ಅಗಸ್ತ್ಯ ಋಷಿ "ವಾತಾಪಿ ಜೀರ್ಣೋ ಭವ!" ಎಂದೆನ್ನುವ ಮೂಲಕ "ವಾತಾಪಿ"ಯನ್ನು ನಾಶಪಡಿಸಿದ ಹಾಗೂ ಅವನ ಸೋದರನಾಗಿದ್ದ ಇಲವನನ್ನೂ ಸಹ ಕೊಂದ ಎನ್ನುವುದು ನಮ್ಮ ಪುರಾಣ ಕಥೆ
ಇಲವಾ
ಹಾಗೂ ವಾತಾಪಿ ಅಸುರ ಕುಲಕ್ಕೆ ಸೇರಿದ ಸೋದರರು. . ದಂತಕಥೆಯ ಪ್ರಕಾರ ಅಗಸ್ತ್ಯ ಋಷಿ ಇಬ್ಬರನ್ನೂ ಕೊಂದಿದ್ದಾನೆ. ಈ ಹಿಂದೆ ವಾತಾಪಿ
ಎಂದು ಕರೆಯಲಾಗುತ್ತಿದ್ದ ಈಗಿನ ಕರ್ನಾಟಕದ ಬಾದಾಮಿ ಪ್ರದೇಶದಲ್ಲಿ ಈ ವಾತಾಪಿ ಇಲವಾ
ಸೋದರರು ವಾಸವಿದ್ದರು. (ಇದು ತಮಿಳುನಾಡಿನ ಚೆನ್ನೈ ನ ವಿಲ್ಲಿವಕ್ಕಂ ಹಾಗೂ
ಕೋಲಾಥೂರ್ ಎಂದೂ ಹೇಳಲಾಗುತ್ತದೆ) ಮಹಾಭಾರತದಲ್ಲಿ ಇಲವಾ ನೊಂದಿಗೆ ಸೇರಿ ವಾತಾಪಿ ಈ ಪ್ರದೇಶದ ಆಡಳಿತ
ನಡೆಸಿದ್ದನೆಂದೂ ಉಲ್ಲೇಖವಿದೆ.
ಆಗ
ಇಲವಾನಿಗೆ ಭಯವಾಗಿ "ವಾತಾಪಿ ಹೊರಕ್ಕೆ ಬಾ" ಎಂದು ಗಟ್ಟಿಯಾಗಿ ಕೂಗುತ್ತಾ ಓಡಿದ. ಆದರೆ ಅಗಸ್ತ್ಯ "ಇಲವಾ ನೀನು ದುಷ್ಟನೀನು
ನನ್ನನ್ನು ಕೊಲ್ಲಲು ಬಯಸಿದ್ದಿ. , ಆದರೆ ನಿನ್ನ ಸಹೋದರ ವಾತಾಪಿ ಹೊರಗೆ
ಬರಲು ಸಾಧ್ಯವಿಲ್ಲ! ಅವನು ಈಗಾಗಲೇ ಜೀರ್ಣವಾಗಿದ್ದಾನೆ" ಎಂದು ಹೇಳಿದನು ಇಲವಾ ಅಗಸ್ತ್ಯನನ್ನು ಕೊಂದು ತನ್ನ ಸೋದರನ ಹತ್ಯೆಗೆ ಸೇಡು ತೀರಿಸಿಕೊಳ್ಲಲು ಬಯಸಿ ಋಷಿಯ ಮೇಲೆ ಹಲ್ಲೆ ನಡೆಸಿದ್ದ. ಆದರೆ ಅಗಸ್ತ್ಯ ತನ್ನ ತಪಃಶಕ್ತಿಯಿಂದ ಇಲವಾನನ್ನು ಬೂದಿಯನ್ನಗಿ ಮಾಡಿದ್ದ.
ಇದೀಗ
ಈ ವಾತಾಪಿ, ಇಲವಾ ಸೋದರರ ಪುರಾಣ ಕಥೆಯ ವಾಸ್ತವಾಂಶವೇನು ಎಂದು ಪರೀಕ್ಷಿಸುವುದಾದರೆ ಈಗ ಬಾದಾಮಿ ಎಂದು
ಕರೆಯಲ್ಪಡುವ "ವಾತಾಪಿ" ಬಾಗಲಕೋಟೆಯಲ್ಲಿದ್ದು ಇದು ಇತಿಹಾಸದ ಮಹಾನ್ ರಾಜಮನೆತನ ಚಾಲುಕ್ಯರ( ಕ್ರಿ.ಶ 540 ರಿಂದ 757 ರವರೆಗೆ) ರಾಜಧಾನಿಯಾಗಿ ಪ್ರಸಿದ್ದವಾಗಿದೆ. ಈ
ಪಟ್ಟಣವು ಮರಳುಗಲ್ಲಿನ ಬೆಟ್ಟಗಳ ಕಂದರದ ಬುಡದಲ್ಲಿದೆ, ಇಲ್ಲಿನ ಕಲ್ಲುಗಳನ್ನು ಕತ್ತರಿಸಿ ಅತಿ ಸುಂದರವಾದ ಗುಹಾ ದೇವಾಲಯಗಳ ನಿರ್ಮಾಣ ಮಾಡಲಾಗಿದೆ.
"ವಾತಾಪಿ"
ಹೆಸರು "ಬಾದಾಮಿ" ಎಂದಾಗಲು ಬಾದಾಮಿ ಕಾಳಿನ ಬಣ್ಣವೂ ಒಂದು ಕಾರಣವಾಗಿರಬಹುದು.ಇನ್ನು ಈ ಬಾದಾಮಿಯಲ್ಲಿನ ಬೆಟ್ಟದ
ಪಕ್ಕದಲ್ಲಿರುವ ಕೊಳವೊಂದಕ್ಕೆ 'ಅಗಸ್ತ್ಯ
ಸರೋವರ' ಎಂದು ಕರೆಯಲಾಗುತ್ತದೆ!!
ಸಂಸ್ಕೃತದಲ್ಲಿ
"ವಾತ" ಎಂದರೆ ಗಾಳಿ "ಪಾ" ಎಂದರೆ ಸೇವಿಸುವುದು ಎಂದು ಅರ್ಥ. ಹಾಗಾಗಿ ವಾತಾಪಿಯು ಜನರ ಜೀವ ತೆಗೆಯುವವನಾಗಿದ್ದ ಎಂದೂ ಹೇಳಬಹುದು.
ಈ
ಮೇಲಿನ ವಿವರಣೆಯಂತೆ ಇಲವಾ ಹಾಗೂ ವಾತಾಪಿ ಇಬ್ಬರೂ ಅಸುರ ಕುಲಕ್ಕೆ ಸೇರಿದವರಾಗಿದ್ದು ಇಂದಿನ ಬಾದಾಮಿ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಆಳುತ್ತಿದ್ದರು. ಆ ಕಾಲದಲ್ಲಿ ಆರ್ಯ
ಕುಲದ ಮೇಲಾಧಿಕಾರಿಯಾಗಿದ್ದ ದೇವತೆಗಳ ರಾಜ ಇಂದ್ರನ ಪ್ರಸಿದ್ದಿ ಎಲ್ಲೆಡೆ ಹರಡಿದ್ದ ಕಾರಣ ಅದು ವಾತಾಪಿಗೂ ಗೊತ್ತಿತ್ತು. ಹಾಗಾಗಿಯೇ ವಾತಾಪಿ ಹಾಗೂ ಇಲವಾ "ತಮಗೆ ಇಂದ್ರನಂತಹಾ ಮಗನನ್ನು ಪಡೆಯಬೇಕೆಂದು ಆಸೆ ಇದ್ದು ಅದಕ್ಕೆ ವರವನ್ನು ಕರುಣಿಸಿ" ಎಂದು ಬ್ರಾಹ್ಮಣ ಋಷಿಗಳ ಮೊರೆ ಹೋಗಿದ್ದರು. ಆದರೆ ಆರ್ಯಕುಲದವರಾಗಿಲ್ಲದ ವಾತಾಪಿಗೆ ಇಂತಹಾ "ವರ" ನಿಡಲು ಋಷಿಗಳು ಒಪ್ಪಿಲ್ಲ. ಇದು ವಾತಾಪಿ ಸೋದರರಿಗೆ ಬ್ರಾಹ್ಮಣರ ಮೇಲೆ ಹಗೆತನ ಮೂಡಲು ಕಾರಣವಾಗಿತ್ತು!!!
ಅಗಸ್ತ್ಯ ತೀರ್ಥ, ಬಾದಾಮಿ |
ಇನ್ನು
ಆರ್ಯರಲ್ಲದ ಅಸುರ ಕುಲಕ್ಕೆ ಸೇರಿದವರಾಗಿದ್ದ ಇಲವಾನಿಗೆ ಮೃತ ಸಂಜೀವಿನಿ(ಸತ್ತವರನ್ನು ಬದುಕಿಸುವ೦ ವಿದ್ಯೆ ತಿಳಿದಿತ್ತುವಾತಾಪಿಗೆ ಕಾಮರೂಪ(ಇಚ್ಚೆ ಪಟ್ಟ ರೂಪಕ್ಕೆ ಬದಲಾಗುವ ವಿದ್ಯೆ) ಗೊತ್ತಿತ್ತು. ಹಾಗಾಗಿ ಈ ಸೋದರರು ತಮ್ಮ
ಪ್ರದೇಶದ ಮೂಲಕ ಹಾದು ಹೋಗುವ ಬ್ರಾಹ್ಮಣರನ್ನು ತಮ್ಮ ಮಾಯಾ ಮೋಡಿ ವಿದ್ಯೆಯ ಮೂಲಕ ಬಲೆಗೆ ಕೆಡಹಿ ಅವರನ್ನು ಮನೆಗೆ ಊಟಕ್ಕೆ ಕರೆದು ಅವರಿಗೆ ಮಾಂಸದ ಊಟ ಇಕ್ಕುತ್ತಿದ್ದರು. ಆಗ ಆ
ಊಟ ಮಾಡಿದ್ದ ಬ್ರಾಹ್ಮಣರಿಗೆ ಮಾಂಸದ ಊಟ ಅಭ್ಯಾಸವಿಲ್ಲದಿದ್ದದ್ದಕಾಗಿ ವಾಯುಬಾಧೆ, ಉದರಬೇನೆ ಪ್ರಾರಂಬಆಗುತ್ತಿತ್ತು.ಅವರು ಆ ಬೇನೆ ತಾಳಲಾಗದೆ
ಅಲ್ಲೇ ಸಾವನ್ನಪ್ಪುತ್ತಿದ್ದರು. ಆಗ ಸುರ ಕುಲದವರಾದ
ವಾತಾಪಿ ಹಾಗೂ ಇಲವನಿಗೆ ತಮ್ಮ ವೈರಿಯನ್ನು ಸಂಹರಿಸಿದ ತೃಪ್ತಿ ಸಿಕ್ಕುತ್ತಿತ್ತು!! ಹೀಗಿರಲು ಅಗಸ್ತ್ಯನ ಆಗಮನವಾಗಲು ಆತನೂ ಮೇಕೆಯ ಮಾಂಸವನ್ನು ಭಕ್ಷಿಸಿದ್ದ. ಆದರೆ ಆತ ಮಹಾನ್ ಸಾಧನೆಯ
ಪರಿಣಾಮ ಯೋಗಶಕ್ತಿಯನ್ನು ಉಳ್ಳವನಾಗಿ ಅವನಿಗೆ ಯಾವ ಬಗೆಯ ಉದರಬೇನೆ, ವಾಯುಬಾಧೆ ಉಂಟಾಗಲಿಲ್ಲ
ಇದರಿಂದ
ಕುಪಿತನಾದ ಇಲವ ಹಗೂ ವಾತಾಪಿ ಅಗಸ್ತ್ಯನನ್ನು ತಾವೇ ಸ್ವತಃಅ ಕೊಲ್ಲಲು ಮುಂದಾದರು. ಆಗ ಅಗಸ್ತ್ಯ ಅವರಿಗೆ ಬಲ
ಪ್ರಯೋಗದಿಂದ ಬುದ್ದಿ ಕಲಿಸಿದ್ದಲ್ಲದೆ ಅವರು ಇನ್ನು ಈ ಪ್ರದೇಶದಲ್ಲಿ ನೆಲೆಸದಂತೆ,
ಬಲು ದೂರಕ್ಕೆ ಹೊರಟು ಹೋಗುವಂತೆ ಆದೇಶಿಸಿದ್ದ. ಆ ದೇಶದ ಅನುಸಾರ
ಇಬ್ಬರೂ ಸೋದರರು ತಮ್ಮ ಪರಿವಾರದೊಡನೆ ಆ ಪ್ರದೇಶವನ್ನು ಬಿಟ್ಟು
ತೆರಳಿದರು. ಆದರೆ
ಹಾಗೆ ತೆರಳುವ ಮುನ್ನ ವಾತಾಪಿ ಅಗಸ್ತ್ಯನಲ್ಲಿ ಒಂದು ಕೋರಿಕೆ ಇಟ್ಟಿದ್ದ. ಆ ಕೋರಿಕೆಯಂತೆ್ "ನಾನು ಆಡಳಿತ
ನಡೆಸಿದ್ದ ಈ ಪ್ರದೇಶಕ್ಕೆ ತನ್ನ
ಹೆಸರು ಖಾಯಂ ಆಗಿ ಇರಿಸಬೇಕು. ಆ ಮೂಲಕ ವಾತಾಪಿಯಾದ
ನನ್ನ ನೆನಪನ್ನು ಮುಂದಿನ ಜನರೂ ಮಾಡಿಕೊಳ್ಳಬೇಕು" ಎಂದಾಗಿದೆ. (ಬಿಹಾರದ ಪ್ರಸಿದ್ದ ಗಯಾ ಕ್ಷೇತ್ರದ ಕಥೆಯನ್ನು ನೆನಪಿಸಿಕೊಳ್ಳಿ. ಅಲ್ಲಿ ಸಹ ಗಯಾ ಎಂಬ
ಅಸುರ ದೈತ್ಯರ ಸಮುದಾಯ ವಾಸಿಸುತ್ತಿದ್ದು ಆ ಪ್ರದೇಶ ಆರ್ಯಕುಲದವರ
ವಶವಾದ ನಂತರ ಅವರನ್ನು ಅಲ್ಲಿಂದ ಓಡಿಸಲಾಗಿತ್ತು. ಆದರೆ ಅಸುರ ಕುಕದವರ ನೆನಪಿಗೆ ಆ ಪ್ರದೇಶಕ್ಕೆ ಇಂದೂ
ಸಹ ಗಯಾ ಎಂದು ಹೆಸರನ್ನಿಡಲಾಗಿದೆ) ಅದಕ್ಕೆ ಅಗಸ್ತ್ಯ ಒಪ್ಪಿಗೆ ಸೂಚಿಸಿದ್ದ. (ಇಲ್ಲಿಯೂ ಸಹ ಅಗಸ್ತ್ಯ ಆರ್ಯರ
ಪ್ರತಿನಿಧಿಯಾಗಿದ್ದಾನೆ.
ಮೇಲಾಗಿ ಅವನು ಉತ್ತರದಿಂದ ದಕ್ಷಿಣಕ್ಕೆ ಬಂದವನು. ಹಾಗಾಗಿ ಆರ್ಯೇತರ ಕುಲವಾದ ವಾತಾಪಿ ಸಮುದಾಯವನ್ನು ಬೇರೆಡೆ ಸ್ಥಳಾಂತರ ಮಾಡಿರುವುದರಲ್ಲಿ ಅಚ್ಚರಿ ಕಾಣಿಸುವುದಿಲ್ಲ!!)
ಬಾದಾಮಿ ಬಂಡೆಗಳು |
ಇದನ್ನೇ
ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ ಬ್ರಾಹ್ಮಣ ದ್ವೇಷಿ ಅಸುರ ಕುಲದವರಾಗಿದ್ದ ವಾತಾಪಿ ಸೋದರರು ಬ್ರಾಹ್ಮಣರಿಗೆ ಮಾಂಸದ ಆಹಾರವಿಟ್ಟು ಅವರ ಕುಲಗೆಡಿಸುತ್ತಿದ್ದರು. ಹಾಗೆ ಮಾಂಸ ತಿಂದ ಸಾಮಾನ್ಯ ಬ್ರಾಹ್ಮಣರು ತಮ್ಮ ಕುಲ ನಾಶವಾಯಿತೆಂದು ತಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಇಲ್ಲವೇ ದೇಶಾಂತರ ಹೋಗುತ್ತಿದ್ದರು. ಆದರೆ ಯಾವಾಗ ಅಗಸ್ತ್ಯ ಆಗಮನವಾಯಿತೋ ಅವನೆದುರು ವಾತಾಪಿಯ ಆಟ ನಡೆಯಲಿಲ್ಲ. ಅಗಸ್ತ್ಯ
ಮಹಾನ್ ಋಷಿ, ವಿದ್ವಾಂಸ. ಮೇಲಾಗಿ ಅವನು ಕುಂಭ ಸಂಭವ(ತಾಯಿಯ ಗರ್ಭದಲ್ಲಿ ಹುಟ್ಟದ ಮಗು) ಹಾಗಾಗಿ ಅವನು ಮಾಂಸವನ್ನು ತಿಂದರೂ ಅವನ ಜಾತಿ ಕೆಡುವ ಪ್ರಶ್ನೆ ಉದ್ಭವಿಸಲಿಲ್ಲ ಇದು ವಾತಾಪಿ ಹಾಗೂ ಇಲವನಿಗೆ ಅಚ್ಚರಿಗೆ ಕಾರಣವಾಗಿತ್ತು. ಮುಂದೆ ಅವರು ಅಗಸ್ತ್ಯನನ್ನು ಬಲವಂತದಿಂದ ಹತ್ಯೆ ಮಾಡಲು ಮುಂದಾದರು. ಆಗ ಅಗಸ್ತ್ಯ ಅವರನ್ನು
ಸೋಲಿಸಿ ಅಲ್ಲಿಂಡ ಓಡಿಸಿದ್ದ!! ಈ ದೃಷ್ಟಿಕೋನ ಸರಿಯಾಗಿದ್ದ
ಪಕ್ಷದಲ್ಲಿ ಅಗಸ್ತ್ಯ ಬ್ರಾಹ್ಮಣ, ಕ್ಷತ್ರಿಯಾದಿ ಚತುರ್ವರ್ಣಗಳು ಜನ್ಮದಿಂದ ಬರುವುದಲ್ಲ ಬದಲಾಗಿ ಅವರವರ ಸಂಸ್ಕಾರದಿಂದ ಬರುತ್ತದೆ ಎನ್ನುವ್ದುಅನ್ನು ಸಮಾಜಕ್ಕೆ ತಿಳಿಸಿದ್ದ ಎಂಬುದಾಗಿ ಅರ್ಥವಾಗಲಿದೆ.
ವಾತಾಪಿ ಗಣಪತಿ ಎಂಬ ಸ್ತುತಿಗೀತೆಯ ಹಿನ್ನೆಲೆ
ಇದರೊಡನೆ
ನಾವು ಇಲ್ಲೇ ಇನ್ನೊಂದು ವಿಷಯದ ಕಡೆಗೂ ಗಮನ ಕೊಡಬಹುದು. ಅದುವೇ "ವಾತಾಪಿ ಗಣಪತಿ" "ವಾತಾಪಿ ಗಣಪತಿಂ ಭಜೇ" ಎನ್ನುವ ಪ್ರಸಿದ್ದ ಹಾಡು ಶೋಡಶ ಗಣಪತಿ ಕೃತಿಗಳೆಂಬ ಸ್ತುತಿಗೀತೆಗಳ ಒಂದು ಭಾಗವಾಗಿದೆ, ಇದುಪ್ರಸಿದ್ದ ತಮಿಳು ಕವಿ, ಸಂಯೋಜಕರಾದ ಮುತ್ತುಸ್ವಾಮಿ ದೀಕ್ಷಿತರ್ (1775–1835) ಅವರ ರಚನೆ. ಹಾಗಾದರೆ ಈ "ವಾತಾಪಿ ಗಣಪತಿ" ಯಾರೆಂದು ನೊಡಿದರೆ ಅದು ದೀಕ್ಷಿತರ್ ಅವರ ಜನ್ಮಸ್ಥಳ ತಿರುವರೂರು ಸುತ್ತಮುತ್ತಲಿನ ದೇವಾಲಯಗಳಲ್ಲಿರುವ ಹದಿನಾರು ಗಣೇಶ ಪ್ರತಿಮೆಗಳೆಂದು ನಮಗೆ ಅರಿವಾಗುತ್ತದೆ. ಅದಾಗ್ಯೂ ಮೌಖಿಕ ಸಂಪ್ರದಾಯದ ಪ್ರಕಾರ, ವಾತಾಪಿ ಗಣಪತಿಯ ಮೂರ್ತಿಯನ್ನು ಚಾಲುಕ್ಯ ರಾಜಧಾನಿ ಬಾದಾಮಿಯಿಂದ(ವಾತಾಪಿಯಿಂದ) ಕೊಳ್ಳೆಹೊಡೆದು ತರಲಾಗಿದೆ!!!ಪಲ್ಲವ ದೊರೆ ಮೊದಲ ನರಸಿಂಹವರ್ಮನ್ ಸೇನಾಪಡೆಯ ಮುಖ್ಯಸ್ಥ ಪರಂಜೋತಿ
(ಆಳ್ವಿಕೆ: ಕ್ರಿ.ಶ. 630–668 ), ಚಾಲುಕ್ಯರ ಮೇಲೆ (ಸಿಇ 642) ದಾಳಿ ನಡೆಸಿ ಅವರ ನಾಡನ್ನು ವಶಪಡಿಸಿಕೊಂಡ ನಂತರ ಈ ಗಣಪತಿ ಮೂರ್ತಿಯನ್ನು
ಪರಂಜೋತಿಯ ಜನ್ಮಸ್ಥಳವಾದ ತಿರುಚೆಂಕಟ್ಟಂಕುಡಿಯಲ್ಲಿ ತಂದಿರಿಸಲಾಗಿದೆ. ನಂತರ, ಪರಂಜೋತಿ ತನ್ನ ಹಿಂಸಾತ್ಮಕ ಮಾರ್ಗಗಳನ್ನು ತ್ಯಜಿಸಿ ಸಿರುಥೊಂಡರ್ ಎಂದು ಕರೆಯಲ್ಪಡುವ ಶೈವ ಸನ್ಯಾಸಿಯಾದನು, ಇಂದು ನಯನಾರ್ ಸಂತನಾಗಿ ಪೂಜಿಸಲ್ಪಡುತ್ತಾನೆ॒!!!
No comments:
Post a Comment