Wednesday, April 22, 2015

ನಮ್ಮಲ್ಲಿನ ಸ್ಥಳ ಪುರಾಣಗಳು (Myths) – 50

ಪ್ರಿಯ ಸ್ನೇಹಿತರೆ, ನಾನು ಕಳೆದ ಒಂದು ಒಂದೂವರೆ ವರ್ಷದಿಂದ ಪ್ರಾರಂಭಿಸಿದ "ನಮ್ಮಲ್ಲಿನ ಸ್ಥಳ ಪುರಾಣಗಳು' (Myths)'' ಲೇಖನ ಸರಣಿಯು ಇದೀಗ 50ನೇ ಕಂತು ಮುಟ್ಟಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಮಿಮವೆನ್ನದೆ ಭರತದ ಎಲ್ಲೆಡೆಯ ಪ್ರಾಚೀನ ತೀರ್ಥಕ್ಷೇತ್ರಗಳ ಸ್ಥಳ ಮಹಿಮೆ/ಪುರಾಣಗಳನ್ನು ಎಲ್ಲರಿಗೂ ತಿಳಿಯಪಡಿಸುವ ಉದ್ದೇಶದಿಂದ ಪ್ರಾರಂಭಿಸಿದ ಈ ಲೇಖನ ಸರಣಿಯನ್ನು ತಾವೆಲ್ಲರೂ ಮೆಚ್ಚಿದ್ದೀರೆಂದು ಭಾವಿಸುತ್ತೇನೆ.
ಹಿಂದೂ ತೀರ್ಥ ಕ್ಷೇತ್ರಗಳ ಮಹಿಮೆ ಅಪಾರವಾಗಿದ್ದು ಇನ್ನೂ ನೂರಾರು ತೀರ್ಥ ಕ್ಷೇತ್ರಗಳುನಮ್ಮಲ್ಲಿದೆ. ಅದರಲ್ಲಿ ಒಂದೊಂದರ ಸ್ಥಳ ಮಹಿಮೆಯೂ ಒಂದೊಂದು ಬಗೆಯದ್ದಾಗಿದೆ. ಸರಣಿಯುದ್ದಕ್ಕೂ ಅಂತಹಾ ವಿಶೇಷ ಸ್ಥಳಗಳ ಐತಿಹ್ಯಗಳನ್ನು ತಿಳಿಸುವುದು ನನ್ನ ಉದ್ದೇಶವಾಗಿದ್ದು ನಿಮ್ಮ ಪ್ರೋತ್ಸಾಹವು ಹೀಗೆಯೇ ಮುಂದುವರಿಯಲೆಂದು ಆಶಿಸುತ್ತೇನೆ.
ಇಂತು - ರಾಘವೇಂದ್ರ ಅಡಿಗ ಎಚ್ಚೆನ್.
***

ಕುಂಭಕೋಣ (Kumbhakonam)

Lord Sri Kumbheshwar, Kumbhakonam


Chakrapani_Temple,_Kumbakonam
ತಮಿಳು ನಾಡಿನಲ್ಲಿರುವ ಪ್ರಾಚೀನ ದೇವಾಲಯಗಳ ನಗರಿ ಕುಂಭಕೋಣ. ಪ್ರಸಿದ್ದ ಬೃಹದೀಶ್ವರ ದೇವಾಲಯವಿರುವ ತಂಜಾವೂರು ಪಟ್ಟಣದಿಂದ 24 ಮೈಲಿಗಳ ದೂರದಲ್ಲಿದೆ. ಇಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವ ಹೀಗೆ ತ್ರಿಮೂರ್ತಿಗಳ ದೇವಾಲಯಗಳಿರುವುದು ವಿಶೇಷ. ಪ್ರಾಚೀನ ಕಾಲದಲ್ಲಿ ಚೋಳರ ರಾಜಧಾನಿಯಾಗಿದ್ದ ಕುಂಭಕೋಣ ದಲ್ಲಿ ಕುಂಭೇಶ್ವರ, ನಾಗೇಶ್ವರ, ಸಾರಂಗಪಾಣಿಯೇ ಮೊದಲಾದ ದೇವಾಲಯಗಳಿದೆ. ನಾಗೇಶ್ವರ ದೇವಾಲಯದಲ್ಲಿ ಸೂರ್ಯ ಭಗವಾನನ ಮೂರ್ತಿಯೂ ಇದ್ದು ವರ್ಷದ ಕೆಲವು ನಿರ್ದಿಷ್ಠ ದಿನಗಳಂದು ಶಿವಲಿಂಗದ ಮೇಲೆ ನೇರವಾಗಿ ಸೂರ್ಯರಶ್ಮಿಯು ಬೀಳುವುದನ್ನು ಕಾಣಬಹುದು.
ಇಲ್ಲಿ ಮಹಾಮಾಘ ಸರೋವರವಿದ್ದು ವರ್ಷಗಳಿಗೊಮ್ಮೆ ಗುರು-ಚಂದ್ರರು ಮಖಾ ನಕ್ಷತ್ರದಲ್ಲಿ ಸೇರಿದ ಸಮಯದಲ್ಲಿ ಮಹಾ ಮಾಘಮೇಳವು ನಡೆಯುತ್ತದೆ. ಉತ್ಸವದ ಸಮಯದಲ್ಲಿ ಲಕ್ಷ ಸಂಖ್ಯೆಯ ಭಕ್ತಾದಿಗಳೂ, ಸಾಧು ಸಂತರೂ ಇಲ್ಲಿ ನೆರೆದು ಸ್ನಾನ, ಪೂಜಾದಿಗಳನ್ನು ನೆರವೇರಿಸುತ್ತಾರೆ.

***

ಬ್ರಹ್ಮ ದೇವರಿಗೆ ತಾನು ಸೃಷ್ಟಿಸಿದ ಸೃಷ್ಟಿಯು ಪ್ರಳಯವಾಗಿ ನಾಶವಾಗುವ ವೇಳೆಯಲ್ಲಿ ಮೂಲ ಪದಾರ್ಥಗಳೆಲ್ಲವೂ ನಾಶವಾದರೆ, ಮತ್ತೆ ಸೃಷ್ಟಿಸುವುದು ಹೇಹೆ ಎನ್ನುವ ಪ್ರಶ್ನೆಯುಂಟಾಯಿತು.


Gopuras in Kumbakonam
ಸಮಸ್ಯೆಗೆ ಪರಿಹಾರವಾಗಿ ಪರಮೇಶ್ವರನ ಬಳಿ ಸಾರಿದ ಬ್ರಹ್ಮದೇವನು ತನ್ನ ಸಂದೇಹವನ್ನು ಪರಿಹರಿಸುವಂತೆ ಕೇಳಿದನು. ಅದಕ್ಕೆ ಪರಮೇಶ್ವರನು ಒಂದಷ್ಟು ಮಣ್ಣನ್ನು ಅಮೃತ ಹಾಗೂ ನೀರಿನಲ್ಲಿ ಕಲಿಸಿ ಒಂದು ಕುಂಭವನ್ನು ತಯಾರು ಮಾಡಿದನು. ಕುಂಭವನ್ನು ಮೇರು ಪರ್ವತದ ಮೇಲೆ ತೂಗುಬಿಟ್ಟು ಪೂಜಿಸಿದನು.
Mhamagham Sarovar, Kumbhakonam
ಕಾಲವು ಸರಿಯುತ್ತಲೇ ಪ್ರಳಯ ಮಹಾಪೂರವು ಪ್ರಾರಂಬವಾಯಿತು. ಪ್ರಳಯದ ಮಹಾಪೂರದಲ್ಲಿ ಮೇರು ಪರ್ವತದಲ್ಲಿ ತೂಗು ಬಿಟ್ಟ ಕುಂಭವೂ ಸೆಳೆಯಲ್ಪಟಿತು. ಪ್ರಳಯವು ಅಂತ್ಯವಾದಾಗ ಅದು ಒಂದೆಡೆ ನಿಂತಿತು. ಅದಾಗ ಪರಮೇಶ್ವರನು ಒಂದು ಬಾಣವನ್ನು ಹೊಡೆದನು. ಅದರಿಂದ ಕುಂಭವು ಬಿರುಕು ಬಿಟ್ಟಿತು. ಮತ್ತು ಅದರಿಂದ ಅಮೃತವು ಸುರಿಯಿತು.

ಹಾಗೆ ಅಮೃತವು ಸುರಿದ ಸ್ಥಳವೇ ಕುಂಭಕೋಣ ಎಂದು ಇಂದು ಪ್ರಸಿದ್ದವಾಗಿದೆ. ಕುಂಭಕೋಣದಲ್ಲಿರುವ ಮಹಾಮಾಘ ಸರೋವರ ದಲ್ಲಿಯೇ ಬ್ರಹ್ಮದೇವರ ಕುಂಭದಿಂದ ಅಮೃತ ಸುರಿದದ್ದು ಎನ್ನಲಾಗಿದ್ದು ಇಲ್ಲಿ ಪವಿತ್ರ ಗಂಗೆಯೂ ತಾನು 1200 ಮೈಲು ಹಗುಪ್ತ ಮಾರ್ಗದಿಂದ ಹರಿದು ಬಂದು ಸೇರುವಳೆಂದೂ  ಪ್ರತೀತಿ ಇದೆ.

Friday, April 17, 2015

‘ಹಗ್ಗದ ಕೊನೆ’: ಮರಣದಂಡನೆ ಬಗ್ಗೆ ಚಿಂತನೆಗೆ ಹಚ್ಚುವ ಚಿತ್ರ

ನಾನು ಇತ್ತೀಚೆಗೆ ನೋಡಿದ ಉತ್ತಮ ಚಿತ್ರ , ಕಳೆದ ಡಿಸೆಂಬರ್ನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು ಸಾಕಷ್ಟು ಮೆಚ್ಚುಗೆ ಗಳಿಸಿದ್ದಹಗ್ಗದ ಕೊನೆ(ದೆಹಲಿ, ಅಮೆರಿಕದ ನಾರ್ತ್ ಕೆರೊಲಿನಾ (ಗ್ಲೋಬಲ್ ಫೆಸ್ಟಿವಲ್), ನೊಯ್ಡಾ, ನಾಸಿಕ್ಗಳಲ್ಲಿ ನಡೆದ ಚಿತ್ರೋತ್ಸವಗಳಲ್ಲಿಹಗ್ಗದ ಕೊನೆಯನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದರು. ಅವುಗಳ ಪೈಕಿ ನೊಯ್ಡಾ ಹಾಗೂ ಸಾನಿಕ್ ಚಿತ್ರೋತ್ಸವಗಳಲ್ಲಿ ಕ್ರಮವಾಗಿ ಅತ್ಯುತ್ತಮ ಚಿತ್ರ ತೀರ್ಪಗಾರರ ಪ್ರಶಸ್ತಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಚಿತ್ರಕ್ಕೆ ದಕ್ಕಿದೆ.) ಪ್ರಸಿದ್ಧ ನಾಟಕಕಾರ ಪರ್ವತವಾಣಿ ಅವರು 1963ರಲ್ಲಿ ರಚಿಸಿದಹಗ್ಗದ ಕೊನೆನಾಟಕ ನೂರಾರು ಪ್ರದರ್ಶನಗಳನ್ನು ಕಂಡು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದ್ದು ಇತಿಹಾಸ. ನಾಟಕಕ್ಕೆ ಚಲನಚಿತ್ರ ರೂಪ ನೀಡಿದ ನಿರ್ದೇಶಕ ದಯಾಳ್ ಪದ್ಮನಾಭ್ ಮತ್ತು ನಿರ್ಮಾಪಕ ಉಮೇಶ ಬಣಕಾರ.ನಿಜಕ್ಕೂ ಉತ್ತಮವಾದ ಚಿತ್ರವೊಂದನ್ನು ನೀಡಿದಾರೆ.

ನೇಣು ಶಿಕ್ಷೆಗೆ ಗುರಿಯಾದ ಕೈದಿ ಹಾಗೂ ಪೊಲೀಸ್ ಅಧಿಕಾರಿಯ ಮಧ್ಯೆ ನಡೆಯುವ ದೀರ್ಘ ಸಂಭಾಷಣೆಯೇ ಕಥೆಯ ಪ್ರಮುಖ ಅಂಶ. ನವೀನ್ ಕೃಷ್ಣ ಅವರು ಮುಖ್ಯ ಕೈದಿಯ ಪಾತ್ರದಲ್ಲಿ ಹಾಗೂ ಸಹ ಕೈದಿಗಳ ಪಾತ್ರದಲ್ಲಿ ದತ್ತಣ್ಣ ಮತ್ತು ವಿ.ಮನೋಹರ್ ಕಾಣಿಸಿಕೊಂಡಿದ್ದರೆ, ಸುಚೇಂದ್ರ ಪ್ರಸಾದ್ ಪೊಲೀಸ್ ಪೋಷಾಕಿನಲ್ಲಿ ಅಬ್ಬರಿಸಲಿದ್ದಾರೆ. ನೇಣಿಗೆ ಬಲಿಯಾಗಲಿರುವ ಕೈದಿಯ ತಾಯಿಯ ಪಾತ್ರದಲ್ಲಿ ಸಿಹಿಕಹಿ ಗೀತಾ ಅಭಿನಯಿಸಿದ್ದಾರೆ.
ಚಿತ್ರಕಥೆಯು ನೇಣು ಕುಣಿಕೆಗೆ ಕೊರಳೊಡ್ಡಲು ಕ್ಷಣಗಣನೆಯಲ್ಲಿರುವ ಒಬ್ಬ ಕೈದಿಯ ಒಳತೋಟಿಯ ಜೊತೆ ಜೊತೆಗೇ ನೆಲದ ಕಾನೂನು ಕಟ್ಟಳೆಗಳ ಲೂಪ್ಹೋಲ್ಗಳನ್ನು ತಣ್ಣಗೆ ಅನಾವರಣ ಮಾಡುತ್ತಾ ಸಾಗುತ್ತದೆ.ಗಲ್ಲು ಶಿಕ್ಷೆ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಕೆಲ ದೇಶಗಳು ಇದರ ಹಿಂದಿರುವ ಕ್ರೌರ್ಯವನ್ನು ಮನಗಂಡು ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿವೆ. ಮಾನವ ಹಕ್ಕುಗಳ ಆಧಾರದಲ್ಲಿ ವಿಶ್ವಾದ್ಯಂತ ಗಲ್ಲುಶಿಕ್ಷೆಗೆ ಕಡಿವಾಣ ಹಾಕಬೇಕೆಂದು ಜಾಗತಿಕ ಹೋರಾಟಗಳೇ ನಡೆಯುತ್ತಿವೆ. 'ಹಗ್ಗದ ಕೊನೆ ಚಿತ್ರ ಅಂಥಾದ್ದೊಂದು ಮಾನವೀಯ ಕಳಕಳಿಯ ಪರವಾಗಿ ಕೈದಿಯೊಬ್ಬನ ಆತ್ಮ ವೃತ್ತಾಂತದ ಮೂಲಕ ವಕಾಲತ್ತು ವಹಿಸುತ್ತದೆ. ಮರಣ ದಂಡನೆಯ ಹಿಂದಿರಬಹುದಾದ ಶೀತಲ ಕರಾಳ ಮುಖವನ್ನು ಸಮಾಜಕ್ಕೆ ಅನಾವರಣಗೊಳಿಸುತ್ತಾ ನೇಣಿಗೆ ಕೊರಳೊಡ್ಡುವ ಕೈದಿಯ ಕಥೆ ಮನಮುಟ್ಟುವಂತಹುದು.
ಚಿತ್ರದ ಸಾರಾಂಶವನ್ನು ಹೀಗೆ ಕಟ್ಟಿಕೊಡಬಹುದು, ಆತ ಮೂಲತಃ ಕಳ್ಳ. ಹರ್ಡೆಂಡ್ ಪರ್ಸೆಂಟ್ ಬೇಜವಾಬ್ದಾರಿ ತಂದೆಯ, ಕಕ್ಕುಲಾತಿಯೇ ಮೈವೆತ್ತಂತಿರುವ ತಾಯಿಯ ಏಕೈಕ ಪುತ್ರ. ಬದುಕಿನ ಅನಿವಾರ್ಯತೆಗಳ ಹೊರಳು ಹಾದಿಯಲ್ಲಿ ಕಳ್ಳನಾಗಿ, ಅದನ್ನೇ ಹೊಟ್ಟೆ ಹೊರೆಯುವ ವೃತ್ತಿಯನ್ನಾಗಿ ಪರಿಗಣಿಸಿದ್ದ ಆತ ಅದೊಂದು ದಿನ ಅಪರಾಧದ ಸುಳಿಯಲ್ಲಿ ಸಿಲುಕುತ್ತಾನೆ. ಆತನಿಗೆ ಕೋರ್ಟು ಮರಣದಂಡನೆ ವಿಧಿಸುತ್ತದೆ.
ಜೈಲು ವಾಸದಲ್ಲಿರುವಾಗ ಇಡೀ ಜೈಲು ವ್ಯವಸ್ಥೆಯ ಬಗ್ಗೆ ಕೈದಿ ಕಾದಂಬರಿ ಬರೆಯುತ್ತಾ ಕಾಲ ತಳ್ಳುತ್ತಾನೆ. ಇನ್ನೇನು ಒಂದು ರಾತ್ರಿ ಹೊರಳಿಕೊಂಡು ಬೆಳಕು ಕಣ್ಣುತೆರೆಯುವ ಹೊತ್ತಿಗೆಲ್ಲಾ ಈತ ನೇಣಿನ ಕುಣಿಕೆಗೆ ಕೊರಳೊಡ್ಡಿ ಜೀವ ಬಿಡಬೇಕು... ಕೈದಿಯೊಳಗಿನ ತುಮುಲ, ಪ್ರಶ್ನೆಗಳು ಮತ್ತು ಅವಕ್ಕೆ ಉತ್ತರಿಸಲಾಗದ ಜೈಲಾಧಿಕಾರಿಯ ಕಂಗಾಲು ಸ್ಥಿತಿ ಪ್ರೇಕ್ಷಕನ ಮನ ಮುಟ್ಟುವಂತೆ ಸಾಗುತ್ತದೆ. ಕೈದಿ ಅಧಿಕಾರಿಗೆ ಕೇಳುವ ಪ್ರತಿಯೊಂದು ಪ್ರಶ್ನೆಯಲ್ಲಿಯೂ ಗಲ್ಲುಶಿಕ್ಷೆಯ ಜಾಗತಿಕ ವಿರೋಧಿ ಧ್ವನಿಯ ಸದ್ದು ಕೇಳಿಸುತ್ತದೆ. ಜೈಲಾಧಿಕಾರಿಯ ಉತ್ತರಿಸಲಾಗದ ಸಂಕಟದಲ್ಲಿ ಕಾನೂನು, ವ್ಯವಸ್ಥೆಯ ಅಕರಾಳ-ವಿಕರಾಳ ಮತ್ತು ನಿಷ್ಕರುಣಿ ಸ್ವಭಾವಗಳೂ ಅವಿತಿರುವಂತೆ ಭಾಸವಾಗುತ್ತದೆ.
ನಾನು ಚಾಕುವಿನಿಂದ ಚುಚ್ಚಿದರೆ, ಅದು ಕೊಲೆ. ನೀವು ನನ್ನನ್ನು ಮರಣದಂಡನೆಗೆ ಗುರಿಪಡಿಸಿದರೆ, ಅದು ಶಿಕ್ಷೆ. ಒಂದು ದೇಶ್ ಇನ್ನೊಂದು ದೇಶದ ಮೇಲೆ ಮಾಡುವ ಯುದ್ಧ , ಅದು ಧರ್ಮ ಸಂಸ್ಥಾಪನೆ!''
' ಗಲ್ಲು ಶಿಕ್ಷೆಯೂ ಸರ್ಕಾರಿ ಕೊಲೆ ಅನ್ಸಲ್ವೇ ಸಾರ್?''

ಇಂತಹಾ ಸಂಬಾಷಣೆಗಳು ಎಂತಹಾ ಪ್ರೇಕ್ಷಕರ ಹೃದಯವನ್ನೂ ಒಂದು ಕ್ಷಣ ಕಲಕುತ್ತವೆ.
ಸಿನಿಮಾವನ್ನು ಎರಡು ಮೂರು ಲೊಕೇಷನ್ನುಗಳಲ್ಲಿ ಚಿತ್ರೀಕರಿಸಲಾಗಿದೆ.ಗಲ್ಲು ಶಿಕ್ಷೆಯ ವಿರುದ್ಧ ಎಂಥವರಾದರೂ ತಲೆಕೆಡಿಸಿಕೊಳ್ಳುವಂತೆ ಮಾಡುವ . ಚಿತ್ರದಲ್ಲಿ ಸಂಭಾಷಣೆಯೇ ಅತ್ಯಧಿಕವಾಗಿರುವುದರಿಂದ ಇದನ್ನು ದೃಶ್ಯರೂಪದಲ್ಲಿ ನೋಡುವುದು ಮಾತ್ರವಲ್ಲ, ರೇಡಿಯೋ ನಾಟಕವಾಗಿಯೂ ಕೇಳಬಹುದು.
ಅಂತಿಮ ಕ್ಷಣಾದಲ್ಲಿ ಕೊಲೆಯ ರಹಸ್ಯ ಬಯಲಾದಾಗ ನಿಜಕ್ಕೂ ಒಂದು ಕ್ಷಣಾ ದ್ಂಗಾಗುವ ಪರಿಸ್ಥಿತಿ!
ಕಡೆಯದಾಗಿ ಹೇಳಬೇಕೆಂದರೆ ಇದು ತೀರಾ ಆಧುನಿಕ ಪರಿಕಲ್ಪನೆಯಾಗಿದ್ದು ಪ್ರೇಕ್ಷಕರ ಮನಸು ಮತ್ತು ಗಮನವನ್ನು ಹಿಡಿದಿಡುವ ಒಳ್ಳೆಯ ಚಿತ್ರವಾಗಿದೆ.''ಹಗ್ಗದ ಕೊನೆ'' ಒಂದು ವಿಭಿನ್ನ ಪ್ರಯತ್ನ.

Tuesday, April 14, 2015

ಅಂತರ್ಜಾಲ ತಾಟಸ್ತ್ಯ ಅಭಿಯಾನದ ಒಳ ಹೊರಗು

ಎಲ್ಲರಿಗೂ ಸಮಾನ ಇಂಟರ್ ನೆಟ್ ಬಳಕೆಯ ಚರ್ಚೆಯ ನಡುವೆ ಅಂತರ್ಜಾಲ ಮಾರಾಟ ಸಂಸ್ಥೆ ಫ್ಲಿಪ್ಕಾರ್ಟ್, ಟೆಲಿಕಾಮ್ ಸೇವೆಗಳ ಏರ್ಟೆಲ್ ಸಂಸ್ಥೆಯ ಜೊತೆ ಮಾತುಕತೆ ನಡೆಸಿದ್ದ ಏರ್ಟೆಲ್-ಜೀರೋ ಯೋಜನೆಯಿಂದ ಇಂದ ಹೊರನಡೆದಿದೆ. "ಏರ್ಟೆಲ್ ಸಂಸ್ಥೆಯ ಏರ್ಟೆಲ್-ಜೀರೋ ವೇದಿಕೆಯಿಂದ ನಾನು ಹೊರನಡೆಯುತ್ತಿದ್ದೇವೆ. ನಾವು ಭಾರತದಲ್ಲಿ ಇಂಟರ್ ನೆಟ್ ತಾಟಸ್ಥ್ಯದ ಕೂಗಿಗೆ ಬೆಂಬಲ ನೀಡಲಿದ್ದೇವೆ" ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ. "ಇಂಟರ್ ನೆಟ್ ತಾಟಸ್ಥ್ಯದ ಸಮುದಾಯದ ಉತ್ಸಾಹದ ಜೊತೆ ನಾವು ಕೈಜೋಡಿಸಲಿದ್ದೇವೆ. ಯಾವುದೇ ಸೇವೆ ಕೊಡುವ, ಸೇವೆ ನಿಡುವ ಸಂಸ್ಥೆ ಎಷ್ಟೇ ದೊಡದಾಗಿದ್ದರೂ ತಾರತಮ್ಯ ಇರಬಾರದು ಎಂಬುದು ನಮ್ಮ ನಂಬಿಕೆ" ಎನ್ನುವುದು ಫ್ಲಿಪ್ಕಾರ್ಟ್,ನುಡಿ. ಹಾಗಾದರೆ ಇಂಟರ್ ನೆಟ್ ತಾಟಸ್ಥ್ಯ ಎಂದರೇನು? ಇದರ ಮಹತ್ವವಏನು? ಇಲ್ಲಿದೆ ಮಾಹಿತಿ...




ಇಂಟರ್ ನೆಟ್ ತಾಟಸ್ಥ್ಯ ಎಂದರೇನು?
ಇದೊಂದು ಆಂದೋಲನವಾಗಿದ್ದು ಆಂದೋಲನ ಅಂತರ್ಜಾಲ ಮುಕ್ತ ಬಳಕೆಗೆ ಬೆಂಬಲವಾಗಿರುತ್ತದೆ. ಇದು ಟೆಲಿಕಾಂ ಕಂಪನಿಗಳಿಗೆ ಗ್ರಾಹಕನ ಅಂತರ್ಜಾಲ ಬಳಕೆಯನ್ನು ನಿಯಂತ್ರಿಸುವುದನ್ನು ವಿರೋಧಿ ಸುತ್ತದೆಅಂತರ್ಜಾಲದ ಮುಕ್ತ ಬಳಕೆ ಇದರ ಮೂಲ ಉದ್ದೇಶವಾಗಿರುತ್ತದೆ. ಅದರಂತೆ ಎಲ್ಲಾ ಜಾಲತಾಣಗಳೂ, ಮಾಹೀತಿ ವಿನಿಮಯಗಳೂ ಒಂದೇ ವೇಗದಲ್ಲಿ ಗ್ರಾಹಕರಿಗೆ ದೊರೆಯಬೇಕು. ಸೇವಾ ಪೂರೈಕೆದಾರರಿಂದ ಡೇಟಾ ಪ್ಯಾಕ್ ಪಡೆದ ಬಳಕೆದಾರರು ತಾವು ನಿರ್ಧರಿಸಿದ ಜಾಲತಾಣ ಹಾಗು ಆಪ್ನ್ನು ಮುಕ್ತವಾಗಿ ಬಳಸುತಾಗಬೇಕೆನ್ನುವುದೇ ಇದರ ಮುಖ್ಯ ಗುರಿ.

ಅಂತರ್ಜಾಲದಲ್ಲಿ ಅಸಮಾನತೆ
ವಿಶ್ವಾದ್ಯಂತ ಮುಕ್ತ ಮಾಹಿತಿ ಹಂಚುವ ಅಂತರ್ಜಾಲವನ್ನು ಸುಮಾರು 292 ಕೋಟಿ ಮಂದಿ ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು ಭಾರತವೂ ಸೇರಿದಂತೆ ವಿಶ್ವಾದ್ಯಂತ ಅಂತರ್ಜಾಲ ಬಳಕೆದಾರರಲ್ಲಿ ಕ್ಷಿಪ್ರ ಏರಿಕೆ ಆಗುತ್ತಿದೆ. ಆದರೆ ಸೇವಾ ಕಂಪೆನಿಗಳು ತಮಗೆ ಹಣ ನೀಡುವ ಕಂಪೆನಿಗಳ ಜಾಲತಾಣ ಉಚಿತವಾಗಿ ನೋಡಲು ಅವಕಾಶ ನೀಡುತ್ತದೆ ಅಥವಾ ವೇಗವಾಗಿ ಓಪನ್ ಆಗುವಂತೆ ಮಾಡುತ್ತದೆ. ಯಾರು ಸೇವಾ ಕಂಪೆನಿಗಳಿಗೆ ಹಣ ನೀಡುವುದಿಲ್ಲವೋ ಕಂಪೆನಿಗಳ ಜಾಲತಾಣ  ಬ್ಲಾಕ್ ಮಾಡುತ್ತಾರೆ ಅಥವಾ ತಡವಾಗಿ ಓಪನ್ ಆಗುವಂತೆ ವ್ಯವಸ್ಥೆ ರೂಪಿಸುತ್ತದೆ. ಹೀಗೆ ಜಾಲತಾಣಗಳು ಹಾಗೂ ಗ್ರಾಹಕರಿಂದ ಹಣ ಪೀಕುವ ಲಾಬಿಯು ನಮಗೇ ಗೊತ್ತಿಲ್ಲದೆ ನಡೆಯುವ ಪ್ರಕ್ರಿಯೆ
ಗೂಗಲ್‌, ಯಾಹೂ ಇತ್ಯಾದಿ ದೈತ್ಯ ಕಂಪನಿಗಳು ಟೆಲಿಕಾಂ ಸಂಸ್ಥೆಗಳಿಗೆ ಅಪಾರ ಪ್ರಮಾಣದ ಹಣ ನೀಡಿ ತಮ್ಮ ತಾಣಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತವೆ. ಆದರೆ ಉತ್ತಮ ಉದ್ದೇಶದೊಡನೆ ಪ್ರಾರಂಭವಾದ ಚಿಕ್ಕ ಸಂಸ್ಥೆಗಳಿಗೆ ಟೆಲಿಕಾಂ ಸಂಸ್ಥೆಗಳು ಕೇಳಿದಷ್ಟು ಹಣ ಸಂದಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದ  ಅಂತರ್ಜಾಲದಲ್ಲಿನ ಸಹಜ ಪೈಪೋಟಿಗೆ ಅಡ್ಡಿಯಾಗುತ್ತದೆ. ಇದೇ ಕಾರಣದಿಂದ ಜಗತ್ತಿನ ನಾನಾ ದೇಶಗಳು ಅಂತರ್ಕಜಾಲ ತಾಟಸ್ತ್ಯ ನೀತಿಯನ್ನು ಅನುಸರಿಸುತ್ತಿವೆ.

ವಿದೇಶಗಳ ಲ್ಲಿ ಅಂತರ್ಕಜಾಲ ತಾಟಸ್ತ್ಯ
ಸೇವಾಪೂರೈಕೆದಾರರ ಲಾಬಿಯ ವಿರುದ್ಧ ಮೊದಲಿಗೆ ಅಮೆರಿಕದಲ್ಲಿ ಬೃಹತ್ ಮಟ್ಟದ ಅಭಿಯಾನವೇ ನಡೆಯಿತು. ಜನರ ಅಭಿಪ್ರಾಯಕ್ಕೆ ಮಣಿದ ಅಧ್ಯಕ್ಷ ಒಬಾಮಾ ಸರಕಾರ ನೆಟ್ ಸಮಾನತೆಗಾಗಿ ಒಂದು ವಿಧೇಯಕವನ್ನು ಮಂಡಿಸಿ ಸೆನೆಟ್ನಲ್ಲಿ ಅಂಗೀಕರಿಸಿತು

ಭಾರತದಲ್ಲಿ ಅಂತರ್ಕಜಾಲ ತಾಟಸ್ತ್ಯ
ಅಂತರ್ಜಾಲ ಸಮಾನತೆ ಕಾನೂನು ಅಮೆರಿಕದಲ್ಲಿ ಜಾರಿಯಾದ ಬೆನ್ನಿಗೇ ಭಾರತದಲ್ಲೂ ಕುರಿತ ಕೂಗು ಪ್ರಬಲಗೊಂಡಿದೆಇದರ ಕುರಿತಂತೆ ಕಾಲಾನುಕ್ರಮಣಿಕೆ ಇಂತಿದೆ-
2006: ನೆಟ್ ಸಮಾನತೆಯ ಕುರಿತು ಅಭಿಪ್ರಾಯಗಳನ್ನು ನೀಡುವಂತೆ ಸೇವಾ ಪೂರೈಕೆದಾರರಿಗೆ ಟ್ರಾಯ್ ಸೂಚನೆ.

2012 ಫೆಬ್ರವರಿ: ಯೂಟ್ಯೂಬ್ನಂತಹ ಕಂಪನಿಗಳು ತಮ್ಮ ಆದಾಯದ ಭಾಗವನ್ನು ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಬೇಕು ಎಂದು ಏರ್ಟೆಲ್ ಮುಖ್ಯಸ್ಥ ಸುನಿಲ್ ಭಾರತಿ ಮಿತ್ತಲ್ ಅವರು ಸಲಹೆ ನೀಡಿದ್ದರು. ಗೂಗಲ್, ಫೇಸ್ಬುಕ್ಅನ್ನು ಗ್ರಾಹಕರು ಉಚಿತವಾಗಿ ಬಳಸಬೇಕಾದರೆ ಕಂಪನಿಗಳು ಆದಾಯದ ಭಾಗವನ್ನು ನೀಡಬೇಕು ಎಂದು ಅದೇ ವರ್ಷ ಜುಲೈನಲ್ಲಿ ಕಂಪನಿಯು ಹೇಳಿತ್ತು

2014 ಫೆಬ್ರವರಿ: ವಾಟ್ಸ್ಆ್ಯಪ್, ಸ್ಕೈಪ್ ಮತ್ತು ಲೈನ್ನಂತಹಾ ಅಪ್ಲಿಕೇಷನ್ಗಳು ಸೇವಾ ಪೂರೈಕೆದಾರರಿಗೆ ಹಣ ನೀಡಬೇಕು ಎಂದು ಏರ್ಟೆಲ್, ಟ್ರಾಯ್ಗೆ ಪ್ರಸ್ತಾವನೆ ಸಲ್ಲಿಸಿತ್ತು

27 ಮಾರ್ಚ್ 2015: ಭಾರತದಲ್ಲಿ ನೆಟ್ ಸಮಾನತೆಯ ಕಾನೂನುಗಳನ್ನು ಜಾರಿಗೆ ತರುವುದರಿಂದ ಆಗುವ ಪ್ರಯೋಜನವೇನು ಎಂಬ ಕುರಿತು ಟ್ರಾಯ್ 117 ಪುಟಗಳ ಸಮಾಲೋಚನಾ ವರದಿಯನ್ನು ಬಿಡುಗಡೆ ಮಾಡಿತ್ತು

2015 ಏಪ್ರಿಲ್ 6: ಏರ್ಟೆಲ್ ಕಂಪನಿಯು 'ಏರ್ಟೆಲ್ ಜೀರೊ' ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತು. ಬಳಕೆದಾರರು ನಿರ್ದಿಷ್ಟ ಅಪ್ಲಿಕೇಷನ್ಗಳನ್ನಷ್ಟೇ ಉಚಿತವಾಗಿ ಬಳಸುವುದು ಹಾಗೂ ಗ್ರಾಹಕರು ಉಚಿತವಾಗಿ ಬಳಸುವ ಆ್ಯಪ್ ಕಂಪನಿಗಳು ಏರ್ಟೆಲ್ಗೆ ಶುಲ್ಕ ಕಟ್ಟಬೇಕೆಂಬುದು ಇದರ ಉದ್ದೇಶ. ಟೋಲ್ ಫ್ರೀ ಸಂಖ್ಯೆಗಳಿಗೆ ಜನರು ಉಚಿತವಾಗಿ ಕರೆ ಮಾಡುವುದರಿಂದ ಕಂಪನಿಗೆ ನಷ್ಟವಾಗುತ್ತದೆ. ಇದನ್ನು ತುಂಬಿಕೊಳ್ಳಲು ನೀತಿ ಅನುಸರಿಸುತ್ತಿದ್ದೇವೆ ಎಂದು ಏರ್ಟೆಲ್ ಸಬೂಬು ನೀಡಿತ್ತು.

2015 ಏಪ್ರಿಲ್ 11: ಭಾರತದಲ್ಲಿ ನೆಟ್ ಸಮಾನತೆ ಕಾನೂನು ಜಾರಿಗೆ ತರಬೇಕೆಂದು ಪ್ರಾರಂಭವಾಗಿರುವ ಅಭಿಯಾನದ ಭಾಗವಾಗಿ ಎಐಬಿ ಎಂಬ ಕಾಮಿಡಿ ಗುಂಪು ಕುರಿತ ವಿಡಿಯೊವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿತು. ಇದನ್ನು ವೀಕ್ಷಿಸಿದ ಲಕ್ಷಾಂತರ ಜನರು ಅಭಿಯಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಯೂಟ್ಯೂಬ್ನಲ್ಲಿ ವಿಡಿಯೊ ಲಿಂಕ್ಅನ್ನು ಫೇಸ್ಬುಕ್ ಕಂಪನಿಯು ಡಿಲಿಟ್ ಮಾಡಿತು.

ನೀವೇನು ಮಾಡಬೇಕು?
ಅಂತರ್ಜಾಲ ತಟಸ್ಥನೀತಿ ಬಗ್ಗೆ ಟ್ರಾಯ್ಗ್ರಾಹಕರ ಪ್ರತಿಕ್ರಿಯೆ ಕೇಳಿದ್ದು, ಅದನ್ನು ಸಲ್ಲಿಸಲು .27 ಕೊನೆಯ ದಿನವಾಗಿದೆ. ಅಂತರ್ಕಜಾಲ ತಾಟಸ್ತ್ಯಕ್ಕಾಗಿ ನೀವು ಟ್ರಾಯ್ಗೆ ಮನವಿ ಮಾಡಬಹುದು ಅಥವಾ ಸೇವ್ ಇಂಟರ್ನೆಟ್ ಮೂಲಕ ಟ್ರಾಯ್ಗೆ ಸುಲಭವಾಗಿ ಮನವಿ ಸಲ್ಲಿಸಬಹುದು. ಈಗಾಗಲೇ 1 ಲಕ್ಷಕ್ಕೂ ಅಧಿಕ ಜನ ಮನವಿ ಸಲ್ಲಿಸಿದ್ದಾರೆ. ಗ್ರಾಹಕ ಸ್ನೇಹಿ ಮುಕ್ತ ಮಾಹಿತಿ ವಿಮಯಕ್ಕೆ ಪೂರಕವಾಗುವಂತೆ ಅಂತರ್ಜಾಲ ತಟಸ್ಥನೀತಿಯನ್ನು ನೀವು ಬೆಂಬಲಿಸುವುದಾದರೆ ನೀವು ಕೆಳಗಿನ ಜಾಲತಾಣಗಳಲ್ಲಿ ಮನವಿ/ಹಕ್ಕೊತ್ತಾಯ ಮಾದಬಹುದು.
ಮನವಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿhttp://www.savetheinternet.in/
ಟ್ರಾಯ್ಗೆ ಹಕ್ಕೊತ್ತಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ  http://www.netneutrality.in/