುತ್ತಲಿನ ಪ್ರದೇಶಗಳಾನ್ನು ರಾಮರಾಜ್ಯದಲ್ಲಿ ವಿಲೀನಗೊಳಿಸಿದ್ದನು.
ಶ್ರೀರಾಮನ ಆಳ್ವಿಕೆಯಲ್ಲಿ ಸುಭಿಕ್ಷವೂ, ಶಾಂತಿಯಿಂದಲೂ ಕೂಡಿದ್ದ ಮಥುರಾ ನಗರಿಯು ಕಾಲಾನಂತರದಲ್ಲಿ ರಘುವಂಶಜರ ಕೈತಪ್ಪಿ ಯಾದವರ ವಶವಾಯಿತು. ಯಾದವರ ರಾಜನಾದ ಉಗ್ರಸೇನನು ಬಹಳ ವರ್ಷಗಳ ಕಾಲ ಆಳ್ವಿಕೆ ನಡೆಸಿರಲು ಆತನ ಮಗನಾದ ಕಂಸನು ತನ್ನ ವಯೋವೃದ್ದ ತಂದೆಯನ್ನು ಸೆರೆಮನೆಯಲ್ಲಿರಿಸಿ ತಾನು ಸಿಂಹಾಸನವನ್ನೇರಿದನು.
Mathura Sri Krishna Janmabhoomi Temple
ಕ್ಂಸನು ತಾನು ಸ್ವಭಾವತಃ ಕ್ರೂರಿಯೂ ರಾಕ್ಷಸನೂ ಆಗಿದ್ದು ಪ್ರಜೆಗಳಿಗೆ ಸತತ ಕಿರುಕುಳ್ಗಳನ್ನು ನೀಡುತ್ತಿದ್ದನು. ಹೀಗಿರಲು ತನ್ನ ಸಾವು ತನ್ನ ತಂಗಿಯಾದ ದೇವಕಿಗೆ ಹುಟ್ಟ್ಲಿರುವ ಎಂಟ್ನೇ ಮಗುವಿನಿಂದ ಉಂಟಾಗುವುದು ಎನ್ನುವುದನ್ನು ಅರಿತುಕೊಂಡ ಕಂಸನು ತಾನು ತನ್ನ ತಂಗಿ ಹಾಗೂ ಭಾವನನ್ನು (ವಸುದೇವ ಹಾಗೂ ದೇವಕಿಯರು, ಕೃಷ್ಣ ಪರಮಾತ್ಮನ ತಂದೆ ತಾಯಿಗಳು) ಸೆರೆಯಲ್ಲಿರಿಸಿದನು. ಹಾಗೆಯೇ ಮುಂದೆ ದೇವಕಿಗೆ ಹುಟ್ಟಿದ ಮಕ್ಕಳನ್ನೆಲ್ಲಾ ಕೊಲ್ಲುತ್ತಾ ಬಂದಿರಲು ವಸುದೇವನು ತಾನು ಎಂಟ್ನೇ ಮಗು ಹುಟ್ಟಿದ ವೇಳೆಯಲ್ಲಿ ರಾತ್ರಿಯ ಹೊತ್ತನ್ನೂ ಲೆಕ್ಕಿಸದೆ ತಾನು ಬುಟ್ಟಿಯೊಂದರಲ್ಲಿ ಹುಟ್ಟಿದ ಮ್ಗುವನ್ನೆತಿಕೊಂಡು ಯಮುನಾ ನದಿಯನ್ನು ದಾಟಿ ತನ್ನ ಮಿತ್ರ ಬೃದಾವನದ ಅರಸ ನಂದನ ಬಳಿ ಕರೆದೊಯ್ದು ಬಿಟ್ಟು ಬಂದನು. ಶ್ರೀ ಕೃಷ್ಣನು ನಂದ ಹಾಗೂ ಯಶೋಧೆಯ ಮುದ್ದು ಕಂದನಾಗಿ ಬೆಳೆದು ಬೃಂದಾವನದ ಜನರೆಲ್ಲರ ನೆಚ್ಚಿನ ಕಣ್ಮಣಿಯಾದನು.
ಹಾಗೆಯೇ ಮುಂದೆ ಪ್ರಾಪ್ತ ವಯಸ್ಕನಾದಾಗ ಮತ್ತೆ ತಾನು ಹುಟ್ಟಿದ ನಾಡಿಗೆ, ಮಥುರಾ ಪಟ್ತಣಕ್ಕೆ ಬಂದು ತನ್ನ ಸೋದರ ಮಾವನಾದ ಕಂಸನನ್ನು ಸಂಹರಿಸಿದನು.



No comments:

Post a Comment