ಕೈದಾಳ (Kaidaala)
ತುಮಕೂರಿನಿಂದ 8 ಕಿ.ಮೀ. ದೂರದಲ್ಲಿರುವ ಇತಿಹಾಸ
ಪ್ರಸಿದ್ಧ ಸ್ಥಳ ಕೈದಾಳ. ಪ್ರಾಚೀನ
ಕಾಲದಲ್ಲಿ ಕ್ರೀಡಾಪುರವೆಂದು
ಖ್ಯಾತವಾಗಿದ್ದ ಈ ಪಟ್ಟಣ ಕಿರು
ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು. ಕೈದಾಳಕ್ಕೆ ಖ್ಯಾತಿ ಬಂದಿದ್ದು ಅಮರಶಿಲ್ಪಿ
ಜಕಣಾಚಾರಿಯಿಂದ.ಜಕಣಾಚಾರಿಯ ಜನ್ಮಸ್ಥಳವಾದ ಕೈದಾಳದಲ್ಲಿ ದ್ರಾವಿಡ
ವಾಸ್ತುಶೈಲಿಯಲ್ಲಿರುವ ಸುಂದರ ಚೆನ್ನಕೇಶವ ದೇವಾಲಯವಿದೆ.
1150-51ರಲ್ಲಿ ಹೊಯ್ಸಳರ
1ನೆಯ ನರಸಿಂಹನ ಸಾಮಂತನಾಗಿದ್ದ ಗುಳೇ-ಬಾಚಿ ಎಂಬಾತ ಈ
ದೇವಸ್ಥಾನ ಕಟ್ಟಿದನಂತೆ. ಚೆನ್ನಕೇಶವ ಮಂದಿರದ ಅನತಿ ದೂರದಲ್ಲಿ ಗಂಗಾಧರೇಶ್ವರ
ದೇವಾಲಯವಿದೆ. ಇದೂ ಕೂಡ ದ್ರಾವಿಡ
ಶೈಲಿಯಲ್ಲಿದೆ. ಹಳೆಯ ದೇವಾಲಯದ ಗೋಪುಗಳ
ಜೀರ್ಣೋದ್ಧಾರ ಮಾಡಲಾಗಿದೆ.
Lord Sri Chennakeshava Swamy, Kaidala |
Lord Sri Chennakeshava Swamy temple, Kaidala |
ಬೇಲೂರಿನಚೆನ್ನಕೇಶವ
ದೇವಾಲಯವನ್ನೇ ಹೋಲುವ ಸುಂದರ ಕೆತ್ತನೆಗಳಿಂದ
ಕೂಡಿರುವ ಈ ದೇವಾಲಯ ಪ್ರವಾಸಿಗರನ್ನು
ಕೈಬೀಸಿ ಕರೆಯುತ್ತದೆ.ಇನ್ನು ಪ್ರತಿವರ್ಷ ಈ
ಊರಿನಲ್ಲಿ ಗಣಪತಿ ಉತ್ಸವ ಜರುಗುತ್ತದೆ.
ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾಗುವ ಮಣ್ಣಿನ ಗಣಪನನ್ನು ಮೂರು
ತಿಂಗಳುಗಳ ಕಾಲ ಪೂಜಿಸಲಾಗುತ್ತದೆ. ಸಂಗೀತೋತ್ಸವ,
ಹರಿಕಥೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ
ಜರುಗುತ್ತವೆ.ಎನ್ನುವುದು ವಿಶೇಷ.
***
ಜಗಣಾಚಾರಿ
ಪತ್ನಿಯನ್ನೂ ಪುತ್ರನನ್ನೂ ತೊರೆದು ದೇಶಾಂತರ ಹೋದ
ಹಲವು ವರ್ಷಗಳ ಬಳಿಕ ಬೇಲೂರಿನಲ್ಲಿ
ಚೆನ್ನಿಗರಾಯ ಮೂರ್ತಿಯನ್ನು ಕಡೆಯುತ್ತಿದ್ದಾಗ, ಅಲ್ಲಿಗೆ ಬಂದ ಆತನ
ಮಗ ಡಕಣಾಚಾರಿ ಚೆನ್ನಿಗರಾಯಮೂರ್ತಿ ಕಡೆಯುತ್ತಿರುವ ಶಿಲೆಯಲ್ಲಿ ದೋಷವಿದೆ ಎಂದು ಸವಾಲು
ಹಾಕುತ್ತಾನೆ.
Temple, Kaidala |
ಚೆನ್ನಿಗರಾಯ
ಶಿಲ್ಪದ ಹೊಟ್ಟೆಯ ಭಾಗದಲ್ಲಿ ಉಳಿಯಿಂದ
ಹೊಡೆದಾಗ, ಆ ಭಾಗ ಒಡೆದು
ಅದರಿಂದ ಕಪ್ಪೆಯೊಂದು ಹೊರಬಂತಂತೆ. ಹೀಗಾಗೇ ಈ ದೇವಾಲಯದಲ್ಲಿರುವ
ದೇವರನ್ನು ಕಪ್ಪೆ ಚೆನ್ನಿಗರಾಯ ಎಂದೇ
ಕರೆಯುತ್ತಾರೆ.
ಮಗನಿಂದಲೇ
ಈ ರೀತಿ ಅವಮಾನಿತನಾದ
ಖ್ಯಾತ ಶಿಲ್ಪಿ ತನ್ನ
ಬಲಗೈಯನ್ನೇ ಕತ್ತರಿಸಿಕೊಳ್ಳುತ್ತಾನೆ. ಭಗವಂತ
ಆತನ ಕನಸಿನಲ್ಲಿ ಬಂದು ಕೈದಾಳದಲ್ಲಿ ಚೆನ್ನಿಗರಾಯನ
ದೇವಾಲಯ ನಿರ್ಮಿಸಲು ಅವನಿಗೆ ಆದೇಶಿಸುತ್ತಾರೆ.
ಕೈದಾಳದಲ್ಲಿ
ದೇವತಾ ಪ್ರತಿಷ್ಠಾಪನೆಯಾದಾಗ ಜಕಣನಿಗೆ ಮತ್ತೆ ಕೈದಳಯಿತು
ಅರ್ಥಾತ್ ಕೈ ಬಂತು. ಹೀಗಾಗೇ ಕ್ರೀಡಾಪುರಿ
ಎಂದು ಕರೆಸಿಕೊಂಡಿದ್ದ ಈ ಊರು ಕೈದಳವೆಂದು
ಖ್ಯಾತವಾಯಿತು.
No comments:
Post a Comment