Friday, August 28, 2020

ಕೃಷ್ಣನ ಐತಿಹಾಸಿಕ ಬದುಕು - ಒಂದು ಸ್ಥೂಲ ನೋಟ

ಕೃಷ್ಣನ ಕಾಲನಿರ್ಣಯದ ಕುರಿತಾಗಿ ಈ ಹಿಂದಿನ ಎಲ್ಲಾ ಲೇಖನ ಸರಣಿಗಳಲ್ಲಿ ವಿವಿಧ ಐತಿಹಾಸಿಕ, ಸಾಹಿತ್ಯಿಕ ಜ್ಯೋತಿಷ್ಯ ದಾಖಲೆಗಳನ್ನೂ ಅವಲೋಕಿಸಿದ ನಂತರ ಇದೀಗ ಕೃಷ್ಣನ ಐತಿಹಾಸಿಕ ಬದುಕು ಹೇಗಿತ್ತು ಎನ್ನುವುದು ನೋಡೋಣ. 

ಕೃಷ್ಣನ ಜನನ.(ಕ್ರಿ.ಪೂ. 3228ರ  17-18 ಜುಲೈ)

ಕೃಷ್ಣ ವಸುದೇವ-ದೇವಕಿಯರ ಎಂಟನೇ ಪುತ್ರ. ಕೃಷ್ಣನ ಜನನ ದಿನಾಂಕ ಕ್ರಿ.ಪೂ. 3228ರ  17-18 ಜುಲೈ. ಅಂದು ಶ್ರೀಮುಖನಾಮ ಸಂವತ್ಸರದ ಶ್ರಾವಣ ಬಹುಳ(ಕೃಷ್ಣ) ಅಷ್ಟಮಿ ರಾತ್ರಿ ಹನ್ನೆರಡು ಗಂಟೆಯ ಸಮಯ. ಬಾರ್ಹಸ್ಪತ್ಯ ರೀತ್ಯಾ ಪಾರ್ಥಿವ ನಾಮ ಸಂವತ್ಸರ. ರೋಹಿಣಿ ನಕ್ಷತ್ರ, (ಅಷ್ಟಮಿ ಜೂನ್ 17 ರಂದು ಸಂಜೆ ಕೊನೆಯಾಗಿದ್ದರೂ  ನವಮಿ ತಿಥಿ ಇದ್ದೂ  ಹುಟ್ಟಿದ ಸಮಯದಲ್ಲಿ ರೋಹಿಣಿ ನಕ್ಷತ್ರವಿತ್ತು) ಶುಕ್ರವಾರವಿತ್ತು. ಅಂದಿಗೆ ಜಗತ್ತು ಸೃಷ್ಟಿಯಾಗಿ 195,58,79,894 ವರ್ಷಗಳಾಗಿತ್ತು!!!

ಕೃಷ್ಣನ ಜನನ.(ಕ್ರಿ.ಪೂ. 3228ರ  17-18 ಜುಲೈ)

ಕೃಷ್ಣನ ಜನನವಾಗಿ ಸ್ವಲ್ಪ ಹೊತ್ತಿಗೇ ದೈವ ಸಂಕಲ್ಪ ಎಂಬಂತೆ ಕೃಷ್ಣನನ್ನು ವಸುದೇವ ಗೋಕುಲಕ್ಕೆ ಕರೆದೊಯ್ಯುತ್ತಾನೆ.  ಈತ ಬಾಲ್ಯ ಕಳೆದದ್ದು ಗೋಕುಲದಲ್ಲಿ. ಸಾಕು ತಂದೆ ತಾಯಿಯರಾದ ನಂದಗೋಪ ಮತ್ತು ಯಶೋದೆಯ ಮಡಿಲಲ್ಲಿ!! 

ವಿವಿಧ ಸ್ಥಳಗಳಲ್ಲಿ ಶ್ರೀ ಕೃಷ್ಣನ ಜೀವಿತಾವಧಿ

ಕೃಷ್ಣ ತನ್ನ ಜೀವನವನ್ನು 3 ಪ್ರಮುಖ ಭಾಗಗಳಲ್ಲಿ ವಿಂಗಡಿಸಬಹುದು,

  • ವೃಂದಾವನ  ಲೀಲೆ: 11 ವರ್ಷ 6 ತಿಂಗಳು (ಬೃಂದಾವನ/ಗೋಕುಲದಲ್ಲಿ ಬಾಲ್ಯದ ದಿನಗಳು)
  • ಮಥುರಾ ಲೀಲೆ: 10 ವರ್ಷ 6 ತಿಂಗಳು (ತನ್ನ ಮಾವ ಕಂಸನನ್ನು ಕೊಂದ ನಂತರ ಹದಿಹರೆಯದ ಜೀವನ)
  • ದ್ವಾರಕಾ ಲೀಲೆ: 105 ವರ್ಷ 3 ತಿಂಗಳು (ದ್ವಾರಕದಲ್ಲಿ ರಾಜ್ಯವನ್ನು ಸ್ಥಾಪಿಸಿದ ನಂತರದ ಜೀವನ)
ಕೃಷ್ಣ ಗೋಕುಲದಲ್ಲಿದ್ದಾಗಲೇ  ತನ್ನನ್ನು ಕೊಲ್ಲಲಿರುವ ಮಗು ಗೋಕುಲದಲ್ಲಿ ಬೆಳೆಯುತ್ತಿರುವ ವಿಷಯ ತಿಳಿದು, ಆ ಶಿಶುವನ್ನು ಹತ್ಯೆಗೈಯಲು ಕಂಸ ನಾನಾ ಸಂಚು ರೂಪಿಸಿದ್ದ (ಈ ನಿಟ್ಟಿನಲ್ಲಿ ಬಂದವರೇ ಪೂತನಿ, ಶಕಟಾಸುರ, ಕಾಲಯವನ, ತೃಣಾವರ್ತ, ಬಕ,ಅಘ, ಅರಿಷ್ಟ, ಕೇಶಿ ಮುರ, ಜರಾಸಂಧ, ಪೌಂಡ್ರಕ )

ಬೃಂದಾವನ ಲೀಲೆಯ ಸಮಯದಲ್ಲೇ ಕೃಷ್ಣ ಮರದರೂಪದಲ್ಲಿದ್ದ ನಳಕುಬೇರ ಹಾಗೂ ಮಣಿಗ್ರೀವ ಎಂಬ ಶಾಪಗ್ರಸ್ಥ ಗಂಧರ್ವರಿಗೆ ಮೋಕ್ಷ ನೀಡಿದನು.(ಈ ಇಬ್ಬರೂ ಗಂಧರ್ವ ಕುಲಕ್ಕೆ ಸೇರಿದವರಾಗಿದ್ದು ಕಂಸನೋ ಇನ್ನಾರೋ ಅಣತಿಯಂತೆ ಆ ಪ್ರದೇಶದಲ್ಲಿ ಜೀತದಾಲಾಗಿ ದುಡಿಯುತ್ತಿರಬಹುದು, ಆ ಜೀತದಿಂದ ಬಾಲಕ ಕೃಷ್ಣ ಅವರನ್ನು ಮುಕ್ತಗೊಳಿಸಿದ್ದ)

ಗೋವರ್ಧನ ಗಿರಿಧಾರಿ ಕೃಷ್ಣ (ಕ್ರಿ.ಪೂ 3222 ಆಗಸ್ಟ್ 28)

ಕೃಷ್ಣನಿಗೆ 7 ವರ್ಷ 2 ತಿಂಗಳು 10 ದಿನಗಳಾಗಿದ್ದ ವೇಳೆ ಗೋವರ್ಧನ ಗಿರಿ ಘಟನೆ ನಡೆದಿತ್ತು!!

ಗೋವರ್ಧನ ಗಿರಿಧಾರಿ ಕೃಷ್ಣ (ಕ್ರಿ.ಪೂ 3222 ಆಗಸ್ಟ್ 28)


ಕ್ರಿ.ಪೂ 3222 ಆಗಸ್ಟ್ 28 ರಾತ್ರಿ ಕೃಷ್ಣನು ಭೀಕರ ಮಳೆ ಹಾಗೂ ಬಿರುಗಾಳಿಗಳಿಂದ ದನಗಳನ್ನು ಮತ್ತು ಜನರನ್ನು ಗೋವರ್ಧನ ಗಿರಿ ಗುಹೆಯಲ್ಲಿ ಅಡಗಿಸಿಟ್ಟು ರಕ್ಷಿಸಿದ್ದನು.

ಕಂಸನ ವಧೆ(ಕ್ರಿ,ಪೂ. 3218ರ ಡಿಸೆಂಬರ್ 14 ಶಿವರಾತ್ರಿ ದಿನ)

ಬೃಂದಾವನ ಲೀಲೆಯ ಕಡೆಯಲ್ಲಿ ಕೃಷ್ಣನು ಮಥುರಾವನ್ನು ಪ್ರವೇಶಿಸಲು ನಿರ್ಧರಿಸಿದನು ಮತ್ತು ಅವನ ಮಾವ ಕಂಸ ನಡೆಸುತ್ತಿದ್ದ ದುರಾಡಳಿತವನ್ನು ಕೊನೆಗೊಳಿಸಿದನು
ಕಂಸನ ವಧೆ(ಕ್ರಿ,ಪೂ. 3218ರ ಡಿಸೆಂಬರ್ 14 ಶಿವರಾತ್ರಿ ದಿನ)


ಮಥುರ ಲೀಲೆಯ ಸಮಯದಲ್ಲಿ ಕ್ರಿ,ಪೂ. 3218ರ ಡಿಸೆಂಬರ್ 14 ಕ್ಕೆ ಶಿವರಾತ್ರಿಯ ದಿನ ಕೃಷ್ಣನು ಕಂಸನ ವಧೆ ಮಾಡಿದ್ದನು, (ಆ ದಿನಗಳಲ್ಲಿ ಶಿವರಾತ್ರಿ ಈಗಿನ ಕಾಲಮಾನಕ್ಕೆ ಹೋಲಿಸಿದರೆ  2-3 ತಿಂಗಳು ಮುಂಚಿತವಾಗಿ ಸಂಭವಿಸುತ್ತಿತ್ತು. ಕಳೆದ 5000+ ವರ್ಷಗಳಲ್ಲಿ ಸಂಕ್ರಾಂತಿ ಹಾಗೂ ವಿಷು ಕಾಲಮಾನದ ಬದಲಾವಣೆಯ ಕಾರಣ ಈಗ ಶಿವರಾತ್ರಿ ಫೆಬ್ರವರಿ ಇಲ್ಲವೆ ಮಾರ್ಚ್ ಗೆ ಸಂಭವಿಸುತ್ತದೆ.) ಕಂಸನನ್ನು ಕೊಂದ ನಂತರ ಕಂಸನ ತಂದೆ ಉಗ್ರಸೇನನನ್ನು ಮಥುರಾದ ರಾಜನನ್ನಾಗಿ ಮಾಡಿದ್ದನು ಕಂಸ ವಧೆ ಮಾಡುವಾಗ ಕೃಷ್ಣನಿಗೆ 11 ವರ್ಷ 6 ತಿಂಗಳಾಗಿತ್ತು

ದ್ವಾರಕೆಯತ್ತ ಗಮನ (ಕ್ರಿ.ಪೂ 3207 ಜೂನ್)

ಅದಾಗಿ ಸುಮಾರು ಹತ್ತು ವರ್ಷಗಳ ಕಾಲ ಮಥುರೆಯಲ್ಲಿದ್ದ ಕೃಷ್ಣ ಕ್ರಿ.ಪೂ 3207 ಜೂನ್ ನಲ್ಲಿ  ಮಥುರೆಯನ್ನು ತೊರೆದು ಪಶ್ಚಿಮ ಸಮುದ್ರ ತೀರದಲ್ಲಿ ದ್ವಾರಕ ಎಂಬ ಹೊಸ ನಗರವನ್ನು ರೂಪಿಸಲು ತಯಾರಾದ. ಅದಕ್ಕೆ ಕಾರಣ ಹೀಗಿದೆ- 

ಮಗಧ ದೊರೆ ಜರಾಸಂಧ 17 ಬಾರಿ ಮಥುರೆಯ ಮೇಲೆ ಮೇಲೆ ದಾಳಿ ಮಾಡಿದ ಅಲ್ಲದೆ ಇನ್ನೂ ಅನೇಕ ರಾಜರು ಮಥುರೆಯ ಆಕ್ರಮಣಕ್ಕೆ ಮುಂದಾಗಿದ್ದರು.ಪರಿಣಾಮ ಕೃಷ್ಣ  ತನ್ನ ಯಾದವ ಪರಿವಾರದ ರಕ್ಷಣೆಗಾಗಿ ಯುದ್ಧವನ್ನು ಪರಿತ್ಯಜಿಸಿದನು ಹಾಗೂ ತನ್ನ ರಾಜಧಾನಿಯನ್ನು  ಮಥುರೆಯ ಬದಲು ದ್ವಾರಕೆಗೆ ಬದಲಿಸಿದನು. ಅಲ್ಲಿ ಆತ 12 ಯೋಜನ ಜಾಗದಲ್ಲಿ ದ್ವಾರಕಾ ನಗರವನ್ನು ನಿರ್ಮಿಸಿದ್ದನು,  ದ್ವಾರಕಾ ಅಥವಾ ದ್ವಾರವತಿ ಎಂದು ಕರೆಯಲಾಗುತ್ತಿದ್ದ ಈ ನಗರ ಯಾದವರಿಗೆ ಹೊಸ ಜೀವನ ಕಟ್ಟಿಕೊಟ್ಟಿತು.

ದ್ವಾರಕೆಯಲ್ಲಿ ಕೃಷ್ಣ, ಅವನ ಪತ್ನಿಯರು, ಮಕ್ಕಳು

ಕೃಷ್ಣ ತನ್ನ ಜೀವನದ ಬಹುಪಾಲು ಅವಧು ಕಳೆದದ್ದು ದ್ವಾರಕೆಯಲ್ಲಿ. ದ್ವಾರಕೆಗೆ ಬಂದು ನೆಲೆಸಿದ್ದ ಕೃಷ್ಣನಿಗೆ  16,108 ಪತ್ನಿಯರೆಂದು  ಹೇಳಲಾಗಿದೆ, ಆದರೆ ಅದರಲ್ಲಿ ಆದರೆ 8 ಜನ ಪತ್ನಿಯರು ಮಾತ್ರವೇ ಮುಖ್ಯವಾಗಿರುತ್ತಾರೆ. ಅವರೆಂದರೆ
  • ವಿದರ್ಭ ರಾಜ ಭೀಷ್ಮಕನ ಮಗಳು ರುಕ್ಮಿಣಿ 
  • ಸತ್ರಾಜಿತನ ಮಗಳು ಸತ್ಯಭಾಮೆ
  • ಜಾಂಬವನ ಮಗಳು ಜಾಂಬವತಿ
  • ಸೂರ್ಯದೇವನ ಮಗಳಾದ ಕಳಿಂದಿ
  • ಕೋಸಲ ರಾಜ ನಗ್ನಜಿತನ ಮಗಳು ನಗ್ನಜಿತಿ 
  • ಉಜೈಯನಿಯ ಪ್ರಖ್ಯಾತ ರಾಜರಾದ ವಿಂದ ಮತ್ತು ಅನುವಿಂದರ ಮುದ್ದಿನ ಹಾಗೂ ಏಕೈಕ ಸಹೋದರಿ ಮಿತ್ರಾವಿಂದ 
  • ದ್ರಿಷ್ಟಿಕೇತು ಮತ್ತು ಶ್ರುತಕೀರ್ತಿ ದಂಪತಿಗಳ ಮಗಳಾದ  ಭದ್ರ
  • ಮದ್ರಾ ರಾಜ್ಯದ ಬೃಹತ್ಸೇನನ ಮಗಳು ಲಕ್ಷ್ಮಣ 

ಈ ಎಲ್ಲಾ ರಾಜರು, ಸಾಮಂತರ ಪುತ್ರಿಯರನ್ನು ಕೃಷ್ಣ ವಿವಾಹವಾಗುವುದರ ಮೂಲಕ ದ್ವಾರಕೆಯ ಸುತ್ತಮುತ್ತಲ ಹ್ಗಡಿಯನ್ನು ಭದ್ರಪಡಿಸಿದ್ದಲ್ಲದೆ.ದ್ವಾರಕೆಗೆ ಶತ್ರುಗಳಿಂದಾಗಬಹುದಾದ ಹಾನಿಯನ್ನೂತನ್ನ ರಾಜನೀತಿ ಚಾತುರ್ಯದಿಂದ  ತಪ್ಪಿಸಿದ್ದ!!!

ಇದಲ್ಲದೆ ನರಕ ಎಂಬ ಅಸುರ(ರಾಜ?) ಬೇರೆ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿದ್ದಾಗ ಕದ್ದು ತಂದು ಬಂಧಿಸಿಟ್ಟಿದ್ದ  16,100 ಮಹಿಳೆಯರನ್ನು ಕೃಷ್ಣ ಬಂಧನದಿಂದ ಬಿಡಿಸಿದ್ದನು, ಈ ವೇಳೆ ಇಷ್ಟು ದಿನ ನರಕನ ಆಶ್ರಯದಲ್ಲಿದ್ದ ಅವರನ್ನು ಬೇರಾರೂ ವಿವಾಹವಾಗದೆ ಹೋಗಲು ಕೃಷ್ಣ ಎಲ್ಲರನ್ನೂ ತಾನೇ ವಿವಾಹವಾದನೆಂದು ಹೇಳಲಾಗುತ್ತದೆ, 

ಕೃಷ್ಣನಿಗೆ ಅಷ್ಟ ಪತ್ನಿಯರಲ್ಲಿ ಪ್ರತೊಬ್ಬರಿಗೆ ಹತ್ತು ಮಂದಿ ಒಟ್ಟೂ ಎಂಬತ್ತು ಮಂದಿ ಮಕ್ಕಳಿದ್ದರು ಎಂದು ಹೇಳಲಾಗಿದೆ. ಆದರೆ ಅವರೆಲ್ಲರ ಪೈಕಿ ಕೃಷ್ಣ ಹಾಗೂ ರುಕ್ಮಿಣಿಯ ಮಗ ಪ್ರದ್ಯುಮ್ನ ಅತ್ಯಂತ ಪ್ರಮುಖನಾಗಿದ್ದಾನೆ. ಜಾಂಬವತಿಗೆ ಹುಟ್ಟಿದ ಸಾಂಬ ಕೃಷ್ಣನ ಇನ್ನೋರ್ವ ಪುತ್ರ. 

ಕೃಷ್ಣನ ಮುಂದಿನ ತಲೆಮಾರುಗಳಿಗೆ ಕೊಂಡಿಯಾಗಿದ್ದು ಪ್ರದ್ಯುಮ್ನ ಮಾತ್ರ!!

ಪ್ರದ್ಯುಮ್ನ ಹಾಗೂ ರುಕ್ಮಿಯ ಮಗಳು ರುಕ್ಮವತಿ ವಿವಾಹವಾಗಿ ಹುಟ್ಟಿದವ ಅನಿರುದ್ದ!!

ಅನಿರುದ್ದ ನೋಡಲು ಆತನ ಅಜ್ಜ ಕೃಷ್ಣನ ಹಾಗೇ ಇದ್ದವನು. ಅದಕ್ಕಾಗಿ ಆತನನ್ನು  ಕೃಷ್ಣಾಅಂಶ ಸಂಭೂತ ಎಂದು ಕರೆಯಲಾಗುತ್ತದೆ,  ಅನಿರುದ್ದ ಬಾಣಾಸುರನ ಮಗಳು ಉಷೆಯೊಡನೆ ವಿವಾಹವಾಗುತ್ತಾನೆ, ಬಾಣಾಸುರನೆಂದರೆ ಆತ ಬಲಿಚಕ್ರವರ್ತಿಯ ಮಗ. ಆತ ಅನಿರುದ್ದ ತನ್ನ ಮಗಳನ್ನು ವಿವಾಹವಾದ ಕಾರಣ ಕೋಪಗೊಂಡು ಅವನನ್ನು ಸೆರೆಯಲ್ಲಿಡುತ್ತಾನೆ. ಆಗ ಅಜ್ಜ ಕೃಷ್ಣ ಹಾಗೂ ಆತನ ಸೋದರ ಬಲರಾಮ ಬಾಣನೊಡನೆ ಹೋರಾಡಿ ಮೊಮ್ಮಗನನ್ನು ಸೆರೆಯಿಂದ ಮುಕ್ತಗೊಳಿಸುತ್ತಾರೆ!!

ಮುಂದೆ ಯಾದವರಲ್ಲಿ ಅವರವರೇ ಜಗಳವಾಡಿಕೊಂಡು ಸಾವನ್ನಪ್ಪಿದ್ದ ವೇಳೆ ಉಳಿದ ಯಾದವರೊಡನೆ ಕೃಷ್ಣನ ಪುತ್ರ ಪ್ರದ್ಯುಮ್ನ ದೇಹತ್ಯಾಗ ಮಾಡುತ್ತಾನೆ. ಆದರೆ ಹಾಗೆ ಕಲಹವಾದಾಗ ಬದುಕುಳಿದ ಕೆಲವೇ ಕೆಲವು ಯಾದವರ ಪೈಕಿ ಕೃಷ್ಣನ ಮರಿ ಮಗ ಪ್ರದ್ಯುಮ್ನನ ಮೊಮ್ಮಗ, ಅನಿರುದ್ದನ ಮಗ ವಜ್ರನಾಭ ಸಹ ಒಬ್ಬನಾಗಿದ್ದ. ಇದೇ ವಜ್ರನಾಭ ದ್ವಾರಕೆಯಲ್ಲಿ ಮೊಟ್ಟ ಮೊದಲಿಗೆ ಶ್ರೀಕೃಷ್ಣನ ದೇವಾಲಯ ನಿರ್ಮಾಣ ಮಾಡಿದ್ದ!!

ಕೃಷ್ಣ-ಬಲರಾಮರ ಸೋದರಿ ಸುಭದ್ರೆ

ಕೃಷ್ಣನ ತಂದೆ ವಸುದೇವನ ಮೊದಲ ಪತ್ನಿ ರೋಹಿಣಿಯ ಮಗಳು ಸುಭದ್ರಾ ಅಥವಾ ಸುಭದ್ರೆ. ಈಕೆ ಕೃಷ್ಣ ಹಾಗೂ ಬಲರಾಮರಿಗೆ ಸೋದರಿಯಾಗಿದ್ದು ಇವಳು ಅರ್ಜುನನ್ನು ಪ್ರೀತಿಸಿ ಕೃಷ್ಣ ಸಹಕಾರದೊಡನೆ ವಿವಾಹವಾಗುತ್ತಾಳೆ. ಈಕೆಯ ಪುತ್ರನೇ ಅಭಿಮನ್ಯು, ಹಾಗೆಯೇ ಕಲಿಯುಗದ ಪ್ರಾರಂಭದಲ್ಲಿ ಮಹಾಭಾರತದ ಪಾಂಡವರ ಕುಲದಲ್ಲಿ ಬದುಕಿದ್ದ ಪರೀಕ್ಷಿತ ಮಹಾರಾಜನ ಅಜ್ಜಿ ಇದೇ ಸುಭದ್ರೆ.

ಪರೀಕ್ಷಿತನ ಪುತ್ರ ಜನಮೇಜಯ ಅರ್ಜುನನಿಂದ ಮೂರನೇ ತಲೆಮಾರಿನವನಾಗಿದ್ದಾನೆ. ಈತ ಹಾಗೂ ಪರೀಕ್ಷಿತ ಮಹಾರಾಜನ ಹೆಸರು ವೇದಗಳಲ್ಲಿ ಕಾಣಸಿಗುತ್ತದೆ,.

ಕೃಷ್ಣ ಹಾಗೂ ಪಾಂಡವರು,

ಪಾಂಡವರು ಕೃಷ್ಣನ ತಂದೆ ವಸುದೇವನ ತಂಗಿ ಕುಂತಿಯ ಮಕ್ಕಳು. ಅಂದರೆ ಪಾಂಡವರಿಗೆ ಕೃಷ್ಣ ಸಂಬಂಧದಲ್ಲಿ ಖಾಸಾ ಸೋದರಮಾವನಾಗುತ್ತಾನೆ

ಜರಾಸಂಧ ವಧೆ (ಕ್ರಿ.ಪೂ 3154 ಸೆಪ್ಟೆಂಬರ್)

ಕೃಷ್ಣನ ಅಣತಿಯಂತೆ ಮಗಧ ದೇಶದ ಅರಸ. ಬೃಹದ್ರಥನ ಪುತ್ರ, ಯಾದವರ ಶತ್ರುವಾಗಿದ್ದ ಜರಾಸಂಧನನ್ನು ವಧಿಸಿದ್ದ. ಭೀಮ ಹಾಗೂ ಜರಾಸಂಧನ ನಡುವೆ ದ್ವಂದ್ವ ಯುದ್ಧ ಕ್ರಿ.ಪೂ 3154 ಸೆಪ್ಟೆಂಬರ್ 17 ರಂದು ಪ್ರಾರಂಭವಾಗಿ  14 ದಿನಗಳ ಕಾಲ ಹಗಲು-ರಾತ್ರಿ ಎನ್ನದೆ ನಡೆದಿತ್ತು!!!

ಶಿಶುಪಾಲ ವಧೆ (ಕ್ರಿ.ಪೂ. 3153  ಕೃಷ್ಣನಿಗೆ 75 ವರ್ಷ)

ಕ್ರಿ.ಪೂ. 3153ರಲ್ಲಿ ಕೃಷ್ಣನಿಗೆ 75 ವರ್ಷ 8 ತಿಂಗಳವಾಗಿದ್ದ ಸಮಯ ಪಾಂಡವರು ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗ ನಡೆಸಿದ್ದರು, ಅಂದು ಚೈತ್ರ ಪೂರ್ಣಿಮೆಯ ದಿನ ಯಾಗದ ವೇಳೆ  ದಮಘೋಷ ಎಂಬ ಛೇದಿ ರಾಜ್ಯದ ರಾಜನ ಮಗ ಶಿಶುಪಾಲನನ್ನು ಎಲ್ಲಾ ರಾಜರ ಸಮ್ಮುಖದಲ್ಲೇ ಕೊಂದು ಹಾಕಿದ್ದನು!!!
ಶಿಶುಪಾಲ ವಧೆ (ಕ್ರಿ.ಪೂ. 3153  ಕೃಷ್ಣನಿಗೆ 75 ವರ್ಷ)


ವಿಶೇಷವೆಂದರೆ ಶಿಶುಪಾಲ ಕೃಷ್ಣನ ಸೋದರತ್ತೆಯ ಮಗ. ಶಿಶುಪಾಲನ ತಾಯಿ ಶ್ರುತಕೀರ್ತಿ ಹಾಗೂ  ಪಾಂಡವರ ತಾಯಿ ಕುಂತಿ ಕೃಷ್ಣನ ಜನ್ಮದಾತ ವಸುದೇವನ ಸ್ವಂತ ತಂಗಿಯರು

ದ್ಯೂತದಲ್ಲಿ ಪಾಂಡವರ ಸೋಲು(ಕ್ರಿ.ಪೂ 3153 ರ ಮೇ 2)

ಕ್ರಿ.ಪೂ 3153 ರ ಮೇ 2 ರಂದು ಪಾಂಡವರು ತಮ್ಮ ದಾಯಾದಿ ಕೌರವರೆದುರು ದ್ಯೂತವಾಡಿ ಎಲ್ಲವನ್ನೂ ಕಳೆದುಕೊಂಡರು ಮತ್ತು ವನವಾಸಕ್ಕೆ ಹೊರಟರು. ಅವರು ಹೊರಡುವ ಮುನ್ನ ಶ್ರೀ ಕೃಷ್ಣ ಅವರನ್ನು ಭೇಟಿಯಾಗಿದ್ದನು. ಯುಧಿಷ್ಟಿರ(ಧರ್ಮರಾಯ) ಹಾಗೂ  ಭೀಮನ ಆಶೀರ್ವಾದ ಪಡೆದ ಕೃಷ್ಣ ಅರ್ಜುನನನ್ನು ತಬ್ಬಿ ಸಂತೈಸಿದ್ದನು, ಹಾಗೆಯೇ ನಕುಲ ಹಾಗೂ ಸಹದೇವರಿಗೆ  ಆಶೀರ್ವದಿಸಿದನು.  ಈ ಘಟನೆಯಿಂದ ಭೀಮ ಹಾಗೂ ಯುಧಿಷ್ಠಿರರು ಕೃಷ್ನನಿಗಿಂತ ವಯಸ್ಸಿನಲ್ಲಿ ಹಿರಿಯರು ಎನ್ನುವುದು ನಮಗೆ ಅರಿವಾಗುತ್ತದೆ!!

ಅರ್ಜುನ ಕೃಷ್ಣನ ಸಮಾನ ವಯಸ್ಸಿನವನಾಗಿದ್ದರೆ ನಕುಲ ಹಾಗೂ ಸಹದೇವ ಅವನಿಗಿಂತ ಸಣ್ಣವರಿದ್ದರು

ಪಾಂಡವರ ವಮವಾಸ, ಅಜ್ಞಾತವಾಸ ಅಂತ್ಯ ಉತ್ತರ ಕುಮಾರನಿಗೆ ಅರ್ಜುನನ  ಮೂಲ ಸ್ವರೂಪ ದರ್ಶನ (ಕ್ರಿ.ಪೂ. 3140ರ ಮೇ 7)

ಕ್ರಿ.ಪೂ. 3140 ಮೇ 7(ಆಷಾಢ ಶುಕ್ಲ ಸಪ್ತಮಿ) ಅಂದು ಪಾಂಡವರು ತಮ್ಮ 12  ವರ್ಷಗಳ ವನವಾಸ ಹಾಗೂ ಒಂದು  ವರ್ಷದ ಅಜ್ಞಾತವಾಸವನ್ನು ಕೊನೆಗೊಳಿಸಿದ್ದರು, ಅಂದು ಅರ್ಜುನನು ತನ್ನ ಮೂಲ ರೂಪವನ್ನು ಉತ್ತರ ಕುಮಾರನಿಗೆ ಬಹಿರಂಗಪಡಿಸಿದನು. ಅವರು ಕ್ರಿ.ಪೂ. 3140 ಮೇ 15ರಂದು (ಆಷಾಢ ಪೂರ್ಣಿಮೆ) ವಿರಾಟ ರಾಜನ ಮುಂದೆ ಕಾಣಿಸಿಕೊಂಡರು.

ಇದಾಗಿ 6 ತಿಂಗಳ ನಂತರ, ಕೃಷ್ಣನ ಸಂಧಾನ ಪ್ರಯತ್ನಗಳು  ವಿಫಲವಾದಾಗ, ಕುರುಕ್ಷೇತ್ರ ಯುದ್ಧ ಜರುಗಿತ್ತು

ಕುರುಕ್ಷೇತ್ರ ಯುದ್ಧ (ಕ್ರಿ.ಪೂ 3140 ರ ನವೆಂಬರ್) ಭಗವದ್ಗೀತೆ ಬೋಧಿಸಿದ ಕೃಷ್ಣನಿಗೆ 89 ವರ್ಷ!!!

ಕುರುಕ್ಷೇತ್ರ ಯುದ್ಧವು ಕ್ರಿ.ಪೂ 3140 ರ ನವೆಂಬರ್ ನಲ್ಲಿ ಪ್ರಾರಂಭವಾಗಿತ್ತು. ಯುದ್ಧದ ಮೊದಲ ದಿನ ಕೃಷ್ಣ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸಿದ್ದ ದಿನವಾಗಿದ್ದು ಅಂದು ಕೃಷ್ಣನಿಗೆ  89 ವರ್ಷ ಮತ್ತು ಅರ್ಜುನನಿಗೆ 88 ವರ್ಷ.ವಯಸ್ಸು.
ಕುರುಕ್ಷೇತ್ರ ಯುದ್ಧ (ಕ್ರಿ.ಪೂ 3140 ರ ನವೆಂಬರ್) ಭಗವದ್ಗೀತೆ ಬೋಧಿಸಿದ ಕೃಷ್ಣನಿಗೆ 89 ವರ್ಷ!!!


ಯುದ್ಧದ 10 ನೇ ದಿನದಂದು ಭೀಷ್ಮನನ್ನು ಅರ್ಜುನನು ಶರಶಯ್ಯೆ (ಬಾಣಗಳಿಂದ ಮಾಡಿದ್ದ ಹಾಸಿಗೆ) ಮೇಲೆ ಮಲಗಿಸಿದನು. ಅದಾದ 3 ದಿನಗಳ ನಂತರ, ದ್ರೋಣಾಚಾರ್ಯರು ಯೋಜಿಸಿದ ಪದ್ಮ ವ್ಯೂನಲ್ಲಿ ಅರ್ಜುನನ ಮಗ ಅಭಿಮನ್ಯುನನ್ನು ಕೊಲ್ಲಲಾಯಿತು. ನಂತರ ಕೃಷ್ಣ ಅರ್ಜುನ ಸೇರಿ ಕುರು, ಪಾಡವರ ಗುರುವಾಗಿದ್ದ, ಮಹಾನ್ಮುನಿಯಾದ ಭಾರದ್ವಾಜ ಮಗ. ದ್ರೋಣಾಚಾರ್ಯನನ್ನು ತಂತ್ರದಿಂದ ಮಣಿಸುತ್ತಾನೆ

ಇದಾದ ನಂತರ ಸೇನಾಪತಿಯಾದ ಕುಂತಿಯ ಕಾನೀನ ಪುತ್ರ ಕರ್ಣನನ್ನೂ ಸಹ ಕೃಷ್ಣನ ಸಲಹೆ ಮೇರೆಗೆ ಆತ ನಿರಾಯುಧನಾಗಿದ್ದಾಗಲೇ ಅರ್ಜುನ ಕೊಲ್ಲುತ್ತಾನೆ. ದುರ್ಯೋಧನನ ಮರಣದೊಂದಿಗೆ ಕುರುಕ್ಷೇತ್ರ ಯುದ್ಧವು 18 ದಿನಗಳಲ್ಲಿ ಕೊನೆಗೊಂಡಿತು.

ಭೀಷ್ಮನಿಂದ ಯುಧಿಷ್ಠಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶ( ಕ್ರಿ.ಪೂ. 3140ರ ಡಿಸೆಂಬರ್ 5) 

.ಪೂ. 3140 ಡಿಸೆಂಬರ್ 5 (ಮಾಘ ಶುಕ್ಲ ಏಕಾದಶಿ)ರಂದು ಭೀಷ್ಮ ಯುಧಿಷ್ಟಿರನಿಗೆ ವಿಷ್ಣು ಸಹಸ್ರನಾಮವನ್ನು ಉಪದೇಶಿಸುತ್ತಾನೆ, ಹಾಗೂ ತಾನು ದೇಹತ್ಯಾಗ ಮಾಡುತ್ತಾನೆ.

ಎರಡು ತಿಂಗಳ ನಂತರ , ಕ್ರಿ.ಪೂ 3139 ಫೆಬ್ರವರಿ 5ರಂದು (ಚೈತ್ರ ಪೂರ್ಣಿಮೆ) ಯುಧಿಷ್ಟಿರ ಅಶ್ವಮೇಧ ಯಾಗವನ್ನು ಪ್ರಾರಂಭಿಸುತ್ತಾನೆ.

ಕೃಷ್ಣನ ಅವತಾರ ಸಮಾಪ್ತಿ(ಕ್ರಿ,ಪೂ, 3102ರ ಫೆಬ್ರವರಿ 18)

ಅದಾಗಿ 37 ವರ್ಷಗಳ ನಂತರ, ಕ್ರಿ.ಪೂ 3102 ಫೆಬ್ರವರಿ 17ರಂದು ಸಂಜೆ ಬೇಟೆಗಾರನೊಬ್ಬನ ಬಾಣ ಕೃಷ್ಣನ ಕಾಲಿಗೆ ತಗುಲಿ ಗಾಯವಾಗುತ್ತದೆ. ಅದಾಗಿ ಮರುದಿನ 18 ಫೆಬ್ರವರಿ ನಸುಕಿನ ಜಾವ  02 ಗಂಟೆ 27 ನಿಮಿಷ 30 ಸೆಕೆಂಡ್ ಗೆ ಕೃಷ್ಣ ತನ್ನ ದೇಹತ್ಯಾಗ ಮಾಡುತ್ತಾನೆ, ದಿನ ಸೂರ್ಯೋದಯವು ಶುಕ್ರವಾರ, ಅಶ್ವಿನಿ ನಕ್ಷತ್ರ ಹಾಗೂ  ತಿಥಿ (ಚಂದ್ರನ ದಿನ) ಶುದ್ದ ಪಾಡ್ಯಮಿ(ಶುಕ್ಲ ಪ್ರತಿಪದ್ ಅಥವಾ ಚಂದ್ರ ಮಾಸದ ಮೊದಲ ದಿನ). ಪ್ರಮಾದಿ ನಾಮ ಸಂವತ್ಸರದ ಮೊದಲ ದಿನ!!!   

ಕೃಷ್ಣನ ಅವತಾರ ಸಮಾಪ್ತಿ(ಕ್ರಿ,ಪೂ, 3102ರ ಫೆಬ್ರವರಿ 18)


ಹೀಗೆ ಒಟ್ತಾರೆ ಕೃಷ್ಣ  ಭೂಮಿಯಲ್ಲಿ 126 ವರ್ಷ 8 ತಿಂಗಳ ಕಾಲ ಬದುಕಿದ್ದನು

ಯಾದವರ ಕಲಹ, ದ್ವಾರಕೆಯ ಮುಳುಗಡೆ(ಕ್ರಿ.ಪೂ. 3102)

ಕೃಷ್ಣನ ಅವಸಾನದ ನಂತರ  ವಾದವಿವಾದಗಳಿಂದ ಅವರವರ ನಡುವೆಯೇ ಕದನ ನಡೆದು ಪ್ರಮುಖ ಯಾದವ ಮುಖಂಡರು ನಿಧನಹೊಂದಿದರು, ಅರ್ಜುನನು ದ್ವಾರಕಾ ನಗರಕ್ಕೆ ಹೋಗಿ ಕೃಷ್ಣನ ಮೊಮ್ಮಕ್ಕಳು ಹಾಗೂ ಯಾದವರ ಪತ್ನಿಯರನ್ನು ಸುರಕ್ಷಿತತೆಗಾಗಿ ಹಸ್ತಿನಾಪುರಕ್ಕೆ ಕರೆತಂದನು. ಅರ್ಜುನನು ದ್ವಾರಕಾ ನಗರವನ್ನು ಬಿಟ್ಟಬಳಿಕ ಕೃಷ್ಣ ಕ್ರಿ.ಪೂ. 3102ರಲ್ಲಿ ಅವಸಾನ ಹೊಂದಿದ ಬಳಿಕ ದ್ವಾರಕಾ ಕ್ರಿ.ಪೂ 3031 ರಲ್ಲಿ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಯಿತು, ಕೃಷ್ಣನ  ಮೊಮ್ಮಗ ವಜ್ರನಾಭನನ್ನು ಹೊರತುಪಡಿಸಿ ಎಲ್ಲರೂ ಕಾಲವಶರಾದರು,

ಶುಭಂ.

No comments:

Post a Comment