Saturday, January 31, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -44

ಶಬರಿಮಲೆ (Sabarimalai)
ಭಾಗ - 6

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ.
***
ಮಹಿಷಿಯ ಕ್ರೌರ್ಯ ಇನ್ನೂ ನಿ೦ತಿರಲಿಲ್ಲ. ಸಾಧು, ಋಷಿಗಳ ಕುಟೀರಗಳನ್ನೆಲ್ಲಾ ತನ್ನ ಮಾಯಾ ಶಕ್ತಿಯಿ೦ದಲೇ ಸುಟ್ಟು ನಾಶ ಮಾಡಿದಳು. ಋಷಿಮುನಿಗಳುಕಾಪಡಿ..ಕಾಪಾಡಿಎ೦ದು ಅಳುತ್ತಾ ಓಡುವುದಾ ಕ೦ಡು ಮಹಿಷಿಯು ನಗೆಯಾಡುತ್ತಾಳೆ.
ಹಾಗೆಯೇ ದೇವಲೋಕ, ಭೂಲೋಕಗಳಲ್ಲಿ ಅಬ್ವಳ ಅಟ್ತಹಾಸವು ಅತಿ ಭಯಾನಕವಾಗಿತ್ತು. ಇತ್ತ ಇಂದ್ರನಿಗೋ ಮಹಿಷಿಯನ್ನು ವಧಿಸುವ ಸಮಯ ಯಾವಾಗ ಬರುವುದೋ ಅನ್ನುವಂತಾಗಿತ್ತು... ಮಣಿಕಂಠನ ಜನನ, ಬಾಲ್ಯ, ವಿದ್ಯಾಭ್ಯಾಸವೆಲ್ಲವೂ ಮುಗಿದರೂ ಇನ್ನೂ ಅವನ ಜನ್ಮ ನಿಮಿತ್ತ ಕಾರ್ಯವು ಉಳಿದು ಬಿಟ್ಟಿದೆಯಲ್ಲ ಎನ್ನುವುದು ದೇವತೆಗಳ ಚಿಂತೆಗೆ ಕಾರಣಾವಾಗಿತ್ತು. ದೇವತೆಗಳ ಆತಂಕಕ್ಕೆ ನಾರದ ಮಹರ್ಷಿಗಳು ಸಮಾಧಾನ ಹೇಳುವರು...
ಇನ್ನೊಂದೆಡೆ ಮಹಿಷಿಗೂ ಸಹ ತನ್ನನ್ನು ವಧಿಸಲಿಕ್ಕೆಂದು ಒಬ್ಬ ಬಾಲಕನು ಭೂಲೋಕದ ಕಡೆಯಿಂದ ಬರುತ್ತಿರುವಂತೆ ಕನಸಾಗಿತ್ತು. ಅದರ ಕಾರಣದಿಂದ ಅವಳೊಮ್ಮೆ ಬೆಚ್ಚಿ ಬಿದ್ದಿದ್ದಳಾದರೂ ತನ್ನ ಸಹಚರ ಮಂತ್ರಿಗಳ ನಿರ್ಲಕ್ಷದ ಮಾತುಗಳಿಂದ ಕಡೆಗೆ ಹೆಚ್ಚು ಮನಗೊಟ್ಟಿರಲಿಲ್ಲ....
***
ರಾಜಶೇಖರನ ಅರಮನೆಯಲ್ಲಿ ಮಕ್ಕಳಿಬ್ಬರ ವಿದ್ಯಾಭ್ಯಾಸ ಮುಗಿದ ಹಿನ್ನೆಲೆಯಲ್ಲಿ ಮಣಿಕಂಠನ ಯುವರಾಜ ಪಟ್ತಾಭಿಷೇಕವನ್ನು ನೆರವೇರಿಸಲು ಮಹಾರಾಜನು ತೀರ್ಮಾನಿಸುತ್ತಾನೆ. ಅದಕ್ಕಾಗಿ ದಿನ ನಿಗದಿಯಾಗುವುದು. ಸಿದ್ದತೆಗಳೂ ನಡೆಯುತ್ತದೆ. ಅಷ್ಟರಲ್ಲಿ ರಾಜ್ಯದ ಮಂತ್ರಿಯುಮಹಾರಾಣಿಯವರಲ್ಲಿಗೆ ತೆರಳಿ ಮಹಾರಾಜರು ಮಣಿಕ೦ಠನಿಗೆ ಯುವರಾಜ ಪಟ್ಟಾಭಿಷೇಕ ಮಾಡಬೇಕೆ೦ದಿದ್ದಾರೆ. ಮಣಿಕ೦ಠ ಯಾರು... ತಮ್ಮ ಸ್ವ೦ತ ಮಗನೇ.., ಅಲ್ಲ. ರಾಜವ೦ಶದವನೇ.., ಅಲ್ಲ. ತ೦ದೆತಾಯಿ ಯಾರೋ ತಿಳಿಯದು. ಅರಣ್ಯದಲ್ಲಿ ದೊರಕಿದವನು. ಯಾರ ಮಗನೋ.. ಆತುರ ಪಡದೆ ನಿಧಾನವಾಗಿ ಯೋಚಿಸಿ. ತಮಗೂ ಒಬ್ಬ ಮಗನಿದ್ದಾನೆ. ತಮ್ಮ ಸ್ವ೦ತ ಕರುಳಿನ ಕುಡಿ. ಸದಾ ತಮ್ಮ ನೆರಳಲ್ಲೇ ಇರುವವನು. ತಮ್ಮನ್ನೇ ನ೦ಬಿರುವವನು... ಎಂದಿತ್ಯಾದಿಯಾಗಿ ಅವಳ ಮನಸ್ಸಿನಲ್ಲಿ ಮಣಿಕಂಠನ ಮೇಲೆ ಅಸೂಯೆ ಮೂಡುವಂತೆ ಮಾಡುತ್ತಾನೆ... ರಾಣಿಯೂ ಮೊದಲು ಅದನ್ನು ನಿರಾಕರಿಸಿದರೂ ಕೊನೆಯಲ್ಲಿ ಮಂತ್ರಿಗಳ ಸಲಹೆಗೆ ಕಿವಿಗೊಟ್ಟು ಮಣಿಕಂಠನ ಯುವರಾಜ ಪಟ್ಟಾಭಿಷೇಕವನ್ನು ನಿಲ್ಲಿಸಲು ತೀರ್ಮಾನಿಸುತ್ತಾಳೆ...
ಇತ್ತ ರಾಜನು ಇದಾವುದರ ಚಿಂತೆಯಿಲ್ಲದೆ ಪಟ್ತಾಭಿಷೇಕದ ಸಿದ್ದತೆಯ ಸಭೆಯಲ್ಲಿದ್ದಾಗ ಅರಮನೆಯ ಸೇವಕರಿ೦ದ, ಮಹಾರಾಣಿಯವರು ಉದರಶೂಲದಿ೦ದ ನರಳುತ್ತಿರುವ ಸಮಾಚಾರ ಬರುತ್ತದೆ. ರಾಜನು ನೆರೆದವರ ಕ್ಷಮೆಯನ್ನು ಕೋರಿ ತೆರಳುತ್ತಾನೆ.   ಅತೀವ ನೋವಿನಿ೦ದ ಬಳಲುತ್ತಿರುವ೦ತೆ ನಟಿಸುವ ಮಹಾರಾಣಿ, ರಾಜನ ಬಳಿ ಸಾಯುವ ಮಾತನ್ನಾಡುತ್ತಾಳೆ. ರಾಜನು ಇವೆಲ್ಲವನ್ನು ಕ೦ಡು ಬೆಚ್ಚಿಬೀಳುತ್ತಾನೆ ಮತ್ತು ರಾಣಿಯ ಆರೋಗ್ಯ ಸುಧಾರಿಸುವವರೆಗೂ ಪಟ್ಟಾಭಿಷೇಕ ಮಾಡುವುದಿಲ್ಲವೆ೦ದು ಬಿಡುತ್ತಾನೆ….!
ರಾಣಿಯ ಉದರಶೂಲೆಯ ಪರಿಶೀಲನೆಗೆ ರಾಜ ವೈದ್ಯರು ಆಗಮಿಸುತ್ತಾರೆ... ಅವರು ತಕ್ಕಷ್ಟು ಗಿಡಮೂಲಿಕೆಗಳಿಂದ ಉಪಚರಿಸುತ್ತಾರೆ...ಮತ್ತೆ ಅದಾಗ ಮಂತ್ರಿಯು ತಾನೊಬ್ಬ ನಕಲಿ ವೈದ್ಯನನ್ನು ಗೊತ್ತುಮಾಡಿಕೊಂಡು ಬಂದು ರಾಣಿಯ ಉದರಶೂಲೆಯ ಪರೀಕ್ಷೆಗೆ ಮುಂದಾಗುತ್ತಾನೆ... ಅದಾಗ ನಕಲಿ ವೈದ್ಯನು... ಇದಕ್ಕೆ ಉದರ ಶೂಲೆ ಎ೦ದು. ನರಮಾ೦ಸ ಭಕ್ಷಕರಾದ ರಾಕ್ಷಸರಿಗೆ ಬರುವ೦ತಹ ಹೊಟ್ಟೆನೋವು. ಇದಕ್ಕೆ ಔಷಧಿ. ನನ್ನ ಬಳಿ ಇದೆ. ಹಿಮಾಲಯದಿ೦ದ ತ೦ದಿರುವ ಅಶ್ವಿನೀ ಮೂಲಿಕೆ. ಅದನ್ನು ಸೇವಿಸಿದರೆ ಸಾಕು. ಎ೦ಥಾ ಉದರ ಶೂಲೆಯಾದರೂ ಸರಿ, ಕ್ಷಣಮಾತ್ರದಲ್ಲಿ ಗುಣವಾಗುವುದು.
ಮೂಲಿಕೆಯನ್ನು ಅರೆದು, ಹುಲಿಯ ಹಾಲಿನಲ್ಲಿ ಬೆರೆಸಿ ಕುಡಿಸಬೇಕು ಎನ್ನುತ್ತಾನೆ... ಅದರಿಂದ ಮಹಾರಾಜನ ಚಿಂತೆ ಇನ್ನಷ್ಟು ಗಾಢವಾಗುತ್ತದೆ... ಕಾಡಿಗೆ ಹೋಗುವವರು ಯಾರು. ಮರಿ ಹಾಕಿರುವ ಹೆಣ್ಣು ಹುಲಿಯನ್ನು ಹುಡುಕುವವರು ಯಾರು. ಅದನ್ನು ಹಿಡಿದ ಹಾಲು ಕರೆಯುವವರು ಯಾರು...! ಅಯ್ಯೋ ದೇವರೇ... ಈಗ ನಾನು ಏನು ಮಾಡಲೀ... ನಾನೇನು ಮಾಡಲೀ... ಎನ್ನುತ್ತಾ,,, ಅರಮನೆ ಸಭಾ೦ಗಣದಲ್ಲಿ ರಾಜನು ಚಿ೦ತಿತನಾಗಿ ಕುಳಿತು ರೋದಿಸುವ ವೇಳೆ ಮಣಿಕ೦ಠನು ಬರುತ್ತಾನೆ ಮತ್ತು.. ದುಃಖಿಸಬೇಡಿ ಅಪ್ಪಾಜಿ. ಹುಲಿಯ ಹಾಲನ್ನು ನಾನು ತರುತ್ತೇನೆ. ಎನ್ನುತ್ತಾನೆ... ರಾಜನು ತಾನೆಷ್ಟೇ ಬೇಡವೆಂದರೂ ಆಲಿಸದೇ.. ಅಪ್ಪಾಜಿ, ದೈವಸ೦ಕಲ್ಪವಿಲ್ಲದೆ ಒ೦ದು ಹುಲ್ಲು ಗರಿಕೆಯು ಆಡದು. ಯಾವ ಮಹತ್ಕಾರ್ಯಕ್ಕಾಗಿ ಅಮ್ಮನಿಗೆ ನೋವು ಕಾಣಿಸಿಕೊ೦ಡಿದೆಯೋ ಯಾರಿಗೆ ಗೊತ್ತು...! ಮಾತೃ ದೇವರ ಸೇವೆಗೆ ನನಗೆ ಇದೊ೦ದು ಅವಕಾಶ ಸಿಕ್ಕಿದೆ. ದಯವಿಟ್ಟು ನನ್ನನ್ನು ತಡೆಯಬೇಡಿ. ಆಶೀರ್ವಾದ ಮಾಡಿ. ಎಂದು ತನ್ನ ಅಪ್ಪಾಜಿಯೊಡನೆ ಎರಡೂ ಕೈಮುಗಿದು ಮನವಿಯನ್ನು ಮಾಡುತ್ತಾನೆ. ಇದರಿಂದ ಹರ್ಷಗೊಂಡ ಮಹಾರಾಜನು ಮಣಿಕ೦ಠನನ್ನು ಅಪ್ಪಿಕೊಳ್ಳುತ್ತಾನೆ.
ಮಣಿಕಂಠ ಹುಲಿಯ ಹಾಲನ್ನು ತರಲು ಕಾಡಿಗೆ ತೆರಳುತ್ತಾನೆ....
ನಿಗದಿಯಾಗಿದ್ದ ಯುವರಾಜ ಪಟ್ಟಾಭಿಷೇಕ ನಿಂತು ಹೋಗುತ್ತದೆ.....
ಮಂತ್ರಿಯ ತಂತ್ರವು ಫಲಿಸುತ್ತದೆ.....
ಮಹಾವಿಷ್ಣುವಿನ ಲೀಲೆಯಂತೆ ಮಹಿಷಿಗೆ ಮರಣಾ ಕಾಲವು ಸಮೀಪವಾಇರುತ್ತದೆ....!!

Friday, January 30, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -43

ಶಬರಿಮಲೆ (Sabarimalai)
ಭಾಗ - 5

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ.
***

ಅರಮನೆಯನ್ನು ಸೇರಿದ ಶಿಶುವಿನ ಕಾರಣದಿಂದ ರಾಜ ರಾಣಿಯರ ಸಂತಸಕ್ಕೆ ಪಾರವಿರುವುದಿಲ್ಲ. ಮು೦ದೊ೦ದು ದಿನ ಮಗುವಿನ ನಾಮಕರಣಕ್ಕಾಗಿ ಪ೦ಡಿತರು, ಆಚಾರ್ಯರ ಮತ್ತು ಗುರುಗಳ ಸಮ್ಮುಖದಲ್ಲಿ ರಾಜರಾಣಿಯರು ಮಗುವಿನೊ೦ದಿಗೆ ಕುಳಿತಿರಲು... ರಾಜ ಗುರುಗಳು ಮಗು ಉತ್ತರಾ ನಕ್ಷತ್ರದಲ್ಲಿ ಜನಿಸಿರುವುದರಿ೦ದ ಲೋಕ ವಿಖ್ಯಾತನಾಗುತ್ತಾನೆ. ಹುಟ್ಟುವಾಗಲೇ ಕೊರಳಲ್ಲಿ ದಿವ್ಯವಾದ ಮಣಿ ಇರುವುದರಿ೦ದ ಇವನಿಗೆ "ಮಣಿಕ೦ಠ" ಎ೦ದು ಹೆಸರಿಡಿ. ಶುಭವಾಗುವುದು ಎನ್ನಲು ಇಬ್ಬರೂ ಸಂತಸದಿಂದೊಪ್ಪಿ ಅದೇ ಹೆಸರನ್ನಿಟ್ಟು ಮಗುವನ್ನು ಕರೆದು ಮುದ್ದಾಡುತ್ತಾರೆ. ಇನ್ನು ಮಣಿಕ೦ಠನನ್ನು ತೊಟ್ಟಿಲು ತೂಗುವ ಶುಭ ಘಳಿಗೆ. ಕಾರ್ಯ ವೈಭವದಿ೦ದ ನೆರವೇರುವುದು
ಹೀಗಿರಲು ಕೆಲ ಕಾಲಾನ೦ತರ ಇನ್ನೊಬ್ಬ ಗ೦ಡು ಮಗುವನ್ನು ಪಡೆದ ರಾಜರಾಣಿಯರು ಸದಾ ಕ್ರತಜ್ಞರಾಗಿ ದೇವರ ಪೂಜೆ ಪುರಸ್ಕಾರಗಳನ್ನು ನಿಷ್ಠೆಯಿ೦ದ ನೆರವೆರಿಸುತ್ತಾ ಮಕ್ಕಹೊಡನೆ ಆಟದಲ್ಲಿ ತೊಡಗಿದರು. ಮಕ್ಕಳು ಬಾಲಕರಾಗಿ ಬೆಳೆದು ನಿ೦ತರು. ರಾಜನು ಅವರೀರ್ವರನ್ನೂ ಸೂಕ್ತ ಶಿಕ್ಷಣ ಪಡೆಯುವ ಉದ್ದೇಶದಿಂದ ಗುರುಕುಲಕ್ಕೆ ಕಳಿಸಲು ತೀರ್ಮಾನಿಸಿದನು. ಗುರುಕುಲದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವ ರಾಜಕುಮಾರರು ಕಾಲಕ್ರಮೇಣ ಸಕಲ ವಿದ್ಯೆಗಳಲ್ಲಿ ಪಾರ೦ಗತರಾಗುತ್ತಾರೆ.. ಮಣಿಕಂಠನು ತಾನು ಸಕಲ ಶಾಸ್ತ್ರವಿದ್ಯೆಗಳೊಡನೆ ಬಿಲ್ವಿದ್ಯೆ, ಕತ್ತಿವರಸೆಯಲ್ಲಿಯೂ ಪ್ರಾವೀಣ್ಯತೆ ಮೆರೆದು ಗುರುಗಳಿಂದ ಸೈ ಎನಿಸಿಕೊಳ್ಳುತ್ತಾನೆ.
ದಿನ ಗುರುಕುಲದಲ್ಲಿ೦ದು ಎಲ್ಲರ ಬುದ್ಧಿ ಪರೀಕ್ಷೆಯ ದಿನ... ಗುರುಗಳು ತನ್ನ ವಿದ್ಯಾರ್ಥಿಗಳ ಬುದ್ದಿಮತ್ತೆ ಪರೀಕ್ಷೆಗಾಗಿ ಪ್ರಶ್ನೆಗಳಾನ್ನು ಕೇಳುತ್ತಾರೆ. ಎಲ್ಲಾ ಪ್ರಶ್ನೆಗಳಿಗೆ ಬೇರೆಲ್ಲಾ ಶಿಷ್ಯರಿಗಿಂತಲೂ ಮಣಿಕಂಠನು ಹೆಚ್ಚು ಸಮರ್ಪಕ ಉತ್ತರವನ್ನು ನೀಡುತ್ತಾ ಹೋಗುತ್ತಾನೆಹೀಗೆ ತನ್ನ ವಿದ್ಯಾಭ್ಯಾಸ ಅವಧಿಯನ್ನು ಪೂರೈಸಿದ ಮಣಿಕಂಠನು ಗುರುಗಳಿಗೆ ವ೦ದಿಸುದಕ್ಕಾಗಿ ಮಣಿಕ೦ಠನು ಗುರುಕಾಣಿಕೆಯೊ೦ದಿಗೆ ಸೇವಕರೊಡಗೂಡಿ ಆಶ್ರಮಕ್ಕೆ ಬರುವನು.
ಗುರುಗಳಿಗೆ ನಮೋ ನಮಃ. ಕಲಿಸಿದ ವಿದ್ಯೆಗೆ ಬೆಲೆ ಕಟ್ಟುವುದು, ಆಕಾಶದ ಉದ್ದ ಅಗಲಗಳನ್ನು ಅಳೆಯುವುದು ಎರಡೂ ಒ೦ದೇ. ಆದರೆ, ಕರ್ತವ್ಯ ದ್ರಷ್ಟಿಯಿ೦ದ ದಕ್ಷಿಣೆ ತ೦ದಿದ್ದೇನೆ. ದಯಮಾಡಿ ಸ್ವೀಕರಿಸಬೇಕು. ಗುರುಗಳು ಅದನ್ನು ನಿರಾಕರಿಸುತ್ತಾರೆ. ಅದರಿಂದ ಅಚ್ಚರಿಗೊಂಡ ಮಣಿಕಂಠನು ತಮ್ಮ ನಿರ್ಧಾರಕ್ಕೆ ಕಾರಣವೇನೆಂದು ಕೇಳಲು  ಗುರುಗಳು ಇಂತೆನ್ನುತ್ತಾರೆ-        ನನಗಿರುವವನು ಒಬ್ಬನೇ ಮಗ. ಅವನ ಹೆಸರು ಸರ್ವೋತ್ತಮ. ಅವನಿಗೆ ಕಣ್ಣೂ ಕಾಣದು, ಮಾತೂ ಬಾರದು. ಸದಾ ಜಡ ವಸ್ತುವಿನ೦ತೆ ಬಿದ್ದಿರುತ್ತಾನೆ. ಅವನ ಸ್ತಿತಿಯನ್ನು ಕ೦ಡಾಗಲೆಲ್ಲಾ, ದೇವರು ನನಗೆ ಕೊಟ್ಟಿರುವ ದ೦ಡನೆಯನ್ನು ನೆನೆದು ಕಣ್ಣೀರಿಡುತ್ತೇನೆ. ನೂರಾರು ಮಕ್ಕಳಿಗೂ ವಿದ್ಯಾದಾನ ಮಾಡಿದರೂ ನನ್ನ ಪೂರ್ವಜನ್ಮದ ಪಾಪ ಇನ್ನೂ ಕರಗಲಿಲ್ಲ. ಇನ್ನೂ ಕರಗಲಿಲ್ಲ ಮಣಿಕ೦ಠ, ಇನ್ನೂ ಕರಗಲಿಲ್ಲಾ.... ಹೀಗಿರುವಾಗ, ನಿನ್ನ ಗುರುಕಾಣಿಕೆಯನ್ನು ತೆಗೆದುಕೊ೦ಡು ನಾನು ಯಾವ ಸುಖ ಪಡಲಿ. ಹೇಗೆ ಸುಖ ಪಡಲಿ. ನೀನೇ ಹೇಳು ಮಣಿಕ೦ಠ... ನೀನೇ ಹೇಳು……
ಅದಕ್ಕೆ ಮಣಿಕಂಠನು ದುಃಖಿಸಬೇಡಿ ಗುರುಗಳೇ, ಧೈರ್ಯವಾಗಿರಿ. ಪರಮಾತ್ಮ ಒಳ್ಳೆಯವರನ್ನು ಎ೦ದಿಗೂ ಕೈಬಿಡುವುದಿಲ್ಲ. ಎಂದು ನುಡಿದು ಗುರುಗಳ ಕುಟೀರಕ್ಕೆ ತೆರಳುತ್ತಾನೆ. ಬಾಗಿಲು ತೆರೆ ದಾಗ . ಒಳಗೆ ಸರ್ವೋತ್ತಮ ಕ೦ಬವೊ೦ದಕ್ಕೆ ಒರಗಿ ಜಡವಾಗಿ ಕುಳಿತಿದ್ದಾನೆ. ಮಣಿಕ೦ಠನು ಒಳಗೆ ನಡೆದು ಅವನ ಹತ್ತಿರ ಬ೦ದು ಸರ್ವೋತ್ತಮ, ಏಕೆ ಮ೦ಕಾಗಿ ಕುಳಿತಿರುವೆ. ಏಳು ಮೇಲೆ. ಎನ್ನುತ್ತಾನೆ ಅದಾಗ ಧ್ವನಿಯನ್ನು ಕೇಳಿ ಮೇಲೇಳುತ್ತಾ ಗದ್ಗರಿಸುತ್ತಾ, ಮಣಿಕ೦ಠನನ್ನು ಸ್ಪರ್ಶಿಸಿ ನೋಡುತ್ತಾನೆ ನಾನು, ನಿನ್ನ ಗೆಳೆಯ. ನಿನ್ನೊಡನೆ ಮಾತನಾಡಲು ಬ೦ದಿದ್ದೇನೆ.. ಮಣಿಕಂಠ ಮತ್ತೆ ಹೇಳುತ್ತಾನೆ.. ಅದಕ್ಕೆ ಉತ್ತರವಾಗಿ ಸರ್ವೋತ್ತಮನು ಕೈಸ೦ಜ್ಞೆಯಿ೦ದಲೇ ತನ್ನ ನೂನ್ಯತೆಯನ್ನು ತಿಳಿಯಪಡಿಸುತ್ತಾನೆ
ಚಿ೦ತಿಸಬೇಡ. ನಿನಗೆ ಭಗವ೦ತನ ಅನುಗ್ರಹವಾಗಿದೆ ಎನ್ನುತ್ತಾ.... ಸರ್ವೋತ್ತಮನ ಶಿರದಲ್ಲಿ ತನ್ನ ಅಮ್ರತ ಹಸ್ತವನ್ನು ಇರಿಸಿ.... ಈಗ ಹೇಳು "ಓ೦..." ಎನ್ನಲು  ಸರ್ವೋತ್ತಮ ತೊದಲುತ್ತಾ ಪ್ರಯತ್ನಿಸುತ್ತಾನೆ. ಕೂಡಗೆ ತಲೆಯಾಡಿಸುತ್ತಾನೆ
ಹೆದರಬೇಡ, ’ಓ೦ಕಾರವನ್ನು ಹೇಳುವ ಶಕ್ತಿ ನಿನ್ನಲಿದೆ. ಹ್ಹುಮ್ ಹೇಳು... ’ಓ೦’...... ಎಂದು ಧೈರ್ಯ ಹೇಳುತ್ತಾನೆ. ಬಾರಿ ಸರ್ವೋತ್ತಮ ತೊದಲುತ್ತಾ ಮೊದಲ್ಗೊ೦ಡು ಕೊನೆಗೆ ಓ೦ಕಾರವನ್ನುn ನುಡಿಯುತ್ತಲೇ ಹರ್ಷಿತನಾಗುತ್ತಾನೆ.
ಹೂಮ್ ಹೇಳು. "ಓ೦ ನಮಃ ಶಿವಾಯ"......... ಎನ್ನಲು ಸರ್ವೋತ್ತಮನು ತಾನೂ ಓ೦ ನಮಃ ಶಿವಾಯ... ಓ೦ ನಮಃ ಶಿವಾಯ.... ಹರ್ಷೋಲ್ಲಸಿತನಾಗಿ ಬಾರಿ ಬಾರಿ ಶಿವ ಷಢಾಕ್ಷರೀ ಮ೦ತ್ರವನ್ನು ನಡಿಯತ್ತಾನೆ. ಮತ್ತು ತನಗೆ ಮಾತಆಡಲು ಬರುತ್ತಿರುವುದಕ್ಕೆ ಹರ್ಷಿತನಾಗುತ್ತಾನೆ. ಆಗ ಮಣಿಕಂಠನು ಹಾಗೆಯೇ ಕಣ್ತೆರೆದು ನೋಡು.... ಎಂದಾಗ ಅ೦ತೆಯೇ, ಕಣ್ಣು ತೆರೆದು ನೋಡಲು ತನ್ನೆದುರು ನಿ೦ತಿರುವ ದಿವ್ಯತೇಜೋ ಸ್ವರೂಪಿ ಮಣಿಕ೦ಠನನ್ನು ಸರ್ವೋತ್ತಮ ಕಾಣುತ್ತಾನೆ. ಹರುಷದಿ೦ದ ನಗುತ್ತಾ , ’ಆಹಾಎನ್ನುತ್ತಾ, ಸುತ್ತಲೂ ಒಮ್ಮೆ ನೋಡುತ್ತಾನೆ.. ತನ್ನೆರಡೂ ಕೈಗಳಿ೦ದ ಮಣಿಕ೦ಠನನ್ನು ಅಪ್ಪಿ, ಕರೆದು ಕುಳ್ಳಿರಿಸುತ್ತಾನೆ. ಪಕ್ಕದಲ್ಲೇ ಇರಿಸಿರುವ ತಟ್ಟೆ, ನೀರು, ಹೂವನ್ನು ತ೦ದು ಮಣಿಕ೦ಠನ ಪಾದವ ತೊಳೆದು, ಹೂವ ಅರ್ಪಿಸಿ ಪಾದಪೂಜೆ ಮಾಡುತ್ತಾನೆಕೈಜೋಡಿಸಿ ನಮಿಸಿ ಸ್ತುತಿಸುತ್ತಾನೆ....
ಅಷ್ಟರಲ್ಲಿಮಗೂ, ಸರ್ವೋತ್ತಮ..., ಸರ್ವೋತ್ತಮ...’ ಎ೦ದು ತ೦ದೆತಾಯಿಯರು ಎಚ್ಚರಿರಿಸುತ್ತಲೇ.... ಪ್ರವೇಶಿಸುತ್ತಾರೆ... ಅದರಲ್ಲಾಗಲೇ ಮಣಿಕಂಠನು ತಾನು ಆಶ್ರಮದಿಂದ ಮಾಯವಾಗಿರುತ್ತಾನೆ... ಆಚಾರ್ಯರೂ ಅವರ ಪತ್ನಿಯೂ ತಾವು ಕಂಡದ್ದನ್ನು ನಂಬಲಾಗದೆ ದಿಗ್ಮೂಢರಾಗುತ್ತಾರೆ. ಭಗವ೦ತಾ, ನೀನೆ೦ತಾ ದಯಾಮಯಿ... ನಮ್ಮ ಜನ್ಮ ಸಾರ್ಥಕವಾಯಿತು ತ೦ದೇ. ನಮ್ಮ ಜನ್ಮ ಸಾರ್ಥಕವಾಯಿತು.ಕ೦ದಾ, ಭಗವ೦ತಾ ಎನ್ನುತ್ತಾ ಮಗನನ್ನು ಅಪ್ಪಿ ಹಿಡಿದು ಇಬ್ಬರೂ ಅಳುವರು.


Thursday, January 29, 2015

ನಮ್ಮಲ್ಲಿನ ಸ್ಥಳ ಪುರಾಣಾಗಳು (Myths) -42

ಶಬರಿಮಲೆ (Sabarimalai)
ಭಾಗ - 4

ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಜಗದ್ವಿಖ್ಯಾತಿ ಗಳಿಸಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಜನವರಿ ತಿಂಗಳುಗಳ ನಡುವೆ ಸುಮಾರು ೫೦ ಲಕ್ಷ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಪಶ್ಚಿಮ ಘಟ್ಟಗಳ ನಡುವೆ ಇರುವ ದೇವಾಲಯವು ಜನರ ಶ್ರದ್ದಾ ಕೇಂದ್ರವಾಗಿರುವುದರೊಡನೆಯೇ ಸುತ್ತಲಿನ ಹಸಿರಿನಿಂದ ತುಂಬಿದ ವನಸಿರಿಯಿಂದಾಗಿ ಪ್ರಕೃತಿ ಪ್ರಿಯರಿಗೂ ಬಹಳವೇ ಅಚ್ಚುಮೆಚ್ಚಾಗಿದೆ. ಇಲ್ಲಿನ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ರಾಮಾಯಣ ಕಾಲದಲ್ಲಿ ತಾಯಿ ಶಬರಿಯು ಶ್ರೀ ರಾಮನ ದರುಶನಕ್ಕಾಗಿ ಕಾದು ಕುಳಿತ ಸ್ಥಳವಿದು ಎನ್ನುವ ಪ್ರತೀತಿಯೂ ಸ್ಥಳಕ್ಕಿದೆ. ಶಬರಿಯ ಆಶ್ರಮವಿದ್ದ ಸ್ಥಳಕ್ಕೆ ಇದೇ ಕಾರಣದಿಂದಾಗಿ ಶಬರಿಮಲೆ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ.
***


 ತಾನಾಡಿದ ಮಾತಿನಂತೆಯೇ ಮಹಿಷಿಯು ಭೂಲೋಕಕ್ಕೆ ಬಂದು ಅಲ್ಲಿನ ತಪೋವನದಲ್ಲಿ ಯಜ್ಞ ಯಾಗಗಳಲ್ಲಿ ತೊಡಗಿದ್ದ ಋಷಿಗಳಿಗೆಲ್ಲಾ ಉಪಟಳ ನೀಡುತ್ತಾಳೆ, ಅವರ ಆಶ್ರಮ, ಯಾಗದ ಸ್ಥಳಗಳನ್ನು ಅಪವಿತ್ರಗೊಳಿಸುತ್ತಾಳೆ. ಇದರಿಂದ ದೇವತೆಗಳಿಗೆ ಸಲ್ಲಬೇಕಾದ ಯಥಾವತ್ ಪೂಜಾದಿಗಳು ನಿಂತುಹೋಗುತ್ತದೆ.
ಇತ್ತ ದೇವೇಂದ್ರ ಸಮೇತರಾದ ನಾರದರು ವೈಕುಂಠಕ್ಕೆ ತೆರಳಿ ಶ್ರೀ ಮಹಾವಿಷ್ಣುವಿನಲಿ ದೇವತೆಗಳಿಗೊದಗಿದ ಕಷ್ಟಗಳನ್ನು ಹೇಳಿಕೊಳ್ಳಲಾಗಿ ಶ್ರೀ ವಿಷ್ಣುವು ಅವರಿಗೆಕಾಲ ಸಮೀಪಿದೊಡನೆಯೇ ಮಹಿಷಿಯ ಸಂಹಾರವಾಗುವುದು. ಧೈರ್ಯವಾಗಿರಿ.’ ಎನ್ನುವ ಭರವಸೆ ನೀಡುತ್ತಾನೆ.
***
ಪಾ೦ಡ್ಯ ರಾಜ್ಯದ ಅರಸ ರಾಜಶೇಖರನ ಅರಮನೆಯಲ್ಲಿ........ರಾಜ, ರಾಣಿಯರು ಹರಿಹರರ ವಿಗ್ರಹಗಳ ಮು೦ದೆ ಪೂಜಾಕಾರ್ಯದಲ್ಲಿ ತೊಡಗಿದ್ದಾರೆ. ಹರಿಹರರ ಪೂಜಿಸುತ್ತಾ ನಾಮಾರ್ಚನೆಯನ್ನು ಮಾಡುತ್ತಾರೆ, ಆರತಿ ಬೆಳಗುತ್ತಾರೆ. ಅದೇ ವೇಳೆ ಹರನ ಹಣೆಯಿ೦ದ ಹೂವೊ೦ದು ಬೀಳುತ್ತಲೇ, ಪ್ರಸನ್ನನಾಗಿ ಅದನ್ನೆತ್ತಿಕೊ೦ಡು ಕಣ್ಣಿಗೊತ್ತಿ ರಾಜನು, ತನ್ನ ರಾಣಿಯ ಬಳಿ ಹೇಳುತಾನೆ.`` ನೋಡಿದೆಯಾ ದೇವೀ, ಶಿವನ ಪ್ರಸಾದ. ಬಲಗಡೆಯಿ೦ದ ಹೂವು ಬಿತ್ತು. ನಮಗೆ ಮಕ್ಕಳಿಲ್ಲವೆ೦ಬ ಚಿ೦ತೆ ಇ೦ದಿಗೆ ದೂರವಾಯಿತು. ನಮ್ಮಾಸೆ ಖ್ಂಡಿತಾ ನೆರವೇರುತ್ತದೆ.”
ಅದಾಗ ರಾಣಿಯು ನಿರಾಸೆಯಿಂದ ದೇವರಿಗೆ ನಮ್ಮ ಮೇಲೆ ಕರುಣೆಯಿದ್ದಿದ್ದರೆ,ಇಷ್ಟು ವರ್ಷಗಳು ನಾವು ಮಗುವಿಗಾಗಿ ಹ೦ಬಲಿಸಿ ಕಣ್ಣೀರಿಡಬೇಕಾಗಿತ್ತೇನು...!?” ಎಂದಾಗ ದೇವೀ, ಭವಿಷ್ಯವನ್ನು ಬಲ್ಲವರು ಯಾರೂ ಇಲ್ಲ. ಪರಮಾತ್ಮ ಒಲಿದರೆ  ಮಣ್ಣೂ ಹೊನ್ನಾಗುವುದು. ಯಾವುದೋ ಜನ್ಮದ ಪಾಪ ನಮ್ಮನ್ನು ಕಾಡಿಸಿತ್ತಿದೆಯಷ್ಟೇ. ದೇವರ ಕರುಣೆ ಕಿ೦ಚಿತ್ತೂ ದೊರಕಿದರೆ ಸಾಕು, ನಮ್ಮ ನೋವು ನಿರಾಶೆಗಳೆಲ್ಲಾ ಕರ್ಪೂರದ೦ತೆ ಸುಟ್ಟು ಹೋಗುತ್ತವೆ. ಎದೆಗು೦ಧದೆ ಶುಭ ದಿನಗಳನ್ನು ಎದುರು ನೋಡೋಣಾ.....” ಎಂದು ಸಮಾಧಾನಿಸುತ್ತಾನೆ.
ಅಷ್ಟರಲ್ಲಿ ಪ೦ದಳ ರಾಜ್ಯದ ಸುತ್ತ ಮುತ್ತಾ ಕಾಡುಪ್ರಾಣಿಗಳ ಹಾವಳಿ ಹೆಚ್ಚಿರುವ ವಾರ್ತೆ ರಾಜನನ್ನು ತಲುತ್ತದೆ. ರಾಜನು, ಸೈನಿಕ ಪಡೆಯೊ೦ದಿಗೆ ಕಾಡಿಗೆ ಬೇಟೆಯಾಡಲು ಆನೆ ಮೇಲೆ ಹೊರಡುತ್ತಾನೆ
ಅದೇ ಸಮಯದಲ್ಲಿ ದೇವಲೋಕದಲ್ಲಿ ಹರಿಹರರ ಸಂಗಮಕಾಲವು ಕೂಡಿ ಬರುತ್ತದೆ. ಹರಿಹರರ ಸಮಾಗಮದ ಫಲವಾಗಿ ಅತೀವ, ಅನನ್ಯ, ದಿವ್ಯ ಕಾ೦ತಿಯೊ೦ದು ಜನಿಸಿ ಪ್ರಜ್ವಲಿಸಲು ಆರ೦ಭಿಸುತ್ತದೆ. ಪೂರ್ಣಾಕಾರವಾಗಿ ದಿವ್ಯಪ್ರಭೆಯಿ೦ದ ಬೆಳಗುವ ಜ್ಯೋತಿಯ ಕ೦ಡು ಧನ್ಯರಾಗಿ ಋಷಿಗಳು, ದೇವತೆಯರು ಮ೦ತ್ರ ಮಾಲೆಯಿ೦ದ ನಮಿಸುತ್ತಾರೆ. ಹರಿಹರರು ಮುಗುಳ್ನಗುತ್ತಾ ಲೀಲೆಯನ್ನು ಮೆರೆಯುತ್ತಾರೆ. ದಿವ್ಯಜ್ಯೋತಿಯು ಭೂಮುಖವಾಗಿ ಚಲಿಸಲು ಆರ೦ಭಿಸಿ, ದಟ್ಟಾರಣ್ಯವೊ೦ದರಲ್ಲಿ ಶಿವಲಿ೦ಗದ ಎದುರಲ್ಲಿ ತಲುಪಿ, ನವಜಾತ ಶಿಶುವಿನ ರೂಪವಾಗಿ ಪ್ರತ್ಯಕ್ಷವಾಗುತ್ತದೆ. ಬ್ರಹ್ಮ, ವಿಷ್ಣು, ಮಹೇಶ್ವರರು ಪುಷ್ಪಧಾರೆಯೆರೆದು ಆಶೀರ್ವದಿಸುತ್ತಾರೆ.  ನಾಗದೇವನು ಪ್ರತ್ಯಕ್ಷನಾಗಿ ಹರಿಹರ ಶಕ್ತಿಯ ಸಾಕಾರ ರೂಪನಾಗಿ ಜನ್ಮ ತಳೆದ ಪುಟ್ಟ ಬಾಲಕನ ಪಕ್ಕದಲ್ಲೇ ನಾಗರೂಪನಾಗಿ ಕಾವಲಾಗಿ ಕೂರುತ್ತಾರೆ.
ಇತ್ತ ಬೇಟೆಗೆ ಹೊರಟ ರಾಜಶೇಖರನು ತನ್ನ ಗು೦ಪಿನೊ೦ದಿಗೆ ಸಕಲ ತಯಾರಿಗಳೊ೦ದಿಗೆ ಮ೦ತ್ರಿಯೊಡನೆ ಕಾಡಿನಲ್ಲಿ ಮುನ್ನುಗ್ಗುತ್ತಾನೆ. ಪ್ರಾಣಿಗಳನ್ನು ಬೆದರಿಸುತ್ತಾ ಬಿಲ್ಲು ಬಾಣ ಹಿಡಿದು ರಾಜನು ಮುನ್ನಡೆಸುತ್ತಾನೆ. ಹುಲಿಯೊಂದು ರಾಜನ ಕಣ್ಣಿಗೆ ಕಾಣಿಸಿಕೊಂಡಾಗ ಅದರತ್ತ ಬಾಣ ಹೂಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಮಗುವೊ೦ದು ಅಳುವ ಧ್ವನಿಯನ್ನು ಕೇಳಿ ನಿ೦ತುಬಿಡುತ್ತಾನೆ. ಮತ್ತೆ ಮಂತ್ರಿಗಳನ್ನು ಕರೆದ ರಾಜನು ಗು೦ಡಾರಣ್ಯದಲ್ಲಿ ಮಗುವಿನ ಆಕ್ರ೦ದನ ಕೇಳಿ ಬರುತ್ತಿದೆಯಲ್ಲಾ... ಬನ್ನಿ ನೋಡೋಣಾ...... ಎಂದು ಧ್ವನಿ ಕೇಳಿ ಬರುತ್ತಿದ್ದ ಕಡೆಗೆ ಸಾಗಿದ ರಾಜ, ಮ೦ತ್ರಿಗಳು ಹರಿಹರ ಶಕ್ತಿರೂಪ ಬಾಲಕನ ಹತ್ತಿರ ಬರುವರು. ನಾಗದೇವನು ಸರಿಯಾದ ಸಮಯಕ್ಕೆ ಅದ್ರಶ್ಯನಾಗುವನು. ರಾಜನು ಆಶ್ಚರ್ಯದಿ೦ದ ನೋಡುತ್ತಾನೆ ಮತ್ತು ಅಷ್ಟೇ ಆನ೦ದಗೊಳ್ಳುತ್ತಾನೆ.
ರಾಜನು ಮಗುವನ್ನು ಎತ್ತಿಕೊಳ್ಳಲು ಮುಂದಾಗುತ್ತಾನೆ. ಆಗ ಜತೆಯಲ್ಲಿದ್ದ ಮಂತ್ರಿಯು ಬೇಡಿ ಪ್ರಭು, ಮುಟ್ಟಬೇಡಿ. ಯಾರ ಶಿಶುವೋ ಏನೋ....! ಏಕೆ ಮುಟ್ಟುತ್ತೀರಿ....? ಮುಟ್ಟಬೇಡಿ ಪ್ರಭು, ಸದಾ ಮಕ್ಕಳ್ಳಿಲ್ಲದೆ ಕೊರಗುತ್ತಿರುವ ತಮಗೆ, ಇಲ್ಲಿ ಮಗುವನ್ನು ಕ೦ಡ ತಕ್ಷಣ ಹಾಗೆನಿಸುತ್ತಿದೆ ಅಷ್ಟೇ.! ಯಾರೋ ತ೦ದು ಶಿವಲಿ೦ಗದ ಮಲಗಿಸಿದ್ದಾರೆ. ಯಾರು, ಯಾರಿದ್ದೀರಿ... ಯಾರದೀ ಮಗು....!?” ಎಂದು ಅನುಮಾನ ವ್ಯಕ್ತಪಡಿಸುತ್ತಾನೆ.
 ಅಲ್ಲೇ ಕ್ಷಣಕ್ಕೆ ಪ್ರತ್ಯಕ್ಷರಾದ ಋಷಿಯೋರ್ವರು ಮು೦ದೆ ಬ೦ದರುಮಹಾರಾಜ, ಮಗುವಿಗಾಗಿ ಏಕೆ ಇಷ್ಟು ಚಿ೦ತಿಸುತ್ತಿರುವೇ...!?’ ಎನ್ನಲು ಮಂತ್ರಿಯು :’’ಋಷಿವರ್ಯ, ಮಗು ತಮ್ಮದೇ....?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಋಷಿಯು ಅಲ್ಲ; ಮಹಾರಾಜ, ನಿನ್ನ ಪೂಜೆಗೆ ಮೆಚ್ಚಿ ದೇವರು ಕರುಣಿಸಿರುವ ದಿವ್ಯ ಫಲವೇ ಮಗು. ಇದನ್ನು ಅರಮನೆಗೆ ತೆಗೆದುಕೊ೦ಡು ಹೋಗು. ಕತ್ತಲಾಗಿರುವ ನಿನ್ನರಮನೆಯು, ಮನಸ್ಸು  ಬೆಳಕಾಗುವುದು. ನಿನಗೆ ಶುಭವಾಗುವುದು. ಇವನಿಗೆ ಹನ್ನೆರಡು ವರುಷಗಳಾದ ನ೦ತರ ಜಗತ್ತಿಗೇ ಇವನ ಮಹಿಮೆ ತಿಳಿಯುವುದು”. ಎಂದು ನುಡಿಯುತ್ತಲೇ ಋಷಿಗಳು ಅದ್ರಶ್ಯರಾಗುತ್ತಾರೆ
ಮಹಾರಾಜನು ಆನಂದದಿಂದ ತುಂಬಿದವನಾಗಿ ಬಳಿಯಲ್ಲಿದ್ದ ಶಿವಲಿಂಗಕ್ಕೆ ವಂದಿಸುತ್ತಾ.. ಮಹಾಪ್ರಸಾದ... ಪ್ರಭೂ.... ಇ೦ದು ನಮ್ಮ ಭಾಗ್ಯವೇ ಭಾಗ್ಯ, ಭಾಗ್ಯವೇ ಭಾಗ್ಯ. ( .....ಎನ್ನುತ್ತಾ ಮುನ್ನಡೆಯುತ್ತಾನೆ ಶಿಶುವನ್ನು ಅರಮನೆಗೆ ತೆಗೆದುಜೊಂಡು ಬರುತ್ತಾನೆ.