Wednesday, September 23, 2020

ಹೈಹೆಯ ದೇಶವಾಸಿ ಭ್ರುಗುವಂಶಜ ರಾಮಭದ್ರ-ಪರಶುರಾಮ!!

 ಚಂದ್ರ ವಂಶಕ್ಕೆ ಸೇರಿದ ರಾಜ ಗಾದಿಯ ಪುತ್ರಿ ಸತ್ಯವತಿಯನ್ನು ಮದುವೆಯಾದ ರುಚೀಕ ಎಂಬ ಮಹಾನ್ ಋಷಿಗೆ ಹುಟ್ಟಿದವ ಜಮದಗ್ನಿ. ಈತನ ಹುಟ್ಟಿನ ಹಿನ್ನೆಲೆಯಲ್ಲಿ ರುಚಿಕ ನೀಡಿದ "ಚರು"ವಿನ ಕಥೆಯಿದ್ದು ಇದು ಕೌಶಿಕ(ಭವಿಷ್ಯದಲ್ಲಿ ವಿಶ್ವಾಮಿತ್ರನೆನಿಸಿದ ಮಹಾನ್ ಋಷಿ) ಜನ್ಮಕ್ಕೆ ಕಾರಣವಾಗುತ್ತದೆ. ( ಹಿಂದಿನ ನನ್ನ ವಿಶ್ವಾಮಿತ್ರ ಲೇಖನ ಸರಣಿಯಲ್ಲಿನ ವಿವರಣೆ ನೋಡಿ)

ಜಮದಗ್ನಿ ಸಪ್ತರ್ಷಿಗಳಲ್ಲಿ ಒಬ್ಬ. ಭೃಗು ವಂಶಕ್ಕೆ ಸೇರಿದ್ದ ಜಮದಗ್ನಿ ರೇಣುಕಾಳನ್ನು ವಿವಾಹವಾಗಿದ್ದ.  (ಭೃಗು ಖ್ಯಾತ ಅಸುರ ಗುರು ಶುಕ್ರಾಚಾರ್ಯನ ಪಿತ) , ಅವರಿಗೆ 5 ಗಂಡು ಮಕ್ಕಳಿದ್ದರು- ವಸು, ವಿಶ್ವವಸು, ಬೃಹದನ್ಯು, ಬ್ರೂತಕಣ್ವ ಹಾಗೂ ಪರಶುರಾಮ.

ಪರಶುರಾಮ ಶಿವಾನುಗ್ರಹದಿಂದ ಜನಿಸಿದ್ದವನು. ಈತನ ನಿಜ ಹೆಸರು ರಾಮಭದ್ರ!!! (ಪರಶುರಾಮ ಶಿವಾನುಗ್ರಹದಿಂದ ಹುಟ್ಟಿದ-ಶಿವ ಎಂದೂ ನಾಶ ಅಥವಾ ಲಯಕಾರಕನಾಗಿದ್ದಾನೆ. ಪರಶುರಾಮ ಕ್ಷತ್ರಿಯರ ಪಾಲಿಗೆ ಲಯಕಾರಕನಾಗುತ್ತಾನೆ ಎನ್ನುವ ಸೂಚನೆ!!) ಮುಂದೆ ರಾಮಭದ್ರ ಶಿವನನ್ನು ಮೆಚ್ಚಿಸಿ ಅವನಿಂದ ದೈವಿಕ ಶಕ್ತಿಯುಳ್ಳ ಪರಶು ೯ಕೊಡಲಿ)ಯನ್ನು ಉಡುಗೊರೆಯಾಗಿ ಪಡೆದಿದ್ದನು. ಹಾಗಾಗಿ ಅವನಿಗೆ ಪರಶುರಾಮ ಎಂದು ಹೆಸರಾಗಿದೆ. (ಶಿವನ ಆರಾಧಕ ಗುರುವೊಬ್ಬನಿಂದ ರಾಮಭದ್ರ ವಿದ್ಯೆ ಕಲಿತಿರಬೇಕು ಇಲ್ಲವೇ ಅವರಿಗೆ ಯಾವುದೇ ನೆರವು ನೀಡಿರಬೇಕು, ಅದರಿಂದ ಸಂತುಷ್ಟರಾಗಿದ್ದ "ಗುರು" ತಮ್ಮ ಬಳಿಯಿದ್ದ ವಿಶೇಷ ಕೊಡಲಿಯನ್ನು ರಾಮಭದ್ರನಿಗೆ ನೀಡಿದ್ದಾರೆ ಎಂದು ಊಹಿಸಬಹುದು. ) ಬಳಿಕ ಆರ್ಯಕುಲದ ದೇವತೆಯ ರಾಜ ಇಂದ್ರನಿಂದ ವಿಶೇಷವಾದ ವಿಜಯದ ಬಿಲ್ಲನ್ನು ಪಡೆಇದ್ದ ಪರಶುರಾಮ ಅದನ್ನು ಮುಂದೆ ಮಹಾಭಾರತದ ಕಾಲದಲ್ಲಿ ಕುಂತಿ ತನಯ ಕರ್ಣನಿಗೆ ಉಡುಗೊರೆಯಾಗಿ ಕೊಟ್ಟಿದ್ದ!

ಪರಶುರಾಮನನ್ನು ಭಾರ್ಗವ ಎನ್ನಲು ಕಾರಣವೇನು? ಪರಶುರಾಮ ಭಾರ್ಗವ ಹೆಸರಿನ ಬ್ರಾಹ್ಮಣ ಯೋಧರ ಸೇನೆಯನ್ನು ಕಟ್ಟಿದ್ದ. ಮತ್ತು ಸೇನೆಯ ಸಹಾಯ ಪಡೆದು ಆತ ಕಾರ್ತವೀರ್ಯಾರ್ಜುನ ಹಾಗೂ ಇಅತ್ರೆ ಕ್ಷತ್ರಿಯರನ್ನು ನಾಶಪಡಿಸಿದ್ದ!

ಪರಶುರಾಮನ ಕಾಲದಲ್ಲಿ ಕ್ಷತ್ರಿಯ ಕುಲ ಬಹು ಅಹಂಕಾರ/ದುರಹಂಕಾರದಿಂದ ಕೂಡಿತ್ತು. ನಿಜವಾದ ಕ್ಷತ್ರಿಯ ಧರ್ಮವು ದುರ್ಬಲರನ್ನು ರಕ್ಷಿಸಲು ತಮ್ಮ ಶಕ್ತಿಯನ್ನು  ಬಳಸಬೇಕಾಗಿತ್ತು. ಆದರೆ ಆಗಿನ ಕ್ಷತ್ರಿಯರು ಮುಗ್ದ ಋಷಿಗಳನ್ನು  ಮತ್ತು ಬ್ರಾಹ್ಮಣರಿಗೂ ಕಿರುಕುಳ ನೀಡುತ್ತಾ ಅವರನ್ನು ಹತ್ಯೆ ಮಾಡುತ್ತಾ ಸಂತಸಪಡುತ್ತಿದ್ದರುದುರ್ಬಲ ಮತ್ತು ಅಸಹಾಯಕರ ರಕ್ಷಕರಾಗಬೇಕಿದ್ದ ಕ್ಷತ್ರಿಯರುದಬ್ಬಾಳಿಕೆಗೆ ಮುಂದಾದರು ಸಮಯದಲ್ಲಿ ಪರಶುರಾಮ ಕಾರ್ತವೀರ್ಯಾರ್ಜುನ ಆಡಳಿತ ನಡೆಸುತ್ತಿದ್ದ ಹೈಹಯ ಸೀಮೆಯಲ್ಲಿ ವಾಸವಿದ್ದನು. ಅಲ್ಲಿಯೂ ರಾಜರು೯ಕ್ಷತ್ರಿಯರು) ಹಾಗೂ ಬ್ರಾಹ್ಮಣರ ನಡುವೆ ಯಾವಾಗಲೂ ಸಂಘರ್ಷವಿತ್ತು. 1000 ಶಸ್ತ್ರಸಜ್ಜಿತ ಕಾರ್ತವಿರ್ಯಾರ್ಜುನ ವಿಷ್ಣುವಿನ ಸುದರ್ಶನ ಚಕ್ರದ ಅವತಾರವೆಂದು ನಂಬಲಾಗಿತ್ತು, ಮತ್ತು ಅವನು ಪ್ರಬಲ ಯೋಧರಲ್ಲಿ ಒಬ್ಬನಾಗಿದ್ದ!!

(ಈತನ ಪರಾಕ್ರಮವನ್ನು ಮತ್ತಷ್ಟು ವರ್ಣಿಸಲು ತ್ರೇತಾಯುಗದಲ್ಲಿದ್ದ ಲಂಕಾಧೀಶ ರಾವಣನನ್ನು ಸೋಲಿಸಿ ಸೆರೆಯಲ್ಲಿಟ್ಟ ಕಥೆಯನ್ನೂ ಪುರಾಣದಲ್ಲಿ ವಿವರಿಸಲಾಗಿದೆ!!)

ಹಾಗೆ ಕಾರ್ತವೀರ್ಯಾರ್ಜುನನ ಶಕ್ತಿಯು ಅವನ ದುರಹಂಕಾರಕ್ಕೆ ಕಾರಣವಾಗಿತ್ತು. ಆತ ಅದೊಮ್ಮೆ ಜಮದಗ್ನಿಯ ಆಶ್ರಮಕ್ಕೆ ಬಂದಿದ್ದು ಅಲ್ಲಿನ "ಕಾಮಧೇನು" ಎಂಬ ದಿವ್ಯ ಹಸುವನ್ನು ನೋಡಿ ಅದನ್ನು ಪಡೆಯಲು ಮುಂದಾಗಿದ್ದ. (ಇಲ್ಲಿ ಮತ್ತೆ ನಾವು ಕೌಷಿಕ ವಸಿಷ್ಟನ ಆಶ್ರಮ ಹಾಗೂ ನಂದಿನಿ ಎಂಬ ಹಸುವಿನ ಕಥೆ ನೆನಪಿಸಿಕೊಳ್ಳೋಣ ಎಂದರೆ ಅಂದಿನ ಸಮಾಜದಲ್ಲಿ ಹಸುಗಳು ಅತ್ಯಂತ ಪ್ರಧಾನ ಹಾಗೂ ಪವಿತ್ರ ಸಂಪತ್ತಿನ ಚಿಹ್ನೆಯಾಗಿತ್ತು) ಮತ್ತು ಅದನ್ನು ಆತ ಆಶ್ರಮದಿಂದ ಕದ್ದೊಯ್ದಿದ್ದ.

ಪರಶುರಾಮ ಆಶ್ರಮದಲ್ಲಿಲ್ಲದವೇಳೆ ಘಟನೆ ನಡೆದಿತ್ತು. ಪರಶುರಾಮ ಆಶ್ರಮಕ್ಕೆ ಹಿಂದಿರುಗಲು ಅವನಿಗೆ ವಿಚಾರ ತಿಳಿದು ಸಹಜವಾಗಿ ಆಕ್ರೋಶ ಹೊಮ್ಮಿದೆ. ನೇರವಾಗಿ ಕಾರ್ತವೀರ್ಯಾರ್ಯಾರ್ಜುನನ ಅರಮನೆಗೆ ಧಾವಿಸಿ ಅವಒಂದಿಗೆ ಕಾದಾಡಿದ್ದಾನೆ. ಕೊಡಲಿಯಿಂದ ಅವನ ತೋಳು ಕತ್ತರಿಸಿ ಕೊಂದು ಹಾಕಿದ್ದಾನೆ ಮತ್ತು ವಿಶೇಷ ತಳಿಯ "ಕಾಮಧೇನು"ವನ್ನು ಆಶ್ರಮಕ್ಕೆ ವಾಪಾಸ್ ತಂದಿದ್ದಾನೆ.

ಇದಾದ ನಂತರ ಕಾರ್ತವೀರ್ಯಾರ್ಜುನನ ಮಕ್ಕಳು ತಂದೆಯ ಸಾವಿನಿಂದ ವಿಚಲಿತರಾಗಿ ಮತ್ತೆ ಜಮದಗ್ನಿಯ ಆಶ್ರಮದ ಮೇಲೆ ದಾಳಿ ಮಾಡಿದ್ದಾರೆ. ಬಾಣಗಳಿಮ್ದ ಹೊಡೆದು ಘಾಸಿ ಮಾಡಿದ್ದಲ್ಲದೆ ಜಮದಗ್ನಿಯನ್ನು ಕೊಂದು ಹಾಕುದ್ದಾರೆ. ( ಘಟನೆಯೂ ಪರಶುರಾಮ ಇಲ್ಲದಿರುವ ವೇಳೆ ಸಂಭವಿಸಿದೆ) ಬಳಿಕ ಪರಶುರಾಮ ಆಶ್ರಮಕ್ಕೆ ಮರಳಿದಾಗ ತಂದೆ ಜಮದಗ್ನಿಯ ಮೃತ ಶರೀರವನ್ನು ನೋಡುತ್ತಾನೆ. ವೇಳೆ ಅವನ ತಾಯಿ "ಅಯ್ಯೋ ರಾಮ,,, ರಾಮ..." ಎಂದು ಎದೆ ಎದೆ ಬಡಿದುಕೊಂಡು ಅಳುತ್ತಾಳೆ. ಆಗ ಸಹಜವಾಗಿ ಪರಶುರಾಮನಿಗೆ ಆಕ್ರೋಶ ಭುಗಿಲೇಳುತ್ತದೆ.

ಆತ ಮತ್ತೆ ಕಾರ್ತವೀರ್ಯಾರ್ಜುನನ ಅರಮನೆಯತ್ತ ಬಂದ ಪರಶುರಾಮ ಅವನ ಮಕ್ಕಳನ್ನೆಲ್ಲಾ ಕೊಂದುಹಾಕುತ್ತಾನೆ. ನಂತರ ತನ್ನ ತಂದೆ ಜಮದಗ್ನಿಯ ಅಂತ್ಯಸಂಸ್ಕಾರ ನೆರವೇರಿಸುತ್ತಾನೆ. ವೇಳೆ ತನ್ನ ತಂದೆಯ ಸಾವಿಗೆ ಕಾರಣವಾದ ಕ್ಷತ್ರಿಯರನ್ನು ಭೂಮಂಡಲದಲ್ಲೇ ಇನ್ನಿಲ್ಲವಾಗಿಸುತ್ತೇನೆ ಎಂದು ಶಪಥ ಮಾಡುತ್ತಾನೆ.         

ಹಾಗೆ ತ್ರೇತಾ-ದ್ವಾಪರ ಯುಗದ ಮಧ್ಯದಲ್ಲಿ ಶಸ್ತ್ರಾಸ್ತ್ರ ವಿದ್ಯೆಯಲ್ಲಿ ಬಹುಪರಿಣತನಾಗಿದ್ದ ಶ್ರೇಷ್ಠರಾದ ಗುರು ಪರಶುರಾಮನಾಗಿದ್ದ. ಶಾಸ್ತ್ರ ಶಸ್ತ್ರ ವಿದ್ಯೆಗಳೆರಡೂ  ಅವನಿಗೆ ಗೊತ್ತೊತ್ತು. ಆದರೆ  ಅವನ ಕ್ಷತ್ರಿಯರ ಮೇಲಿನ ಕೋಪ ಅವನೆಲ್ಲಾ ಒಳ್ಳೆಯ ಉದ್ದೇಶವನ್ನು ಮುಚ್ಚಿ ಹಾಕಿದೆ!!ಕ್ಷತ್ರಿಯರ ಉದಾತ್ತ ಜನಾಂಗವನ್ನು ಪದೇ ಪದೇ ತುಳಿದು ನಾಶಪಡಿಸಿದ್ದ ಪರಶುರಾಮ , ಕ್ಷತ್ರಿಯರ ಸಂಪೂರ್ಣ ಬುಡಕಟ್ಟು ಜನಾಂಗವನ್ನು ನಾಶಪಡಿಸಿ "ಸಾಮಂತ ಪಂಚಕ" ಎನ್ನುವ ಐದು ರಕ್ತದ ಸರೋವರಗಳನ್ನು ರಚಿಸಿದ ( ಸಮಂತ ಪಂಚಕವೇ ಮುಂದೆ ಕುರುಕ್ಷೇತ್ರ ಎಂಬ ಸ್ಥಳವಾಗಿ ಮಹಾಭಾರತದ ಯುದ್ಧಕ್ಷೇತ್ರವಾಗಿ ಪ್ರಸಿದ್ದವಾಗಿದೆ. )ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ!( ಎಂದರೆ ಪರಶುರಾಮ ಅದೆಷ್ಟು ಕ್ಷತ್ರಿಯ ಬುಡಕಟ್ಟನ್ನು ನಾಶಪಡಿಸಿರಬಹುದು ಎನ್ನಲು ಇದೊಂದು ಉಪಮೆ)

ಹೀಗಾಗಿ ನಾವು ಪರಶುರಾಮ ಜನಿಸಿದ ಉದ್ದೇಶವೇ ಸೊಕ್ಕಿನಿಂದ ಕೂಡಿದ ಕ್ಷತ್ರಿಯರ ನಿರ್ನಾಮ ಮಾಡುವುದಾಗಿತ್ತು ಎಂದು ಭಾವಿಸಬಹುದು. ಕ್ಷತ್ರಿಯರು ತಮ್ಮ ಅಧಿಕಾರವನ್ನು ತಪ್ಪು ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಾಗ ಕಳೆದುಹೋದ ಧರ್ಮವನ್ನು ಪುನಃಸ್ಥಾಪಿಸುವ ಪ್ರಯತ್ನ ಅವನದಾಗಿತ್ತು. ಹಾಗಾಗಿಯೇ ಪರಶುರಾಮ ತಾನು ಹೋದೆಡೆಗಳಲ್ಲೆಲ್ಲಾ ಕ್ಷತ್ರಿಯರಿಂದ ಬ್ರಾಹ್ಮಣರಿಗೆ ಭೂಮಿಯ ಹಕ್ಕನ್ನು ಕೊಡಿಸಿಕೊಡುತ್ತಿದ್ದ..!!!

ಪರಶುರಾಮನಿಂದ ಕಾರ್ತವೀರ್ಯಾರ್ಜುನ ಸಂಹಾರ
ಇಲ್ಲಿ ನಾವು ಗಮನಿಸಬೇಕಾಗಿರುವ ಸಂಗತಿ ವಿಷ್ಣುವಿನ ಹಿಂದಿನ ಐದು ಅವತಾರಗಳು ಭೂಮಿಯಲ್ಲಿನ "ಅಸುರರ"(ಅವೈದಿಕ ಸಂಪ್ರದಾಯದವರ) ನಾಶಕ್ಕಾಗಿ ಆಗಿತ್ತು ಆದರೆ ಪರಶುರಾಮ  ವಿಷಯದಲ್ಲಿ, ಅದು ಮಾನವ ಸಂಘರ್ಷಕ್ಕೆ ಕ್ಷತ್ರಿಯರನ್ನು ನಿರ್ನಾಮ ಮಾಡಲು ಕಾರಣವಾಗಿತ್ತು. ದುಃಖಕರ ಸಂಗತಿ ಎಂದರೆ ಕ್ಷತ್ರಿಯ ಜನಾಂಗವನ್ನು ನಿರ್ನಾಮ ಮಾಡುವ ತನ್ನ ಏಕೈಕ ಉದ್ದೇಶದ ಬೆನ್ನು ಬಿದ್ದ ಪರಶುರಾಮ ಅವರಲ್ಲಿ ಒಳಿತು ಹಾಗೂ ಕೆಡುಕಿನ ಪ್ರತ್ಯೇಕತೆ ಕಡೆ ಗಮನವನ್ನೇ ನೀಡಿರಲಿಲ್ಲ. ಹಾಗಾಗಿ ಅನೇಕ ಉತ್ತಮ ಕ್ಷತ್ರಿಯರೂ ಸಹ ದಬ್ಬಾಳಿಕೆಯಿಂದ ಕೊಲ್ಲಲ್ಪಟ್ಟರು ಅಥವಾ ವಲಸೆ ಹೋದರು.(ವಲಸೆ ಹೋದದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ, ಕೊಲ್ಲಲ್ಪಟ್ಟವರು ಸಹಸ್ರ ಸಹಸ್ರ ಮಂದಿ-ದ್ವಾರಕಾದಿಂದ ಕೇರಳದ ದಕ್ಷಿಣ ತುದಿಯವರೆಗೆ ಕರಾವಳಿಯ ತೀರದುದ್ದಕ್ಕು ನಡೆದದ್ದು ಇದುವೇ ಆಗಿತ್ತು!)

ಆದರೂ ಕಡೆಗೆ ಇಡೀ ಕ್ಷತ್ರಿಯ ಕುಲವನ್ನು ನಾಶಮಾಡಿದ್ದ ನಂತರ ಪರಶುರಾಮನಿಗೆ ರಕ್ತಪಾತದಿಂದ ಬೇಸರ ಮೂಡಿತ್ತು. ತಾನು ಮಾಡಿದ್ದ ತಪ್ಪಿಗೆ ಪಶ್ಚಾತ್ತಾಪ ಅಥವಾ ಪ್ರಾಯಶ್ಚಿತ್ತವೆಂದು ಭಾವಿಸಿ ಅವನು ಪಡೆದ ಭೂಮಿಯನ್ನೆಲ್ಲಾ ( ಕ್ಷತ್ರಿಯರಿಂದ ವಶಪಡಿಸಿಕೊಂಡ ಭೂಮಿಯನ್ನು) ಬ್ರಾಹ್ಮಣರಿಗೆ ಬಿಟ್ಟುಕೊಟ್ಟನುಮತ್ತು ತಾನು ತಿರುಗಿ ಮಹೇಂದ್ರಗಿರಿಯತ್ತ ಹೋಗಿ ಅಲ್ಲೇ ಧ್ಯಾನದಲ್ಲಿ ತಲ್ಲೀನನಾದನು.

ಪರಶುರಾಮನ ಕಾಲ , ದೇಶ

ತ್ರೇತಾಯುಗದ ಅಂತ್ಯ ಹಾಗೂ ದ್ವಾಪರದಲ್ಲಿದ್ದ ಪರಶುರಾಮ  ರಾಮಾಯಣದ ಸಂದರ್ಭದಲ್ಲಿ, ಮಹೇಂದ್ರ ಪರ್ವತದಲ್ಲಿ ಧ್ಯಾನದಲ್ಲಿದ್ದ. ಶಿವನ ಧನಸ್ಸು ಮುದ್=ರಿದು ನಂತರ ಸೀತಾ ಸ್ವಯಂವರ ನಡೆದ ನಂತರ ಪರಶುರಾಮ ಕೋಪಗೊಂಡನು ಮತ್ತು ಅವನ ಸಾತ್ವಿಕ ಕೋಪದಿಂದಾಗಿ ಅವನು ರಾಮನ ಬಳಿಗೆ ಬಂದು ಅವನ ತಾಳ್ಮೆ, ಸದ್ಗುಣಗಳಿಂದ ಪ್ರೀತನಾಗಿ " ಶರಂಗ" ಎಂಬ ದನಸ್ಸನ್ನು ರಾಮನಿಗೆ ನೀಡಿದ್ದನು.

ದ್ವಾಪರ ಯುಗದಲ್ಲಿ ಪರಶುರಾಮ ಭೀಷ್ಮ, ಕರ್ಣ ಮತ್ತು ದ್ರೋಣರಿಗೆ  ಮಾರ್ಗದರ್ಶಕನಾಗಿದ್ದ. (ಆದರೆ ಕರ್ಣ ಬ್ರಾಹ್ಮಣನಲ್ಲ ಎಂದು ತಿಳಿದೊಡನೆ ಆತನಿಗೆ ಶಾಪವಿತ್ತಿದ್ದ)

ಇನ್ನು ಪರಶುರಾಮ ಶತ್ರ ವಿದ್ಯೆಯಲ್ಲಿ ತಾನೆಷ್ಟು ಪರ್ವೀಣನಿದ್ದನೆಂದರೆ ಇಡೀ ಮಾನವ ಕುಲದಲ್ಲಿ ಬ್ರಹ್ಮಾಸ್ತ್ರ, ವೈಷ್ಣವಾಸ್ತ್ರ ಹಾಗೂ ಪಾಶುಪತಾಸ್ತ್ರಗಳ ತಿಳುವಳಿಕೆ ಇದ್ದ ಮಾನವರು ಕೇವಲ ಇಬ್ಬರಾಗಿದ್ದರು. ಅದಲ್ಲಿ ಒಬ್ಬ ಪರಶುರಾಮನಾಗಿದ್ದರೆ ಇನ್ನೊಬ್ಬ ಲಂಕಾಧೀಶ ರಾವಣನ ಪುತ್ರ ಇಂದ್ರಜಿತು! ಇದಲ್ಲದೆ ಶಿವ ಸದೃಶ ಗುರುವಿನಿಂದ ಕಳರಿ ಪಯಟ್ಟು ಎಂಬ ಸಮರಕಲೆಯನ್ನೂ ಪರಶುರಾಮ ಕಲಿಸಿತಿದ್ದ(ಇಂದು ಸಮರ ಕಲೆ ಕೇರಳದಲ್ಲಿ ಸಾಂಪ್ರದಾಯಿಕ ಯುದ್ಧಕಲೆಯಾಗಿ ಬಳಕೆಯಲ್ಲಿದೆ)

ಇನ್ನು ಪರಶುರಾಮನ ದೇಶದ ವಿಚಾರ ಆತ ಹುಟ್ಟಿದ ಸ್ಥಳದ ಬಗ್ಗೆ ಗೊಂದಲವಿದ್ದರೂ ಆತ ಹೈಹವ ದೇಶದ ವಾಸಿಯಾಗಿದ್ದ. ಜಮದಗ್ನಿ ಆಶ್ರಮವಿದ್ದ ಸ್ಥಳ ಹೈಹವ ದೇಶ ಎನ್ನುವುದು ನಿಸ್ಸಂಶಯ. ಹೈಹವ ದೇಶ ಎಲ್ಲಿದೆ ಎಂದು ನೋಡುವುದಾದರೆ ಮಹಾಭಾರತ ಮಹಾಕಾವ್ಯದಲ್ಲಿ, ಮಧ್ಯ ಮತ್ತು ಪಶ್ಚಿಮ ಭಾರತದ ಚಂದ್ರವಂಶಿ ರಾಜರು ಆಳುವ ಸಾಮ್ರಾಜ್ಯಗಳಲ್ಲಿ ಹೈಹವ ಸಾಮ್ರಾಜ್ಯ (ಹೈಹಾಯಾ, ಹೈಹೇಯಾ, ಹೈಹೇಯ, ಇತ್ಯಾದಿ  ಹೆಸರಿದೆ)

ಹೈಹಯ ಹರಿವಂಶ ಪುರಾಣದ ಪ್ರಕಾರ (34.1898) ಹೈಹಾಯ ಯದುವಿನ ಮರಿ ಮೊಮ್ಮಗ ಸಹಸ್ರಜಿತ್ ಮೊಮ್ಮಗವಿಷ್ಣು ಪುರಾಣದಲ್ಲಿ (IV.11), ಎಲ್ಲಾ ಐದು ಹೈಹಾಯ ಕುಲಗಳನ್ನು ಒಟ್ಟಿಗೆ ತಾಲಹಂಘ ಎಂದು ಉಲ್ಲೇಖಿಸಲಾಗಿದೆ] ಐದು ಹೈಹಾಯ ಕುಲಗಳು ವಿತಿಹೋತ್ರ, ಶರ್ಯಾತಾ, ಭೋಜ, ಅವಂತಿ ಮತ್ತು ತುಂಡಿಕೇರ

ಹೈಹಾಯರು ಪಶ್ಚಿಮ ಮಧ್ಯಪ್ರದೇಶದ ಇಂದಿನ ಮಾಳ್ವದ ಸ್ಥಳೀಯರಾಗಿದ್ದರು. . ಪುರಾಣಗಳು ಹೈಹಾಯರನ್ನು ಅವಂತಿಯ ಮೊದಲ ಆಡಳಿತ ರಾಜವಂಶವೆಂದು ಕರೆಯುತ್ತವೆ

ಹರಿವಂಶದಲ್ಲಿ (33.1847), ಅವರ ಭವಿಷ್ಯದ ರಾಜಧಾನಿ ಮಾಹಿಶ್ಮತಿಯನ್ನು ಸ್ಥಾಪಿಸಿದ ಗೌರವ (ಇಂದಿನ ಮಧ್ಯಪ್ರದೇಶದಲ್ಲಿ) ರಾಜ ಮಹೀಶ್ಮಂತನಿಗೆ ಸಂದಿದೆ. ಸಹಂಜನ ಮಗ ಮತ್ತು ಹೈಹಾಯಾ ಮೂಲಕ ಯದು ವಂಶಸ್ಥರು. ಮತ್ತೊಂದುಕಡೆ ಮಾಹಿಶ್ಮತಿಯ ಸ್ಥಾಪಕ ಎಂದು ಶ್ರೀರಾಮನ ಪೂರ್ವಜರಲ್ಲಿ ಒಬ್ಬರಾದ ಮುಚುಕುಂದನನ್ನು  ಹೆಸರಿಸಿದೆ. ಅವನು ಮಾಹಿಶ್ಮತಿ ತಿ ಮತ್ತು ಪುರಿನಗರಗಳನ್ನು ರಕ್ಷಾ ಪರ್ವತಗಳಲ್ಲಿ ನಿರ್ಮಿಸಿದನೆಂದು ಅದು ಹೇಳುತ್ತದೆ.

ಪದ್ಮ ಪುರಾಣ (VI.115) ಪ್ರಕಾರ, ನಗರವನ್ನು ವಾಸ್ತವವಾಗಿ ಕೆಲವು ಮಹಿಷರು ಸ್ಥಾಪಿಸಿದರು

ಪುರಾಣಗಳ ಪ್ರಕಾರ, ಅತ್ಯಂತ ಪ್ರಸಿದ್ಧವಾದ ಹೈಹಾಯ ರಾಜ ಅರ್ಜುನ ಕಾರ್ತವಿರ್ಯ ] ಅವನ ಹೆಸರೇ ಸಹಸ್ರಬಾಹು. ಅವರನ್ನು ಸಾಮ್ರಾಟ್ ಮತ್ತು ಚಕ್ರವರ್ತಿ ಎಂದು ಕರೆಯಲಾಯಿತು. ಅವನ ಹೆಸರು ಋಗ್ವೇದದಲ್ಲಿ  (VIII.45.26) ಕಂಡುಬರುತ್ತದೆ

ಅವನು ಅಂತಿಮವಾಗಿ ಮಾಹಿಶ್ಮತಿ  ನಗರವನ್ನು ನಾಗ ಮುಖ್ಯಸ್ಥರಾದ ಕಾರ್ಕೋಟಕನಿಂದ ವಶಪಡಿಸಿಕೊಂಡ! ಅದನ್ನು ತಮ್ಮ ಕೋಟೆ-ರಾಜಧಾನಿಯನ್ನಾಗಿ ಮಾಡಿದರುವಾಯು ಪುರಾಣದ ಪ್ರಕಾರ ಕಾರ್ತವೀರ್ಯಾರ್ಜುನ ಲಂಕಾವನ್ನು ಆಕ್ರಮಿಸಿ ರಾವಣನನ್ನು ಖೈದಿಯನ್ನಾಗಿಸಿದ್ದ. ಅರ್ಜುನನು ದತ್ತಾತ್ರೇಯನ ಆರಾಧಕ ಹಾಗೂ ಅವನತ್ತ ಒಲವಿದ್ದವನಾಗಿದ್ದ. ಆತನ ಸೈನಿಕರು ಜಮದಗ್ನಿಯನ್ನು ಕೊಂದಾಗ ತೀಕಾರವಾಗಿ ಜಮದಗ್ನಿಯ ಮಗ ಪರಶುರಾಮ ಕಾರ್ತವೀರ್ಯಾರ್ಜುನನ ಹತ್ಯೆ ಮಾಡಿದ. ಅರ್ಜುನನಿಗೆ ಹಲವಾರು ಗಂಡು ಮಕ್ಕಳಿದ್ದರು. ಅವನ ಮಗ ಜಯಧ್ವಜ  ಅವನ ನಂತರ ಸಿಂಹಾಸನಕ್ಕೆ ಬಂದನು. ಜಯಧ್ವಜ ಪುತ್ರ ತಲಜಂಘ ಪುರಾಣಗಳ ಪ್ರಕಾರ, ವಿತಿಹೋತ್ರನು ಅರ್ಜುನ ಕಾರ್ತವಿರ್ಯನ ಮೊಮ್ಮಗ ಮತ್ತು ತಲಜಂಘನ ಹಿರಿಯ ಮಗ. ಪುರಾಣಗಳು ಇಬ್ಬರು ವಿತಿಹೋತ್ರ ದೊರೆಗಳ ಹೆಸರನ್ನು ಸಹ ಉಲ್ಲೇಖಿಸುತ್ತವೆ: ವಿತಿಹೋತ್ರನ ಮಗ ಅನಂತ ಮತ್ತು ಅನಂತನ ಮಗ ದುರ್ಜಯ ಅಮಿತ್ರಕರ್ಣಹೈ\

ಮಧ್ಯಕಾಲೀನ ಇತಿಹಾಸದಲ್ಲಿ ಕಲಾಚುರಿಗಳು, ಕನ್ಸಾರರು, ಥಥೇರಸರುತಮ್ರಾಕರಸರು ಕೇರಳದ ಮೂಷಕ ವಂಶ  ಸಾಮ್ರಾಜ್ಯವನ್ನು ಒಳಗೊಂಡಿರುವ ಹಲವಾರು ಆರಂಭಿಕ ಮಧ್ಯಕಾಲೀನ ರಾಜವಂಶಗಳು ಹೈಹಯಾ ದಿಂದ ಬಂದವೆನ್ನಲಾಗಿದೆ. ಪೂರ್ವ ಭಾರತದ ಹೈಹಯರು ಮಧ್ಯಕಾಲೀನ ಕಾಲದಲ್ಲಿ ಇಸ್ಲಾಮಿಸ್ಟ್ ಆಕ್ರಮಣಕಾರರ ವಿರುದ್ಧ ಹೋರಾಡಿದರು

ಏನಾದರೂ ಪರಶುರಾಮ ಹೈಹಯ ದೇಶ ಎಂದರೆ ನರ್ಮದಾ, ಸರಸ್ವತಿ ನದಿಯಿದ್ದ ಭಾಗದಲ್ಲಿ ಆಸವಿದ್ದ. ಸರಸ್ವತಿ ನದಿ ಒಣಗಿದ ನಂತರ ದಕ್ಷಿಣದತ್ತ ವಲಸೆ ಬಂದನೆಂದು ಭಾವಿಸಬಹುದು
ಶುಭಂ

No comments:

Post a Comment