ಇದೀಗ ಕೃಷ್ಣ ಸಂಬಂಧ ಲಭ್ಯವಿರುವ ಪುರಾತತ್ವ ದಾಖಲೆಗಳ ಬಗೆಗೆ ನೋಡೋಣ, ಅದಕ್ಕೂ ಮುನ್ನ ಕೃಷ್ಣನಿಗೂ ಸಿಂಧೂ-ಸರಸ್ವತಿ ನಾಗರಿಕತೆಗೂ ಇರುವ ಸಂಪರ್ಕವನ್ನು ವಿಶ್ಲೇಷಿಸೋಣ.
ಕೃಷ್ಣನಿಗೆ ಸಿಂಧೂ-ಸರಸ್ವತಿ ಪುರಾವೆ
ಸಿಂಧೂ-ಸರಸ್ವತಿ ಕಲಾಕೃತಿಗಳು, ವೈದಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಘಟನೆಗಳು ಅಥವಾ ವ್ಯಕ್ತಿತ್ವಗಳೊಂದಿಗೆಹೋಲಿಸಿದ್ದಾದರೆ ನಾವು ಅಚ್ಚರಿಪಡುವಷ್ಟರ ಮಟ್ಟಿನ ಸುಂದರ ಚಿತ್ರವನ್ನು ನೋಡುತ್ತೇವೆ, ಯೋಗಿ ಶಿವ, ಮಾತೃ ದೇವತೆ, ನಂದಿ ಚಕ್ರವರ್ತಿ ಭರತ, ವೃಷಭ ದೇವ ಇತ್ಯಾದಿಗಳೊಂದಿಗೆ ಗುರುತಿಸಲ್ಪಟ್ಟಿರುವ ಮುದ್ರೆಗಳಿವೆ. ಹಾಗೆಯೇ ಕೃಷ್ಣನನ್ನೂ ಸೂಚಿಸುವ ಯಾವುದೇ ಅವಶೇಷಗಳು ಇದೆಯೇ ಎಂದು ನೋಡೋಣ.
1931 ರಲ್ಲಿ ಮೋಹೆಂಜೋದಾರೋದಿಂದ ತರಲಾದ ಸ್ಟೀಟೈಟ್ ಟ್ಯಾಬ್ಲೆಟ್, ಒಂದು ಬಾಲಕ ಎರಡು ಮರಗಳನ್ನು ಕಿತ್ತುಹಾಕುವುದನ್ನು ಚಿತ್ರಿಸಿದೆ,. ಆ ಮರದಿಂದ ಎರಡು ಮಾನವ ವ್ಯಕ್ತಿಗಳು ಹೊರಹೊಮ್ಮುತ್ತಿದ್ದಾರೆ. ಕೃಷ್ಣನ ದಿನಾಂಕವನ್ನು ನಿಗದಿಪಡಿಸಲು ಆಸಕ್ತಿದಾಯಕ ಪುರಾತತ್ವ ಶೋಧನೆ ಇದೆಂದು ಪರಿಗಣಿಸಲಾಗಿದೆ
ಡಾ.ಇ.ಜೆ.ಎಚ್ ಮಖಾಯ್ ಮೋಹಂಜೋದಾರೊದಲ್ಲಿ ಉತ್ಖನನ ಮಾಡಿದ ವೇಳೆ ಈ ಚಿತ್ರವನ್ನು ಯಮಲಾರ್ಜುನ ಪ್ರಸಂಗದೊಂದಿಗೆ ಹೋಲಿಸುತ್ತಾರೆ ಮತ್ತು ಪ್ರೊ.ವಿ.ಎಸ್. ಅಗರವಾಲ್ ಸಹ ಈ ಗುರುತನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ, ಚಿತ್ರಿಸಿದ ಚಿಕ್ಕ ಹುಡುಗ ಕೃಷ್ಣ ಮತ್ತು ಮರಗಳಿಂದ ಹೊರಬರುವ ಇಬ್ಬರು ಶಾಪಗ್ರಸ್ತರಾದ ಗಂಧರ್ವರಾದ ನಳಕುಬೇರ ಹಾಗೂ ಮಣಿಗ್ರೀವರಾದ್ದಾರೆ. ಇವರು ಶಾಪದಿಂದಾಗಿ ಅರ್ಜುನ ವೃಕ್ಷಗಳಾಗಿ ಮಾರ್ಪಟ್ಟಿದ್ದಾರೆ ಮತ್ತು ಕೃಷ್ಣನಿಂದ ಶಾಪ ವಿಮೋಚನೆ ಹೊಂದಿದ್ದಾರೆ.
ಸಿಂಧೂ-ಸರಸ್ವತಿ ಮುದ್ರೆಗಳ ಮೇಲೆ ಅಶ್ವತ್ಥ ಎಲೆಗಳು- ಮೊಹೆಂಜೋದಾರೊ ಕಾಲದ ಮುದ್ರೆ (ಕ್ರಿ.ಪೂ. 2500) ಸಾಂಪ್ರದಾಯಿಕವಾಗಿ ಅಶ್ವತ್ಥ ವೃಕ್ಷ ಸೃಷ್ಟಿ ವೃಕ್ಷವಾಗಿ ಪರಿಗಣಿಸಲಾಗುತ್ತದೆ. |
ಸಿಂಧೂ-ಸರಸ್ವತಿ ಜನರಿಗೆ ಕೃಷ್ಣನ ಕೃಷ್ಣನಿಗೆ ಸಂಬಂಧಿಸಿದ ಕಥೆಗಳ ಬಗ್ಗೆ ತಿಳಿದಿರಬಹುದು ಎಂದು ಇದು ತೋರಿಸುತ್ತದೆ. ಈ ಒಂದು ಶೋಧನೆಯು ಕೃಷ್ಣನ ದಿನಾಂಕವನ್ನು ದೃಢೀಕರಿಸದಿರಬಹುದು, ಆದರೆ ಅದೇ ಸಮಯದಲ್ಲಿ ಸಂಬಂಧಿತ ಹುಡುಕಾಟದಲ್ಲಿ ಮತ್ತೊಂದು ಪರೋಕ್ಷ ಸಾಕ್ಷ್ಯವನ್ನು ಕಂಡುಕೊಂಡಾಗ ಅದನ್ನು ನಿರ್ಲಕ್ಷಿಸಲಾಗುವುದಿಲ್ಲ.ಸಿಂಧೂ-ಕಣಿವೆಯ ಮುದ್ರೆಗಳು ದೇವತಾ ಸ್ವರೂಒಅವಾದ ಬಸವನಿಂದ ಕುದುರೆಗಳವರೆಗೆ ಮೀನುಗಳವರೆಗೆ ಹೇರಳವಾಗಿರುವ ಪ್ರಾಣಿ ರೂಪಗಳನ್ನು ತೋರಿಸುತ್ತವೆ; ಆದಾಗ್ಯೂ, ಕುತೂಹಲಕಾರಿಯಾಗಿ, ಒಂದು ನಿರ್ದಿಷ್ಟ ರೀತಿಯ ಮರವಿದೆ ಮತ್ತು ಅದರ ಎಲೆಗಳು ಎಲ್ಲಾ ಸಿಂಧೂ ತಾಣಗಳಲ್ಲಿ ಏಕರೂಪವಾಗಿ ಕಂಡುಬರುತ್ತವೆ ಅದುವೆ ಪೀಪಲ್ ಲೀವ್ಸ್(ಅಶ್ವತ್ಥ ಎಲೆ)
ಈಗ, ಶ್ರೀಮದ್ ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ, ಮರಗಳ ನಡುವೆ ತಾನು ಅಶ್ವತ್ಥ ಅಥವಾ ಪೀಪಲ್ ಅನ್ನು ಪ್ರತಿನಿಧಿಸುತ್ತೇನೆ ಎಂದು ಕೃಷ್ಣ ಹೇಳುತ್ತಾನೆ ಎನ್ನುವುದಕ್ಕೆ ಬರೋಣ, ಅದೇ ಯಾವುದೇ ಸಿಂಧೂ ಮುದ್ರೆಯ ಮೇಲೆ ಪ್ರತಿನಿಧಿಸಿರುವ ಏಕೈಕ ಎಲೆ- ಅಶ್ವತ್ಥ ಎಲೆ. ಇದು ಕೃಷ್ಣನನ್ನು ಮಾನವ ಸ್ವರೂಪದಿಂದಲ್ಲದ ವಿಶೇಷ ರೂಪದಲ್ಲಿ ಚಿತ್ರಿಸಿದೆ,
ಋಷಿ ಮಾರ್ಕಂಡೇಯನ ದಂತಕಥೆಯಲ್ಲಿ, ಪ್ರಪಂಚದ ಅಂತ್ಯದ ಸಮಯ ನೀರಿನಲ್ಲಿ ತೇಲುತ್ತಿರುವ ಅಶ್ವತ್ಥ ಎಲೆಯ ಮೇಲೆ ಮಲಗಿರುವ ಮಗುವಿನಂತೆ ಕೃಷ್ಣನು ಋಷಿಗೆ ಗೋಚರಿಸಿದ್ದ.
ನಾವು ಯಾವುದೇ ಕಥೆಯನ್ನೂ ನಿರ್ಣಾಯಕವಾಗಿ ಸಾಬೀತುಪಡಿಸುವ ಮೊದಲು ಹಲವಾರು ಮುದ್ರೆಗಳ, ಚಿತ್ರಲಿಪಿಗಳ ಸಂಪೂರ್ಣ ಅರ್ಥೈಸುವ ಅಗತ್ಯವಿರುತ್ತದೆ ಆದರೆ ಇದುವರೆಗೂ, ಅವರು ಕೃಷ್ಣನ ಬಗ್ಗೆ ತಿಳಿದಿದ್ದಾರೆ ಎಂಬುದನ್ನು ಅಲ್ಲಗಳೆಯಲು ನಮಗೆ ಯಾವ ಆಧಾರವಿಲ್ಲ. ನಮ್ಮ ಅಂದಾಜನ್ನು ನಿರ್ಣಾಯಕವಾಗಿ ಸಾಬೀತುಪಡಿಸಲು ಅಥವಾ ನಿರಾಕರಿಸಲು ನಾವು ಈಗ ಲಭ್ಯವಿರುವ ಇತರ ಸಾಕ್ಷಾಧಾರಗಳನ್ನು ವಿಶ್ಲೇಷಿಸಬೇಕಾಗಿದೆ.
ಸಾಗರ ಪುರಾತತ್ತ್ವ ಶಾಸ್ತ್ರದ ಪುರಾವೆಗಳು
ಗುಜರಾತ್ ಕರಾವಳಿಯಲ್ಲಿರುವ ಕ್ಯಾಂಬೆ ಕೊಲ್ಲಿಯಲ್ಲಿ ಇತ್ತೀಚಿನ ಸಮುದ್ರ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳು ಸಂಪೂರ್ಣ ಮುಳುಗಿದ ನಾಗರಿಕತೆಯನ್ನು ಬಹಿರಂಗಪಡಿಸಿವೆ, ಇದು ಕ್ರಿ.ಪೂ 7500 ರ ಸುಮಾರಿನವೆಂದು ಕಾರ್ಬನ್ ಪರೀಕ್ಷೆಯಿಂದ ದೃಢವಾಗಿದೆ,
ಕ್ಯಾಂಬೆ ಕೊಲ್ಲಿ |
ಈ ನಾಗರೀಕತೆಯು ಸಿಂಧೂ-ಸರಸ್ವತಿ ನಾಗರೀಕತೆಗೆ ಸಹ ಹಿಂದಿನದಾಗಿದೆ. ಎಂಬ ಸಾಧ್ಯತೆ ದೊಡ್ಡದಾಗಿದೆ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿರುವ ಹಿಂದಿನ ಪುರಾಣ ಕಥೆಗಳ ಸಾಮ್ರಾಜ್ಯಗಳೊಂದಿಗೆ ಸಂಭಾವ್ಯ ಸಂಪರ್ಕವನ್ನು ಸಾಧಿಸುತ್ತದೆ, ಆದರೆ ನಾವು ಕೃಷ್ಣ ಅಥವಾ ಇನ್ನಾವುದೇ ಪ್ರಾಚೀನ ರಾಜನೊಂದಿಗೆ ಲಿಂಕ್ ಮಾಡುವ ಮೊದಲು ಇನ್ನಷ್ಟು ವಿವರ ತಿಳಿಯೋಣ.
ಕೃಷ್ಣನೊಂದಿಗೆ ಸಮಂಜಸವಾಗಿ ಜೋಡಿಸಬಹುದಾದ ಸಂಗತಿಯೆಂದರೆ, ಪ್ರಸ್ತುತ ದ್ವಾರಕಾ ನಗರಕ್ಕೆ ಹತ್ತಿರವಿರುವ ಮತ್ತೊಂದು ಮುಳುಗಿದ ನಗರವನ್ನು ಕಂಡುಹಿಡಿದಿದ್ದು, ಇದು ಕೃಷ್ಣನ ಮೂಲ ನಗರವೆಂದು ನಂಬಲಾಗಿದೆ ಏಕೆಂದರೆ ಧರ್ಮಗ್ರಂಥದ ವಿವರಣೆಗಳಿಗೆ ಸರಿಹೊಂದುವ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರಗಳು !!
ಮಹಾಭಾರತದ ಪ್ರಕಾರ, ಈ ನಗರವನ್ನು ಸುರರ ವಾಸ್ತುಶಿಲ್ಪಿ ವಿಶ್ವಕರ್ಮನು ಭಗವಾನ್ ಕೃಷ್ಣನಿಗಾಗಿ ನಿರ್ಮಿಸಿದ್ದು, ಸೌರಾಷ್ಟ್ರದ ಪಶ್ಚಿಮ ತೀರದಲ್ಲಿ ಸಮುದ್ರದಿಂದ 12 ಯೋಜನೆಗಳ ಭೂಮಿಯನ್ನು ಪುನಃ ಪಡೆದುಕೊಳ್ಳುವ ಮೂಲಕ. ನಗರವು ಆರು ಸುಸಂಘಟಿತ ವಲಯಗಳು, ವಸತಿ ಮತ್ತು ವಾಣಿಜ್ಯ ವಲಯಗಳು, ವಿಶಾಲ ರಸ್ತೆಗಳು, ಪ್ಲಾಜಾಗಳು, ಅರಮನೆಗಳು ಮತ್ತು ಅನೇಕ ಸಾರ್ವಜನಿಕ ಉಪಯುಕ್ತ ಪ್ರದೇಶಗಳನ್ನು ಹೊಂದಿದ್ದು ಭವ್ಯವಾದ ಸಮುದ್ರ ಬಂದರನ್ನು ಹೊಂದಿತ್ತು.
ಸಮುದ್ರದ ಕೆಳಗೆ ಪತ್ತೆಯಾದ ನಗರದ ಸಾಮಾನ್ಯ ವಿನ್ಯಾಸವು ಪಠ್ಯಗಳ ವಿವರಣೆಯೊಂದಿಗೆ ಗಮನಾರ್ಹವಾಗಿ ಒಪ್ಪುತ್ತದೆ !! ಗೋಡೆಗಳ ಅಗಾಧವಾದ ಅಡಿಪಾಯವು ಸಮುದ್ರದಿಂದ ಭೂಮಿಯನ್ನು ಪುನಃ ಪಡೆದುಕೊಳ್ಳಲಾಗಿದೆ ಎಂಬ ನಂಬಿಕೆಯನ್ನು ಸಹ ಬೆಂಬಲಿಸುತ್ತದೆ. ಕುತೂಹಲಕಾರಿಯಾಗಿ, ದ್ವಾರಕಾದಲ್ಲಿ ಒಂದು ರೀತಿಯ ಪಾಸ್‌ಪೋರ್ಟ್ವ್ಯವಸ್ಥೆಯ ಬಗ್ಗೆ ಧರ್ಮಗ್ರಂಥಗಳು ಮಾತನಾಡುತ್ತವೆ. ಅದರ ನಾಗರಿಕರಿಗೆ ಪಾರಂಪರಿಕ ಮೂರು ತಲೆಯ-ಪ್ರಾಣಿ (ಗ್ರೀಕ್ ಸೆರ್ಬರಸ್?!?) ನೊಂದಿಗೆ ಮಣ್ಣಿನ ಮುದ್ರೆಯನ್ನು ನೀಡಲಾಗುತ್ತಿತ್ತು, , ಅವರು ಬೃಹತ್ ದ್ವಾರಗಳನ್ನು ಪ್ರವೇಶಿಸಿದಾಗ ಅಥವಾ ತೊರೆದಾಗ ಅದನ್ನು ಪ್ರಸ್ತುತಪಡಿಸಬೇಕಾಗಿತ್ತು. ಕುತೂಹಲಕಾರಿಯಾಗಿ, ದ್ವಾರಕಾದ ಈ ಮುದ್ರೆಯು ನಗರದ ನೀರೊಳಗಿನ ಅವಶೇಷಗಳಲ್ಲಿ ಕಂಡುಬಂದಿದೆ !!
ಪಾಸ್‌ಪೋರ್ಟ್ ನಂತೆ ಬಳಕೆಯಾಗುತ್ತಿದ್ದ ದ್ವಾರಕೆಯ ಮುದ್ರೆಗಳು |
ಈ ಆವಿಷ್ಕಾರಗಳ ವಿವರಗಳಿಗೆ ಒಟ್ಟಾರೆಯಾಗಿ ಪ್ರತ್ಯೇಕ ಲೇಖನ ಬೇಕಾಗುತ್ತದೆ ಆದರೆ ನಮ್ಮ ಪ್ರಸ್ತುತ ದೃಷ್ಟಿಕೋನದಿಂದ ಮುಖ್ಯವಾದುದು ಈ ಶೋಧನೆಯ ದಿನಾಂಕ. ಈ ನಿರ್ದಿಷ್ಟ ಮುದ್ರೆಯ ಅವಧಿ ಕ್ರಿ.ಪೂ 1528 ಸುಮಾರೆಂದು ಕಾರ್ಬನ್ ಪರೀಕ್ಷೆಯಿಂದ ತಿಳಿದು ಬಂದಿದೆ, ಇದನ್ನು ಹರಪ್ಪನ್ ಅವಧಿಗೆ ಸಮನಾಗಿ ಜೋಡಿಸಲಾಗಿದೆ. ಇತರ ಕಲಾಕೃತಿಗಳಾದ ಇಟ್ಟಿಗೆ ಗೋಡೆಗಳು, ಕೋಟೆಗಳು, ಹಡಗುಗಳಿಗೆ ಕಲ್ಲಿನ ಲಂಗರುಗಳು, ರೋಮನ್ ಆಂಫೊರಾಗಳು ಇದರ ಅವಧಿ ಕ್ರಿ.ಪೂ 2500 ರಿಂದ ಕ್ರಿ.ಪೂ 4 ನೇ ಶತಮಾನದವರೆಗೆ ದ್ವಾರಕಾ ಬಹುಶಃ ಭಾರತದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ಜನನಿಬಿಡ ಬಂದರು ಎಂದು ಸಾಬೀತುಪಡಿಸಿದೆ
ಕೃಷ್ಣನಿಗೆ ಸಂಬಂಧಿಸಿದ ಇನ್ನಷ್ಟುಪುರಾತತ್ವ ಪುರಾವೆಗಳು
ಕ್ರಿ.ಪೂ 1 ನೇ ಸಹಸ್ರಮಾನದ ಆಸುಪಾಸಿನಲ್ಲಿ ಕೃಷ್ಣನ ಬಗೆಗಿನ ಜ್ಞಾನ ಮತ್ತು ಆರಾಧನೆಯನ್ನು ಬೆಂಬಲಿಸುವ ಹಲವಾರು ನೇರ ಮತ್ತು ಪರೋಕ್ಷ ಸಾಕ್ಷ್ಯಗಳಿವೆ.
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಕ್ರಿ.ಪೂ.800 ಗುಹೆ ಚಿತ್ರಕಲೆ ಕುದುರೆ-ರಥವನ್ನು ಮತ್ತೊಂದು ಆಕೃತಿಯ ಮೇಲೆ ಚಕ್ರವನ್ನು ಎಸೆಯುವ ಬಗ್ಗೆ ತೋರಿಸುತ್ತದೆ. ಈ ಪ್ರಸಂಗವನ್ನು ಕೃಷ್ಣನು ಮಹಾಭಾರತ ಯುದ್ಧದಿಂದ ಭೀಷ್ಮ-ಪಿತಾಮರ ಮೇಲೆ ರಥ ಚಕ್ರವನ್ನು ಎಸೆಯಲು ತಯಾರಾಗುತ್ತಿದ್ದಾನೆಂದು ಗುರುತಿಸಬಹುದು !
ಪ್ರಾಚೀನ ಭಾರತದಲ್ಲಿನ ಗ್ರೀಕ್ ರಾಯಭಾರ ಕಚೇರಿಗಳು |
ರಾಜಸ್ಥಾನದ ಉದಯಪುರ ಜಿಲ್ಲೆಯ ನಗರಿ ಗ್ರಾಮದ ಪೂರ್ವದಲ್ಲಿರುವ ಸಮಕರ್ಷನ ಮತ್ತು ವಾಸುದೇವ ದೈವತ್ವಕ್ಕಾಗಿ ಶಾಲಿಗ್ರಾಮವೆಂಬ ಶಿಲೆಯನ್ನು ಇಡಲಾಗಿದೆ,
ಇಂಡೋ-ಸಿಥಿಯನ್ ರಾಜ (ಕ್ರಿ.ಪೂ. 85) ಗ್ರೀಕ್ ದೇವರುಗಳಾದ ಜೀಯಸ್ ಮತ್ತು ನೈಕ್ ಜೊತೆಗೆ ಬಲರಾಮನ ಆರಾಧಕರಾಗಿದ್ದರು. ಅವನ ಕೆಲವು ನಾಣ್ಯಗಳು ರಾಜನನ್ನು ಕಾಲನ್ನು ಅಡ್ಡಲಿಟ್ಟು ಕುಳಿತಿರುವ ಭಂಗಿಯಲ್ಲಿಚಿತ್ರಿಸುತ್ತವೆ ಮತ್ತು ಕ್ರಿ.ಪೂ 1 ನೇ ಶತಮಾನದಲ್ಲಿ ಮುದ್ರಿಸಲಾದ ಅವನ ನಾಣ್ಯಗಳಲ್ಲಿ ಒಂದು ಬಲರಾಮನನ್ನು ಚಿತ್ರಿವನ್ನೂ ಹೊಂದಿದೆ,
ಉತ್ತರ ಭಾರತದ ಕೊನೆಯ ಮಹಾನ್ ಕುಶಾನ್ ದೊರೆ ಮತ್ತು ಬ್ಯಾಕ್ಟೀರಿಯಾ ವಾಸುದೇವ I (ಸುಮಾರು ಕ್ರಿ.ಶ.200 ಎಂಬ ಬಿರುದನ್ನು ಹೊಂದಿದ್ದನು, ಆತ ಸಹ ಹಿಂದೂ ದೇವರುಗಳ ಗೌರವಾರ್ಥವಾಗಿ ನಾಣ್ಯಗಳನ್ನು ಮುದ್ರಿಸಿದರು.
ಬಲರಾಮನ ಚಿತ್ರವಿರುವ ಇಂಡೋ-ಸಿಥಿಯನ್ ರಾಜ (ಕ್ರಿ.ಪೂ 85)ನ ನಾಣ್ಯ |
ಫ್ರೆಂಚ್ ಪುರಾತತ್ವ ದಂಡಯಾತ್ರೆಯ ಪಿ. ಬರ್ನಾರ್ಡ್ ಅಂತಹ ಆರು ನಾಣ್ಯಗಳನ್ನು ಪತ್ತೆ ಮಾಡಿದರು. ಅಂತಹ ಒಂದು ನಾಣ್ಯದಲ್ಲಿ ಶಂಖ ಮತ್ತು ನಿಂತಿರುವ ವೃತ್ತಾಕಾರದ ವಸ್ತುವನ್ನು ಗುರಾಣಿ ಅಥವಾ ಚಕ್ರ ಎಂದು ವ್ಯಾಖ್ಯಾನಿಸಲಾಗಿದೆ. ಗುರಾಣಿ ಮತ್ತು ಶಂಖ ಕೃಷ್ಣನನ್ನು ಪ್ರತಿನಿಧಿಸುತ್ತದೆ, ವಾಸುದೇವನನ್ನು ಬ್ಯಾಕ್ಟೀರಿಯನ್ ರಾಜರು ಸಹ ವೀರರೆಂದು ಪರಿಗಣಿಸಿದ್ದರು".ಎಂದು . ಪಿ. ಬರ್ನಾರ್ಡ್ ಹೇಳಿದ್ದಾರೆ.
ಕರಾವಳಿ ಪಟ್ಟಣವಾದ ದ್ವಾರಕ ಪಶ್ಚಿಮ ಸೌರಾಷ್ಟ್ರದ ರಾಜಧಾನಿಯಾಗಿತ್ತು ಮತ್ತು ಕೃಷ್ಣನು ಅಲ್ಲಿ ವಾಸಿಸುತ್ತಿದ್ದನೆಂದು ಪಲಿಟಾನದ ರಾಜ ಶ್ಯಮಂತ ಸಿಂಹಾದಿತ್ಯ(ಸೌರಾಷ್ಟ್ರದ ಪ್ರಮುಖ ಜೈನ ಯಾತ್ರಾ ಕೇಂದ್ರ) ನ ಶಾಸನಗಳು ಹೇಳುತ್ತವೆ.
ಚೆನ್ನೈ ಬಳಿಯ ಮಣಿಮಂಗಲಂ ಹಳ್ಳಿಯಲ್ಲಿ ದೇವಾಲಯವೊಂದಿದ್ದು ಅಲ್ಲಿ "ತುವರಪತಿ" ಎಂಬ ದೇವತೆಯನ್ನು ಪೂಜಿಸಲಾಗುತ್ತದೆ, ತುವರೈ ಅಥವಾ ದ್ವಾರಕಾದ ಜನರು ದಕ್ಷಿಣ ಭಾರತಕ್ಕೆ ವಲಸೆ ಬಂದರು. ಹಲವಾರು ಕಡೆ ನೆಲೆಸಿದ್ದರೆಂದು ಇಂದು ಸಾರುತ್ತದೆ.
ಕೊನೆಯದಾಗಿಕ್ರಿ.ಶ 634 ರ ರಾಜ ಪುಲಕೇಶಿ II ರ ಐಹೊಳೆ ಶಾಸನವು ಮಹಾಭಾರತ ಯುದ್ಧವನ್ನು 3735 ವರ್ಷಗಳ ಮೊದಲು ನಡೆದಿದೆಯೆಂದು ಹೇಳುತ್ತದೆ.
ಈ
ಎಲ್ಲಾ ಪುರಾತತ್ವ ಮಾಹಿತಿಯ ಅರ್ಥವೇನು ಎಂದು ನಿಮಗೆ ಆಶ್ಚರ್ಯವಾಗಬಹುದು. ಕೃಷ್ಣ ಮತ್ತು ಬಲರಾಮನನ್ನು ಮೊದಲಿನಿಂದಲೂ ದೇವರೆಂದು ಗುರುತಿಸಲಾಗಿದೆ ಮತ್ತು ಪೂಜಿಸಲಾಗಿದೆ. ಇಲ್ಲಿಯವರೆಗೆ ಸಂಗ್ರಹಿಸಲಾದ ಎಲ್ಲಾ ಪುರಾವೆಗಳು, ನಾವು ಪ್ರಾರಂಭದಲ್ಲಿ ಹೇಳಿದ್ದ ಅದೇ ಸಮಯ ಅಂದರೆ ಕ್ರಿ.ಪೂ 3 ನೇ ಶತಮಾನದಲಿ ಸೇರುತ್ತದೆ, ನಮಗೆ
ವಿಶ್ಲೇಷಿಸಲು ಈಗ ಕೇವಲ ಒಂದು
ಸಾಕ್ಷಿ ಉಳಿದಿದೆ - ಅದುವೇ ಧರ್ಮಗ್ರಂಥಗಳಿಂದ ಕೃಷ್ಣನ ಇರುವಿಕೆ ಬಗೆಗಿನ ಜ್ಯೋತಿಷ್ಯ ಸಾಕ್ಷ್ಯ.!
...ಮುಂದುವರಿಯುವುದು
No comments:
Post a Comment