Thursday, May 12, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 114

 ಸೌಕೂರು (Soukuru)

ಕನ್ನಡ ಕರಾವಳಿಯ ಕುಂದಾಪುರ ತಾಲೂಕಿನ ಸೌಕೂರು ಅಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪ್ರಸಿದ್ದವಾಗಿದೆ. ಕುಂದಾಪುರದಿಂದ ಸುಮಾರು 14  ಕಿ,ಈ ದೂರದಲ್ಲಿದ್ರುವ ಈ ಸ್ಥಳಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಸ್ಥಳವು ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು ಇಲ್ಲಿನ ಯಕ್ಷಗಾನ ಮೇಳ ಕೂಡ ಕರಾವಳಿ, ಮಲೆನಾಡು ಭಾಗಗಳಲ್ಲಿ ಪ್ರಸಿದ್ದವಾಗಿದೆ. ಈ ಮೇಳ ಕಳೆದ ಇನ್ನೂರು ವರ್ಷಗಳಿಂದ ಕಲಾ ಸೇವೆಯಲ್ಲಿ ಸತತವಾಗಿ ತೊಡಗಿಕೊಂಡಿದೆ.


ಕುಬ್ಜಾ ಹಾಗೂ ವಾರಾಹಿ ನದಿಗಳ ಸಂಗಮದ ಜಾಗದಲ್ಲಿ ಎತ್ತರದ ಸ್ಥಳದಲ್ಲಿ ದುರ್ಗಾಪರಮೇಶ್ವರಿ ದೇವಾಲಯ ನಿರ್ಮಿಸಲಾಗಿದೆ. ಇಲ್ಲಿ ಸುತ್ತಮುತ್ತ ಜಾನುವಾರುಗಳು, ದನ ಕರುಗಳು ಕಳೆದು ಹೋದಎರೆ ಇಲ್ಲಿನ ಹುಲಿ ದೇವರಿಗೆ ವಿವಿಡ ಬಗೆಯ ಹರಕೆ ಹೇಳಿಕೊಳ್ಳುವ ಪದ್ದತಿ ಇದೆ.  ಸೌಕೂರು ಗುಲ್ವಾಡಿ ಗ್ರಾಮದ ಕೂಡು ಗ್ರಾಮವಾಗಿದ್ದು ಗುಲ್ವಾಡಿ ಕೋಟೆಯ ಅವಶೇಷಗಳು ದೇವಾಲಯದಿಂದ ಸ್ವಲ್ಪವೇ ದೂರದಲ್ಲಿದೆ. ಇತಿಹಾಸದಲ್ಲಿದನ್ನು ತಾತಯ್ಯನ ಮ ಎಂದು ಗುರುತಿಸಲಾಗುತ್ತಿತ್ತು. 

ಕುಂದಾಪುರದಿಂದ ತಲ್ಲೂರು-ನೇರಳಕಟ್ಟೆ ಮಾರ್ಗವಾಗಿ ಇಲ್ಲಿಗೆ ತಲುಪಬಹುದಾಗಿದೆ. ಅಲ್ಲದೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ಫ಼್ವರಿ ಹಾಗೂ ಸೌಕೂರು ಕ್ಷೇತ್ರವನ್ನು ಒಂದೇ ದಿನ ನೋಡಿದರೆ ಶ್ರೇಷ್ಟ ಫಲ ಸಿಗಲಿದೆ ಎನ್ನುವ ನಂಬಿಕೆ ಇದೆ.

***

ಪುರಾಣ ಕಾಲದಲ್ಲಿ ಸೌಕ್ಯ ಮುನಿಗಳು ಇಂದಿನ ಸೌಕೂರು ಸ್ಟಳದಲ್ಲಿ ಮೂರು ಲಿಂಗಗಳನ್ನು ಸ್ಥಾಪನೆ ಮಾಡಿದ್ದರು. ಅವೇ ಮಹಾಕಾಳಿ, ಮಹಾಗೌರಿ ಹಾಗೂ ಮಹಾ ಸರಸ್ವತಿ ರೂಪದ ಲಿಂಗಗಳಾಗಿದೆ.  ಆ ಋ಼ಇಯ ಸ್ಮರಣಾರ್ಥ ಈ ಜಾಗಕ್ಕೆ ಸೌಕ್ಯಪುರ, ಸೌಕೂರು ಎಂದು ಹೆಸರಾಗಿದೆ. ದುರ್ಗಾಸುರ ಎನ್ನುವ ಅಸುರನನ್ನು ಕೊಂದ ಪರಾಶಕ್ತಿ ಇಲ್ಲಿ ದುರ್ಗಾಪರಮೇಶ್ವರಿ ಅಮ್ಮನ ರೂಪದಲ್ಲಿ ನೆಲೆಸಿದ್ದಾಳೆ.


ದೇವಾಲಯದ ಗರ್ಭಗ್ರ್‍ಹದಲ್ಲಿ ಏಕಪೀದ ಮೇಲೆ ಮೂರು ಲಿಂಗಗಳಿದ್ದು ಪಂಚಲೋಹದ ಅಲಂಕಾರ ಮೂರ್ತಿಯನ್ನು ಈ ಲಿಂಗಗಳ ಹಿಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಇಲ್ಲಿನ ದುರ್ಗಾಪರಮೇಶ್ವರಿಯನ್ನು ಕಮಲಶಿಲೆಯ ಬ್ರಾಹ್ಮಿ ದೇವಿಯ ಅಕ್ಕ ಎಂದು ಹೇಳಲಾಗುತ್ತದೆ. ಅಲ್ಲದೆ ಕೊಲ್ಲೂರು ಮೂಕಾಂಬಿಕೆಯ ತಂಗಿ ಎಂದೂ ಕರೆಯಲಾಗುತ್ತದೆ.

ದೇವಿಯ ಅನಂತ ಮಹಿಮೆಯನ್ನರಿಯಲು ತಾವೆಲ್ಲಾಒಮ್ಮೆ ಸೌಕೂರಿಗೆ ಆಗಮಿಸಿ ಅಮ್ಮನವರನ್ನು ಕಣ್ತುಂಬಿಕೊಳ್ಳಬೇಕು.

No comments:

Post a Comment