Tuesday, February 20, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 89

ಜೈನ ಕಾಶಿ ಶ್ರವಣಬೆಳಗೊಳ
ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಪುಟ್ಟ ಗ್ರಾಮ ಶ್ರವಣಬೆಳಗೊಳ ಅಲ್ಲಿನ ಬಾಹುಬಲಿ ಮೂರ್ತಿಯಿಂದ ವಿಶ್ವ ವಿಖ್ಯಾತವಾಗಿದೆ. ಇದು  ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣವಾಗಿದ್ದು ಜೈನ ಧರ್ಮೀಯರ ಪಾಲಿಗೆ ಪವಿತ್ರ ಭೂಮಿ.

ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಮೂರ್ತಿಯನ್ನು (58.8 ಅಡಿ ಎತ್ತರ) ಚಾವುಂಡರಾಯನು  ಕ್ರಿ..973ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎನ್ನುವ ಶಿಲ್ಪಿ ಇದನ್ನು ನಿರ್ಮಾಣ ಮಾಡಿದ್ದನು. ಶಿಲ್ಪಿಯು ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೇಳಲಾಗಿದೆ. ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು 700 ಮೆಟ್ಟಿಲುಗಳಿದ್ದು ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ.



ಶ್ರವಣಬೆಳಗೊಳದಲ್ಲಿನ ಶಿಲಾಲೇಖಗಳ ಮೇಲಿಂದ ಚಂದ್ರಗುಪ್ತ ಮೌರ್ಯ ತನ್ನ ಗುರುವಾದ ಭದ್ರಬಾಹುವಿನ ಸಂಗಡ ಅಲ್ಲಿಗೆ ಬಂದು ಸಲ್ಲೇಖನ ವ್ರತವನ್ನು ಹಿಡಿದು ಮರಣವನ್ನು ಅಪ್ಪಿದನೆಂದು ತಿಳಿದುಬರುತ್ತದೆ.

ಶ್ರವಣಬೆಳಗೊಳದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ.

ಶ್ರವಣಬೆಳಗೊಳದ ಬಾಹುಬಲಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಬಾರಿ (2018) ರಲ್ಲಿ 88ನೇ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು ಫೆ.17ರಿಂದ ಫೆ.25ರವರೆಗೆ ವಿವಿಧ ರೀತಿಯ ಅಭಿಷೇಕಗಳು, ಪೂಜಾ ಕಾರ್ಯಕ್ರಮಗಳು ನೆರವೇರುತ್ತದೆ.

ಬೆಂಗಳೂರಿನಿಂದ ಸುಮಾರು 143ಕಿಮೀ ದೂರದಲ್ಲಿರುವ ಶ್ರವಣಬೆಳಗೊಳಕ್ಕೆ ರಸ್ತೆ ಹಾಗೂ ರೈಲು ಮಾರ್ಗದ ಮೂಲಕ ತಲುಪಬಹುದು.

***
ನನ್ನ ಹಾಗೆಯೆ

ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ
ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ
ಈತನಾರು ತಾತ! ಇಲ್ಲಿ ನಿಂತು ನೋಡುತಿರುವನು
ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?’
ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು!
ನುಡಿಯ ಹೊಳೆಗಳಲ್ಲಿ ತುಂಬಿ ಹರಿವುದಿವನ ಕೀರ್ತಿಯು
ಹತ್ತುವವರ ಇಳಿಯುವವರ ನಿಂತು ನೋಡುತಿರುವನು
ನಿಲ್ಲುವವರ ನಡೆಯುವವರ ಲೆಕ್ಕ ಮಾಡುತಿರುವನು
ಬಳಲಿದವರಿಗೆಲ್ಲ ಇಲ್ಲಿ ಕೈಯ ನೀಡುತಿರುವನು
ಇಲ್ಲಿ ಏಕೆ ಬಂದು ನಿಂತ? ಇಷ್ಟು ದೂರ! ಎತ್ತರ!
ಭಯವಾಗದೆ ಇವನಿಗಿಲ್ಲಿ! ಯಾರು ಇಲ್ಲ ಹತ್ತಿರ!’
ಇವನಿಗೆಲ್ಲಿ ಭಯವು ಮಗು ಅಭಯ ಮೂರ್ತಿ ಈತನು
ಭರತ ಚಕ್ರವರ್ತಿ ಇವನ ಅಣ್ಣ ಒಮ್ಮೆ ಆತನು
ಹಮ್ಮಿನಲ್ಲಿ ಬಂದು ಸೆಣಸಿ ತಮ್ಮನಲ್ಲಿ ಸೋತನು
ಗೆದ್ದ ರಾಜ್ಯ ಮರಳಿಸುತ್ತ ನುಡಿದನೊಂದು ಮಾತನು
ನೀನು ಸೋತು ಗೆದ್ದೆ ಅಣ್ಣ! ನಾನು ಗೆದ್ದು ಸೋತೆನು!
ಬೆಟ್ಟ ಕರೆಯುತಿಹುದು ನನ್ನ ಮುಗಿಲು ತನ್ನ ಹತ್ತಿರ
ಯಾವುದುಂಟು ಅಣ್ಣ ಇಲ್ಲಿ ಜೀವವೇರದೆತ್ತರ?
ತಪಸ್ಸೊಂದೆ ತಿಳಿವುದೊಂದೆ ಹುಟ್ಟು ಸಾವಿನುತ್ತರ.
ನಿಂತು ಹಾಗೆ ನಿಂತುಕೊಂಡು ಘೊರ ತಪವ ಮಾಡಲು
ಹುಟ್ಟು ಸಾವಿನಾಚೆಗಿರುವ ಹೊಳೆವ ಹಾದಿ ನೋಡಲು
ಬಿಸಿಲು ಬಂತು ನೆರಳು ಬಂತು ಗಾಳಿ ಬಿಚ್ಚಿ ಬೀಸಿತು
ಒಮ್ಮೆ ಹಸಿರು ಒಮ್ಮೆ ಹೊನ್ನು ಹಚ್ಚಡವನು ಹಾಸಿತು
ಸೂರ್ಯನೊಮ್ಮೆ ಚಂದ್ರನೊಮ್ಮೆ ಸುತ್ತು ಹಾಕಿ ನಡೆದರು
ದೀಪದಂತೆ ನಿಂತ ಇವಗೆನಮೋಎಂದು ನುಡಿದರು
ಇಷ್ಟು ಜನರು ಇಲ್ಲಿಗಿಂದು ಏಕೆ ಬಂದು ನೆರೆದರು?
ಬಾಹುಬಲಿ’’ ‘‘ಬಾಹುಬಲಿ’’ ಎಂದು ಕರೆಯುತಿರುವರು
ಮಗೂ, ಇಂದು ಇವನಿಗಿಲ್ಲಿ ಹಾಲಿನಲ್ಲಿ ಸ್ನಾನವು
ದಾರಿಯಲ್ಲಿ ದಣಿದ ಇವರಿಗೆ, ಇವನದೊಂದೆ ಧ್ಯಾನವು
ಮುದ್ದು ಮುಖದಿ ಮುಗುಳ್ನಕ್ಕು ಸಿದ್ಧನಾಗಿ ನಿಂತಿಹ
ದುಗ್ಧ ಹಾಸದಲ್ಲಿ ನಲಿವ ಮುಗ್ಧ ಮಗುವಿನಂತಿಹ
ತಾತ,
ಎರೆವ ಮುಂಚೆ ಎಣ್ಣೆ ಹಚ್ಚಿ ಅಮ್ಮ ನನಗೆ ಹೀಗೆಯೇ
ನಿಲ್ಲಿಸುವಳು. ಬಾಹುಬಲಿಯು ಕೂಡ ತನ್ನ ಹಾಗೆಯೆ
ನಿಂತು ಕಾಯುತಿರುವ ಕಣ್ಣು ತೆರೆದು ಮೊದಲ ಚೆಂಬಿಗೆ!’
ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಗೆ
-ಸುಬ್ಬಣ್ಣ ರಂಗಣ್ಣ ಎಕ್ಕುಂಡಿ
***

ಜೈನ ಧರ್ಮದ ಮೊದಲನೆಯ ತೀರ್ಥಂಕರರು ವೃಷಭನಾಥ, ಅವನಿಗೆ ಸುನಂದ ಮತ್ತು ನಂದಾ ಯೆಂಬ ಇಬ್ಬರು ಪತ್ನಿಯರು.ಇವರಿಂದ ನೂರುಜನ ಗಂಡು ಮಕ್ಕಳೂ ಮತ್ತು ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರುಬಾಹುಬಲಿಯ ತಾಯಿ ಸುನಂದೆ. ಕಾಲ ಸರಿದಂತೆ ವೃಷಭನಾಥನಿಗೆ ವೈರಾಗ್ಯ ಉಂಟಾಗುವುದು. ಆಗ ಆತನು  ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳುತ್ತಾನೆ.

ಆಗ ಸಹಜವಾಗಿ ಹಿರ್ಯ ಮಗನಾದ ಭರತ ರಾಜ್ಯದ ಅರಸನಾಗುತ್ತಾನೆ. ಆತ ತಾನು ಚಕ್ರವರ್ತಿ ಎನಿಸಿಕೊಳ್ಳಬೇಕೆಂದು ಬಯಕೆ ಹೊತ್ತು ದಿಗ್ವಿಜಯ ಕೈಗೊಂಡನು. ನಾನಾ ದೇಶಗಳ, ಕೋಶಗಳ ಗೆದ್ದ ಬಳಿಕ ಅವನು ಪುನಃ ತನ್ನ ರಾಜ್ಯ ಪ್ರವೇಶಿಸುವಾಗ ಅವನ ಬಳಿಯಲ್ಲಿದ್ದ ಕ್ರರತ್ನವು ಪುರ ಪ್ರವೇಶ ಮಾಡಲಿಲ್ಲಆಗ ಭರತನ ರಾಜಪುರೋಹಿತರು ಭರತ ಬೇರೆಲ್ಲಾ ರಾಜರನ್ನು ಜಯಿಸಿದ್ದರೂ ತನ್ನ ಸೋದರರನ್ನು ಜಯಿಸಲಿಲ್ಲ, ಕಾರಣ ಚಕ್ರರತ್ನವು ಪುರ ಪ್ರವೇಶ ಮಾಡಿಲ್ಲ ಎನ್ನುತ್ತಾರೆ.


ಆಗ ಭರತ ತನ್ನೆಲ್ಲಾ ಸಹೋದರರಿಗೆ ಕಾಣಿಕೆಗಳೊಡನೆ ಬಂದು ತನಗೆ ಶರಣಾಗುವಂತೆ ಕರೆ ಕಳಿಸುತ್ತಾನೆ. ಉಳಿದೆಲ್ಲ ಸೋದರರೂ ತಾವು ಭರತನನ್ನು ಎದುರಿಸಲಾಗುವುದಿಲ್ಲವೆಂದು ತಿಳಿದು ಅವರ ತಂದೆಯಾದ ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆಯುತ್ತಾರೆ. ಆದರೆ ಬಾಹುಬಲಿ ಮಾತ್ರವೇ ' ತ೦ದೆಯ ಹೊರೆತು ಇನ್ನಾರಿಗೂ ತಲೆ ಬಾಗುವುದಿಲ್ಲ, ತಂದೆಯಿಂದ ಪಡೆದ ರಾಜ್ಯವನ್ನು ನಾನು ಬಿಟ್ಟುಕೊಡುವುದಿಲ್ಲ. ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನಿದ್ದೇನೆ' ಎಂದು ಹೇಳಿ ಕಳಿಸುತ್ತಾನೆ.
ಭರತ ತಮ್ಮನ ಆಹ್ವಾನ ಸ್ವೀಕರಿಸುತ್ತಾನೆ. ಯುದ್ಧಕ್ಕೆ ಸೈನ್ಯಗಳು ಸಿದ್ದವಾಗುತ್ತದೆ. ಆದರಠೀಗೆ ಯುದ್ಧ ಪ್ರಾರಂಭಕ್ಕೆ ಮುನ್ನ ಮಂತ್ರಿಗಳು ಸಮಾಲೋಚನೆ ನಡೆಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು.

ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಅಣ್ಣ ತಮ್ಮಂದಿರು ಸರಿಸಮನಾಗಿ ಮೂರೂ ಯುದ್ಧಗಳಲ್ಲಿ ಹೋರಾಡಿದರು. ಆದರೆ ಅಂತಿಮವಾಗಿ ಅಪ್ರತಿಮ ವೀರನಾಗಿದ್ದ ಬಾಹುಬಲಿಯು ಎಲ್ಲಾ ಯುದ್ಧಗಳನ್ನು ಗೆದ್ದನು. . ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಸೋಲಿಸಿದ ಬಾಹುಬಲಿ ಅವನನ್ನು ತನ್ನ ತೋಳುಗಳಿಂದ ಮೇಲೆತ್ತಿ ಕೆಳಕ್ಕೆಸೆಯುವುದರಲ್ಲಿದ್ದನು. ಆದರೆ ಕ್ಷಣದಲ್ಲಿ ಬಾಹುಬಲಿಗೆ ವೈರಾಗ್ಯ ಉದಯಿಸಿತ್ತು. ತಾನು ಹೀಗೆ ಮಾಡಬಾರದೆಂದೆನಿಸಿ  ಭರತನನ್ನು ನಿಧಾನವಾಗಿ ಕೆಳಗಿಳಿಸಿದನು.

ಅವಮಾನಿತನಾದ ಭರತ ತನ್ನಲ್ಲಿದ್ದ ಚಕ್ರರತ್ನವನ್ನು ಬಾಹುಬಲಿಯ ಮೇಲೆ ಪ್ರಯೋಗಿಸಿದನು. ಆದರೆ ಚಕ್ರರತ್ನವು ಬಾಹುಬಲಿಗೆ ಮೂರು ಪ್ರದಕ್ಷಿಣೆ ಬಂದು ಅವನ ಬಲಭಾಗದಲ್ಲಿ ನಿಂದುಬಿಟ್ಟಿತು. ಬಾಹುಬಲಿ ವಿಜಯಿಯಾದನು. ಬಾಹುಬಲಿಗೆ ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿ ರಾಜ್ಯ ಕೋಶಗಳನ್ನು ಆಳಲು ನಿರಾಕರಿಸಿದನುವೈರಾಗ್ಯವನ್ನು ತಾಳಿ ರಾಜ್ಯವನ್ನು ತೊರೆದು ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು.

ಆದರೆ ಬಹುಕಾಲ ತಪಸ್ಸು ನಡೆಸಿದರೂ ಕೇವಲಜ್ಞಾನವನ್ನು ಪಡೆಯುವುದು ಬಾಹುಬಲಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ 'ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆ' ಆಗಿತ್ತು. ಇದನ್ನು ಅರಿತ ಭರತನು ಬಾಹುಬಲಿಯತ್ತ ಧಾವಿಸಿ 'ನೀನು ನೆಲವನ್ನು ಗೆದ್ದು ನನಗೆ ನೀಡಿರುವೆ. ನಿನ್ನ ನೆಲವನ್ನು ನಾನು ಆಳುತ್ತಿದ್ದೇನೆ. ನೀನು ಮನದಲ್ಲಿರುವ ಶಂಕೆಯನ್ನು ತೊರೆದು ಬಿಡೆಂ’ ದು ಬೇಡಿದನು.

ನಂತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು.


ಕರ್ನಾಟಕದ ಇತರೆಡೆಗಳಲ್ಲಿ ಬಾಹುಬಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೆರಡು ಗೊಮ್ಮಟೇಶ್ವರ ಮೂರ್ತಿಗಳಿವೆ. ಕ್ರಿ.ಶ. 1432ರಲ್ಲಿ ವೀರಪಾಂಡ್ಯ ಕಾರ್ಕಳದಲ್ಲಿ ಪ್ರತಿಷ್ಠಿಸಿದ ಮೂರ್ತಿ 42' ಎತ್ತರವಿದೆ.ವೇಣೂರಿನಲ್ಲಿ ಚಾವುಂಡರಾಯನ ವಂಶಸ್ಥನಾದ ತಿಮ್ಮರಾಜ ಕ್ರಿ.ಶ. 1604ರಲ್ಲಿ 35`ಎತ್ತರವಿರುವ ಇನ್ನೊಂದು ಮೂರ್ತಿಯನ್ನು ನಿಲ್ಲಿಸಿದ.

ಇತ್ತೀಚೆಗೆ ಗೊಮ್ಮಟೇಶ್ವರನ ಮತ್ತೊಂದು ಬೃಹನ್ ಮೂರ್ತಿಯನ್ನು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದೆ.. ಈ ಮೂರ್ತಿ ಸುಮಾರು 48'ಗಳಷ್ಟು ಎತ್ತರವಿದ್ದು ಅದನ್ನು ಪೀಠದ ಮೇಲೆ ನಿಲ್ಲಿಸಿದಾಗ 60`ಗಳಷ್ಟು ಎತ್ತರದ ಅದ್ಭುತ ಶಿಲಾಪ್ರತಿಮೆಯಾಗಿದ್ದು ಕಂಗೊಳಿಸುತ್ತಿದೆ. ಈ ವಿಗ್ರಹವನ್ನು ರೂಪಿಸಿದ ಶಿಲ್ಪಿ ರಂಜಾಳ ಗೋಪಾಲ ಶೆಣೈ. ಕಾರ್ಕಳದಲ್ಲಿ ಈ ಮೂರ್ತಿ ಸಿದ್ದವಾಗಿದ್ದು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಲಾಗಿದೆ.

 ಮೈಸೂರು ಜಿಲ್ಲೆ. ಕೃಷ್ಣರಾಜನಗರ ತಾಲ್ಲೂಕಿನ ಬಸ್ತಿ ಹಳ್ಳಿ ಎಂಬಲ್ಲಿರುವ ಸುಮಾರು 20` ಎತ್ತರವಿರುವ ಬಳಪದ ಕಲ್ಲಿನ ಒಂದು ಮೂರ್ತಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಆತನ ದಂಡನಾಯಕ ಪುಣಿಸಮಯ್ಯ ಪ್ರತಿಷ್ಠಿಸಿದುದಾಗಿ ತೋರುತ್ತದೆ. ಮೈಸೂರು ತಾಲ್ಲೂಕಿನ ಗೊಮ್ಮಟಗಿರಿಯ ಮೇಲೆ ನಿಂತಿರುವ ಇನ್ನೊಂದು ಮೂರ್ತಿಯನ್ನು ಯಾರು ಯಾವಾಗ ಸ್ಥಾಪಿಸಿದರು ಎಂಬುದು ತಿಳಿಯದು. ಮದ್ದೂರು ತಾಲ್ಲೂಕಿನಲ್ಲಿ ಬಸ್ತಿತಿಪ್ಟೂರಿನ ಬಳಿ ಗುಡ್ಡ ಒಂದರ ಮೇಲೆ ನಿಂತಿರುವ ಮತ್ತೊಂದು ಗೊಮ್ಮಟೇಶ್ವರನ ಮೂರ್ತಿ ಈಚೆಗೆ ಪತ್ತೆಯಾಗಿದೆ.


No comments:

Post a Comment