ನಾವು ಅಗಸ್ತ್ಯನ ಬಗೆ ನೋಡುವಾಗಲೇ ಆತನ ಪತ್ನಿ ಲೋಪಮುದ್ರಾ ಬಗ್ಗೆಯೂ ಗಮನಿಸಬೇಕಾಗುತ್ತದೆ. ಪ್ರಾಚೀನ ವೈದಿಕ ಭಾರತೀಯ ಸಾಹಿತ್ಯದ ಪ್ರಕಾರ ಲೋಪಾಮುದ್ರಾ ಕೌಶಿತಾಕಿ ಮತ್ತು ವರಪ್ರದಾ ಎಂದೂ ಕಲ್ರೆಯಲ್ಪಡುವ ಮಹಿಳಾ ತತ್ವಜ್ಞಾನಿ! ಈಕೆಯ ಉಲ್ಲೇಖ ಋಗ್ವೇದದಲ್ಲಿದೆ. ಆಕೆ ಋಗ್ವೇದ ಕಾಲದಲ್ಲಿ ವಾಸವಿದ್ದಳಾಗಿ ಅಗಸ್ತ್ಯನ ಪತ್ನಿಯಾಗಿದ್ದಳೆಂದು ಹೇಳಲಾಗಿದೆ. ವೇದ ಸಾಹಿತ್ಯಕ್ಕೆ ಆಕೆ ಅನೇಕ ರೀತಿಯಲ್ಲಿ ಕೊಡುಗೆ ನೀಡಿದ್ದಾಳೆ. ಅವಳು ಹಿಂದೂ ಧರ್ಮದ ಸಕ್ತ ಸಂಪ್ರದಾಯದ "ಪಂಚದಾಸಿ" ಮಂತ್ರವನ್ನು ದೃಶ್ಯೀಕರಿಸಿದ ಪ್ರಸಿದ್ಧ ಮಹಿಳಾ ದಾರ್ಶನಿಕಳಾಗಿಯೂ ಆಗಿದ್ದಳು. ಅಲ್ಲದೆ ಆಕೆಯೊಬ್ಬ ಪ್ರಸಿದ್ಧ ಬ್ರಹ್ಮವಾದಿನಿಯೂ ಹೌದು.
ಲೋಪಮುದ್ರಾ
ಬಗ್ಗೆ ಋಗ್ವೇದ, ಮಹಾಭಾರತ ಹಾಗೂ ಗಿರಿಧರ ರಾಮಾಯಣ ಕೃತಿಯಲ್ಲಿದೆ. ಇದೆಲ್ಲದರ ಪೈಕಿ ಮಹಾಭಾರತದಲ್ಲಿ ಲೋಪಮುದ್ರಾ ಹಾಗೂ ಅಗಸ್ತ್ಯನ ಪತ್ನಿಯಾಗಿರುವ ಬಗ್ಗೆ ಸವಿವರ ವಿವರಣೆಗಳಿದೆ.
ಮಹಾಭಾರತ
(ವನಪರ್ವ: ತೀರ್ಥ-ಯಾತ್ರ ಪರ್ವ) ದಲ್ಲಿ ಲೋಪಮುದ್ರಾಳ ಕಥೆ ಬರುತ್ತದೆ. ಅಗಸ್ತ್ಯನು ತನ್ನ ಪತ್ನಿ ಲೋಪಮುದ್ರಾ (ವಿದರ್ಭ ರಾಜಕುಮಾರಿ) ಸಹಾಯದಿಂದ ಗಂಗಾದ್ವಾರ (ಹರಿದ್ವಾರ)
ದಲ್ಲಿ ತಪಸ್ಸು ಮಾಡಿದನೆಂಬ ಉಲ್ಲೇಖದೊಂದಿಗೆ ವಿಸ್ತಾರವಾದ ಆವೃತ್ತಿ ನಮಗೆ ಲಭಿಸುತ್ತದೆ. ದಂತಕಥೆಯ ಪ್ರಕಾರ, ಲೋಪಮುದ್ರಾಳನ್ನು ಅಗಸ್ತ್ಯ
ವಿವಿಧ ಪ್ರಾಣಿಗಳ ಅತ್ಯಂತ ಸುಂದರ ಅಂಗಗಳಿಂದ ಸೃಷ್ಟಿಸಿದ್ದ. ಹಾಗಾಗಿ ಈ “ಲೋಪಮುದ್ರಾ" ಎಂಬ ಹೆಸರಿನ
ಹಿನ್ನೆಲೆಯಲ್ಲಿ ಆಕೆಯನ್ನು ಸೃಷ್ಟಿಸಿದಾಗ ವಿವಿಧ ಪ್ರಾಣಿಗಳು ತಾವು ಅವಳಿಗಾಗಿ ನೀಡಿದ್ದ ವಿವಿಧ ಅಂಗಗಳು(ಮುದ್ರಾ ಹಾಗೂ ಅದರಿಂದ ತಮಗಾದ ನಷ್ಟ(ಲೋಪ)ದ ವಿವರವಿದೆ.
ಅಗಸ್ತ್ಯ ಹಾಗೂ ಲೋಪಮುದ್ರಾ |
ಇನ್ನು
ಮಹಾಭಾರತದಲ್ಲಿ ಬರುವ ಲೋಪಮುದ್ರಾ ಹಾಗೂ ಅಗಸ್ತ್ಯನ ಕಥೆ "ದೇಶೀಯ
ಜೀವನ ಮತ್ತು ಕುಟುಂಬದ ವೈಭವೀಕರಣವಾಗಿದೆ ಕೇವಲ
ತಪಸ್ಸನ್ನು ಆಧರಿಸಿದ ಜೀವನದ ಅಪೂರ್ಣತೆಯನ್ನು ತೋರಿಸುತ್ತದೆ" ಎಂದು ವ್ಯಾಖ್ಯಾನಿಸಬಹುದುಆಗಿದೆ.
ಗಿರಿಧರ
ರಾಮಾಯಣವು ಲೋಪಮುದ್ರಾಳ ವಿಭಿನ್ನ
ಕಥೆಯನ್ನು ಹೊಂದಿದೆ. ಅಗಸ್ತ್ಯನು ಕನ್ಯಾಕುಬ್ಜ ರಾಜನನ್ನು ಸಂದರ್ಶಿಸಿದ್ದು ಅವನಿಗೆ
ಅನೇಕ ಹೆಣ್ಣುಮಕ್ಕಳು ಇದ್ದರು.
ಅಗಸ್ತ್ಯ ಅಲ್ಲಿಗೆ ಬಂದಾಗ ರಾಜನು ಅವನಿಗೆ ಕೆಲ ವರ್ಷದ ನಂತ್ರಾ ಬಂದರೆ ಯಾವುದಾದರೂ ಒಬ್ಬ ಮಗಳನ್ನು ನಿನಗೆ ವಿವಾಹ ಮಾಡಿಕೊಡುವುದಾಗಿ
ಹೇಳಿದ್ದ. ಆದರೆ ಕೆಲ ವರ್ಷದ ನಂತರ ಅಗಸ್ತ್ಯ ರಾಜನ ಬಳಿ ಆಗಮಿಸಲು ಅದಾಗಲೇ ಅವನೆಲ್ಲಾ ಹೆಣ್ಣು ಮಕ್ಕಳ ವಿವಾಹ ಸಂಪನ್ನವಾಗಿತ್ತು. ಆದರೆ ರಾಜ ಋಷಿ ಶಾಪಕ್ಕೆ ಹೆದರಿ ತನ್ನ ಪುತ್ರ ಲೋಪಮುದ್ರನನ್ನು ಹೆಣ್ಣಿನಂತೆ ಸಿಂಗರಿಸಿ ಅಗಸ್ತ್ಯನೊಂದಿಗೆ ವಿವಾಹ ಮಾಡಿದ್ದ! ಅದರೆ ಆ ವಿವಾಹವಾದ ನಂತರ
ಆ ಯುವಕ ಲೋಪಮುದ್ರಾ ಅಚ್ಚರಿಯ ರೀತಿಯಲ್ಲಿ ಮಹಿಳೆಯಾಗಿ ಬದಲಾದ!!
ಹಿಂದೂ
ತಂತ್ರ ಸಂಪ್ರದಾಯದಲ್ಲಿ, ಹನ್ನೆರಡು ಅವತಾರಗಳನ್ನು ಹೊಂದಿರುವ ದೇವಿಗೆ ಮೀಸಲಾಗಿರುವ ಶ್ರೀ ವಿದ್ಯಾ ಮಂತ್ರ, ಪ್ರತಿಯೊಂದೂ ಲೋಪಮುದ್ರಾಳ ಹೆಸರಿನೊಂದಿಗೆ ಸಂಪರ್ಕ ಪಡೆದಿದೆ. ; ಮನು, ಚಂದ್ರ, ಕುಬೇರ, ಮನ್ಮಥ, ಅಗ್ನಿ, ಸೂರ್ಯ, ಇಂದ್ರ, ಸ್ಕಂದ, ಶಿವ ಮತ್ತು ಕ್ರೋಧಭಟ್ತಾರಕ (ದುರ್ವಾಸ) ಇತರ ಭಕ್ತರು. ಕ್ರಿ.ಶ 6 ನೇ ಶತಮಾನದಲ್ಲಿ ದಕ್ಷಿಣ
ಭಾರತದಲ್ಲಿ ಜನಪ್ರಿಯವಾದ ಆವೃತ್ತಿಯನ್ನು ಲೋಪಮುದ್ರಾ ಮಂತ್ರ ದು ಕರೆಯಲಾಗುತ್ತದೆ, ಆದರೆ
ಈಗ ಇದನ್ನು ಅಭ್ಯಾಸ ಮಾಡಲಾಗಿಲ್ಲ ಆದರೆ ಇದು ಕಾಶ್ಮೀರದ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿದೆ.
ಇಷ್ಟರ
ಜತೆಗೆ ಲೋಪಮುದ್ರಾ ಪತಿಯೊಂದಿಗೆ ಲಲಿತಾ ಸಹಸ್ರನಾಮ (ದೇವಿಯ ಸಾವಿರ
ಹೆಸರುಗಳು) ಖ್ಯಾತಿಯನ್ನು ಹರಡಿದ ಕೀರ್ತಿಗೆ ಭಾಜನಳಾಗಿದ್ದಾಳೆ. ದಂತಕಥೆ ಹೇಳುವಂತೆ ವಿಷ್ಣುವಿನ ಅವತಾರವಾಗಿರುವ ಹಯಗ್ರೀವನಿಂದ ಅಗಸ್ತ್ಯನು ಲಲಿತ ಸಹಸ್ರನಾಮನ ಸ್ತುತಿಗೀತೆಗಳನ್ನು ಕಲಿತನೆಂದು ನಂಬಲಾಗಿದೆ.
ಇದೆಲ್ಲದರ
ಜತೆಗೆ ಕನ್ನಡ ನಾಡಿನ ಜೀವನದಿ ಕಾವೇರಿಗೂ ಅಗಸ್ತ್ಯ ಪತ್ನಿ ಲೋಪಮುದ್ರಾಗೂ ಸಂಬಂಧ ಕಲ್ಪಿಸಲಾಗಿದೆ!!! ಕರ್ನಾಟಕದ ಕಾವೇರಿ ನದಿಯನ್ನು ಲೋಪಮುದ್ರ ಎಂದು ಕರೆಯಲಾಗುತ್ತದೆ!!
ಇದರ
ಹಿಂದಿನ ದಂತಕಥೆಯಂತೆ ಅಗಸ್ತ್ಯನು ಲೋಪಮುದ್ರಾಳ ಸೌಂದರ್ಯಕ್ಕೆ ಮಾರುಹೋಗಿ ಆಕೆಯನ್ನು ವಿವಾಹವಾಗಿದ್ದ. ಅದಷ್ಟೇ
ಅಲ್ಲದೆ ಆಕೆಯ ಸೌಂದರ್ಯ ಸದಾಕಾಲ ಚೆನ್ನಾಗಿರಲೆಂದು ಅವಳನ್ನು ತನ್ನ ಕಮಂಡಲ(ನೀರಿನ ಪಾತ್ರೆ)ಯಲ್ಲಿ ಬಂಧಿಸಿದ್ದ. ಹಾಗೆ ಕಮಂಡಲದಲ್ಲಿ ಬಂಧಿಸಲ್ಪಟ್ಟ ಲೋಪಮುದ್ರಾಳನ್ನು ಆಶ್ರಮ ಅಥವಾ ವಿರಕ್ತ ಮಂದಿರದಲ್ಲೇ ಬಿಟ್ಟ ಅಗಸ್ತ್ಯ ಬಹುದಿನಗಳ ಕಾಲ ದೂರ ಪ್ರದೇಶದಲ್ಲಿ ಇದ್ದ. ಆ ಸಮಯದಲ್ಲಿ ಅಗಸ್ತ್ಯನಿಗೆ
ಇನೊಬ್ಬ ಮಹಿಳೆಯೊಂದಿಗೆ ಸಂಪರ್ಕ ಏರ್ಪಟ್ಟಿತ್ತು. . ಇದನ್ನು ಗಮನಿಸಿ ಲೋಪಮುದ್ರಾ ದುಃಖಿಸಿದಳು. ಆಗ ಆ ಸಮಾದಲ್ಲಿ
ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಗನೇಶ ಲೋಪಮುದ್ರಾ ಅಳುವನ್ನು ಕೇಳಿ ಆಕೆಯನ್ನು ಕಮಂಡಲದ ಬಂಧನದಿಂದ ಬಿಡಿಸಿದ. ಅವಳು ಕಾವೇರಿಯಾಗಿ ಹರಿದಳು!
ಇನ್ನೊಂದು
ಕಥೆಯಂತೆ ಅಗಸ್ತ್ಯನು ತನ್ನ ಪತ್ನಿ ಲೋಪಮುದ್ರಾಳೊಂದಿಗೆ ವಾಸವಿದ್ದ ವೇಳೆ ಅದೊಮ್ಮೆ ತೀವ್ರ ಬರಗಾಲ ಕಾಣಿಸಿತು. ಕುಡಿಯಲೂ ನೀರಿಲ್ಲವಾಗಿತ್ತು. ಜನರು ತೀವ್ರವಾಗಿ ನರಳಿದರು. ಜಮೀನುಗಳು ಬಿರುಕು ಬಿಟ್ಟವು. . ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ಅಥವಾ ನೀರು ಸಿಗಲಿಲ್ಲ, ಅವರ ಸಂಕಟಗಳು ಪದಗಳನ್ನು ಮೀರಿತ್ತು. ಭೂಮಿಯಾದ್ಯಂತ ಆಹಾರ ಮತ್ತು ನೀರಿನ ಕೊರತೆಯು ಜೀವನವನ್ನು ಅಸಹನೀಯವಾಗಿಸಿತು. ಅಗಸ್ತ್ಯನು ದುಃಖಿತನಾಗಿ ಸಹಾಯಕ್ಕಾಗಿ ಶಿವನನ್ನು ಸಂಪರ್ಕಿಸಿದನು. ಶಿವನು ಅವನ ಕಮಂಡಲದಲ್ಲಿ (ಅವನು ಸಾಗಿಸುತ್ತಿದ್ದ ಸಣ್ಣ ಮಡಕೆ) ಸಣ್ಣ ಪ್ರಮಾಣದ ಗಂಗಾ ಜಲವನ್ನು ಅನುಗ್ರಹಿಸಿದನು ಮತ್ತು "ಮತ್ತು ನೀವು ಈ ನೀರನ್ನು ಎಲ್ಲಿ
ಚೆಲ್ಲುವಿರೋ ಅಲ್ಲಿಂದ ಅದು ನದಿಯಾಗಿ ಹರಿಯಲಿದೆ" ಎಂದನು. ಸುರಪದುಮನ್
ಎಂಬ ರಾಕ್ಷಸನು ನೀರು ಮತ್ತು ಆಹಾರವಿಲ್ಲದೆ ದಕ್ಷಿಣ ಬಾಗವನ್ನು ನಾಶಮಾಡಲು ಬಯಸಿದ್ದರಿಂದ, ಅಗಸ್ತ್ಯನಿಂದ ಕಮಂಡಲವನ್ನು ಕಸಿದುಕೊಳ್ಳಲು ಮುಂದಾದಾಗ ಶಿವನ ಪುತ್ರ ಗಣೇಶ ಕಾಗೆಯ ಒಂದು ರೂಪವನ್ನು ಧರಿಸಿ ಾಗಸ್ತ್ಯನಿಗೆ ಉಪಟಳ ನೀಡಿ ಅವನು ಕಮಂಡಲದ ನೀರನ್ನು ಚೆಲ್ಲುವಂತೆ ಮಾಡಿದ. ಹಾಗೆ
ಕಮಂಡಲದಿಂದ ನೆಲಕ್ಕೆ ಬಿದ್ದ ನೀರು "ಕಾವೇರಿ " ನದಿಯಾಗಿ ಹರಿದಿದೆ!
ಕಾವೇರಿಯನ್ನು ತಮಿಳುನಾಡಿನತ್ತ ಹರಿಸಿದ ಅಗಸ್ತ್ಯ
ಇನ್ನೂ
ಒಂದು ಕಥೆಯ ಪ್ರಕಾರ ಕವೇರ ಎಂಬ ಮುನಿಯ ಪುತ್ರಿ ಕಾವೇರಿ ಎಂದೂ ಹೇಳಲಾಗುತ್ತದೆ. ಹೀಗೆ ನಾನಾ ಕಥೆಗಳಿದ್ದರೂ ಕಾವೇರಿ ನದಿಯ ಹುಟ್ಟು ಹಾಗೂ ಅದನ್ನು ತಮಿಳುನಾಡಿನತ್ತ ಹರಿಸಿದ ಕೀರ್ತಿ ಅಗಸ್ತ್ಯನಿಗೆ ಸಲ್ಲಬೇಕು. ಅದು ಈ ಮೇಲಿನ ಎರಡನೇ ಕಥೆಯಲ್ಲಿದ್ದಂತೆ ಇರಬಹುದು.
ಎಂದರೆ
ಉತ್ತರದಿಂದ ದಕ್ಷಿಣ ಭಾಗಕ್ಕೆ ಬಂದ ಅಗಸ್ತ್ಯನಿಗೆ ಈಗಿನ ತಮಿ?ಉ ನಾಡಿನ ಭಾಗಗಳಲ್ಲಿ
ಯಾವ ನೀರಿನ ಮೂಲವೂ ಕಂಡಿಲ್ಲ. ಅಲ್ಲಿ ಜನರು ನೆಲೆಸಬೇಕಾದರೆ ನೀರಿನ ಸೌಕರ್ಯ ಬೇಕೇ ಬೇಕಾಗಿತ್ತು. ಹಾಗಾಗಿ ಕೊಡಗಿನಲ್ಲಿ ಹರಿಯುತ್ತಿದ್ದ ನದಿಯನ್ನು ತಮಿಳುನಾಡಿನತ್ತ ತಿರುಗಿಸಿದ್ದನು!(ಆಧುನಿಕ ಕಾಲದಲ್ಲಿ ನಾವಿಂದು ನದಿ ತಿರುವು ಯೋಜನೆ, ಗಂಗಾ-ಕಾವೇರಿ ನದಿ ಜೋಡಣಾ ಯೋಜನೆಗಳ ಬಗ್ಗೆ ಮಾತನಾಡುತ್ತೇವೆ ತಾನೆ?)
ಅದೇ
ರೀತಿ ಅಗಸ್ತ್ಯ ಪುರಾಣ ಕಾಲದಲ್ಲೇ ಕಾವೇರಿಗಾಗಿ ಹೊಸ ನದಿಪಾತ್ರವನ್ನೇ ಸೃಷ್ಟಿಸಿದ್ದ!!! ಇದಕ್ಕೆ ಬೆಂಬಲವಾಗಿ ನಾವು ಕೆಲ ಅಂಶಗಳನ್ನು ನೋಡುವುದಾದರೆ
ಕಾವೇರಿ
(ಕಾವೇರಿ, ಇದನ್ನುಪೋನಿ ಎಂದೂ ಕರೆಯುತ್ತಾರೆ)ಕೇರಳ ರಾಜ್ಯದ ಮೂಲಕ ಹರಿಯುವುದಿಲ್ಲ. ಆದರೆ, ಇದು ಕೇರಳದಿಂದ ಹುಟ್ಟಿದ ಕಬಿನಿ, ಪಂಬಾರ್ ಮತ್ತು ಭವಾನಿಯಂತಹ ಕೆಲವು ಉಪನದಿಗಳನ್ನು ಹೊಂದಿದೆ. ಇದರಲ್ಲಿ ಕಬಿನಿ ನದಿ ಕೇರಳದ ಕುಟ್ಟಿಯಾಡಿ-ಮನಂತವಾಡಿ ರಸ್ತೆಯ ಪಕ್ರಂತಲಂ ಬೆಟ್ಟದ ಲ್ಲಿ ಹುಟ್ಟಿದರೆ ಅದಕ್ಕೆ ಕ್ಕಿಯಾಡ್ ನದಿ ಮತ್ತು ಪೆರಿಯಾ ನದಿ ಕ್ರಮವಾಗಿ ಕೊರೊಮ್ ಮತ್ತು ವಲಾಡ್ ಬಳಿ ಸೇರುತ್ತವೆ. ಮನಂತವಾಡಿ ಪಟ್ಟಣದ ಮೂಲಕ ಹರಿದ ನಂತರ ಪನಮರಂ
ನದಿ ಪಯಂಪಲ್ಲಿ ಬಳಿಯ ಕಬಿನಿಯನ್ನು ಸೇರುತ್ತದೆ. ಪನಾಮರಂ ನದಿಯ ಒಂದು ಶಾಖೆ ಪಡಿನ್ಜರೆಥರ ಬಳಿಯ ಬನಾಸುರ ಸಾಗರ್ ಜಲಾಶಯದಿಂದ ಪ್ರಾರಂಭವಾಗುತ್ತದೆ ಮತ್ತು ನದಿಯ ಇನ್ನೊಂದು ಶಾಖೆ ಲಕ್ಕಿಡಿ ಬೆಟ್ಟಗಳಿಂದ ಪ್ರಾರಂಭವಾಗುತ್ತದೆ. ಪನಾಮರಂ ನದಿಯ ಸಂಗಮದಿಂದ 2 ಕಿಲೋಮೀಟರ್ (1.2 ಮೈಲಿ) ದಾಟಿದ ನಂತರ ಕಬಿನಿ ಕುರುವಾ ದ್ವೀಪ ಎಂಬ ದ್ವೀಪವನ್ನು ರೂಪಿಸುತ್ತದೆ, ಇದು 520 ಎಕರೆ (2.1 ಕಿಮಿ 2) ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳೊಂದಿಗೆ ವ್ಯಾಪಿಸಿದೆ. 20 ಕಿ.ಮೀ (12 ಮೈಲಿ)
ಒಳಗೆ ಇದು ಸ್ವಲ್ಪ ದೂರದಲ್ಲಿ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಕಬಿನಿ ಜಲಾಶಯವನ್ನು ತಲುಪುತ್ತದೆ. . ಕಬಿನಿ ಜಲಾಶಯ ಮತ್ತು ಕುರುವಾ ದ್ವೀಪದ ನಡುವೆ ಕಾಳಿಂದಿ ನದಿ ಕಬಿನಿಯನ್ನು ಸೇರುತ್ತದೆ. ಕಾಲಿಂಡಿ ನದಿ ಬ್ರಹ್ಮಗಿರಿ ಬೆಟ್ಟಗಳಿಂದ ಹುಟ್ಟಿಕೊಂಡಿದೆ, ಇದು ತಿರುನೆಲ್ಲಿ ದೇವಸ್ಥಾನದ ಬಳಿ ತಲುಪಿದಾಗ ಪಾಪನಾಶಿನಿ ನದಿ ಅದಕ್ಕೆ ಕೂಡಿಕೊಳ್ಳುತ್ತದೆ. ತಾರಕಾ ಮತ್ತು ನುಗು ಕಗ್ಗಲ (ಕಬಿನಿ ನದಿ) ಗೆ ಸೇರುವ ಇನ್ನೆರಡು
ಚಿಕ್ಕ ಉಪನದಿಗಳು.
ಈ
ಎಲ್ಲಾ ಸಮಯದಲ್ಲಿ ಅಗಸ್ತ್ಯನ ಪತ್ನಿ ಲೋಪಮುದ್ರಾ ಅಗಸ್ತ್ಯನ
ಬೆಂಬಲಕ್ಕೆ ನಿಂತಿದ್ದಳು. ಅವಳ ಇಡೀ ಜೀವನವನ್ನೇ ಈ ನದಿಯ ತಿರುಗಿಸುವಿಕೆಗಾಗಿ
ಸವೆಸಿರಬಹುದು, ಅದಕ್ಕಾಗಿ ಮುಂದಿನ ಪೀಳಿಗೆ ಕಾವೇರಿಯನೇ ಲೋಪಮುದ್ರಾ ಎಂಬ ಅವಳ ಹೆಸರಿಂದಲೇ ಕರೆಯಲು ತೀರ್ಮಾನಿಸಿದೆ. ತಮಿಳುನಾಡಿನ ಜನರಿಗೆ ಈ ಕಾವೇರಿ ನದಿಯೊಂದೇ
ಬಹುದೊಡ್ಡ ಜಲಮೂಲವಾಗಿದೆ ಎನ್ನುವುದು ಇಂದೂ ಸಹ ಸತ್ಯ. ಹಾಗಾಗಿ
ಕಾವೇರಿ ನದಿ ಹಾಗೂ ಅದನ್ನು ತಮಿಳುನಾಡಿಗೆ ತಂದ ಅಗಸ್ತ್ಯನ ಬಗ್ಗೆ ಅವರಲ್ಲಿ ಅಪಾರ ಭಕ್ತಿ, ಅಭಿಮಾನವಿರುವುದು ಅತಿಶಯವಲ್ಲ. ಹಾಗಾಗಿಯೇ ದಕ್ಷಿಣ ಭಾರತೀಯ ಸಂಸ್ಕೃತಿಯ ಆಧಾರವಾಗಿರುವ ಕಾವೇರಿ ನದಿಯ ಬಗ್ಗೆ ಕಳೆದ ಸಾವಿರಾರು ವರ್ಷಗಳಲ್ಲಿ ವಿವಿಧ ಕಥೆಗಳು ಜನ್ಮದಾಳಿದೆ.
No comments:
Post a Comment