Monday, January 05, 2015

ಶೃಂಗೇರಿ ಶಾರದಾ ಪೀಠದ ಶ್ರೀ ಗುರು ಪರಂಪರೆ ಗೆ ನೂತನ ಪೀಠಾಧಿಪತಿ ಘೋಷಣೆ

ಪಶ್ಚಿಮ ಘಟ್ತಗಳ ಸೆರಗಿನಲ್ಲಿ ಸುಂದರ ಮಲೆನಾಡು ಪ್ರಕೃತಿಯ ಮಡಿಲಿನಲ್ಲಿ, ತುಂಗಾ ತಟದಲ್ಲಿರುವ ಪವಿತ್ರ ಕ್ಷೇತ್ರ ಶೃಂಗೇರಿ. ಋಷ್ಯಶೃಂಗರ ತಪೋಭೂಮಿಯಾಗಿದ್ದ ಕ್ಷೇತ್ರದಲ್ಲಿ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ತ ಶ್ರೀ ಶಾರದಂಬಾ ದೇವಿಯ ದೇವಾಲಯವಿದ್ದು ಅದರೊಡನೆ ವಿದ್ಯಾದಾನ, ಅನ್ನದಾನಾದಿಗಳಿಗೆ ಹೆಸರಾದ, ಅದ್ವೈತ ಸಿದ್ದಾಂತ ಪ್ರಚಾರ ಮಾಡುತ್ತಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವೂ ಸಹ ಇಲ್ಲಿದೆ.
ಆದಿ ಶಂಕರಾಚ್ರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು 36 ಯತಿವರೇಣ್ಯರು ಶ್ರೀ ಮಠದ ಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು)ಇದೀಗ ಪೀಠಾರೋಹಣದ ರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಘೋಷಿಸಿದ್ದಾರೆ. ಶ್ರೀ ಶಾರದಾ ಪೀಠದ 37ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮ ರನ್ನು ತಾವು ಆಯ್ಕೆ ಮಾಡಿದ್ದು ಅವರಿಗೆ .22 ಮತ್ತು 23ರಂದು ಸನ್ಯಾಸತ್ವ ನೀಡುವುದಾಗಿ (ಶಿಷ್ಯ ಪರಿಗ್ರಹ) ಘೋಷಿಸಿದ್ದಾರೆ. ಹಿನ್ನೆಲೆಯಲ್ಲಿ ಶ್ರೀ ಮಠದ ಇದುವರೆವಿಗಿನ ಗುರು ಪರಂಪರೆಯತ್ತ ಒಮ್ಮೆ ಗಮನ ಹರಿಸೋಣ.....

ಶ್ರೀ ಭಾರತೀ ತೀರ್ಥ


ಪೀಠಾಧಿಪತಿಗಳು
ಸನ್ಯಾಸ ಸ್ವೀಕಾರ
ದೇಹ ಮುಕ್ತಿ
ಶ್ರೀ ಶಂಕರ ಭಗವತ್ಪಾದರು
788
820
ಶ್ರೀ ಸುರೇಶ್ವರಾಚಾರ್ಯ
813
834
ಶ್ರೀ ನಿತ್ಯ ಭೋಧ ಘನ
818
848
ಶ್ರೀ ಜ್ಞಾನ ಘನ
846
910
ಶ್ರೀ ಜ್ಞಾನೋತ್ತಮ
905
954
ಶ್ರೀ ಜ್ಞಾನ ಗಿರಿ
950
1038
ಶ್ರೀ  ಸಿಂಹಗಿರಿ
1036
1098
ಶ್ರೀ ಈಶ್ವರ ತೀರ್ಥ
1097
1146
ಶ್ರೀ ನರಸಿಂಹ ತೀರ್ಥ
1146
1229
ಶ್ರೀ ವಿದ್ಯಾಶಂಕರ ತೀರ್ಥ
1228
1333
ಶ್ರೀ ಭಾರತೀ ಕೃಷ್ಣ ತೀರ್ಥ
1328
1380
ಶ್ರೀ ವಿದ್ಯಾರಣ್ಯ
1331
1386
ಶ್ರೀ ಚಂದ್ರಶೇಖರ ಭಾರತೀ ತೀರ್ಥ – 1
1368
1389
ಶ್ರೀ ನರಸಿಂಹ ಭಾರತೀ ತೀರ್ಥ – 1
1388
1408
ಶ್ರೀ ಪುರುಷೋಮ ಭಾರತೀ ತೀರ್ಥ – 1
1406
1448
ಶ್ರೀ ಶಂಕರ ಭಾರತೀ ತೀರ್ಥ
1429
1455
ಶ್ರೀ ಚಂದ್ರಶೇಖರ ಭಾರತೀ ತೀರ್ಥ – 2
1449
1464
ಶ್ರೀ ನರಸಿಂಹ ಭಾರತೀ ತೀರ್ಥ – 2
1464
1479
ಶ್ರೀ ಪುರುಷೋಮ ಭಾರತೀ ತೀರ್ಥ – 2
1473
1517
ಶ್ರೀ ರಾಮಚಂದ್ರ ಭಾರತೀ ತೀರ್ಥ
1508
1560
ಶ್ರೀ ನರಸಿಂಹ ಭಾರತೀ ತೀರ್ಥ – 3
1557
1573
ಶ್ರೀ ನರಸಿಂಹ ಭಾರತೀ ತೀರ್ಥ – 4
1563
1576
ಶ್ರೀ ನರಸಿಂಹ ಭಾರತೀ ತೀರ್ಥ – 5
1576
1600
ಶ್ರೀ  ಅಭಿನವ ನರಸಿಂಹ ಭಾರತೀ ತೀರ್ಥ – 1
1559
1623
ಶ್ರೀ ಸಚ್ಚಿದಾನಂದ ಭಾರತೀ ತೀರ್ಥ – 1
1622
1663
ಶ್ರೀ ನರಸಿಂಹ ಭಾರತೀ ತೀರ್ಥ – 6
1663
1706
ಶ್ರೀ ಸಚ್ಚಿದಾನಂದ ಭಾರತೀ ತೀರ್ಥ – 2
1706
1741
ಶ್ರೀ ಅಭಿನವ  ಸಚ್ಚಿದಾನಂದ ಭಾರತೀ ತೀರ್ಥ – 1
1741
1767
ಶ್ರೀ ನರಸಿಂಹ ಭಾರತೀ ತೀರ್ಥ – 7
1767
1770
ಶ್ರೀ ಸಚ್ಚಿದಾನಂದ ಭಾರತೀ ತೀರ್ಥ – 3
1770
1814
ಶ್ರೀ ಅಭಿನವ  ಸಚ್ಚಿದಾನಂದ ಭಾರತೀ ತೀರ್ಥ – 2
1814
1817
ಶ್ರೀ ನರಸಿಂಹ ಭಾರತೀ ತೀರ್ಥ – 8
1817
1879
ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ ತೀರ್ಥ
1866
1912
ಶ್ರೀ ಚಂದ್ರಶೇಖರ ಭಾರತೀ ತೀರ್ಥ – 3
1912
1964
ಶ್ರೀ ಅಭಿನವ ವಿದ್ಯಾ ತೀರ್ಥ 
1931
1989
ಶ್ರೀ ಭಾರತೀ ತೀರ್ಥ
1974 ರಲ್ಲಿ ಸನ್ಯಾಸ ಸ್ವೀಕಾರ.
2015 ರಲ್ಲಿ ಶಿಷ್ಯ ಪರಿಗ್ರಹ
-

ವೆಂಕಟೇಶ್ವರ ಪ್ರಸಾದ ಶರ್ಮ:

ಶೃಂಗೇರಿ ಮಠದ ಉತ್ತರಾಧಿಕಾರಿಗಳಾಗಲಿರುವ ವೆಂಕಟೇಶ್ವರ ಪ್ರಸಾದ್ ರವರು ವೇದಮೂರ್ತಿ ಶಿವಸುಬ್ರಹ್ಮಣ್ಯ ಅವಧಾನಿ ಹಾಗೂ ಸೀತಾ ದಂಪತಿಗಳ ಪುತ್ರರಾಗಿದ್ದು ಅವಧಾನಿಗಳು ಪ್ರಸ್ತುತ ತಿರುಮಲ ತಿರುಪತಿಯ ಧರ್ಮಗಿರಿ ಪಾಠ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಲಿದ್ದಾರೆ.  ವೇದವಿದ್ಯಾ ಪಾರಂಗತರಾದ ಅವಧಾನಿಗಳಿಗೆ ದೊಡ್ಡ ಸಂಖ್ಯೆಯ ಶಿಷ್ಯ ಸಮೂಹವಿದ್ದು ಅಂತಹಾ ಪಂಡಿತೋತ್ತಮರ ಪುತ್ರರಾದ ವೆಂಕಟೇಶ್ವರ ಪ್ರಸಾದ್ ರವರು ಕೆಲ ಕಾಲದವರೆಗೆ ತಿರುಪತಿಯಲ್ಲಿಯೇ ವೇದಾಧ್ಯಯನದಲ್ಲಿ ತೊಡಗಿದ್ದು ಕಳೆದ ಐದು ವರ್ಷಗಳಿಂದ ಶೃಂಗೇರಿಯಲ್ಲಿ  ನೆಲೆಸಿ  ವೇದಾಧ್ಯಯನದಲ್ಲಿ ತೊಡಗಿದ್ದಾರೆ. ಮಿತ ಭಾಷಿಯೂ, ಸದಾ ಅಧ್ಯಯನಶೀಲರೂ ಆಗಿರುವ ವೆಂಕಟೇಶ್ವರ ಪ್ರಸಾದರಿಗೆ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳೇ  ವೈಯುಕ್ತಿಕವಾಗಿ ಪಾಠ ಮಾಡುತ್ತಿರುವುದು ವಿಶೇಷವಾಗಿದೆ. ಯಾರಿಗಾಗಲೀ ಶ್ರೀಗಳು ಸ್ವತಃ ಪಾಠ ಮಾಡುವುದು ವಿರಳವಾಗಿದ್ದು ವೆಂಕಟೇಶ್ವರ ಪ್ರಸಾದರಲ್ಲಿನ ಅಗಾಧ ಪ್ರತಿಭಾ ಶಕ್ತಿಯು ಶ್ರೀಗಳ ದೃಷ್ಟಿಗೆ ಬಿದ್ದಿರುವುದೇ ಇದಕ್ಕೆ ಕಾರಣಾವೆನ್ನಲಾಗಿದೆ. ನ್ಯಾಯಶಾಸ್ತ್ರ, ಮೀಮಾಂಸೆ, ವೇದಾಂತ ಶಾಸ್ತ್ರಗಳಲ್ಲಿ ಇವರು ಪಾಂಡಿತ್ಯ ಸಾಧಿಸುತ್ತಲಿದ್ದಾರೆ.  

No comments:

Post a Comment