ಲಕ್ಷ್ಮಣಾವತಿ (Lucknow)
ದೇಶದ
ಅತ್ಯಂತ ಹೆಚ್ಚಿನ ಜನಸಾಂದ್ರತೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದ ರಾಜಧಾನಿ ಲಖನೌ. ‘ಚಿಕನ್’
ಹೆಸರಿನ ನೂಲು ತಯಾರಿಕೆಗೆ ಹೆಸರುವಾಸಿಯಾಗಿರುವ ಈ ನಗರವು ದೇಶದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ
ನಗರಗಳ ಪೈಕಿ 11ನೇ ಸ್ಥಾನದಲ್ಲಿದೆ. ಭಾರತೀಯ ಸಂಗೀತ ವಿಶ್ವವಿದ್ಯಾನಿಲಯ, ಬೀರಬಲ್ ಸಾಹ್ನಿ ಸಂಸ್ಥೆ,
ಲಾ ಮಾರ್ಷನಿಯಲ್ ಕಾಲೇಜು ಹೀಗೆ ಅನೇಕ ಉತ್ತಮ ಗುಣಮಟ್ತದ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ನಗರವು
ಬೆಳ್ಳಿ ಹಾಗೂ ಚಿನ್ನದ ಸರಿಗೆಗಳನ್ನು ಬಳಸಿ ಮಾಡುವ ಕಸೂತಿ, ಜೇಡಿ ಪದಾರ್ಥ, ಹತ್ತಿ ಬಟ್ಟೆ, ಪರಿಮಳ
ದ್ರವ್ಯಗಳಾಂತಹಾ ಬಹೂಪಯೋಗಿ ಉತ್ಪನ್ನಗಳ ತಯಾರಿಕೆಯಲ್ಲಿಯೂ ಮುಂಚೂಣಿಯಲ್ಲಿದೆ.
ಇಂದಿನ
ಆಧುನಿಕ ನಗರ ಲಖನೌಗೆ ಅತ್ಯಂತ ಪ್ರಾಚೀನ ಐತಿಹ್ಯವೂ ಇದೆ. ರಾಮಾಯಣ ಕಾಲದಲ್ಲಿ ಶ್ರೀ ರಾಮನ ಸೋದರ ಲಕ್ಷ್ಮಣನು
ನಿರ್ಮಿಸಿದ ನಗರ ಇದಾಗಿರುವ ಕಾರಣ ಲಕ್ಷ್ಮಣಾಪುರ ಅಥವಾ ಲಕ್ಷ್ಮಣಾವತಿ ಎಂದು ಕರೆಯಲ್ಪಡುತ್ತಿತ್ತು.
ಲಕ್ಷ್ಮಣನು ಇಲ್ಲಿ ತನ್ನ ಅರಮನೆಯನ್ನು ಕಟ್ಟಿಕೊಂಡು ವಾಸವಿದ್ದನು.
ಹಾಗೆಯೇ
ಸಂಪತ್ತಿನ ಅಧಿದೇವತೆಯಾದ ಶ್ರೀ ಲಕ್ಷ್ಮಿದೇವಿಯು ಆವರಿಸಿಕೊಂಡಿದ್ದ ಭೂಪ್ರದೇಶ ಇದಾಗಿದ್ದು ಅದಕ್ಕಾಗಿ
ಲಕ್ಶ್ಮೀಪುರ ಎಂದು ಕರೆಯಲಾಗುತ್ತಿತ್ತೆನ್ನುವ ಐತಿಹ್ಯಗಳಿವೆ.
ಇನ್ನು
ಸರಿಸುಮಾರು 10-12ನೇ ಶತಆನದ ಕಾಲಘಟ್ತದಲ್ಲಿ ಬದುಕಿದ್ದ ಅತ್ಯಂತ ಪ್ರಸಿದ್ದನಾಗಿದ್ದ ವಾಸ್ತುಶಿಲ್ಪಿ
ಲಖನ್ ಅಹಿದ್ ಎನ್ನುವಾತನು ಈ ಸ್ಥಳದಲ್ಲಿ ಅತ್ಯಂತ ಯೋಜಿತ ರೀತಿಯಲ್ಲಿ ಕ್ವಿಲಾ ಲಖಾನ್ ಎನ್ನುವ ಹೆಸರಿನ
ಕೋಟೆಯನ್ನು ನಿರ್ಮಾಣ ಮಾಡಿದ್ದನು. ಅದೇ ‘ಕ್ವಿಲಾ ಲಖನ್’ ಹೆಸರು ಮುಂದಿನ ಜನಾಂಗದವರ ಬಾಯಲ್ಲಿ ‘ಲಖನೌ’
ಎಂದಾಯಿತು.
No comments:
Post a Comment